Israel-ದೇಶ ಭಕ್ತಿಗೆ ಇನ್ನೊಂದು ಹೆಸರೇ ಇಸ್ರೇಲ್,ಕೃಷಿಯಲ್ಲಿ ನಂಬರ್ 1ನೇ ಸ್ಥಾನದಲ್ಲಿರುವ, ನಿಮಗೆ ಗೊತ್ತಿರದ ಇಸ್ರೇಲ್ ಇತಿಹಾಸ ನಿಮಗಾಗಿ

<Krushirushi> <ಇಸ್ರೇಲಕೃಷಿ> <Isrealagriculture> <

Israel-ದೇಶ ಭಕ್ತಿಗೆ ಇನ್ನೊಂದು ಹೆಸರೇ ಇಸ್ರೇಲ್,ಕೃಷಿಯಲ್ಲಿ ನಂಬರ್ 1ನೇ ಸ್ಥಾನದಲ್ಲಿರುವ, ನಿಮಗೆ ಗೊತ್ತಿರದ ಇಸ್ರೇಲ್ ಇತಿಹಾಸ ನಿಮಗಾಗಿ

Israel-ದೇಶ ಭಕ್ತಿಗೆ ಇನ್ನೊಂದು ಹೆಸರೇ ಇಸ್ರೇಲ್,ಕೃಷಿಯಲ್ಲಿ ನಂಬರ್ 1ನೇ ಸ್ಥಾನದಲ್ಲಿರುವ,ನಿಮಗೆ ಗೊತ್ತಿರದ ಇಸ್ರೇಲ್ ಇತಿಹಾಸ ನಿಮಗಾಗಿ

*Israel News: ಭೂಪಟದಲ್ಲಿ ಇರದಿದ್ದ ಇಸ್ರೇಲ್ ಭೂಪಟವನ್ನೇ ಆಳಲಿದೆಯೇ?

*ಇಸ್ರೇಲ್ ಎನ್ನುವ ಪದ ಎಷ್ಟು ಪವರ್ ಫುಲ್ ಅಂತ ಹಲವು ಸರ್ತಿ ಅನ್ನಿಸಿದೆ . ಜಗತ್ತಿನಲ್ಲಿ ಇರುವ ನೂರಾರು ದೇಶಗಳಲ್ಲಿ ಇಸ್ರೇಲ್ ಒಂದು, ಆದರೆ ನೂರರಲ್ಲಿ ಒಂದಾಗದೆ ಉಳಿದದ್ದು ಜಗತ್ತಿನಲ್ಲಿ ಅದಕ್ಕೆ ಆ ಮಟ್ಟದ ಕೀರ್ತಿ ತಂದು ಕೊಟ್ಟಿದೆ ಅನ್ನಬಹುದು . ಇಸ್ರೇಲ್ ಅಂದಾಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿ ನೆನಪು ಬರುವುದು ಪ್ಯಾಲೇಸ್ತೀನ್‌ನವರು ಮಾಡುವ ಒಂದು ದಾಳಿಗೆ ಉತ್ತರವಾಗಿ ಇವರು ಮಾಡುವ ಎರಡು ಅಥವಾ ಮೂರು ಮರು ದಾಳಿಗಳು .

*ಇಸ್ರೇಲಿಗಳು ತಮ್ಮ ಮೇಲೆ ಆದ ಆಕ್ರಮಣಕ್ಕೆ ಹುಲುಬುತ್ತಾ ಅಥವಾ ಶೋಕ ಆಚರಿಸುತ್ತಾ ಕೂರುವ ಜಾಯಮಾನದವರಲ್ಲ. ದಾಳಿಗೆ ವಿರುದ್ಧವಾಗಿ ಅದಕ್ಕಿಂತ ಹೆಚ್ಚಿನ ಪ್ರಮಾಣದ ಹಾನಿ ಮಾಡುವ ದಾಳಿ ಮಾಡುವುದು ಜಗತ್ತಿಗೆ ಇಸ್ರೇಲ್ ಬಗ್ಗೆ ತಿಳಿದಿರುವ ಅತಿ ಸಾಮಾನ್ಯ ವಿಷಯ. ಇಸ್ರೇಲ್ ತನ್ನ ಸುತ್ತ ಇರುವ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿಲ್ಲ. ಇಸ್ರೇಲ್ ಸುತ್ತಾ ಲೆಬನಾನ್ , ಸಿರಿಯಾ , ಸೌದಿ ಅರೇಬಿಯಾ , ಪ್ಯಾಲೇಸ್ತೀನ್, ಜೋರ್ಡನ್ , ಈಜಿಪ್ಟ್ ದೇಶಗಳನ್ನು ಹೊಂದಿದೆ . ಇವೆಲ್ಲಾ ಮುಸ್ಲಿಂ ದೇಶಗಳು . ಈ ಎಲ್ಲಾ ದೇಶಗಳಿಗೂ ಇಸ್ರೇಲ್ ಎಂದರೆ ರಕ್ತ ಕುದಿಯುತ್ತದೆ . ಅದಕ್ಕೆ ಕಾರಣ ಇಸ್ರೇಲ್ ಇರುವ ಜಾಗ ನಮ್ಮದು ಇಸ್ರೇಲ್‌ಗೆ ಸೇರಿದ್ದೇ ಅಲ್ಲ ಎನ್ನುವುದು ಬಹಳ ಹಳೆಯ ವಾದ . ಹೀಗಾಗಿ ಇಸ್ರೇಲ್ ಸದಾ ಎಚ್ಚರದಿಂದ ಇರಬೇಕಾದ ಪರಿಸ್ಥಿತಿಯಲ್ಲಿದೆ .*

