Mobile canteen subsidy-ಉದ್ಯಮ ಶೀಲತಾ ಅಭಿವೃದ್ದಿ ಯೋಜನೆಯಡಿ ಮೊಬೈಲ್‌ ಕ್ಯಾಂಟೀನ್‌ ತೆರೆಯಲು ಸಿಗಲಿದೆ 4 ಲಕ್ಷ ರೂ. ಸಹಾಯಧನ

<Krushirushi> <ಮೊಬೈಲ್ ಕ್ಯಾಂಟೀನ್ ಸಬ್ಸಿಡಿ> <ಮೊಬೈಲ್ ಕ್ಯಾಂಟಿನ್ ಸಬ್ಸಿಡಿ> <Tourist department> <ಪ್ರವಾಸೊದ್ಯಮ ಇಲಾಖೆ> <ಸಹಾಯಧನ> <ಸಬ್ಸಿಡಿ> <Mobile canteen vehicle subsidy> <Mobile canteen subsidy> <mobile canteen>

Mobile canteen subsidy-ಉದ್ಯಮ ಶೀಲತಾ ಅಭಿವೃದ್ದಿ ಯೋಜನೆಯಡಿ ಮೊಬೈಲ್‌ ಕ್ಯಾಂಟೀನ್‌ ತೆರೆಯಲು ಸಿಗಲಿದೆ 4 ಲಕ್ಷ ರೂ. ಸಹಾಯಧನ

Mobile canteen subsidy-ಉದ್ಯಮ ಶೀಲತಾ ಅಭಿವೃದ್ದಿ ಯೋಜನೆಯಡಿ ಮೊಬೈಲ್‌ ಕ್ಯಾಂಟೀನ್‌ ತೆರೆಯಲು ಸಿಗಲಿದೆ 4 ಲಕ್ಷ ರೂ. ಸಹಾಯಧನ

ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಉದ್ಯಮ ಶೀಲತಾ ಅಭಿವೃದ್ದಿ ಯೋಜನೆಯಡಿ ಸಣ್ಣ ಉದ್ದಿಮೆಯನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರುವ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಉದ್ದಿಮೆಯನ್ನು ಆರಂಭಿಸಲು ನೆರವು ನೀಡಲಾಗುತ್ತಿದೆ. ಈ ಯೋಜನೆಯಡಿ ಮೊಬೈಲ್‌ ಕ್ಯಾಂಟೀನ್‌ ಆರಂಭಿಸಲು ಆಹಾರ ಟ್ರಕ್‌ಗಳ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಮೊಬೈಲ್‌ ಕ್ಯಾಂಟೀನ್‌ ಸಹಾಯಧನ ಯೋಜನೆ? ಯಾರಿಗೆ ಈ ಯೋಜನೆ ಅನ್ವಯಿಸಲಿದೆ? ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಏನಿದು ಉದ್ಯಮಶೀಲತೆ ಅಭಿವೃದ್ಧಿ ಯೋಜನೆ?

ಉದ್ಯಮಶೀಲತಾ ಅಭಿವೃದ್ಧಿ ಯೋಜನೆ ಅಂದರೆ ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಒಂದು ಯೋಜನೆಯಾಗಿದೆ. ಈ ಯೋಜನೆಯು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ಆರ್ಥಿಕ ನೆರವು, ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತದೆ. ಈ ಯೋಜನೆಯಡಿ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಮತ್ತು ಸ್ವಯಂ ಉದ್ಯೋಗ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುತ್ತದೆ.

ಯೋಜನೆಯ ಪ್ರಮುಖ ಅಂಶಗಳು

  • ಆರ್ಥಿಕ ನೆರವು: ಉದ್ಯಮವನ್ನು ಪ್ರಾರಂಭಿಸಲು ಸಾಲ ಮತ್ತು ಸಹಾಯಧನ ಸೌಲಭ್ಯಗಳನ್ನು ಒದಗಿಸುವುದು.
  • ತರಬೇತಿ ಮತ್ತು ಮಾರ್ಗದರ್ಶನ: ಉದ್ಯಮಶೀಲತಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ಮಾರುಕಟ್ಟೆ ನೆರವು: ಉದ್ಯಮಗಳು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಹಾಯ ಮಾಡುವುದು.

 

ಮೊಬೈಲ್‌ ಕ್ಯಾಂಟೀನ್‌ ತೆರೆಯಲು ಸಹಾಯಧನ

ರಾಜ್ಯ ಸರಕಾರದಿಂದ ಸಮಾಜ ಕಲ್ಯಾಣ ಇಲಾಖೆಯು ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ ಯೋಜನೆಯ ಅಡಿಯಲ್ಲಿ ಮೊಬೈಲ್‌ ಕ್ಯಂಟೀನ್‌ ವ್ಯವಹಾರಗಳನ್ನು ಆರಂಭಿಸಲು ಧನ ಸಹಾಯ ನೀಡುತ್ತಿದೆ. ಈ ಯೋಜನೆಯಡಿ ನೀವು ಮೊಬೈಲ್‌ ಕ್ಯಾಂಟೀನ್‌ಗಳನ್ನು ಆರಂಭಿಸಲು ಸರ್ಕಾರದಿಂದ 4 ಲಕ್ಷ ರೂ.ವರೆಗಿನ ಸಹಾಯಧನ ಪಡೆಯಬಹುದಾಗಿದೆ.

