Milk incentive amount-7 ತಿಂಗಳ ಬಾಕಿ ಹಾಲಿನ ಪ್ರೋತ್ಸಾಹಧನ ಬಿಡುಗಡೆ,ನಿಮಗೆಷ್ಟು ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

<Krushirushi> <Milk incentive amount> <ಹಾಲಿನ ಪ್ರೋತ್ಸಾಹಧನ> <KMF> <Karnataka milk federation> <Milk incentive status> <Milk incentive status checking link> <ಕೆಎಂಎಫ್> <milk> <ಹಾಲು> <ರೈತ> <ಹಣ> <ಸಂದಾಯ> <ಡಿಬಿಟಿ> <ನೇರ ಲಾಭ ವರ್ಗಾವಣೆ> <dbt> <DBT Karnataka> <direct benefit transfer>

Milk incentive amount-7 ತಿಂಗಳ ಬಾಕಿ ಹಾಲಿನ ಪ್ರೋತ್ಸಾಹಧನ ಬಿಡುಗಡೆ,ನಿಮಗೆಷ್ಟು ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

Milk incentive amount-7 ತಿಂಗಳ ಬಾಕಿ ಹಾಲಿನ ಪ್ರೋತ್ಸಾಹಧನ ಬಿಡುಗಡೆ,ನಿಮಗೆಷ್ಟು ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

https://youtu.be/Dwscq496w3w?si=0ZCrZMMer3yuuQIg 

ಸೈಲೇಜ್ ಹೇಗೆ ತಯಾರಿಸ್ತಾರೆ ಗೊತ್ತಾ?

ಬರಗಾಲ ಬಂದಂತಹ ಸಂದರ್ಭಗಳಲ್ಲಿ ರೈತರನ್ನು ಅಕ್ಷರಶಃ ಸಂಕಷ್ಟದಿಂದ ಪಾರು ಮಾಡುವುದು ಹೈನುಗಾರಿಕೆಯೇ. ಅದೇ ಕಾರಣಕ್ಕೆ ಎಷ್ಟೋ ರೈತರು ಎಷ್ಟೇ ಜಮೀನಿದ್ದರೂ ಜಾನುವಾರುಗಳನ್ನು ಸಾಕುತ್ತಾರೆ. ಆದರೆ ಈ ಬಾರಿ ಹೈನುಗಾರಿಕೆಯೂ ರೈತರ ಕೈಸುಡಲು ಆರಂಭಿಸಿದೆ. ಬರಗಾಲದಿಂದಾಗಿ ಹಸಿ ಮೇವು, ಒಣ ಮೇವು ಮತ್ತು ನೀರಿನ ಕೊರತೆ ಒಂದೆಡೆಯಾದರೆ ಸರ್ಕಾರ ನೀಡಬೇಕಾಗಿದ್ದ ಪ್ರೋತ್ಸಾಹ ಧನವನ್ನೇ ನೀಡಿಲ್ಲ ಎಂಬುದೇ ದೊಡ್ಡ ಸಮಸ್ಯೆಯಾಗಿದೆ. ಅದೂ 7 ತಿಂಗಳಿಂದ! ಹೀಗಾದರೆ ಇದನ್ನೇ ನಂಬಿರುವ ರೈತರ ಪರಿಸ್ಥಿತಿ ಹೇಗಾಗಬೇಡ?


ಬರಗಾಲದಿಂದಾಗಿ ರಾಜ್ಯಾದ್ಯಂತ ಹಸಿ ಮೇವು ಹಾಗೂ ಒಣ ಮೇವಿನ ಕೊರತೆ ಎದುರಾಗಿದ್ದು, ಜಾನುವಾರುಗಳಿಗೆ ಕುಡಿಯುವ ನೀರಿನಗೂ ಕಷ್ಟವಾಗಿದೆ. ಈ ನಡುವೆ ರೈತರು ಹೊರ ರಾಜ್ಯಗಳಿಂದ ಹಣ ಕೊಟ್ಟು ಮೇವು ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.


ಹಾಲು ಒಕ್ಕೂಟಗಳು ರೈತರಿಗೆ ನೀಡುವ ಖರೀದಿ ದರವನ್ನು ಹೆಚ್ಚಿಸಿದಂತಹ ಸಂದರ್ಭದಲ್ಲಿ ಅದಕ್ಕನುಗುಣವಾಗಿ ಮಾರುಕಟ್ಟೆಯಲ್ಲಿ ಹಿಂಡಿ-ಬೂಸಾ ದರವನ್ನು ಏರಿಕೆಯಾಗಿತ್ತು. ಆದರೆ, ಒಕ್ಕೂಟಗಳು ಬೆಲೆ ಕಡಿಮೆ ಮಾಡಿದಂತಹ ಸಂದರ್ಭದಲ್ಲಿ ಬೂಸಾ ದರವನ್ನು ಇಳಿಕೆ ಮಾಡಿಲ್ಲ.

700 ಕೋಟಿ ರೂ ಬರಬೇಕಿದೆ

ರೈತರಿಗೆ ಹಾಲು ಒಕ್ಕೂಟಗಳಿಂದ ನೀಡುವಂತಹ ಪ್ರತಿ ಲೀಟರ್‌ ಹಾಲಿಗೆ ಸರಕಾರದಿಂದ 5 ರೂಪಾಯಿಗಳನ್ನು ಕಳೆದ ಏಳು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಬಿಡುಗಡೆಯಾಗಿಲ್ಲ. ಇದರಿಂದಾಗಿ ರೈತರು ಸಮಸ್ಯೆ ಅನುಭವಿಸುವಂತಾಗಿದ್ದು, ರಾಜ್ಯದಾದ್ಯಂತ ರೈತರಿಗೆ 700 ಕೋಟಿ ರೂ.ಗಳಿಗೂ ಹೆಚ್ಚಿನ ಪ್ರೋತ್ಸಾಹ ಧನ ಸರಕಾರದಿಂದ ಬಿಡುಗಡೆಯಾಗಬೇಕಿದೆ.

Milk incentive status-ಇಲ್ಲಿಯವರೆಗೂ ಜಮಾ ಆಗಿರುವ ಹಾಲಿನ ಪ್ರೋತ್ಸಾಹಧನ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://play.google.com/store/apps/details?id=com.dbtkarnataka

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ "ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ" ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೂ ಜಮಾ ಆದ ಪ್ರೋತ್ಸಾಹಧನ ಮಾಹಿತಿ ಸಿಗಲಿದೆ.

ಹೀಗೂ ಚೆಕ್ ಮಾಡಬಹುದು

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://mahitikanaja.karnataka.gov.in/Klda/MilkIncentive?ServiceId=5399&Type=TABLE&DepartmentId=3119

ನಂತರ ನಿಮ್ಮ ಜಿಲ್ಲೆ,ತಾಲೂಕು,Milk Union,ಗ್ರಾಮ, select ಮಾಡಿ,Submit ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೂ ನಿಮ್ಮ ಗ್ರಾಮದಲ್ಲಿ ಯಾರಿಗೆಲ್ಲಾ ಎಷ್ಟು ಹಾಲಿನ ಪ್ರೋತ್ಸಾಹಧನ(Milk incentive) ಬಂದಿದೆ ಎಂದು ತಿಳಿಯಲಿದೆ