Crop loan waiver status-ಬರಗಾಲದಲ್ಲಿ ಸಾಲಮನ್ನಾ ನೀರಿಕ್ಷೆಯಲ್ಲಿದ್ದ ರೈತರಿಗೆ ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ
<Krushirushi> <ಬೆಳೆಸಾಲಮನ್ನಾ> <ಬೆಳೆಸಾಲ> <croploan> <croploanwavier> <belesala> <belesalamanna> <loan waiver> <direct benefit transfer>
Crop loan waiver status-ಬರಗಾಲದಲ್ಲಿ ಸಾಲಮನ್ನಾ ನೀರಿಕ್ಷೆಯಲ್ಲಿದ್ದ ರೈತರಿಗೆ ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ
ಬರಗಾಲದಿಂದ ತತ್ತರಿಸಿರುವ ಅನ್ನದಾತರಿಗೆ ಆಸರೆಯಾಗಲು ಬ್ಯಾಂಕ್‌ಗಳು ಮುಂದೆ ಬಂದಿದ್ದು, ಸಾಲ ಮರು ಪಾವತಿ ಹೊರೆಗೆ ತಾತ್ಕಾಲಿಕ ರಿಲೀಫ್ ಸಿಗಲಿದೆ !. ಅರ್ಹ ರೈತರ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸಾಲಗಳನ್ನು ಪುನರ್ ರಚಿಸಬೇಕೆಂಬ ಸೂಚನೆ ರವಾನೆಯಾಗಿದೆ.
ಇದರಿಂದಾಗಿ ಅಲ್ಪಾವಧಿ ಸಾಲಗಳು ದೀರ್ಘಾವಧಿ ಸಾಲದ ರೂಪದಲ್ಲಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ರಿಸರ್ವ್ ಬ್ಯಾಂಕ್ ಆ್ ಇಂಡಿಯಾ ನಿರ್ದೇಶನದಂತೆ ಪರಿಹಾರ ಕ್ರಮಗಳನ್ನು ಬ್ಯಾಂಕ್‌ಗಳು ಕೈಗೊಳ್ಳಲಿವೆ.
ಮುಂಗಾರು ಮಳೆ ವೈಲ್ಯ, ತೀವ್ರತರ ಶುಷ್ಕ ವಾತಾವರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬರ ಪೀಡಿತ ತಾಲೂಕುಗಳು ಎಂದು ಘೋಷಿಸಿ, ಅಗತ್ಯ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
ಬೆಳೆಸಾಲ ಪುನರ್ ರಚನೆ ಎಂದರೇನು?
ಉದಾಹರಣೆಗೆ ನೀವು ಈ ವರ್ಷ 1 ಲಕ್ಷ ಬೆಳೆಸಾಲ ತೆಗೆದುಕೊಂಡಿದ್ದರೆ, ಅದನ್ನು ಈ ವರ್ಷಾಂತ್ಯಕ್ಕೆ ವಾಪಸ್ ಕಟ್ಟುವ ಅವಶ್ಯಕತೆಯಿಲ್ಲ.ನಿಮಗೆ 3 ರಿಂದ 5 ವರ್ಷದವರೆಗೆ ಸಾಲ ವಾಪಸ್ ಕಟ್ಟಲು ಅವಕಾಶ ಸಿಗುತ್ತದೆ. ಆದರೆ ಓಟಿಎಸ್ ಗೆ ಅವಕಾಶ ಇರುವುದಿಲ್ಲ. 3 ಅಥವಾ 5 ವರ್ಷದ ಒಳಗಡೆ ಸಾಲ ಕಟ್ಟಲೇಬೇಕು
ಹಾಗೂ ದೀರ್ಘಾವದಿ ಸಾಲವನ್ನು 10 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಿಲಾಗಿದೆ.
ಎಸ್‌ಎಲ್‌ಬಿಸಿ ವಿಶೇಷ ಸಭೆ ನಿರ್ಧಾರ
ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಆಯುಕ್ತರಾದ ಡಾ.ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ (ಎಸ್‌ಎಲ್‌ಬಿಸಿ) ವಿಶೇಷ ಸಭೆ ನಡೆದು, ಅರ್ಹ ರೈತರ ಸಾಲಗಳ ಮರು ರಚನೆ ತೀರ್ಮಾನ ತೆಗೆದುಕೊಂಡಿದೆ.
ಕೃಷಿ, ತೋಟಗಾರಿಕೆ ಬೆಳೆಗಳ ನಷ್ಟದ ಆಧಾರದಲ್ಲಿ ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳು ಎಂದು ೋಷಿಸಿ, ನೈಸರ್ಗಿಕ ವಿಕೋಪ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ. ಈಗಾಗಲೇ 161 ತೀವ್ರ, 34 ಸಾಧಾರಣ ಬರಪೀಡಿತ ತಾಲೂಕಗಳನ್ನು ಗುರುತಿಸಿದ್ದು, ಇನ್ನೂ 21 ತಾಲೂಕುಗಳನ್ನು ಬರ ಪೀಡಿತಪಟ್ಟಿಗೆ ಸೇರಿಸಲು ತಯಾರಿ ನಡೆಸಿದೆ.