*ಸದಾ ಒಂದಲ್ಲ ಒಂದು ಆಕ್ರಮಣಗಳಿಗೆ ಇಸ್ರೇಲ್ ಗುರಿಯಾಗುತ್ತಲೇ ಇರುತ್ತದೆ. ಇಸ್ರೇಲ್ ಗೆ ನೀವು ಭೇಟಿ ಕೊಟ್ಟಿದ್ದೆ ಆದರೆ ಅಲ್ಲಿ ಅಘೋಷಿತ ಯುದ್ಧದ ಪರಿಸರ ಇರುವುದು ನಿಮ್ಮ ಅರಿವಿಗೆ ಬಂದಿತು. ಹಾಗೆಂದು ಜನ ಭಯಭೀತರಾಗಿದ್ದಾರೆ ಎಂದುಕೊಂಡರೆ ಅದು ತಪ್ಪು. ಜನ ಸಾಮಾನ್ಯ ರೀತಿಯಲ್ಲಿ ತಮ್ಮ ಜೀವನ ನಡೆಸುತ್ತಾ ಇರುತ್ತಾರೆ . ಜೋರಾಗಿ ಸೈರನ್ ಕೂಗುತ್ತದೆ. ಆ ಸೈರನ್ ಯುದ್ಧದ ಅಥವಾ ಆಪತ್ತು ಎನ್ನುವ ಸಂಕೇತ. ಜನ ಇಂತಹ ಸೈರನ್ ಗೆ ಹೊಂದಿಕೊಂಡಿದ್ದಾರೆ. ಅಲ್ಲಿ ಪ್ಯಾನಿಕ್ ಅನ್ನುವುದು ಇಲ್ಲ. ನಿಮ್ಮ ಪಕ್ಕದಲ್ಲಿ ಬೀಚ್‌ನಲ್ಲಿ ಮಲಗಿದ್ದ ಪುರುಷ ಅಥವಾ ಮಹಿಳೆ ಕೆಲವು ನಿಮಿಷಗಳಲ್ಲಿ ಸೈನಿಕರಾಗಿ ಬದಲಾಗುತ್ತಾರೆ. ಪ್ರವಾಸಿಗನಿಗೆ ಕೀಪ್ ಯುವರ್ ಕೂಲ್ ಎಲ್ಲಾ ಕಂಟ್ರೋಲ್‌ನಲ್ಲಿದೆ ಎನ್ನುವ ತಣ್ಣನೆಯ ಭಾವನೆ ನೀಡುತ್ತಾರೆ. ಮುಂದಿನ ಕತೆ , ಇಸ್ರೇಲಿಗಳು ನೀಡುವ ಖಡಕ್ ಉತ್ತರ ಜಗತ್ತಿಗೆ ತಿಳಿದಿದೆ. ಇಷ್ಟೇ ಆಗಿದ್ದರೆ ಇಸ್ರೇಲ್ ವಿಶೇಷ ಅನ್ನಿಸುತ್ತಾ ಇರಲಿಲ್ಲ. ಜಗತ್ತಿಗೆ ಒಂದು ದಾರಿಯಾದರೆ ಇಸ್ರೇಲಿಗಳು ಮಾತ್ರ ತಮ್ಮದೆ ದಾರಿಯಲ್ಲಿ ತಮ್ಮದೆ ವೇಗದಲ್ಲಿ ಸಾಗುತ್ತಾರೆ. ಏನದು ಅಂತಹ ವೈಶಿಷ್ಟ್ಯಗಳು ಎನ್ನುವುದರ ಸುತ್ತ ಒಂದು ರೌಂಡ್ ಹಾಕೋಣ ಬನ್ನಿ .*

*ಇಸ್ರೇಲ್ ಸಾಧನೆಯ ಹಾದಿಯನ್ನ ಮುಖ್ಯ ಮಜಲುಗಳನ್ನ ತಿಳಿದರೆ ಇಸ್ರೇಲ್ ಎಂದರೆ ಜಗತ್ತು ಏಕೆ ವಿಶೇಷ ರೀತಿಯಲ್ಲಿ ನೋಡುತ್ತದೆ ಎನ್ನವುದನ್ನು ತಿಳಿಯಬಹುದು .*

*ಮೊದಲನೆ ಮಹಾಯುದ್ಧಕ್ಕೆ ಮುಂಚೆ*

*ಯಹೂದಿಗಳು ಅತ್ಯಂತ ಸಣ್ಣ ಜನಾಂಗ. ಇವರ ಉಳಿವಿಗಾಗಿ ವಿದೇಶಗಳಿಂದ ಕಳಿಸುತ್ತಿದ್ದ ದೇಣಿಗೆ ಹಣದಿಂದ ಇಸ್ರೇಲಿ ಯಹೂದಿಗಳ ಜೀವನ ಸಾಗುತಿತ್ತು.* *ಇಸ್ರೇಲ್ ಇನ್ನೂ ಹುಟ್ಟಿರಲಿಲ್ಲ, ಹೇಳಿಕೊಳ್ಳುವಂತಹ ಯಾವುದೇ ರೀತಿಯ ಹೂಡಿಕೆ ಇವರಿಂದ ಬಂದಿರಲಿಲ್ಲ . 19ನೇ ಶತಮಾನದಲ್ಲಿ ರೋತ್ಸ್ ಚೈಲ್ಡ್ ವೈನ್ ತಯಾರಿಕೆಯಲ್ಲಿ ಮತ್ತು ರೈಲು ಉದ್ದಿಮೆಯಲ್ಲಿ ಪ್ರಥಮ ಬಾರಿಗೆ ಹಣ ಹೂಡಿಕೆ ಮಾಡುತ್ತದೆ.* *ಆದರೆ ಅದರಿಂದ ಹೆಚ್ಚಿನ ಯಶಸ್ಸು ಹಣವನ್ನ ಗಳಿಸುವುದಿಲ್ಲ.* *ಹೀಗಾಗಿ ಪ್ರಥಮ ಮಹಾಯುದ್ಧಕ್ಕೆ ಮುಂಚೆ ಇಸ್ರೇಲ್ ಮತ್ತು ಯಹೂದಿಗಳು ಎನ್ನುವ ಪದಗಳು ಇನ್ನೂ* *ಶೈಶವಾಸ್ಥೆಯಲ್ಲಿದ್ದವು .*

*ಎರಡನೆ ಮಹಾಯುದ್ಧದ ನಂತರ*

*ಎರಡನೆ ಮಹಾಯುದ್ಧ ಮುಗಿದು ನಂತರ 14 ಮೇ 1948ರಲ್ಲಿ ಇಸ್ರೇಲ್ ಉದಯಿಸುತ್ತದೆ. ಇದೊಂದು ಸಂಕ್ರಮಣ ಕಾಲಘಟ್ಟ. ಜಗತ್ತಿನ ಉದ್ದಗಲಕ್ಕೂ ಹರಿದು ಹಂಚಿಹೋಗಿದ್ದ ಯಹೂದಿಗಳು ತಮ್ಮ ನೆಲಕ್ಕೆ ಹಿಂತಿರುಗಲು ಪ್ರಾರಂಭಿಸುತ್ತಾರೆ. ಹೀಗಿದ್ದೂ ಇವರ ಸಂಖ್ಯೆ ಲಕ್ಷ ಮೀರುವುದಿಲ್ಲ. ನಿಧಾನವಾಗಿ ಕಾರ್ಖಾನೆಗಳು , ಯೂನಿವರ್ಸಿಟಿ ಕಟ್ಟಲು ಶುರು ಮಾಡುತ್ತಾರೆ. ಮುಂದುವರಿದ ದೇಶಗಳ ಮುಂದೆ ಸಪ್ಪೆ ಎನಿಸುವಷ್ಟು ಆರ್ಥಿಕ ಸ್ಥಿತಿ ಇವರದಾಗಿತ್ತು .*

