Vetarnary department schemes 2024-ಪಶುಇಲಾಖೆಯಲ್ಲಿರುವ ಪ್ರಮುಖ ಯೋಜನೆಗಳ ಪಟ್ಟಿ ಬಿಡುಗಡೆ

<Krushirushi> <ಪಶುಸಂಗೋಪನಾ ಇಲಾಖೆ> <Vetarnary department>

Vetarnary department schemes 2024-ಪಶುಇಲಾಖೆಯಲ್ಲಿರುವ ಪ್ರಮುಖ ಯೋಜನೆಗಳ ಪಟ್ಟಿ ಬಿಡುಗಡೆ

Vetarnary department schemes 2024-ಪಶುಇಲಾಖೆಯಲ್ಲಿರುವ ಪ್ರಮುಖ ಯೋಜನೆಗಳ ಪಟ್ಟಿ ಬಿಡುಗಡೆ

ಹಾಲು ಉತ್ಪಾದಕರಿಗೆ ಪ್ರೋತ್ಸಾಹ
• ಹಾಲು ಉತ್ಪಾದಕ ಸದಸ್ಯರು ಸರಬರಾಜು ಮಾಡುವ ಪ್ರತಿ ಲೀಟರ್ ಗುಣಾತ್ಮಕ ಹಾಲಿಗೆ ರೂ 5/- ರಂತೆ ರೂ. 1103.22 ಕೋಟಿಗಳನ್ನು ವಿತರಿಸಲಾಗಿರುತ್ತದೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಸು/ ಎಮ್ಮೆ ಖರೀದಿಗೆ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದಲೇ ಶೇ. 6ರ ಬಡ್ಡಿ ಸಹಾಯಧನ ನೀಡಲಾಗುವುದು.

ಲಸಿಕಾ ಕಾರ್ಯಕ್ರಮ
• ಕಾಲುಬಾಯಿ ರೋಗ, ಕಂದುರೋಗ, ಪಿ ಪಿ ಆರ್ ರೋಗ, ಹಂದಿಜ್ವರ, ಗಳಲೆ ರೋಗ, ಕರಳುಬೇನೆ ರೋಗ, ಚರ್ಮಗಂಟು ರೋಗಗಳ ವಿರುದ್ಧ ಉಚಿತವಾಗಿ ಲಸಿಕೆ ಹಾಕಲಾಗುವುದು.


ನಾಟಿ ಕೋಳಿ ಮರಿಗಳ ವಿತರಣೆ
• ಮಹಿಳಾ ಸ್ವಸಹಾಯಕ ಸಂಘಗಳ ಆಯ್ದ ಗ್ರಾಮೀಣ ಮಹಿಳಾ ಸದಸ್ಯರಿಗೆ ತಲಾ 20 ಆರು ವಾರದ ನಾಟಿ ಕೋಳಿ ಮರಿಗಳನ್ನು 2650 ಫಲಾನುಭವಿಗಳಿಗೆ 53,000 ಕೋಳಿ ಮರಿಗಳನ್ನು ವಿತರಿಸಲಾಗುವುದು

ರಾಸುಗಳ ಆಕಸ್ಮಿಕ ಸಾವಿಗೆ ಪರಿಹಾರ
* 6 ತಿಂಗಳ ಮೇಲ್ಪಟ್ಟ ಹಸು, ಎಮ್ಮೆ, ಎತ್ತು, ಕೋಣ, ಹೋರಿ ಆಕಸ್ಮಿಕವಾಗಿ ಮರಣ ಹೊಂದಿದಾಗ ಗರಿಷ್ಠ 10000 ರೂ ಪರಿಹಾರಧನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರೂ.20 ಕೋಟಿ ನಿಗಧಿಪಡಿಸಿದೆ.


ಕುರಿಗಾರರಿಗೆ ಅನುಗ್ರಹ ಕೊಡುಗೆ
• ಆಕಸ್ಮಿಕವಾಗಿ ಮರಣ ಹೊಂದಿದ 6 ತಿಂಗಳ ಮೇಲ್ಪಟ್ಟ ಕುರಿ/ಮೇಕೆಗಳಿಗೆ ರೂ. 5000.00 ಹಾಗೂ 3 ರಿಂದ 6 ತಿಂಗಳ ಕುರಿ/ಮೇಕೆಗಳಿಗೆ ರೂ. 3500 ಪರಿಹಾರ ಧನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರೂ. 20 ಕೋಟಿ ನಿಗಧಿಪಡಿಸಿದೆ.


