Panchamitra what’s app service-ಇನ್ನು ಮುಂದೆ ನಿಮ್ಮ ವಾಟ್ಸಪ್ ನಲ್ಲೆ ಸಿಗಲಿವೆ ಗ್ರಾಮ ಪಂಚಾಯತಿಯ ಎಲ್ಲಾ ಸೇವೆಗಳು, ವಾಟ್ಸಪ್ ನಲ್ಲಿ ಹೀಗೆ ಮೇಸೆಜ್ ಮಾಡಿ
<Krushirushi> <ಪಂಚಮಿತ್ರ ವಾಟ್ಸಪ್ ಸೇವೆ> <Panchamitra what’s app service> <ಪಂಚಮಿತ್ರ ವಾಟ್ಸಪ್ ನಂಬರ್> <Panchamitra what’s app number>
Panchamitra what’s app service-ಇನ್ನು ಮುಂದೆ ನಿಮ್ಮ ವಾಟ್ಸಪ್ ನಲ್ಲೆ ಸಿಗಲಿವೆ ಗ್ರಾಮ ಪಂಚಾಯತಿಯ ಎಲ್ಲಾ ಸೇವೆಗಳು, ವಾಟ್ಸಪ್ ನಲ್ಲಿ ಹೀಗೆ ಮೇಸೆಜ್ ಮಾಡಿ
ಗಳೂರು: ಈವರೆಗೆ ಗ್ರಾಮ ಪಂಚಾಯ್ತಿ ಸೇವೆಗಳಿಗೆ ( Gramapanchayat Service ) ಸಂಬಂಧಿಸಿದಂತೆ ಕಚೇರಿಗೆ ತೆರಳಿ ಅರ್ಜಿಸಲ್ಲಿಸಬೇಕಾಗಿತ್ತು. ಆದ್ರೇ ಈಗ ಗ್ರಾಮ ಪಂಚಾಯ್ತಿ ಸೇವೆಗಳಿಗೆ ಅರ್ಜಿ ಸಲ್ಲಿಕೆ ಮತ್ತಷ್ಟು ಸರಳಗೊಳಿಸಲಾಗಿದೆ. ಅದೇನು ಅಂದ್ರೇ ಜಸ್ಟ್ ಈ ನಂಬರ್ ಗೆ ವಾಟ್ಸಾಪ್ (WhatsApp) ಮಾಡಿ ಸಾಕು.
ಅದು ಹೇಗೆ ಅಂತ ಮುಂದೆ ಓದಿ.
ರಾಜ್ಯ ಸರ್ಕಾರದಿಂದ ಸಾರ್ವಜನಿಕರಿಗೆ ಗ್ರಾಮ ಪಂಚಾಯ್ತಿ ಸೇವೆಗಳು ಕುಳಿತಲ್ಲೇ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಪಂಚಮಿತ್ರ ವಾಟ್ಸಾಪ್ ಚಾಟ್ ಆರಂಭಿಸಲಾಗಿದೆ. ಇನ್ಮುಂದೆ ವಾಟ್ಸ್ ಆಪ್ ನಲ್ಲಿ ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಪಡೆಯಬಹುದಾಗಿದೆ.
ಜನತೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಅಹವಾಲು ದಾಖಲಿಸುವುದು ಅತಿ ಮುಖ್ಯವಾಗುತ್ತದೆ, ಜನರು ಅಹವಾಲು ಸಲ್ಲಿಸುವುದಕ್ಕಾಗಿ ಸರಳ, ಸುಲಭ ಹಾಗೂ ಸಮರ್ಥ ವ್ಯವಸ್ಥೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಕೈಗೊಂಡಿದೆ.
ಕುಂದು-ಕೊರತೆಗಳನ್ನು ಹಾಗೂ ಸಮಸ್ಯೆಗಳನ್ನು ದಾಖಲಿಸಲು ಇದ್ದ ಪ್ರತ್ಯೇಕ ಕರೆ ಸಂಖ್ಯೆಗಳನ್ನು ಒಗ್ಗೂಡಿಸಿ ಪಂಚಮಿತ್ರ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಗ್ರಾಮೀಣ ಜನತೆ ತಮ್ಮೆಲ್ಲಾ ಅಹವಾಲುಗಳನ್ನು ದಾಖಲಿಸಲು ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ಕರೆ ಮಾಡಬಹುದು. ಅಥವಾ ಅದೇ ಸಂಖ್ಯೆಯಲ್ಲಿ ವಾಟ್ಸಾಪ್ ಚಾಟ್ ಮೂಲಕವೂ ಅಹವಾಲು ಸಲ್ಲಿಸಬಹುದು.