*ಎಪ್ಪತ್ತರ ದಶಕದಿಂದ ತೊಂಬತ್ತರ ದಶಕದಲ್ಲಿ ಇಸ್ರೇಲ್*

*ಆರು ಲಕ್ಷವಿದ್ದ ತನ್ನ ಜನಸಂಖ್ಯೆಯನ್ನ 40 ಲಕ್ಷಕ್ಕೆ ಏರಿಸಿಕೊಂಡಿದ್ದು ಇಸ್ರೇಲ್ ನ ಮಹಾಸಾಧನೆ . ಇವರ ಆರ್ಥಿಕತೆ ಬೆಳೆದು ಈಸ್ಟ್ರೇನ್ ಯೂರೋಪಿಯನ್ ದೇಶಗಳ ಆರ್ಥಿಕತೆಯ ಮಟ್ಟಕ್ಕೆ ಬಂದು ಮುಟ್ಟುತ್ತದೆ. ಆದರೂ ಟೆಲಿಫೋನ್ , ಕಾರು ಜನ ಸಾಮಾನ್ಯನಿಗೆ ಎಟುಕುತ್ತಿರಲಿಲ್ಲ. ಜನರ ತಲಾದಾಯ ಯೂರೋಪಿನ ಅಥವಾ ಅಮೇರಿಕಾ ಜನರ ತಲಾಯಾದ ಅರ್ಧದಷ್ಟಿತ್ತು. ಅಂದಿನ ದಿನಗಲ್ಲಿ ಇಸ್ರೇಲ್ ವಜ್ರದ ವ್ಯಾಪಾರದಿಂದ ತನ್ನ ಹಣವನ್ನ ಗಳಿಸುತ್ತಿತ್ತು .*

*ತೊಂಬತ್ತರಿಂದ ಎರಡು ಸಾವಿರದ ಹದಿನೈದು*

*ಈ ವೇಳೆಯಲ್ಲಿ ಇಸ್ರೇಲ್ ನಾಟಕೀಯ ಬೆಳವಣಿಗೆ ಕಾಣುತ್ತದೆ. ಜಗತ್ತಿನ ಅತ್ಯಂತ ಉನ್ನತ ತಂತ್ರಜ್ಞಾನ ಇವರಿಂದ ಸೃಷ್ಟಿಯಾಗುತ್ತೆ. ತನ್ನ ಸುತ್ತಲೂ ವೈರಿಗಳೇ ತುಂಬಿದ್ದಾರೆ ಆಕಸ್ಮಾತ್ ಅವರು ತಮ್ಮ ಸರಹದ್ದು ಮುಚ್ಚಿ ನೀರು ಆಹಾರ ನಿಲ್ಲಿಸಿಬಿಟ್ಟರೆ ಎನ್ನುವ ಭಯವನ್ನ ಮೆಟ್ಟಿ ನಿಂತು ಬೇರೆ ದೇಶಗಳಿಗೆ ಆಹಾರ ಎಕ್ಸ್ಪೋರ್ಟ್ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ನಲವತ್ತು ಲಕ್ಷವಿದ್ದ ತಮ್ಮ ಜನಸಂಖ್ಯೆಯನ್ನ ಎಪ್ಪತೈದು ಲಕ್ಷದ ಸನಿಹಕ್ಕೆ ತಂದು ನಿಲ್ಲಿಸಿದ್ದಾರೆ . ಇಂದಿಗೆ (2023)ಇಸ್ರೇಲ್ ಜನಸಂಖ್ಯೆ 93.6 ಲಕ್ಷ. ಇವರ ತಲಾದಾಯ ಅನೇಕ ಯೂರೋಪಿಯನ್ ದೇಶಗಳನ್ನ ಹಿಂದಿಕ್ಕಿದೆ. ತಂತ್ರಜ್ಞಾನ ಪ್ರತಿಯೊಬ್ಬ ಪ್ರಜೆಯನ್ನ ತಲುಪಿದೆ . ಕಾರು , ಫೋನ್ ಅಷ್ಟೆ ಏಕೆ ಪ್ರತಿಯೊಬ್ಬ ನಾಗರಿಕನೂ ವಿದೇಶಿ ಪ್ರಯಾಣವನ್ನು ಕೂಡ ಮಾಡಬಲ್ಲಷ್ಟು ಸ್ಥಿತಿವಂತನಾಗಿದ್ದಾನೆ. ಮೂಲ ಸೌಕರ್ಯ ಜಗತ್ತಿನ ಮುಂದುವರೆದ ದೇಶಗಳಿಗೆ ಸೆಡ್ಡು ಹೊಡೆಯುವಂತೆ ನಿರ್ಮಿಸಲಾಗಿದೆ . ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾನಿಲಯ ಇಲ್ಲಿ ತಲೆ ಎತ್ತಿ ನಿಂತಿದೆ. ಟೆಲ್ ಅವಿವ್ ಜಗತ್ತಿನ ಅತ್ಯುತ್ತಮ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಜಾಗತಿಕ ಮಟ್ಟದಲ್ಲಿ ತಮಗೆ ಬೇಕಾದದ್ದು ಪಡೆಯುವ ಲಾಬಿ ಮಾಡುವ ಹಂತಕ್ಕೆ ಇಸ್ರೇಲಿ ಯಹೂದಿಗಳು ಬೆಳೆದಿದ್ದಾರೆ . ಜಗತ್ತಿನ ಯಾವುದೇ ಮೂಲೆಯಲ್ಲಿ ಯಹೂದಿಯೊಬ್ಬನ ಮೇಲೆ ಆಕ್ರಮಣ ಮಾಡುವ ಮುಂಚೆ ಹತ್ತು ಬಾರಿ ಯೋಚಿಸಬೇಕು ಅಷ್ಟರಮಟ್ಟಿಗೆ ತನ್ನ ಶತ್ರುವಿನಲ್ಲಿ ಭಯ ಬಿತ್ತುವಲ್ಲಿ ಇಸ್ರೇಲಿಗಳು ಯಶಸ್ವಿಯಾಗಿದ್ದಾರೆ .*

