Belehani hana jama-ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಎಲ್ಲಾ ಹಣ ರೈತರ ಖಾತೆಗೆ ಜಮಾ-ಕೃಷ್ಣ ಬೈರೆಗೌಡ,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

<Krushirushi> <ಬೆಳೆಹಾನಿ ಹಣ ಜಮಾ> <Belehani hana jama> <drought relief fund released> <Belehani rejected list> <ಬೆಳೆಹಾನಿ ಪರಿಹಾರ ಪಾವತಿ ವಿಫಲ ಪ್ರಕರಣ> <Belehani parihara payment failed cases> <Belehani parihara jama> <Modala kanthina belehani parihara> <Direct benefit transfer> <ಬೆಳೆಹಾನಿ ಪರಿಹಾರ ಪಟ್ಟಿ> <crop loss compensation to eligible farmers> <Baraparihara patti> <Drought relief eligible list> <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <crop insurance> <belevime> <bele vime> <bele sala> <belesala> <ಬೆಳೆ ಸಾಲ> <ಬೆಳೆ ವಿಮೆ> <FID> <Fruits ID>

Belehani hana jama-ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಎಲ್ಲಾ ಹಣ ರೈತರ ಖಾತೆಗೆ ಜಮಾ-ಕೃಷ್ಣ ಬೈರೆಗೌಡ,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

Belehani hana jama-ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಎಲ್ಲಾ ಹಣ ರೈತರ ಖಾತೆಗೆ ಜಮಾ-ಕೃಷ್ಣ ಬೈರೆಗೌಡ,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ


ಕೇಂದ್ರದಿಂದ ಬಂದಿರುವ ಬರ ಪರಿಹಾರವನ್ನು(drought relief fund)  ರೈತರ ಅಕೌಂಟ್‌ಗೆ ಶೀಘ್ರ ಜಮೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 3,454 ಕೋಟಿ ರೂ ಕೊಟ್ಟಿದೆ, ಈಗಾಗಲೇ ರಾಜ್ಯದ 33.60 ಲಕ್ಷ ಮಂದಿ ರೈತರಿಗೆ ಮೊದಲ ಕಂತಿನಲ್ಲಿ ಬರ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿದೆ. ಈಗ ಕೇಂದ್ರದಿಂದ ಬಂದಿರುವ ಹಣದಲ್ಲಿ ಅವರಿಗೆ ನೀಡಬೇಕಿರುವ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ಹಾಕುತ್ತೇವೆ ಎಂದರು.

ಕೇಂದ್ರದಿಂದ(Central government) ಬಂದಿರುವ ಹಣವೆಲ್ಲವನ್ನೂ ರೈತರಿಗೆ ಕೊಡಲಾಗುವುದು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇದಾವುದಕ್ಕೂ ಒಂದು ನಯಾಪೈಸೆ ಬಳಸುವುದಿಲ್ಲ. ಇದನ್ನೆಲ್ಲಾ ರಾಜ್ಯದ ಬೊಕ್ಕಸದಿಂದಲೇ ನಿಭಾಯಿಸಲಾಗುವುದು.

ಯಾರಿಗೆಲ್ಲಾ ಸಿಗಲಿದೆ ಬರಪರಿಹಾರ ಹೀಗೆ ಚೆಕ್ ಮಾಡಿ

ಬರ ಪರಿಹಾರದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಹಾಗೂ ಫ್ರೂಟ್ಸ್ (FID)ತಂತ್ರಾಂಶದಲ್ಲಿರುವ ಅಂಕಿ ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗುವುದರಿಂದ, ರೈತರು ತಮ್ಮ ಜಮೀನಿನ ನಿಖರವಾದ ವಿಸ್ತೀರ್ಣವನ್ನು ಫ್ರುಟ್ಸ್ ತಂತ್ರಾಂಶದಲ್ಲಿ ಆಧಾರ್-ಪಹಣಿ ಜೋಡಣೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ನಷ್ಟ ವಿವರವನ್ನು ನಮೂದಿಸಿ, ಅದಕ್ಕನುಗುಣವಾಗಿ ಪರಿಹಾರ ಮೊತ್ತ ನೀಡುವ ವ್ಯವಸ್ಥೆ ಇತ್ತು. ಸರ್ಕಾರವು 2023 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವನ್ನು ಬೆಳೆ ಸಮೀಕ್ಷೆ ಮತ್ತು ಫ್ರುಟ್ಸ್ ನಲ್ಲಿ ನೊಂದಣಿಯಾಗಿರುವ ಬೆಳೆ ಮತ್ತು ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಿರುವುದರಿಂದ, ರೈತರು ತಮ್ಮ ಜಮೀನಿನ ಯಾವುದೇ ಸರ್ವೆ ನಂಬರ್ ಬಿಟ್ಟುಹೋಗದಂತೆ, ಎಲ್ಲಾ ಸರ್ವೆ ನಂಬರ್‍ಗಳನ್ನು ನೊಂದಣಿ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/FarmerDeclarationReport.aspx

 

ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ select ಮಾಡಿ ವಿಕ್ಷಿಸು ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ FID ಇರುವ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಬೆಳೆಹಾನಿ ಪರಿಹಾರ ಸಿಗಲಿದೆ

ಈಗಾಗಲೇ ಜಮಾ ಆಗಿರುವ ಸ್ಟೇಟಸ್ ಹೀಗ್ ಚೆಕ್ ಮಾಡಿ


ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service89/PaymentDetailsReport.aspx

 

ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ,payment Success cases select ಮಾಡಿ Get reports ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ಕೆಳಗಿನಂತೆ ಪರಿಹಾರ ಯಶಸ್ಸಿನ ಪ್ರಕರಣಗಳ ಪಟ್ಟಿ ದೊರೆಯಲಿದೆ


ನಂತರ view status ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನಂತೆ ಮಾಹಿತಿ ದೊರೆಯಲಿದೆ