ಅರ್ಹತಾ ಮಾನದಂಡಗಳು

  • ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ ಯೋಜನೆಯ ಅಡಿಯಲ್ಲಿ ಸಂಪೂರ್ಣ ಸಹಾಯಧನದೊಂದಿಗೆ 4.00 ಲಕ್ಷ ರೂ. ಮೌಲ್ಯದ ಫಾಸ್ಟ್ ಫುಡ್ ಟ್ರಕ್ ಟ್ರೇಲರ್/ಮೊಬೈಲ್ ಕಿಚನ್ ಚಲಿಸುವ ಆಹಾರ ಸೇವಾ ಘಟಕವನ್ನು ಪರಿಶಿಷ್ಟ ಜಾತಿಯವರಿಗೆ ನೀಡಲಾಗುವುದು.
  • ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ/ಯುವತಿಯವರು ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕವನ್ನು ಆರಂಭಿಸಲು ನಿಗಮದ ಸಹಾಯಧನ ಮತ್ತು ಬ್ಯಾಂಕಿನ ಸಾಲ ವ್ಯವಸ್ಥೆಯೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.

ಸಹಾಯಧನದ ಮೊತ್ತ ಎಷ್ಟು?

ಪರಿಶಿಷ್ಟ ಜಾತಿಗೆ ಸೇರಿದ ನಿರುದ್ಯೋಗಿ ಯುವಕರಿಗೆ ಇಲಾಖೆಯ ಆಯಾ ನಿಗಮಗಳ ಅಡಿಯಲ್ಲಿ ಘಟಕ ವೆಚ್ಚದ 75% ಅಥವಾ ಗರಿಷ್ಠ 4.00 ಲಕ್ಷ ರೂ.ಗಳವರೆಗೆ ಸಹಾಯಧನ ನೀಡಲಾಗುವುದು.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

  • ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • ಅರ್ಜಿದಾರರು 21 ವರ್ಷದಿಂದ 50 ವರ್ಷದವರೆಗಿನ ವಯೋಮಾನದವರಾಗಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ರೂ. 1,50,000/- ಗ್ರಾಮೀಣ ಹಾಗೂ ರೂ. 2,00,000/- ನಗರ ಪ್ರದೇಶದವರಿಗೆ ಮಿತಿಯೊಳಗಿರಬೇಕು
  • ಅರ್ಜಿದಾರರು/ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮ/ಸರ್ಕಾರದಿಂದ ರೂ. 1,00,000/- ಮೇಲ್ಪಟ್ಟು ಸೌಲಭ್ಯ ಪಡೆದಿದ್ದಲ್ಲಿ ಅಂತಹ ಫಲಾನುಭವಿಗಳು ಈ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ
  • ಅರ್ಜಿದಾರರು ಘಟಕವನ್ನು ಸ್ಥಾಪಿಸಲು ಅವಶ್ಯವಿರುವ ಸ್ಥಳಾವಕಾಶವನ್ನು ಹೊಂದಿರಬೇಕು.

ಷರತ್ತುಗಳು:-

  • ಅರ್ಜಿದಾರರು ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿರಬೇಕು.
  • ಮಂಜೂರಾತಿ ಪಡೆದ ಪಡೆದ ಫಲಾನುಭವಿಗಳು ಅನರ್ಹರು ಎಂದು ತಿಳಿದುಬಂದ ಸಂದರ್ಭದಲ್ಲಿ ಮಂಜೂರಾತಿಯನ್ನು ರದ್ದುಪಡಿಸಲಾಗುವುದು.

 

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ನೇರವಾಗಿ ತಮ್ಮ ಮೊಬೈಲ್ ಮೂಲಕ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕವೂ ಅರ್ಜಿಯನ್ನು ಸಲ್ಲಿಸಬಹುದು.

  • ಹಂತ-1: ಅಧಿಕೃತ ವೆಬ್‌ಸೈಟ್‌ "https://swdcorp.karnataka.gov.in/ADCLPortal/schemedetail/MKF " ಮಾಡಿ ನಿಗಮದ ತಂತ್ರಾಂಶವನ್ನು ಪ್ರವೇಶ ಮಾಡಬೇಕು.
  • ಹಂತ 2: ತದನಂತರ ಇಲ್ಲಿ ಕೆಳಗ ಕಾಣಿಸುವ "ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಸೇವಾ ಸಿಂಧು ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು ಇಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು OTP ಅನ್ನು ಹಾಕಿ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ನಮೂದಿಸಿ "Login" ಬಟನ್ ಮೇಲೆ ಒತ್ತಿ ಲಾಗಿನ್ ಅಗಬೇಕು.
  • ಹಂತ-3: "Login" ಬಟನ್ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ಗೆ ಭೇಟಿ ಮಾಡಿದರೆ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಅಗತ್ಯವಿರುವ ದಾಖಲೆಗಳು

  • ಅಭ್ಯರ್ಥಿಯ ಆಧಾರ್ ಕಾರ್ಡ
  • ವಾಹನ ಚಾಲನಾ ಪರವಾನಗಿ
  • ಅಭ್ಯರ್ಥಿಯ ಭಾವಚಿತ್‌ರ
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ರೇಶನ್ ಕಾರ್ಡ
  • ಮೊಬೈಲ್ ನಂಬರ್

ಸಹಾಯಾಣಿ: ಯೋಜನೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ದಿನದ ಯಾವುದೇ ಸಮಯದಲ್ಲಿ ಸಹಾಯವಾಣಿ ಸಂಖ್ಯೆ 9482300400 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