Mungaru male-ತಿಂಗಳೊಳಗೆ ಮುಂಗಾರು ಆಗಮನ,ಈ ಭಾರಿಯೂ ವಾಡಿಕೆ ಮಳೆ
<ಒಂದು ತಿಂಗಳೊಳಗೆ ಮುಂಗಾರು(Mungaru male) ಪ್ರವೇಶ ಪಡೆಯುವ ಸಾಧ್ಯತೆ ಇದ್ದು, ಈ ಬಾರಿ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕ ಮಳೆ ನಿರೀಕ್ಷಿಸಲಾಗಿದೆ>

Mungaru male-ತಿಂಗಳೊಳಗೆ ಮುಂಗಾರು ಆಗಮನ,ಈ ಭಾರಿಯೂ ವಾಡಿಕೆ ಮಳೆ
ರಾಜ್ಯ ಕರಾವಳಿ ಭಾಗಕ್ಕೆ ಒಂದು ತಿಂಗಳೊಳಗೆ ಮುಂಗಾರು ಪ್ರವೇಶ ಪಡೆಯುವ ಸಾಧ್ಯತೆ ಇದ್ದು, ಈ ಬಾರಿ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕ ಮಳೆ ನಿರೀಕ್ಷಿಸಲಾಗಿದೆ.
ಕರಾವಳಿ ಭಾಗದಲ್ಲಿ ಈಗಾಗಲೇ ಉತ್ತಮ ಬೇಸಗೆ ಮಳೆ ಸುರಿಯುತ್ತಿದ್ದು, ಇದೇ ರೀತಿ ಮುಂದುವರೆದು ಮೇ ಅಂತ್ಯ ಅಥವಾ ಜೂನ್ ಮೊದಲ ವಾರ ಕೇರಳಕ್ಕೆ ಮುಂಗಾರು ಪ್ರವೇಶಿಸಿ ಕರ್ನಾಟಕ ಕರಾವಳಿ ತೀರಕ್ಕೆ ಆಗಮಿಸುವ ಸಾಧ್ಯತೆ ಇದೆ. ವಾಡಿಕೆ ಮುಂಗಾರಿಗೆ ಸಮರ್ಪಕ ವಾತಾವರಣ, ಗಾಳಿ, ಮೋಡಗಳು ಸೃಷ್ಟಿಯಾಗುತ್ತಿದ್ದು, ಪೂರ್ವ ಮುಂಗಾರು ಮಳೆ ಕೊನೆಗೊಳ್ಳುವ ಸಂದರ್ಭದಲ್ಲಿ ಮಾನ್ಸೂನ್ ಮಳೆ ತರುವ ಮೋಡಗಳು ಭೂ ಮಧ್ಯ ರೇಖೆಯ ಮುಖೇನ ಬಂದು ಬಾನಂಗಳದಲ್ಲಿ ಶೇಖರಣೆಯಾಗಲಿದೆ. ಇದರಿಂದಾಗಿ ಈ ವರ್ಷವೂ ವಾಡಿಕೆಗೂ ಅಧಿಕ ಮಳೆಯಾಗಬಹುದು.
ಕರಾವಳಿ ಭಾಗದಲ್ಲಿ ಐದು ವರ್ಷಗಳ ಬಳಿಕ 2024ರಲ್ಲಿ ದಾಖಲೆಯ ಮುಂಗಾರು ಮಳೆ ಸುರಿದಿತ್ತು. ಕಳೆದ ವರ್ಷ 3101 ໖.. 2 2 3736 ໖.. ಮಳೆಯಾಗಿತ್ತು. ದ.ಕ. ಜಿಲ್ಲೆಯಲ್ಲಿ ಶೇ.11, ಉಡುಪಿ ಜಿಲ್ಲೆಯಲ್ಲಿ ಶೇ.13 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.31ರಷ್ಟು ಮಳೆ ವಾಡಿಕೆಗಿಂತ ಅಧಿಕ ಸುರಿದಿದೆ. ಒಟ್ಟಾರೆ ಕರಾವಳಿ ಭಾಗದಲ್ಲಿ ಶೇ.20ರಷ್ಟು ಅಧಿಕ ಸುರಿದಿತ್ತು.
ಪೂರ್ವ ಮುಂಗಾರಿಗೆ ವೇಗ
ಈ ತಿಂಗಳಾಂತ್ಯಕ್ಕೆ ಪೂರ್ವ ಮುಂಗಾರು ಅವಧಿ ಪೂರ್ಣಗೊಳ್ಳುತ್ತಿದ್ದು, ಈಗಾಗಲೇ ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಮಾರ್ಚ್ ತಿಂಗಳಿನಿಂದ ಮೇ 8ರವರೆಗೆ ರಾಜ್ಯದ ದಕ್ಷಿಣ ಒಳನಾಡು (ಶೇ.43), ಉತ್ತರ ಒಳನಾಡು (ಶೇ.38), ಮಲೆನಾಡು (ಶೇ.44), ಕರಾವಳಿಯಲ್ಲಿ (ಶೇ.63) ರಷ್ಟು ಮಳೆ ಏರಿಕೆ ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.72, ಉಡುಪಿ ಜಿಲ್ಲೆಯಲ್ಲಿ ಶೇ.77 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.49ರಷ್ಟು ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಅಧಿಕ ಸುರಿದಿದೆ.
ಸದ್ಯದಲ್ಲೇ ಇನ್ನೊಂದು ವರದಿ
ಉತ್ತಮ ಮಳೆ ಸುರಿಯುವ ಸಾಧ್ಯತೆಯನ್ನು ಕೆಲ ದಿನಗಳ ಹಿಂದೆ ವರದಿಯಲ್ಲಿ ಭಾರತೀಯ ಹವಾಮಾನ ಇಲಾಖೆಯು ತಿಳಿಸಿತ್ತು. ಅದರಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆಯನ್ನು ಹೇಳಲಾಗಿತ್ತು. ಆದರೆ, ಈ ತಿಂಗಳಾಂತ್ಯಕ್ಕೆ ಮತ್ತೂಂದು ವರದಿಯನ್ನು ಐಎಂಡಿ ಬಿಡುಗಡೆಗೊಳಿಸಲಿದ್ದು, ಅದರಲ್ಲಿ ಪ್ರದೇಶಾವಾರು ಮಳೆ ವರದಿ ಅಂದಾಜು ತಿಳಿಯಬಹುದಾಗಿದೆ.
ಕರಾವಳಿ ಸಹಿತ ರಾಜ್ಯದಲ್ಲಿ ಈ ಬಾರಿ ಉತ್ತಮ ಮುಂಗಾರು ಮಳೆ ಸುರಿಯುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಹವಾಮಾನ ವಿಶ್ಲೇಷಣೆ ಬಿಡುಗಡೆ ಮಾಡಿದ್ದು, ಅದರಂತೆ ಈ ಬಾರಿಯ ಮುಂಗಾರು ಅವಧಿಯಲ್ಲಿ ವಾಡಿಕೆ ಅಥವಾ ವಾಡಿಕೆಗೂ ಅಧಿಕ ಮಳೆ ಸುರಿಯುವ ಸೂಚನೆ ನೀಡಿದೆ.
ಡಾ|
ರಾಜೇಗೌಡ,ಹವಾಮಾನ ತಜ್ಞರು,ಬೆಂಗಳೂರು