ಲಿಂಗನಿರ್ಧರಿತ ವೀರ್ಯನಳಿಕೆ ಬಳಕೆ
* ಹೆಣ್ಣು ಕರುಗಳ ಸಂತತಿಯನ್ನು ಹೆಚ್ಚಿಸಲು ಕೃತಕ ಗರ್ಭಧಾರಣೆಯಲ್ಲಿ ಲಿಂಗನಿರ್ಧರಿತ ವೀರ್ಯನಳಿಕೆಗಳನ್ನು ಬಳಸಲಾಗುತ್ತಿದೆ.


ಸಂಚಾರಿ ಪಶು ಚಿಕಿತ್ಸಾ ಘಟಕ
ಸಂಚಾರಿ ಪಶುಚಿಕಿತ್ಸಾ ಘಟಕ ಮೂಲಕ ಜಾನುವಾರುಗಳಿಗೆ ಅಗತ್ಯವಿರುವ ತುರ್ತು ಪಶುವೈದ್ಯಕೀಯ ಸೇವೆಗಳನ್ನು ರೈತರ ಮನೆ ಬಾಗಿಲಿಗೆ ನೀಡಲಾಗುತ್ತಿದೆ. ಪಶುವೈದ್ಯಕೀಯ ತುರ್ತು ಚಿಕಿತ್ಸೆ ಅವಶ್ಯವಿರುವ ಜಾನುವಾರು ಮಾಲೀಕರು "1962" ಸಂಚಾರಿ ಪಶುಚಿಕಿತ್ಸಾ ಸಹಾಯವಾಣಿಗೆ ಕರೆ ಮಾಡಿ ಸೌಲಭ್ಯ ಪಡೆಯಬಹುದಾಗಿರುತ್ತದೆ.

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ
- ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಸದಸ್ಯರಿಗೆ 20+1 ಕುರಿ/ಮೇಕೆ ಘಟಕಗಳನ್ನು NCDC ಸಾಲ, ಸರ್ಕಾರದ ಸಹಾಯಧನದೊಂದಿಗೆ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿಯೂ ಮುಂದುವರೆಸಿ ಒಟ್ಟು 20,000 ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು.


ಮೇವಿನ ಬೀಜವ ಕಿರು ಪೊಟ್ಟಣ ವಿತರಣೆ
- ಬರಗಾಲದ ನಿರ್ವಹಣೆಗೆ ರೂ.8.17 ಲಕ್ಷ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ರೂ.22.00 ಕೋಟಿಗಳ ಅನುದಾನದಲ್ಲಿ ಉಚಿತವಾಗಿ ವಿತರಿಸಲಾಗಿದೆ ಹಾಗೂ ಮೇವು ಕತ್ತರಿಸುವ ಯಂತ್ರಗಳನ್ನು ಶೇ. 50% ಸಹಾಯಧನದೊಂದಿಗೆ ರೂ.6.10 ಕೋಟಿ ವೆಚ್ಚದಲ್ಲಿ 3666 ಫಲಾನುಭವಿಗಳಿಗೆ ವಿತರಿಸಲಾಗಿದೆ.

ತಾಲ್ಲೂಕೂಗಳಲ್ಲಿ ಪಾಲಿಕ್ಲಿನಿಕ್ ಸ್ಥಾಪನೆ
* ರಾಜ್ಯದ ಆಯ್ದ 20 ತಾಲ್ಲೂಕುಗಳ ಪಶು ಆಸ್ಪತ್ರೆಗಳನ್ನು ರೂ 10 ಕೋಟಿ ಅನುದಾನದಲ್ಲಿ ಪಾಲಿಕ್ಲಿನಿಕ್‌ಗಳನ್ನಾಗಿ i ಮೇಲ್ದರ್ಜೆಗೇರಿಸಲಾಗುವುದು.


ಪಶು ಚಿಕಿತ್ಸಾಲಯಗಳಿಗೆ ನೂತನ ಕಟ್ಟಡ ನಿರ್ಮಾಣ
* 200 ಪಶುವೈದ್ಯ ಸಂಸ್ಥೆಗಳಿಗೆ 100 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗುವುದು

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahvs.karnataka.gov.in/info-2/Schemes+&+Benefits/kn