*ಇಸ್ರೇಲಿಗಳ ಹೊಸ ಪರ್ವಾರಂಭ*

*ಜಗತ್ತಿನಲ್ಲಿ 196 ದೇಶಗಳಿವೆ. ಅದರಲ್ಲಿ 50 ಮುಸ್ಲಿಂ ದೇಶಗಳು 7 ಮುಸ್ಲಿಂ ಬಾಹುಳ್ಯವಿರುವ ದೇಶಗಳು. ಹೀಗಾಗಿ 57 ದೇಶಗಳನ್ನ ಮುಸ್ಲಿಂ ದೇಶಗಳು ಎಂದು ವಿಂಗಡಿಸಬಹುದು. ಜಗತ್ತಿನ ಜನಸಂಖ್ಯೆ 7 (700 ಕೋಟಿ )ಬಿಲಿಯನ್ ಅದರಲ್ಲಿ 1.8 (180 ಕೋಟಿ ) ಬಿಲಿಯನ್ ಜನಸಂಖ್ಯೆ ಮುಸ್ಲಿಮರು. ಅಂದರೆ ಜಗತ್ತಿನ ಜನಸಂಖ್ಯೆಯ 25 ಪ್ರತಿಶತ ಈ ಜನಾಂಗದ ಜನರಿದ್ದಾರೆ. ಒಟ್ಟು ಮುಸ್ಲಿಂ ದೇಶಗಳ ಜಿಡಿಪಿ ಎರಡು ಟ್ರಿಲಿಯನ್ ಡಾಲರ್‌. ಜಗತ್ತಿನ ಒಟ್ಟು ಜಿಡಿಪಿ 103 ಟ್ರಿಲಿಯನ್ . ಇಸ್ರೇಲ್ ಜನಸಂಖ್ಯೆ ಕೇವಲ ೮೩ ಲಕ್ಷ ಇವರ ಜಿಡಿಪಿ 564 ಬಿಲಿಯನ್ ಡಾಲರ್. ಇಸ್ರೇಲ್ ಬೆಳವಣಿಗೆಯ ವೇಗ ಗಮನಿಸಿದರೆ ಇದು ಟ್ರಿಲಿಯನ್ ಡಾಲರ್ ಮುಟ್ಟಲು ಹೆಚ್ಚು ಸಮಯ ಬೇಕಿಲ್ಲ. ಅಂದರೆ 57 ದೇಶಗಳ ಒಟ್ಟು ಮೌಲ್ಯದ ಅರ್ಧ ಭಾಗ ಕೇವಲ 83 ಲಕ್ಷ ಜನಸಂಖ್ಯೆಯ ಇಸ್ರೇಲ್ ಒಂದು ದೇಶ ಹೊಂದಲಿದೆ ಎಂದರೆ ಇಸ್ರೇಲ್ ಅದೆಷ್ಟು ಪವರ್ ಫುಲ್ ಜಗತ್ತಿನ ಬೇರೆಲ್ಲಾ ದೇಶಗಳು ಇಸ್ರೇಲ್ ಎಂದಾಕ್ಷಣ ಅದೇಕೆ ಆ ಮಟ್ಟಿನ ಗೌರವ ಕೊಡುತ್ತವೆ ಎನ್ನುವ ಅರಿವಾದೀತು. ವಿಸ್ತೀರ್ಣದಲ್ಲಿ ನಮ್ಮ ಮಿಝೋರಾಂ ರಾಜ್ಯಕ್ಕಿಂತ ಸ್ವಲ್ಪ ಕಡಿಮೆ ಹೊಂದಿರುವ ಇಸ್ರೇಲ್ ಗೌರವದಲ್ಲಿ ಮಾತ್ರ ಜಗತ್ತನ್ನ ಆಕ್ರಮಿಸಿದೆ . ಅಮೇರಿಕಾದ ಸಂಸತ್ತು, ಅಮೆರಿಕಾದ ಮೀಡಿಯಾ ಹೌಸ್ , ಅಮೆರಿಕಾದ ಬಹುಪಾಲು ವ್ಯಾಪಾರ ಇಸ್ರೇಲ್ ಯಹೂದಿಗಳ ಕೈಲಿದೆ . ಅಮೇರಿಕಾದ ಮೀಡಿಯಾ ಹೌಸ್ ಗಳಲ್ಲಿ 90 ಕ್ಕೂ ಅಧಿಕ ಇಸ್ರೇಲಿಗಳ ಆಡಳಿತದಲ್ಲಿದೆ. ಹೀಗಾಗಿ ಅಮೇರಿಕಾದಲ್ಲಿ ' you can criticize God, but you can't criticize Israel…' ಎನ್ನುವ ಮಾತಿದೆ .*

*ರೋತ್ಸ್ ಚೈಲ್ಡ್ ಎನ್ನುವ ಯಹೂದಿ ಸಂಸ್ಥೆ ಮೂಲವಾಗಿ ಜರ್ಮನಿ ಫ್ರಾನ್ಸ್ ಮತ್ತು ಇಂಗ್ಲೆಂಡ್‌ನಲ್ಲಿ ಬಹಳ ಹಿಡಿತ ಹೊಂದಿದೆ . ಆರ್ಥಿಕ ವಲಯದಲ್ಲಿ ರೋತ್ಸ್ ಚೈಲ್ಡ್ ಎನ್ನುವುದು ಎಷ್ಟು ಪ್ರಭಲ ಸಂಸ್ಥೆಎಂದರೆ ಜಗತ್ತಿನ ಹಿರಿಯಣ್ಣ ಅಮೇರಿಕಾ ದ ಪ್ರೆಸಿಡೆಂಟ್ ಯಾರಾಗ ಬೇಕು ಎನ್ನುವುದನ್ನ ಕೂಡ ನಿರ್ಧರಿಸುವಷ್ಟು , ಬಹುತೇಕ ಎಲ್ಲಾ ಮುಖ್ಯ ದೇಶಗಳ ಸೆಂಟ್ರಲ್ ಬ್ಯಾಂಕ್ ನಲ್ಲಿ ಇವರು ಪರೋಕ್ಷ ಅಥವಾ ಅಪರೋಕ್ಷವಾಗಿ ಹಿಡಿತ ಹೊಂದಿದ್ದಾರೆ ಎನ್ನುವುದು ಆರ್ಥಿಕವಲಯದಲ್ಲಿ ಆಗಾಗ್ಗೆ ಪಿಸುಗುಡುವ ವಿಷಯ . ಬೆಂಕಿಯಿಲ್ಲದೆ ಖಾಲಿ ಹೊಗೆ ಹೇಗೆ ತಾನೇ ಬಂದಿತು? ಹೀಗಾಗಿ ಅಮೇರಿಕಾ ಒಂದೇ ಅಲ್ಲದೆ ಜಗತ್ತಿನ ಮುಖ್ಯ ದೇಶಗಳ ಹಣಕಾಸು ಆಟವನ್ನ ನಿಯಂತ್ರಿಸುವುದು ರೋತ್ಸ್ ಚೈಲ್ಡ್ ಎನ್ನುವ ಯಹೂದಿ ಸಂಸ್ಥೆ .*

