Rasthe veer yojane-ರಸ್ತೆಯ ವೀರ ಯೋಜನೆ: ಸೂಪರ್ ಹೀರೋಗಳಾಗಿ ಅಪಘಾತ ಸಂತ್ರಸ್ತರ ಪ್ರಾಣ ಉಳಿಸಿದವರಿಗೆ ಸಿಗಲಿದೆ 25,000 ರೂ. ನಗದು ಬಹುಮಾನ
Rasthe veer yojane-ರಸ್ತೆಯ ವೀರ ಯೋಜನೆ: ಸೂಪರ್ ಹೀರೋಗಳಾಗಿ ಅಪಘಾತ ಸಂತ್ರಸ್ತರ ಪ್ರಾಣ ಉಳಿಸಿದವರಿಗೆ ಸಿಗಲಿದೆ 25,000 ರೂ. ನಗದು ಬಹುಮಾನ
Rasthe veer yojane-ರಸ್ತೆಯ ವೀರ ಯೋಜನೆ: ಸೂಪರ್ ಹೀರೋಗಳಾಗಿ ಅಪಘಾತ ಸಂತ್ರಸ್ತರ ಪ್ರಾಣ ಉಳಿಸಿದವರಿಗೆ ಸಿಗಲಿದೆ 25,000 ರೂ. ನಗದು ಬಹುಮಾನ
ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಲು ಜನರನ್ನು ಪ್ರೋತ್ಸಾಹಿಸಲು 'ರಾಹ್-ವೀರ್' ಅಥವಾ ರಸ್ತೆಯ ವೀರ ಯೋಜನೆ ಜಾರಿಯಾಗಿದೆ. ಅಪಘಾತವಾದ ಒಂದು ಗಂಟೆಯೊಳಗೆ ಸಂತ್ರಸ್ತರನ್ನು ಆಸ್ಪತ್ರೆಗೆ ಸೇರಿಸುವವರಿಗೆ 25,000 ರೂ. ಬಹುಮಾನ ಮತ್ತು ಕಾನೂನು ರಕ್ಷಣೆ ನೀಡಲಾಗುತ್ತದೆ. ಇದು ಅಮೂಲ್ಯ ಜೀವಗಳನ್ನು ಉಳಿಸಲು ಮತ್ತು 'ಉತ್ತಮ ಸಮರಿಟನ್' ಗಳನ್ನು ಗೌರವಿಸಲು ಉದ್ದೇಶಿಸಿದೆ. ಈ ಕುರಿತ ವಿವರಗಳು ಇಲ್ಲಿವೆ.
ಭಾರತದಲ್ಲಿ ರಸ್ತೆ ಅಪಘಾತದಿಂದಾಗಿ ಲಕ್ಷಾಂತರ ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ, ಪ್ರತಿ ವರ್ಷ ಅಂದಾಜು 45 ಲಕ್ಷ ಅಪಘಾತಗಳು ನಡೆಯುತ್ತಿದ್ದು, ಪ್ರತಿ ಕೆಲವು ನಿಮಿಷಕ್ಕೆ ಒಬ್ಬರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರೆ, ಸರಿಯಾದ ಕ್ಷಣದಲ್ಲಿ ಚಿಕಿತ್ಸೆ ನೀಡಿದರೆ, ಅಮೂಲ್ಯ ಜೀವವನ್ನು ಉಳಿಸಬಹುದು. ಅಪಘಾತ ನಡೆದ ನಂತರದ ಮೊದಲ 60 ನಿಮಿಷಗಳನ್ನು 'ಗೋಲ್ಡನ್ ಅವರ್' ಎನ್ನಲಾಗುತ್ತದೆ. ಈ ಸಮಯದಲ್ಲಿ ಸಿಗುವ ತುರ್ತು ಚಿಕಿತ್ಸೆ ಸಾವು ಮತ್ತು ಶಾಶ್ವತ ಅಂಗವೈಕಲ್ಯವನ್ನು ತಡೆಯಬಲ್ಲದು. ಆದರೆ, ಪೊಲೀಸರ ವಿಚಾರಣೆ ಅಥವಾ ಕಾನೂನು ಸಂಕಷ್ಟಗಳಿಗೆ ಹೆದರಿ ಅನೇಕರು ಸಹಾಯ ಮಾಡಲು ಮುಂದೆ ಬರುತ್ತಿರಲಿಲ್ಲ. ಈ ಭಯವನ್ನು ಹೋಗಲಾಡಿಸಲು ಭಾರತ ಸರ್ಕಾರವು 'ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019' ರ ಸೆಕ್ಷನ್ 134A ಅಡಿಯಲ್ಲಿ 'ರಸ್ತೆಯ ವೀರ' ಯೋಜನೆಯನ್ನು ಜಾರಿಗೆ ತಂದಿದೆ.