ಸಾರ್ವಜನಿಕರು ತಮಗೆ ಅವಶ್ಯಕತೆ ಇರುವ ಗ್ರಾ.ಪಂ.ಗಳಲ್ಲಿ ಲಭ್ಯ ಸೇವೆಗಳಿಗೆ ಅರ್ಜಿ ಸಲ್ಲಿಸಲು, ವಿವಿಧ ಮಾಹಿತಿ, ವಿವರಗಳನ್ನು ಪಡೆಯಲು ಹಲವಾರು ವೆಬ್ಸೈಟ್ ಮತ್ತು ಪೋರ್ಟಲ್ಗಳಿಗೆ ಭೇಟಿ ನೀಡಬೇಕಾಗಿತ್ತು. ಅಲ್ಲದೇ, ಗ್ರಾ.ಪಂ.ಗಳಿಗೆ ಸಂಬಂಧಿಸಿದ ಎಲ್ಲಾ ಬಗೆಯ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಲು ಯಾವುದೇ ನಿರ್ದಿಷ್ಟವಾದ ವೆಬ್ಸೈಟ್ ಅಥವಾ ಪೋರ್ಟಲ್ಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪಂಚಮಿತ್ರ ಎಂಬ ವಿನೂನತ ವಾಟ್ಸ್ಆ್ಯಪ್ ಚಾಟ್ ಅನ್ನು ಅನುಷ್ಠಾನಕ್ಕೆ ತರಲಾಗಿದೆ. ಪಂಚಮಿತ್ರದ ವಾಟ್ಸ್ಆ್ಯಪ್ ನಂ.
ಅಲ್ಲದೆ, ಚುನಾಯಿತ ಪ್ರತಿನಿಧಿಗಳ ವಿವರಗಳು, ಅಧಿಕಾರಿ, ಸಿಬ್ಬಂದಿ ವಿವರಗಳು, ಪೂರ್ಣಗೊಂಡ ಗ್ರಾಮ ಪಂಚಾಯಿತಿ ಸಭೆಗಳ ನಡಾವಳಿಗಳು, ಗ್ರಾಮ ಪಂಚಾಯಿತಿಗಳ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ ವಿವರಗಳು, ಟೆಂಡರ್ಗಳು, ಸೇವೆಗಳ ವಿವರಗಳು, ಸ್ವ-ಸಹಾಯ ಗುಂಪಿನ ವಿವರಗಳು, ಆರ್ಟಿಐ ದಾಖಲೆಗಳು ಲಭ್ಯವಾಗಲಿವೆ.
ವಾಟ್ಸಪ್ ಚಾಟ್ನಲ್ಲಿ ಮಾಹಿತಿ ಪಡೆಯೋದು ಹೇಗೆ?
ನಿಮ್ಮ ಮೊಬೈಲ್ನಲ್ಲಿ ಇಲಾಖೆಯ ವಾಟ್ಸ್ಆ್ಯಪ್ ಚಾಟ್ ನಂಬರ್-
ನಂತರ ಭಾಷೆಯನ್ನು ಆಯ್ಕೆ ಮಾಡಿ
ನಂತರ ತಾನಾಗಿಯೇ ಕೆಲ ಆಯ್ಕೆಗಳು ಆರಂಭವಾಗುತ್ತಾ ಸಾಗುತ್ತದೆ. ಕ್ರಮ ಸಂಖ್ಯೆಗಳನ್ನು ನಮೂದಿಸುವ ಮೂಲಕ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಆಯ್ಕೆ ಮಾಡಿಕೊಳ್ಳಿ
ನೀವು ಬಯಸುವ ಗ್ರಾ.ಪಂಚಾಯಿತಿ ಆಯ್ಕೆ ಮಾಡಿಕೊಂಡು ಅಲ್ಲಿನ ಚುನಾಯಿತಿ ಪ್ರತಿನಿಧಿಗಳು, ಸಿಬ್ಬಂದಿಯ ಮಾಹಿತಿ ಪಡೆಯಬಹುದು.
ಅದೇ ರೀತಿ ಸ್ವಾಧೀನ ಪ್ರಮಾಣಪತ್ರ, ರಸ್ತೆ, ಅಗೆವುದಾಕ್ಕಾಗಿ ಅನುಮತಿ, ಕೈಗಾರಿಕಾ/ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ, ನಿರಾಕ್ಷೇಪಣಾ ಪತ್ರ, ನರೇಗಾ ಅಡಿಯಲ್ಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ, ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು, ಹೊಸ/ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ/ನಿಯಮಿತಗೊಳಿವಿಕರ, ಹೊಸ/ಅಸ್ತಿತ್ವದಲ್ಲಿರುವ ಓವರ್ಗೌಂಡ್ ಕೇಬಲ್ ಮೂಲಸೌಕರ್ಯ/ಭೂಗತ ಕೇಬಲ್ ಮೂಲಸೌಕರ್ಯಗಳ ಅನುಮತಿ/ನಿಯಮಿತಗೊಳಿಸುವಿಕೆ, ನಮೂನೆ 9/11ಎ, ನಮೂನೆ 11 ಬಿ ಸೇರಿ ಎಲ್ಲ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು. ಕುಂದುಕೊರತೆಗಳನ್ನು ದಾಖಲಿಸಬಹುದು.
ಈ ಮೇಲಿನ ನಾಡಕಛೇರಿ ಸೇವೆಗಳನ್ನು ಪಡೆಯಲು, (https://nadakacheri.karnataka.gov.in/Online_service/loginpage.aspx ) ವೆಬ್ ಸೈಟ್ ಗೆ ಭೇಟಿ ನೀಡಿ
ಪಂಚಮಿತ್ರ ವೆಬ್ಸೈಟ್ ಲಿಂಕ್ https://panchatantra.kar.nic.in/panchamitra/