*ಜಗತ್ತನ್ನ ಆಳಲು ಬೇಕಿರುವುದು ಆರ್ಥಿಕ ಸಬಲತೆ ಮಾತ್ರವಲ್ಲ ಅದರ ಜೊತೆಗೆ ತಂತ್ರಜ್ಞಾನದ ನಿಪುಣತೆ ತನ್ನ ಜನಾಂಗದ ಮೇಲೆ ,ತನ್ನ ಬದ್ಧತೆಯ ಮೇಲೆ ಅತೀವ ಕಾಳಜಿ ನಂಬಿಕೆ ಮತ್ತು ವಿಶ್ವಾಸ . ಕೋಟಿ ಮೀರದ ಈ ಜನಾಂಗ ಮುಂಬರುವ ದಿನಗಳಲ್ಲಿ ಇಡಿ ವಿಶ್ವದ ಮೇಲೆ ಹಿಡಿತ ಹೊಂದಿದರೆ ಅದು ಆಶ್ಚರ್ಯ ಪಡುವ ವಿಷಯವಂತೂ ಅಲ್ಲ . ಇಸ್ರೇಲಿಗಳ ಯಹೂದಿಗಳ ಬದ್ಧತೆ , ಕಟ್ಟು ನಿಟ್ಟಿಗೆ ಉದಾಹರಣೆ ನೀಡಲೇಬೇಕು . ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಮಿಲಿಟರಿ ಸೇವೆ ಸಲ್ಲಿಸಲೇಬೇಕು . ಇಲ್ಲಿ ಹೆಣ್ಣು ಗಂಡು ಎನ್ನವ ಬೇಧವಿಲ್ಲ . ಇಸ್ರೇಲಿಗಳ ಮಗು ಜಗತ್ತಿನ ಯಾವುದೇ ಭಾಗದಲ್ಲಿ ಜನಿಸಲಿ ಆ ಮಗುವನ್ನ ಇಸ್ರೇಲಿ ಎಂದೇ ಪರಿಗಣಿಸಲಾಗುತ್ತದೆ . ಮತ್ತು ಆ ಮಗು ಕೂಡ ಮಿಲಿಟರಿ ಸೇವೆ ಮಾಡಲೇಬೇಕು . ವಿದೇಶದಲ್ಲಿ ನೆಲೆಸಿರುವ ಇಂತಹ ಮಕ್ಕಳು ೧೭ ನೇ ವಯಸ್ಸಿಗೆ ತಲುಪಿದಾಗ ತಾವಿರುವ ದೇಶದ ಇಸ್ರೇಲ್ ಎಂಬೆಸಿಗೆ ಹೋಗಿ ನೊಂದಾಯಿಸಿಕೊಳ್ಳಬೇಕು. ಆಗ ಮಾತ್ರ ಇದರಿಂದ ವಿನಾಯತಿ ಸಿಗುತ್ತದೆ . ಯುದ್ಧ ಅಥವಾ ಸಾಮಾನ್ಯವಲ್ಲದ ಸನ್ನಿವೇಶದಲ್ಲಿ ಪ್ರತಿ ಪ್ರಜೆಯೂ ಸೈನಿಕನಾಗಿ ಬದಲಾವಣೆ ಹೊಂದುವ ವ್ಯವಸ್ಥೆ ಅದನ್ನ ಕಟ್ಟುನಿಟ್ಟಿನಿಂದ ಪಾಲಿಸುವ ಜನ ನಾಳೆ ಜಗತ್ತನ್ನ ಆಳಲು ಏಕೆ ಸಾಧ್ಯವಿಲ್ಲ?*

*ಇಸ್ರೇಲ್ ಯುವ ಜನತೆ ತನ್ನ ಹಿಂದಿನ ತಲೆಮಾರಿಗಿಂತ ಹೆಚ್ಚು ಧಾರ್ಮಿಕತೆ ಕಡೆ ಒಲವು ತೋರುತ್ತಿದೆ. ತಂತ್ರಜ್ಞಾನ ನಭದೆತ್ತರಕ್ಕೆ ಚಿಮ್ಮುತ್ತಿರುವ ಅದರ ಹರಿಕಾರರು ಆಗಿರುವ ಯಹೂದಿಗಳು ಮಾತ್ರ ತಮ್ಮ ಮೂಲ ನಂಬಿಕೆಗಳಿಗೆ ಹೆಚ್ಚು ಹೆಚ್ಚು ನಿಷ್ಠರಾಗುತ್ತಿದ್ದಾರೆ . ಯಹೂದಿಯಲ್ಲದ ಇತರರೊಡನೆ ಮದುವೆಯಂತಹ ಸಂಬಂಧಗಳನ್ನ ಅರವತ್ತೈದು ಪ್ರತಿಶತ ಇಸ್ರೇಲಿಗಳು ಒಪ್ಪುವುದಿಲ್ಲ ಎನ್ನುವುದು ಇಂತಹ ಮಾತಿಗೆ ಪುಷ್ಟಿ ನೀಡುತ್ತದೆ . ಜಗತ್ತು ಬೇರೆ ನಾವೇ ಬೇರೆ ಎನ್ನುವ ಭಾವನೆ ಬಂದರೆ ಅಲ್ಲಿಗೆ ಎಂತಹ ಸಾಧನೆಯೂ ಶೂನ್ಯ . ಇಸ್ರೇಲ್ ಕೇವಲ ಧಾರ್ಮಿಕತೆಗೆ ಕಟ್ಟು ಬೀಳದೆ ಇರಲಿ .ಮುಂಬರುವ ದಿನಗಲ್ಲಿ ಇವರಿಂದ ವಿಶ್ವ ಶಾಂತಿ ಸ್ಥಾಪನೆಯಾಗಲಿ ಎನ್ನುವುದಷ್ಟೆ ಆಶಯ . ಇದೇನೆ ಇರಲಿ ಯಹೂದಿಗಳ ಯಶೋಗಾಥೆ ಸದ್ಯಕ್ಕೆ ನಮಗಂತೂ ಸ್ಪೂರ್ತಿದಾಯಕ. ಸ್ವಾವಲಂಬನೆ , ಸ್ವಾಭಿಮಾನ , ಪರಿಶ್ರಮ ಅವರಿಂದ ಒಂಚೂರು ನಾವು ಎರವಲು ಪಡೆದರೆ ಯಶೋಗಾಥೆಯಲ್ಲಿ ಯಹೂದಿಗಳಿಗೂ ನಾವು ಸೆಡ್ಡು ಹೊಡೆಯಬಹದು . ನಾವು ಅದಕ್ಕೆ ಸಿದ್ಧರಿದ್ದೇವೆಯೇ ??*

