Belehani parihara Jama-ನನ್ನ ಖಾತೆಗೆ ಹೆಚ್ಚುವರಿ 3000 ರೂಪಾಯಿ ಬೆಳೆಹಾನಿ ಪರಿಹಾರ ಜಮಾ, ನಿಮ್ಮ ಜಮಾ ಹೀಗೆ ಚೆಕ್ ಮಾಡಿ

<Krushirushi> <ಬೆಳೆಹಾನಿ ಹಣ ಜಮಾ> <Belehani hana jama> <drought relief fund released> <Belehani rejected list> <ಬೆಳೆಹಾನಿ ಪರಿಹಾರ ಪಾವತಿ ವಿಫಲ ಪ್ರಕರಣ> <Belehani parihara payment failed cases> <Belehani parihara jama> <Modala kanthina belehani parihara> <Direct benefit transfer> <ಬೆಳೆಹಾನಿ ಪರಿಹಾರ ಪಟ್ಟಿ> <crop loss compensation to eligible farmers> <Baraparihara patti> <Drought relief eligible list> <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <crop insurance> <belevime> <bele vime> <bele sala> <belesala> <ಬೆಳೆ ಸಾಲ> <ಬೆಳೆ ವಿಮೆ> <FID> <Fruits ID>

Belehani parihara Jama-ನನ್ನ ಖಾತೆಗೆ ಹೆಚ್ಚುವರಿ 3000 ರೂಪಾಯಿ ಬೆಳೆಹಾನಿ ಪರಿಹಾರ ಜಮಾ, ನಿಮ್ಮ ಜಮಾ ಹೀಗೆ ಚೆಕ್ ಮಾಡಿ

Belehani parihara Jama-ನನ್ನ ಖಾತೆಗೆ ಹೆಚ್ಚುವರಿ 3000 ರೂಪಾಯಿ ಬೆಳೆಹಾನಿ ಪರಿಹಾರ ಜಮಾ, ನಿಮ್ಮ ಜಮಾ ಹೀಗೆ ಚೆಕ್ ಮಾಡಿ


ರಾಜ್ಯದ ಸುಮಾರು 34 ಲಕ್ಷ ರೈತರಿಗೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ಕಳೆದ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರದ ಹಣ ಕೈಸೇರಲಿದೆ. ಕೇಂದ್ರದಿಂದ ಬಂದಿರುವ 3,454 ಕೋಟಿ ರೂ. ಅನ್ನು ಇನ್‌ಪುಟ್‌ ಸಬ್ಸಿಡಿಗೆ ಪೂರ್ಣ ಬಳಕೆ ಮಾಡಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ. ಈಗಾಗಲೇ ರೈತರಿಗೆ ವಿತರಿಸಿರುವ ಗರಿಷ್ಠ 2,000 ರೂ.ವರೆಗಿನ ಪರಿಹಾರ ಮೊತ್ತವನ್ನು ಕಡಿತ ಮಾಡಿಕೊಂಡು ಬಾಕಿ ಮೊತ್ತವನ್ನು ಡಿಬಿಟಿ ಮೂಲಕ ಖಾತೆಗೆ ಜಮಾ ಮಾಡಲಾಗುತ್ತಿದೆ

ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಖುಷ್ಕಿ, ನೀರಾವರಿ, ತೋಟಗಾರಿಕೆ ಬೆಳೆಗಳಿಗೆ ನಿಗದಿಯಾಗಿರುವ ಮೊತ್ತವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮಾ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಮೊದಲಿಗೆ 15 ಲಕ್ಷ ರೈತರಿಗೆ ಜಮಾ ಮಾಡುವ ಪ್ರಕ್ರಿಯೆ ನಡೆಯಲಿದೆ. ಉಳಿದ ರೈತರಿಗೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಪರಿಹಾರದ ಹಣ ತಲುಪಲಿದೆ ಎಂದು ಕಂದಾಯ ಇಲಾಖೆ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ರಾಜ್ಯದಲ್ಲಿ 2ನೇ ಹಂತದ ಚುನಾವಣೆ ವೇಳೆಗೆ ಬಹುತೇಕ ಬೆಳೆ ನಷ್ಟ ಪರಿಹಾರ ರೈತರಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.

ಯಾವ ಬೆಳೆಗೆ ಎಷ್ಟು ಪರಿಹಾರ ಸಿಗಲಿದೆ


ಮಳೆಯಾಶ್ರಿತ ಬೆಳೆಗಳು: ₹8,500 ಬೆಲೆ
ನೀರಾವರಿ ಬೆಳೆಗಳು: ₹17,000 ರೂ
ಬಹುವಾರ್ಷಿಕ ಬೆಳೆಗಳು: ₹22,500 ಪ್ರತಿ ಬೆಲೆ

ಈಗಾಗಲೇ ಜಮಾ ಆಗಿರುವ ಸ್ಟೇಟಸ್ ಹೀಗ್ ಚೆಕ್ ಮಾಡಿ


ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service89/PaymentDetailsReport.aspx

 

ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ,payment Success cases select ಮಾಡಿ Get reports ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ಕೆಳಗಿನಂತೆ ಪರಿಹಾರ ಯಶಸ್ಸಿನ ಪ್ರಕರಣಗಳ ಪಟ್ಟಿ ದೊರೆಯಲಿದೆ



Input subsidy for croploss-ಬೆಳೆಹಾನಿ ಪರಿಹಾರ ಚೆಕ್ ಮಾಡುವ ಆ್ಯಪ್ ಬಿಡುಗಡೆ,ಇಲ್ಲಿದೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://play.google.com/store/apps/details?id=com.dbtkarnataka

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ input subsidy for croploss ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೂ ಜಮಾ ಆದ ಬೆಳೆಹಾನಿ ಪರಿಹಾರ ಮಾಹಿತಿ ಸಿಗಲಿದೆ.

ನಂತರ seeding status of Aadhar in bank account ಮೇಲೆ ಕ್ಲಿಕ್ ಮಾಡಿದರೆ ಆಧಾರ್ ಲಿಂಕ್ ಮಾಹಿತಿ ದೊರೆಯುತ್ತದೆ

ಈ ಕೆಳಗಿನಂತೆ ಯಾವ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಲಿಂಕ್ ಆಗಿದೆ ಎಂಬ ಮಾಹಿತಿ ದೊರೆಯುತ್ತದೆ.