ಸರ್ಕಾರ ಕೈಗೊಳ್ಳಲಿರುವ ಪರಿಹಾರ ಕ್ರಮಗಳನ್ನು ವಿಸ್ತರಿಸುವ ಭಾಗವಾಗಿ ಅರ್ಹ ರೈತರ ಸಾಲಗಳ ಪುನರ್ ರಚಿಸಬೇಕು ಎಂದು ತೀರ್ಮಾನಿಸಿದ್ದು, ಸೂಕ್ತ ಕ್ರಮವಹಿಸುವಂತೆ ಎಲ್ಲ ಶೆಡ್ಯೂಲ್ ವಾಣಿಜ್ಯ ಬ್ಯಾಂಕ್‌ಗಳು ಮತ್ತು ಆರ್‌ಆರ್‌ಬಿಗಳಿಗೆ ಸಭೆ ನಡವಳಿ ಸಹಿತ ಸೂಚನೆ ರವಾನಿಸಲಾಗಿದೆ.
ಪರಿಹಾರ ಕ್ರಮ ಕೈಗೊಳ್ಳುವಾಗ ಆರ್‌ಬಿಐ ನಿರ್ದೇಶನವನ್ನು ಪಾಲಿಸಬೇಕು ಎಂದು ಈ ಬ್ಯಾಂಕ್ ಶಾಖೆಗಳು ಮತ್ತು ಆರ್‌ಆರ್‌ಬಿಗಳಿಗೆ ತಿಳಿಸುವಂತೆ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದು ಎಸ್‌ಎಲ್‌ಬಿಸಿ ಉಸ್ತುವಾರಿ ಸಂಚಾಲಕ ಬಿ.ಪಾರ್ಶ್ವನಾಥ್ ತಿಳಿಸಿದ್ದಾರೆ.
Sala Manna-ಸಾಲಮನ್ನಾ ಅರ್ಹತೆ,ದಾಖಲೆ ಹಾಗೂ ಇಲ್ಲಿಯವರೆಗೂ ಯಾರಿಗೆಲ್ಲಾ ಸಾಲಮನ್ನಾ ಆಗಿದೆ ಎಂದು ಹೀಗೆ ಚೆಕ್ ಮಾಡಿ
https://mahitikanaja.karnataka.gov.in/department
ನಂತರ "ಕಂದಾಯ ಇಲಾಖೆ" ಮೇಲೆ ಕ್ಲಿಕ್ ಮಾಡಿ
ನಂತರ "ಕಂದಾಯ ಇಲಾಖೆ ಸೇವೆಗಳು" ಮೇಲೆ ಕ್ಲಿಕ್ ಮಾಡಿ
ನಂತರ ವಾಣಿಜ್ಯ ಬ್ಯಾಂಕ್ ನ ಸಾಲಮನ್ನಾ ಚೆಕ್ ಮಾಡಲು "Loan waiver report for commercial bank" ಮೇಲೆ ಕ್ಲಿಕ್ ಮಾಡಿ. ಸೊಸೈಟಿಯಲ್ಲಿನ ಸಾಲಮನ್ನಾ ಚೆಕ್ ಮಾಡಲು "Loan waiver report for primary agricultural cooperative societies" ಮೇಲೆ ಕ್ಲಿಕ್ ಮಾಡಿ
ನಂತರ ಮಾದರಿ "ರೈತ" ಎಂದು Select ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ ಮತ್ತು ಗ್ರಾಮವನ್ನು Select ಮಾಡಿ "ಸಲ್ಲಿಸು" ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆಲ್ಲಾ ಸಾಲಮನ್ನಾ ಆಗಿದೆ ಎಂದು ಚೆಕ್ ಮಾಡಬಹುದು.Search button ಅಲ್ಲಿ ನಿಮ್ಮ ಹೆಸರು ಹಾಕಿದರೆ ನಿಮ್ಮ ಹೆಸರು ಸಿಗುತ್ತದೆ.
ಬಹಳಷ್ಟು ರೈತರು ತಮ್ಮ ಸಾಲಮನ್ನಾ ಆಗಿಲ್ಲ ಎಂದು ಕೇಳುವುದುಂಟು.ಆದರೆ ಸಾಲಮನ್ನಾ ಮಾಡಲು ಕೆಲವು ದಾಖಲೆ ಮತ್ತು ಅರ್ಹತೆಗಳಿವೆ.
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ, ರೈತರ ಸಾಲಮನ್ನಾ ಆಗಬೇಕಾದರೆ ಏನೇಲ್ಲಾ ದಾಖಲೆ ಹಾಗೂ ಅರ್ಹತೆ ಹೊಂದಿರಬೇಕು ಎಂದು ತಿಳಿಯಬಹುದು
Sala manna-ಸಾಲಮನ್ನಾಗೆ ಬೇಕಾದ ದಾಖಲೆ ಮತ್ತು ಅರ್ಹತೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://mahitikanaja.karnataka.gov.in/department
ನಂತರ ಕಂದಾಯ ಇಲಾಖೆ ಮೇಲೆ ಕ್ಲಿಕ್ ಮಾಡಿ
ನಂತರ ಕಂದಾಯ ಇಲಾಖೆ ಸೇವೆಗಳು ಮೇಲೆ ಕ್ಲಿಕ್ ಮಾಡಿ
ನಂತರ CLWS ರೈತನ ಅರ್ಹತೆ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ ಮತ್ತು ಬ್ಯಾಂಕ್ select ಮಾಡಿ,ಸಲ್ಲಿಸು ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ರೈತನ ಹೆಸರು,ಸಾಲ ಮನ್ನಾಗೆ ಬೇಕಾದ ಅರ್ಹತೆ ಹಾಗೂ ಸ್ಥಿತಿಗತಿ ಚೆಕ್ ಮಾಡಬಹುದು
Salamanna-ಯಾರಿಗೆಲ್ಲಾ ವಾಣೆಜ್ಯ ಬ್ಯಾಂಕ್ ಹಾಗೂ ಸೊಸೈಟಿ ಸಾಲಮನ್ನಾ ಆಗಿದೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-198