Pmkisan rejected list-ಕರ್ನಾಟಕದಲ್ಲಿ 10 ಲಕ್ಷ ರೈತರ ಕೈತಪ್ಪಿದ ಕಿಸಾನ್ ಸಮ್ಮಾನ್ ಯೋಜನೆ ! ಯಾರದ್ದೆಲ್ಲ ಹೆಸರು ಕ್ಯಾನ್ಸಲ್?
ರಾಜ್ಯದಲ್ಲಿ ಗರಿಷ್ಠ ಮಟ್ಟದ ರೈತರು ಅಂದರೆ 54 ಲಕ್ಷಕ್ಕೂ ಅಧಿಕ ರೈತರು ನೋಂದಣಿ ಮಾಡಿ ಯೋಜನೆಯ ಲಾಭ ಪಡೆಯುತ್ತಿದ್ದರು. ಈ ಪೈಕಿ 44.20 ಲಕ್ಷ ರೈತರಿಗೆ ಮಾತ್ರ ಯೋಜನೆಯ ಲಾಭ ಸಿಗುವಂತಾಗಿದೆ.

Pmkisan rejected list-ಕರ್ನಾಟಕದಲ್ಲಿ 10 ಲಕ್ಷ ರೈತರ ಕೈತಪ್ಪಿದ ಕಿಸಾನ್ ಸಮ್ಮಾನ್ ಯೋಜನೆ ! ಯಾರದ್ದೆಲ್ಲ ಹೆಸರು ಕ್ಯಾನ್ಸಲ್?
ಭೂ ದಾಖಲೆಗಳ ಕೊರತೆ, ಇಕೆವೈಸಿ ಸಮಸ್ಯೆ, ತೆರಿಗೆ ಪಾವತಿ ಸೇರಿದಂತೆ ವಿವಿಧ ಕಾರಣಗಳಿಂದ ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ರೈತರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ವಂಚಿತರಾಗಿದ್ದರೆ!
ರಾಜ್ಯದಲ್ಲಿ ಗರಿಷ್ಠ ಮಟ್ಟದ ರೈತರು ಅಂದರೆ 54 ಲಕ್ಷಕ್ಕೂ ಅಧಿಕ ರೈತರು ನೋಂದಣಿ ಮಾಡಿ ಯೋಜನೆಯ ಲಾಭ ಪಡೆಯುತ್ತಿದ್ದರು. ಈ ಪೈಕಿ 44.20 ಲಕ್ಷ ರೈತರಿಗೆ ಮಾತ್ರ ಯೋಜನೆಯ ಲಾಭ ಸಿಗುವಂತಾಗಿದೆ.
ಪ್ರತಿ ಕಂತಿನ ಸಂದರ್ಭದಲ್ಲಿ ರೈತರ ಸಂಖ್ಯೆ ಏರುಪೇರಾಗುತ್ತದೆ. ಏಕೆಂದರೆ, ರೈತರ ನೋಂದಣಿ ಕಾರ್ಯ ನಿರಂತರ ಪ್ರಕ್ರಿಯೆಯಾಗಿದ್ದು, ಅರ್ಹರನ್ನು ಸೇರಿಸುವುದು ಹಾಗೂ ಅನರ್ಹರನ್ನು ತೆಗೆಯುವ ಪ್ರಕ್ರಿಯೆ ನಡೆಯುತ್ತದೆ. ಇದನ್ನು ಗ್ರಾಮ ನೋಡಲ್ ಅಧಿಕಾರಿಗಳು ಪರಿಶೀಲಿಸುತ್ತಾರೆ.
2019ರ ನಂತರ ಖಾತೆ ಮಾಡಿಸಿಕೊಂಡ ಲಕ್ಷಾಂತರ ಮಂದಿಗೆ ಈ ಯೋಜನೆಯ ಲಾಭವೇ ಸಿಗುತ್ತಿಲ್ಲ. ಇದಕ್ಕೂ ಮೊದಲು ಯಾವ ರೈತರು ತಮ್ಮ ಹೆಸರಿನಲ್ಲಿ ಖಾತೆ ಹೊಂದಿರುತ್ತಾರೋ ಅಂಥವರು ರೈತ ಸಂಪರ್ಕ ಕೇಂದ್ರಗಳಲ್ಲಿಆಧಾರ್ ಮತ್ತು ಪಹಣಿಯೊಂದಿಗೆ ಫ್ರೂಟ್ಸ್ ಐಡಿ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡು ಇಕೆವೈಸಿಯೊಂದಿಗೆ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯಬಹುದಿತ್ತು. ಒಂದು ವೇಳೆ ಯೋಜನೆಯ ಲಾಭ ಪಡೆಯುತ್ತಿದ್ದ ಜಮೀನಿನ ಮಾಲೀಕರು ನಿಧನ ಹೊಂದಿದರೆ, ಇತರೆ ವಾರಸುದಾರರು ಪೌತಿ ಖಾತೆ ಮಾಡಿಸಿದರೆ ಆಗ ಈ ಯೋಜನೆಗೆ ಅರ್ಹರಾಗುತ್ತಿದ್ದರು. ಆದರೆ, ಕೇಂದ್ರ ಸರಕಾರದ ಮಾರ್ಗಸೂಚಿಯಂತೆ 2019ರ ನಂತರ ಜಮೀನು ಖರೀದಿಸಿದವರು ಇದರ ವ್ಯಾಪ್ತಿಗೆ ಬರುವುದಿಲ್ಲಎಂದು ಕೃಷಿ ಇಲಾಖೆ ಹೇಳುತ್ತಿದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿಯು ನಿರಂತರ ಪ್ರಕ್ರಿಯೆ. ಅನರ್ಹರನ್ನು ತೆಗೆಯುವ, ಅರ್ಹರನ್ನು ಸೇರ್ಪಡೆ ಮಾಡುವ
ಕೆಲಸ ಸದಾ ಪ್ರಗತಿಯಲ್ಲಿರುತ್ತದೆ. ಒಂದು ವೇಳೆ ತಾಂತ್ರಿಕ ದೋಷ, ಇ-ಕೆವೈಸಿ ಸಮಸ್ಯೆಯಿಂದ ಯಾವುದೇ ರೈತರ ಹೆಸರು ಯೋಜನೆಯ ಪಟ್ಟಿಯಿಂದ ಕೈಬಿಟ್ಟಿದ್ದರೆ, ಮರುಪರಿಶೀಲನೆಗೆ ಅವಕಾಶವಿದೆ. ಅರ್ಹರಿಗೆ ಬಾಕಿ ಸೇರಿಸಿ ಹಣವನ್ನು ನೀಡಲಾಗುವುದು. ಹೀಗಾಗಿ, ಅರ್ಹರಿಗೆ ವಂಚನೆಯಾಗುವುದಿಲ್ಲ ಎಂದು ಕೃಷಿ ಇಲಾಖೆ ನಿರ್ದೇಶಕ ಜಿ.ಟಿ. ಪುತ್ರ ತಿಳಿಸಿದ್ದಾರೆ.