- ರಂಗಸ್ವಾಮಿ ಮೂಕನಹಳ್ಳಿ (ಫೇಸ್‌ಬುಕ್‌ ಬರಹ)

Isreal agriculture-ಕೃಷಿಯಲ್ಲಿ ನಂಬರ್ 1 ಸ್ಥಾನದಲ್ಲಿರುವ  ಇಸ್ರೇಲ್ ಕೃಷಿಯ ಸುತ್ತ ಒಂದು ಸುತ್ತು


ಬಹುತೇಕ ಮರುಭೂಮಿ, ತೀರ ಕನಿಷ್ಠ ಎನಿಸುವಷ್ಟು ಮಳೆ,ದೇಶದ ಜನಸಂಖ್ಯೆ ಒಂದು ಕೋಟಿಗಿಂತಲೂ ಕಡಿಮೆ, ಕೃಷಿ ಕಾರ್ಮಿಕರ ಲಭ್ಯತೆ ಕೇಳುವಂತಿಲ್ಲ. ಬಹಳ ಕಡೆ ನೀರು ಹಿಡಿದಿಟ್ಟುಕೊಳ್ಳುವ ಗುಣವೇ ಇಲ್ಲದ ಮರಳು ಮಣ್ಣು, ಹವಾಗುಣದ ವೈಪರಿತ್ಯ ನೈಸರ್ಗಿಕ ಸಂಪನ್ಮೂಲಗಳ ಗರಿಷ್ಠ ಕೊರತೆ ನಮ್ಮ ಎರಡು ಅಥವಾ ಮೂರು ಜಿಲ್ಲೆಗಳಷ್ಟು ಮಾತ್ರ ವಿಸ್ತೀರ್ಣ ಹೊಂದಿರುವ ದೇಶ ಇಸ್ರೇಲ್.

 ಯಾವ ದೃಷ್ಟಿಯಿಂದ ನೋಡಿದರೂ ಕೃಷಿಗೆ ಪೂರಕವಲ್ಲದ ವಾಸ್ತವ ಹಾಗೂ ವಸ್ತು ಸ್ಥಿತಿ. ಆದರೂ ಇಡೀ ವಿಶ್ವವೇ ತನ್ನ ಕೃಷಿ ಕ್ಷೇತ್ರದ ಸಾಧನೆಗಳನ್ನು ನೋಡಿ ಬೆರಗುಗೊಳ್ಳುವಷ್ಟು ಎತ್ತರಕ್ಕೆ ಬೆಳೆದಿರುವ ಅಪ್ರತಿಮ ಮಾದರಿ ರಾಷ್ಟ್ರ ಇಸ್ರೇಲ್.

 ಕರ್ನಾಟಕದ ಮೈಸೂರು ಬೆಂಗಳೂರು ಮಂಗಳೂರು ದಾವಣಗೆರೆ ಜಿಲ್ಲೆಗಳ 22 ಆಸಕ್ತ ರೈತರೊಂದಿಗೆ ಇಸ್ರೇಲ್ ಕೃಷಿ ಅಧ್ಯಯನ ಪ್ರವಾಸ ಮುಗಿಸಿ ಬಂದು ನನ್ನ ಅನುಭವಗಳನ್ನು ಸರಣಿ ಲೇಖನಗಳ ರೂಪದಲ್ಲಿ ಹಂಚಿಕೊಳ್ಳುವ ಒಂದು ಪುಟ್ಟ ಪ್ರಯತ್ನ ಇದು. ತಂಡದ ಎಲ್ಲ ಸದಸ್ಯರು ಸ್ವಯಂ ಆಸಕ್ತಿಯಿಂದ ಸ್ವಂತ ಹಣ ಹಾಕಿಕೊಂಡು ಅಲ್ಲಿನ ಕೃಷಿ ಒಳ ಹೊರಗೆ ಹರಿಯಲು ಮುಂದಾಗಿದ್ದು ಈ ಪ್ರವಾಸದ ವಿಶೇಷವಾಗಿತ್ತು.


 ಇಸ್ರೇಲ್ ದೇಶ ಇಡೀ ವಿಶ್ವದಲ್ಲಿಯೇ ಕೃಷಿಯಲ್ಲಿ ಮೊದಲ ಮತ್ತು ತೋಟಗಾರಿಕೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ.ಮಣ್ಣು ಮತ್ತು ನೀರು ಸಂರಕ್ಷಣೆ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ರೈತನ ಬದುಕಿಗೆ ಭದ್ರಬುನಾದಿ ಹಾಕಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ. ಅಲ್ಲಿಯ ಕೃಷಿ ಬೇಸಾಯ ಕ್ರಮಗಳ ಕುರಿತ ಮೈಸೂರಿನ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮೈಸೂರು ಮುಂದಾಳು ಶ್ರೀ ಹರೀಶ್ ಬಿಎಸ್ ಅವರ ಇಸ್ರೇಲ್ ಅಧ್ಯಯನದ ಪ್ರವಾಸದ ತುಣುಕುಗಳು.


 ಇಸ್ರೇಲ್ ಕೃಷಿ ಬಗೆಗಿನ ಅಂಕಿ ಅಂಶಗಳು

 ಒಟ್ಟು ವಿಸ್ತೀರ್ಣ 22500 ಚದರ ಕಿಲೋ ಮೀಟರ್ ಗಳು ಒಟ್ಟು ಜನಸಂಖ್ಯೆಯ ಶೇಕಡ 1.4 ರಷ್ಟು ಜನ ಮಾತ್ರ ಅಲ್ಲಿ ಕೃಷಿಯಲ್ಲಿ ತೊಡಗಿರುವುದು. ಕೃಷಿ ರಫ್ತಿ ನಿಂದ ಅವರಿಗೆ ಸಿಗುತ್ತಿರುವ ಹಣ 22,000 ಕೋಟಿ ರೂಗಳಿಗೂ ಹೆಚ್ಚು. ನಮ್ಮಲ್ಲಿನ ಕೃಷಿಗೆ ಹೋಲಿಸಿದರೆ ಸರ್ಕಾರದಿಂದ ಕೃಷಿಕರಿಗೆ ಸಿಗುತ್ತಿರುವ ಅನುಕೂಲಗಳು ತೀರಾ ಕಡಿಮೆ. ಒಟ್ಟು ಭೂಪ್ರದೇಶದ ಶೇಕಡ 20ರಷ್ಟು ಮಾತ್ರ ಕೃಷಿಗೆ ಯೋಗ್ಯ ಶೇಕಡ 50ಕ್ಕಿಂತ ಹೆಚ್ಚಿನದ್ದು ಕ್ಷಾರ ಮಣ್ಣು. ವಿಶ್ವಸಂಸ್ಥೆಯ ನೀರ ಬರ ವ್ಯಾಖ್ಯಾನಿಕಿಂತಲೂ ಕಡಿಮೆ ನೈಸರ್ಗಿಕ ನೀರಿನ ಲಭ್ಯತೆ ಇರುವ ದೇಶ.