ಏನಿದು 'ರಸ್ತೆಯ ವೀರ' ಯೋಜನೆ?
61
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಹತ್ವಾಕಾಂಕ್ಷೆಯ ಯೋಜನೆಯಾದ 'ರಾಹ್-ವೀರ್' ಅಥವಾ “ರಸ್ತೆಯ ವೀರ' ಯೋಜನೆಯು ರಸ್ತೆ ಅಪಘಾತದ ಸಂತ್ರಸ್ತರಿಗೆ ತುರ್ತು ಸಂದರ್ಭದಲ್ಲಿ ನೆರವಾಗುವ ಸಾರ್ವಜನಿಕರನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯಡಿ ಅಪಘಾತಕ್ಕೀಡಾದವರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸುವ ವ್ಯಕ್ತಿಗಳಿಗೆ ಕಾನೂನು ಕಿರುಕುಳದಿಂದ ಸಂಪೂರ್ಣ ರಕ್ಷಣೆ ನೀಡಲಾಗುವುದು ಮಾತ್ರವಲ್ಲದೆ, ಅವರ ವೈಯಕ್ತಿಕ ವಿವರಗಳನ್ನು ನೀಡುವಂತೆ ಅಥವಾ ವಿಚಾರಣೆಗಾಗಿ ಅನಗತ್ಯವಾಗಿ ಕಾಯುವಂತೆ ಒತ್ತಾಯಿಸುವಂತಿಲ್ಲ. ಸಂತ್ರಸ್ತರ ಪ್ರಾಣ ಉಳಿಸಲು ಧೈರ್ಯದಿಂದ ಮುಂದೆ ಬರುವ ಇಂತಹ 'ಉತ್ತಮ ಸಮರಿಟನ್'ಗಳ ಘನತೆ ಮತ್ತು ಗೌಪ್ಯತೆಯನ್ನು ಕಾಪಾಡುವುದರ ಜೊತೆಗೆ, ಅವರಿಗೆ ಆರ್ಥಿಕ ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ.
ಸಮರಿಟನ್‌ಗಳಿಗೆ ಬಹುಮಾನದ ಮೊತ್ತ ಎಷ್ಟು?
ಅಪಘಾತಕ್ಕೀಡಾದ ಸಂತ್ರಸ್ತನನ್ನು 'ಗೋಲ್ಡನ್ ಅವರ್' (ಅಪಘಾತವಾದ ಒಂದು ಗಂಟೆಯೊಳಗೆ) ಆಸ್ಪತ್ರೆಗೆ ಸೇರಿಸುವ ವ್ಯಕ್ತಿಗೆ ಪ್ರತಿ ಘಟನೆಗೆ 25,000 ರೂ. ನಗದು ಬಹುಮಾನ ನೀಡಲಾಗುತ್ತದೆ.
ಈ ನಗದು ಬಹುಮಾನದ ಜೊತೆಗೆ ವ್ಯಕ್ತಿಯ ಸೇವೆಗಾಗಿ ಗೌರವಾನ್ವಿತ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ.
ಒಬ್ಬ ವ್ಯಕ್ತಿಯು ಒಂದು ವರ್ಷದಲ್ಲಿ ಗರಿಷ್ಠ 5 ಬಾರಿ ಈ ಆರ್ಥಿಕ ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ಪಡೆಯಲು ಅವಕಾಶವಿದೆ.
ದೇಶಾದ್ಯಂತ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಮೊದಲ 10 'ರಾಹ್-ವೀರ್'ಗಳನ್ನು ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಮಾಡಿ, ಅವರಿಗೆ ತಲಾ 1,00,000 ರೂ. ಹೆಚ್ಚುವರಿ ಬಹುಮಾನ ನೀಡಲಾಗುತ್ತದೆ.