ಅರ್ಹತೆಗೆ ಮಾನದಂಡ
ಭೂಮಿ ಹೊಂದಿರುವ ಸಂಘ ಅಥವಾ ಸಂಸ್ಥೆಗಳು, ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆಗಳಲ್ಲಿ ಕುಟುಂಬ ಸದಸ್ಯರು, 10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುವ ನಿವೃತ್ತರು(ಗ್ರೂಪ್ ಡಿ ಹೊರತುಪಡಿಸಿ), ಕಳೆದ ಸಾಲಿನಲ್ಲಿ ಆದಾಯ ತೆರಿಗೆ ಪಾವತಿಸಿದವರು, ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಲೆಕ್ಕ ಪರಿಶೋಧಕರು, ವಾಸ್ತುಶಿಲ್ಪದಂತಹ ವೃತ್ತಿಪರರು ಯೋಜನೆಗೆ ಅನರ್ಹರು.
2023ರ ಅಕ್ಟೋಬರ್ 25ರ ಹೊಸ ಮಾರ್ಗಸೂಚಿ ಅನ್ವಯ ಕನಿಷ್ಠ ಮೂರು ವರ್ಷ ಆದಾಯ ತೆರಿಗೆ ಪಾವತಿಸಿದ್ದರೆ ಯೋಜನೆಗೆ ಅನರ್ಹರಾಗಿರುತ್ತಾರೆ.
ರಾಜ್ಯದ ಫಲಾನುಭವಿಗಳು
ರಾಜ್ಯದ 44.20 ಲಕ್ಷಕ್ಕೂ ಅಧಿಕ ರೈತ ಫಲಾನುಭವಿಗಳಿಗೆ ಕೇಂದ್ರ ಸರಕಾರದಿಂದ ಒಟ್ಟಾರೆ 884.01 ಕೋಟಿ ರೂ.ಗಳನ್ನು ಪ್ರಧಾನ ಮಂತ್ರಿಯವರು ರೈತರ ಆಧಾರ್ ಜೋಡಿತ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.
ಯೋಜನೆಯ ಉದ್ದೇಶ
ಸಾಗುವಳಿ ಭೂಮಿ ಹೊಂದಿರುವ ಎಲ್ಲಾಅರ್ಹ ರೈತ ಕುಟುಂಬಗಳಿಗೆ ಕೃಷಿ ಚಟುವಟಿಕೆಯಲ್ಲಿ ಉತ್ತಮ ಪರಿಕರಗಳನ್ನು ಬಳಸಿ ಬೆಳೆಗಳ ಆರೋಗ್ಯ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ಪಡೆದು ನಿರೀಕ್ಷಿತ ಆದಾಯಗೊಳಿಸಲು ನೆರವಾಗಲು ವಾರ್ಷಿಕ 6 ಸಾವಿರ ರೂ.ಗಳ ಆರ್ಥಿಕ ನೆರವು ನೀಡಲಾಗುತ್ತಿದೆ. 2 ಸಾವಿರ ರೂ.ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ಅನುದಾನ ನೀಡಲಾಗುತ್ತದೆ.
Pmkisan instalment ineligible list-ಪಿಎಂ ಕಿಸಾನ್ ಅನರ್ಹ ಪಟ್ಟಿ ಬಿಡುಗಡೆ,ಅನರ್ಹ ಪಟ್ಟಿ ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://pmkisan.gov.in/VillageDashboard_Portal.aspx
ನಂತರ ನಿಮ್ಮ ರಾಜ್ಯ,ಜಿಲ್ಲೆ,ತಾಲೂಕು,ಗ್ರಾಮ select ಮಾಡಿ,Submit ಮೇಲೆ ಕ್ಲಿಕ್ ಮಾಡಿ
ನಂತರ Aadhaar authentication status ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿರುವ ಪಿಎಂಕಿಸಾನ್ ಅನರ್ಹ ರೈತರ ಪಟ್ಟಿ ದೊರೆಯಲಿದೆ
ಇದನ್ನೂ ಓದಿ
Kisan samman-ತುಂಡು ಕೃಷಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತರಿಗೂ ಪಿಎಂ ಕಿಸಾನ್ ಹಣ-ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್,ಹಾಗಾದರೆ ಅರ್ಹತೆಯ ಮಾನದಂಡಗಳೇನು? - https://krushirushi.in/Kisan-samman-1959