Mansoon rain-ಮುಂಗಾರು ಮಳೆಯ ಮೇಲೆ ಪ್ರಭಾವ ಬೀರಲಿದೆ ಅವಧಿ ಪೂರ್ವ ಮಳೆ 

Mansoon rain-ಮುಂಗಾರು ಮಳೆಯ ಮೇಲೆ ಪ್ರಭಾವ ಬೀರಲಿದೆ ಅವಧಿ ಪೂರ್ವ ಮಳೆ 

Mansoon rain-ಮುಂಗಾರು ಮಳೆಯ ಮೇಲೆ ಪ್ರಭಾವ ಬೀರಲಿದೆ ಅವಧಿ ಪೂರ್ವ ಮಳೆ 

Mansoon rain-ಮುಂಗಾರು ಮಳೆಯ ಮೇಲೆ ಪ್ರಭಾವ ಬೀರಲಿದೆ ಅವಧಿ ಪೂರ್ವ ಮಳೆ 

ಕರಾವಳಿ : ಕಾಸರಗೋಡು ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗಿನೊಂದಿಗೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಆದರೆ ಅರಬ್ಬಿ ಸಮುದ್ರ ಕಡೆಯಿಂದ ಬೀಸುವ ಗಾಳಿಯ ಪ್ರಭಾವ ಹೆಚ್ಚಿರುವುದರಿಂದ ಮೋಡಗಳು ಪೂರ್ವಕ್ಕೆ ಅಂದರೆ ಒಳನಾಡು ಕಡೆ ಚಲಿಸುತ್ತಿದೆ.
ಮುನ್ಸೂಚನೆ ಇದ್ದರೂ ಮಳೆಯ ಸಾಧ್ಯತೆ ಕಡಿಮೆ ಇರಬಹುದು. ಚಲಿಸುವ ಮೋಡಗಳಿಂದ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಯೂ ಇದೆ. 


ಈಗಿನಂತೆ ಎಪ್ರಿಲ್ 13ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. 

ಮಲೆನಾಡು : ಕೊಡಗು ಅಲ್ಲಲ್ಲಿ ಸಾಮಾನ್ಯ, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಎಪ್ರಿಲ್ 13ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ. 

ಒಳನಾಡು : ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ ಒಂದೆರಡು ಕಡೆ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ಗಾಳಿಯ ಒತ್ತಡ ಹೆಚ್ಚಿದ್ದರೆ ಬಳ್ಳಾರಿ ಜಿಲ್ಲೆಯಲ್ಲೂ ಮಳೆ ಸಾಧ್ಯತೆ ಇದೆ. 


ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು (ಪಾವಗಢ ಸಹಿತ), ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. 
ಈಗಿನಂತೆ ಎಪ್ರಿಲ್ 13ರಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಸಾಧ್ಯತೆ ಕ್ಷೀಣಿಸುವ ಲಕ್ಷಣಗಳಿವೆ. 

ಟೈಮ್ಸ್ ಆಫ್ ಇಂಡಿಯಾ ವರದಿಯಂತೆ ಲಾನಿನಾ ಅವಧಿ ಮುಕ್ತಾಯದ ಹಂತದಲ್ಲಿದೆ. 
ಪೆಸಿಫಿಕ್ ಸಾಗರದ ಮೇಲ್ಮೈ ಉಷ್ಣತೆ ತೀರ ಬಿಸಿಯೂ ಅಲ್ಲ ಅಥವಾ ತೀರ ತಣ್ಣನೆಯೂ ಅಲ್ಲದ ತಟಸ್ಥ ಸ್ಥಿತಿಗೆ ತಲಪುವ ನಿರೀಕ್ಷೆಯಿದೆ. 
ಇದರಿಂದ 2025ನೇ ಸಾಲಿನ ನಮ್ಮ ಮುಂಗಾರು ಸಾಮಾನ್ಯವಿರುವ ಸಾಧ್ಯತೆ ಇದೆ.

https://timesofindia.indiatimes.com/india/la-nina-over-india-unlikely-to-see-drought-or-extreme-rain/articleshow/120221899.cms