 ಬೆಣ್ಣೆ ಹಣ್ಣು ಕರ್ಜೂರ ಬಾಳೆ ಸಿಟ್ರಸ್ ಗುಂಪಿನ ಹಣ್ಣುಗಳು ಮಾವು ದಾಳಿಂಬೆ ದ್ರಾಕ್ಷಿ ಬಾದಾಮಿ ಹಾಲಿವು ತರಕಾರಿ ಹಾಗೂ ಗೋಧಿ ಅಲ್ಲಿ ಬೆಳೆಯುತ್ತಿರುವ ಪ್ರಮುಖ ಬೆಳೆಗಳು.

 ಕೃಷಿ ಸಾಧನೆಗೆ ಪ್ರಮುಖ ಕಾರಣಗಳು

 ಕೃಷಿಕರು ಕೃಷಿ ಉದ್ಯಮ ಹಾಗೂ ಕೃಷಿ ಸಂಶೋಧನಾ ಸಂಸ್ಥೆಗಳ ನಡುವಿನ ಅದ್ಭುತ ಹೊಂದಾಣಿಕೆ ಗಣಕೀಕೃತ ಹನಿ ರಸಾವರಿ ಪದ್ಧತಿಗಳ ಅನುಷ್ಠಾನ ಹವಾಗುಣ ವೈಪರಿತ್ಯಗಳ ಮುನ್ಸೂಚನೆಯಲ್ಲಿ ಉತ್ಕೃಷ್ಟ ತಳಿಗಳ ಅಭಿವೃದ್ಧಿ, ನಿರ್ಲವಣಿಕರಿಸಿದ ಹಾಗೂ ಸಂಸ್ಕರಿಸಿದ ನೀರಿನ ಸದ್ಬಳಕೆ ನೀರಿನ ಒತ್ತಡ ಹಾಗೂ ಗುಣಮಟ್ಟದ ವ್ಯತ್ಯಾಸಗಳ ಹೊರತಾಗಿಯೂ ಸ್ವಯಂ ಶುದ್ಧೀಕರಿಸಲ್ಪಡುವ ಹನಿ ನೀರಾವರಿ ವ್ಯವಸ್ಥೆ. ನೀರಿನ ಕೊರತೆಯಿಂದ ಬೆಳೆಯ ಎಲೆಗಳಲ್ಲಿ ವ್ಯವಸ್ಥೆಯ ವಾಗುವ ಉಷ್ಣಾಂಶದ ಆಧಾರದ ಮೇಲೆ ಬೆಳೆಗಳಿಗೆ ನೀರು ಕೊಡುವುದು. ವಿವಿಧ ಬಗೆಯ ಬಣ್ಣಗಳಿರುವ ನೆರಳು ಪರದೆಗಳ ಬಳಕೆ ಉದಾಹರಣೆಗೆ ಕೆಂಪು ನೆರಳು ಪರದೇಡಿ ಅಲ್ಲಿನ ಕೆಲವು ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಹೆಚ್ಚಿರುವುದು.  ಕೀಟ ನಿರ್ವಹಣಾ ತಂತ್ರಜ್ಞಾನಗಳು ಪರಾಗಸ್ಪರ್ಶಕ್ಕಾಗಿ ಬೊಂಬಲ್ ಬೀಳಬಳಕೆ ಶುಲ್ಕ ವಾತಾವರಣದಲ್ಲಿ ಉಪ್ಪು ನೀರನ್ನು ಸಹಿಸಿಕೊಂಡು ಬೆಳೆಯಬಲ್ಲ ಆಲೂಗಡ್ಡೆ ತಳಿಗಳ ಅಭಿವೃದ್ಧಿ ಅತ್ಯಾಧುನಿಕ ಕೊಯ್ಲೋತರ ತಾಂತ್ರಿಕಗಳು ಕೃಷಿ ತಂತ್ರಜ್ಞಾನಗಳ ಗರಿಷ್ಠ ಅಳವಡಿಕೆ ಕೃಷಿಯಲ್ಲಿ ತೊಡಗಿರುವವರ ಬದ್ಧತೆ ಸಮಯೋಜಿತವಾಗಿ ಪಾಲಿಸುವ ಕೃಷಿ ಚಟುವಟಿಕೆಗಳು ಉತ್ಕೃಷ್ಟ ಗುಣಮಟ್ಟ ಹಾಗೂ ಉತ್ಪಾದಕತೆಯ ಗುರಿ ಸಾಧಿಸುವ ಅವರ ಚಾಾಕ ಚಕ್ಕತೆ ಹಾಗೂ ಕಾರ್ಯಕ್ಷಮತೆ

 ಕೃಷಿಯಲ್ಲಿ ಬಳಸುವ ನೀರಿಗೂ ಅಲ್ಲಿನ ರೈತರು ಹಣಕೊಟ್ಟು ಖರೀದಿಸಬೇಕೆಂದರೆ ನಂಬುತ್ತೀರಾ? ಹೌದು ನಂಬಲೇಬೇಕು ನೀರನ್ನು ಕೊಂಡುಕೊಂಡು ಕೃಷಿ ಮಾಡುವುದಾದರೆ ಲಾಭದ ಮಾತಿರಲಿ ಅಸಲು ಪಡೆಯುವುದು ನಮ್ಮಲ್ಲಿ ಅಸಾಧ್ಯ. ಆದರೆ ಇಸ್ರೇಲ್ ಇದನ್ನೆಲ್ಲ ಮೆಟ್ಟಿನಿಂತು ಕೃಷಿಯಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ

ಈ ಲೇಖನದ ಕೊನೆಯಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ  ವಿಶ್ವದಲ್ಲಿಯೇ ಕೃಷಿಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಇಸ್ರೇಲ್ ಕೃಷಿಯ ಕುರಿತ ವಿಡಿಯೋ ನೋಡಿ

https://youtu.be/lt1vnLJu1GU 



ಇದನ್ನೂ ಓದಿ

Annabhagya-ಈ ಪಟ್ಟಿಯಲ್ಲಿರುವವರಿಗೆ ಸಿಗಲಿದೆ ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಹಣ,ಇಲ್ಲಿದೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್

1 ಸದಸ್ಯರಿರುವ ಕುಟುಂಬಕ್ಕೆ 170 ರೂಪಾಯಿ
2 ಸದಸ್ಯರಿರುವ ಕುಟುಂಬಕ್ಕೆ 340 ರೂಪಾಯಿ
3 ಸದಸ್ಯರಿರುವ ಕುಟುಂಬಕ್ಕೆ 510 ರೂಪಾಯಿ
4 ಸದಸ್ಯರಿರುವ ಕುಟುಂಬಕ್ಕೆ 680 ರೂಪಾಯಿ

ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಫಲಾನುಭವಿಗಳ ಪಟ್ಚಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿರುವ ರೇಷನ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ನಂಬರ್, ಹೆಸರು,ವಿಳಾಸ,ಕಾರ್ಡ್ ನ ವಿಧ ಹಾಗೂ ಕುಟುಂಬದ ಸದಸ್ಯರ ಸಂಖ್ಯೆ ತೋರಿಸುತ್ತದೆ,ಅದರಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಇದನ್ನೂ ಓದಿ


Annabhagya-ನನ್ನ ಖಾತೆಗೆ 680 ರೂಪಾಯಿ ಅನ್ನಭಾಗ್ಯ ಯೋಜನೆಯ ಹಣ ಜಮಾ,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ ಇರುವ ಇ-ಸ್ಥಿತಿ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ ಇರುವ ಡಿಬಿಟಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗೆ ಕೊಟ್ಟಿರುವ ಜಿಲ್ಲೆಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯನ್ನು select ಮಾಡಿ

ನಂತರ ನೇರ ನಗದು ವರ್ಗಾವಣೆ ಸ್ಥಿತಿ ಮೇಲೆ ಕ್ಲಿಕ್ ಮಾಡಿ

ನಂತರ ವರ್ಷ,ತಿಂಗಳು,ರೇಷನ್ ಕಾರ್ಡ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗನಂತೆ ನಿಮ್ಮ ಹೆಸರು,member ID,ಕುಟುಂಬ ಸದಸ್ಯರ ಸಂಖ್ಯೆ,ನಿಮಗೆ ಸಿಗುವ ಅಕ್ಕಿಯ ಅಳತೆ ಹಾಗೂ ನಿಮ್ಮ ಖಾತೆಗೆ ಜಮಾ ಆದ ಹಣದ ಮೊತ್ತವನ್ನು ತೋರಿಸುತ್ತದೆ

ಇದನ್ನೂ ಓದಿ

Free electricity-ಇಂದಿನಿಂದ ಗೃಹಜ್ಯೊತಿ ಯೋಜನೆಯಡಿ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಕೆ ಆರಂಭ, ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-305 

ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ನಿಮ್ಮ ಕರೆಂಟ್ ಬಿಲ್ ನಂಬರ್,ಆಧಾರ್ ನಂಬರ್ ಹಾಕಿ,ಮಾಲಿಕ ಅಥವಾ ಬಾಡಿಗೆದಾರ ಎಂದು select ಮಾಡಿ 200 ಯುನಿಟ್ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಸಿ

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೊ ನೋಡಿ

https://youtu.be/2YougfZyKUQ 

Aadhaar Photo change-ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ವ? ಬದಲಾಯಿಸಲು ಹೀಗೆ ಮಾಡಿ - https://krushirushi.in/Krushirushi-1000-197 

Male nakshatra-2023 ನೇ ಸಾಲಿನ ಮಳೆ ನಕ್ಷತ್ರಗಳು ಹಾಗೂ ಮಳೆ ದಿನಾಂಕ - https://krushirushi.in/Krushirushi-1000-261 

Crop insurance-ನನ್ನ ಖಾತೆಗೆ 11,354 ರೂಪಾಯಿ ಬೆಳೆವಿಮೆ ಜಮಾ-ನಿಮ್ಮ ಬೆಳೆವಿಮೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-257 

District incharge ministers-ಇವರೇ ನೋಡಿ ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು - https://krushirushi.in/Krushirushi-1000-268 

Karnataka ministers-ಕೊನೆಗೂ ಖಾತೆ ಹಂಚಿಕೆ ಅಂತಿಮ ಪಟ್ಟಿ ಬಿಡುಗಡೆ - https://krushirushi.in/Krushirushi-1000-254 

DBT Karnataka-ಸರ್ಕಾರದಿಂದ ನಿಮಗೆ ಇಲ್ಲಿಯವರೆಗೂ ಯಾವ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-259 

Yuvanidhi-ಯುವನಿಧಿ ಯೋಜನೆಯಡಿ 3000 ರೂಪಾಯಿ-ಷರತ್ತು ಮತ್ತು ನಿಬಂಧನೆಗಳ ಅಧಿಕೃತ ಆದೇಶ - https://krushirushi.in/Krushirushi-1000-267 

Aadhaar-ಆಧಾರ್ ನಂಬರ್ ಹಾಕಿ ರಾಜ್ಯ ಸರ್ಕಾರದಿಂದ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡಿ - https://krushirushi.in/Krushirushi-1000-266 

Aadhaar bank seeding status-ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-260 

5 Guarantees approved-5 ಗ್ಯಾರಂಟಿಗಳಿಗೆ ಸಚಿವ ಸಂಪುಟ ಸಭೆಯಿಂದ ಒಪ್ಪಿಗೆ - https://krushirushi.in/Krushirushi-1000-265 

Crop loss-20160 ಹೇಕ್ಟೆರ್ ಬೆಳೆಹಾನಿ ಪರಿಹಾರ ಬಿಡುಗಡೆ-ಕಂದಾಯ ಸಚಿವ ಕೃಷ್ಞಬೈರೆಗೌಡ - https://krushirushi.in/Krushirushi-1000-264 

Krushi bhagya-ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ- ಕೃಷಿ ಸಚಿವ ಚೆಲುವರಾಯಸ್ವಾಮಿ - https://krushirushi.in/Krushirushi-1000-262 

Free bus pass-ನಾಳೆಯಿಂದ ರಾಜ್ಯದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ - https://krushirushi.in/Krushirushi-1000-256 

Pmkisan name correction as per Aadhaar-ಆಧಾರ್ ನಲ್ಲಿರುವಂತೆ ನಿಮ್ಮ ಹೆಸರು ಬದಲಾವಣೆ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-252 

Crop insurance-ಬೆಳೆವಿಮೆ ಜಮಾ ಪ್ರಾರಂಭವಾಗಿದ್ದು,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-253