ಅಗಸ್ಟ್ 31ರೊಳಗೆ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಇವೈಸಿ ಆದವರಿಗೆ ಮಾತ್ರ ಸಿಗಲಿದೆ ಅನ್ನಭಾಗ್ಯ ಅಕ್ಕಿ,ಗೃಹಲಕ್ಷ್ಮಿ ಹಣ,ನಿಮ್ಮ ಇಕೆವೈಸಿ ಸ್ಟೇಟಸ್ ಹೀಗೆ ಚೆಕ್ ಮಾಡಿ-Ration card ekyc 

<Krushirushi> <ರೇಷನ್ ಕಾರ್ಡ್ ಇಕೆವೈಸಿ> <Ration Card ekyc> <ಅಗಸ್ಟ್ ಅನ್ನಭಾಗ್ಯ ಹಣ> <August month Annabhagya amount> <ಆಧಾರ್ ಬ್ಯಾಂಕ್ ಲಿಂಕ್> <ಅನ್ನಭಾಗ್ಯ> <ಅನ್ನ ಭಾಗ್ಯ> <Annabhagya> <Anna bhagya> <ಆಧಾರ್ ರೇಷನ್ ಕಾರ್ಡ್ ಲಿಂಕ್> <Aadhaarrationlink> <Rationcard> <BPLcard> <APLcard> <BPL Card> <APL Card> <ರೇಷನ್ ಕಾರ್ಡ್> <How to download ration card> <ಪಡೀತರಚೀಟಿ> <ಗೃಹಲಕ್ಷ್ಮಿ> <ಅನ್ನಭಾಗ್ಯ> <ration card ekyc status>

ಅಗಸ್ಟ್ 31ರೊಳಗೆ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಇವೈಸಿ ಆದವರಿಗೆ ಮಾತ್ರ ಸಿಗಲಿದೆ ಅನ್ನಭಾಗ್ಯ ಅಕ್ಕಿ,ಗೃಹಲಕ್ಷ್ಮಿ ಹಣ,ನಿಮ್ಮ ಇಕೆವೈಸಿ ಸ್ಟೇಟಸ್ ಹೀಗೆ ಚೆಕ್ ಮಾಡಿ-Ration card ekyc 

ಅಗಸ್ಟ್ 31ರೊಳಗೆ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಇವೈಸಿ ಆದವರಿಗೆ ಮಾತ್ರ ಸಿಗಲಿದೆ ಅನ್ನಭಾಗ್ಯ ಅಕ್ಕಿ,ಗೃಹಲಕ್ಷ್ಮಿ ಹಣ,ನಿಮ್ಮ ಇಕೆವೈಸಿ ಸ್ಟೇಟಸ್ ಹೀಗೆ ಚೆಕ್ ಮಾಡಿ-Ration card ekyc 

ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ 'ಇಕೆವೈಸಿ' (Ration card Ekyc) (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಕಡ್ಡಾಯವಾಗಿದೆ.


ಆದ್ದರಿಂದ ಯಾರು ಕಳೆದ ಹಲವು ವರ್ಷಗಳಿಂದ ತಮ್ಮ
ಬಿಪಿಎಲ್ ಪಡಿತರ ಚೀಟಿಗೆ ಈವರೆಗೆ ಇಕೆವೈಸಿ
ನೋಂದಣಿಯಾಗಿಲ್ಲ ಅಂತಹ ಕುಟುಂಬದವರು ಆಗಸ್ಟ್
31 ರೊಳಗೆ ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ
ಅಂಗಡಿಗೆ ತೆರಳಿ ಇಕೆವೈಸಿ (ಆಧಾರ್ ಆಧಾರಿತ
ಬೆರಳಚ್ಚಿನ ದೃಢೀಕರಣ) ಮಾಡಿಸಲು ತಿಳಿಸಿದೆ.
ಇಕೆವೈಸಿ ಆಗದೇ ಇರುವವರ ಪಟ್ಟಿಯನ್ನು ಆಯಾಯ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೆ ಪಟ್ಟಿಯನ್ನು ಪ್ರದರ್ಶಿಸಲಾಗಿದೆ. ನಿಗಧಿಪಡಿಸಿದ ಕೊನೆಯ ದಿನಾಂಕದೊಳಗೆ ಇಕೆವೈಸಿ ಮಾಡಿಸದಿದ್ದಲ್ಲಿ ಮಾಡಿಸದ ಸದಸ್ಯರನ್ನು ಅನರ್ಹರೆಂದು ಪರಿಗಣಿಸಿ ಅಂತಹವರ ಹೆಸರನ್ನು ಬಿಪಿಎಲ್ ಪಡಿತರ ಚೀಟಿಯಿಂದ ತೆಗೆದು ಹಾಕಲಾಗುವುದು ಎಂದು ತಿಳಿಸಿದೆ. ಇಕೆವೈಸಿ ಮಾಡಿಸುವುದು ಸಂಪೂರ್ಣವಾಗಿ ಉಚಿತವಾಗಿದೆ ಎಂದು ಪಡಿತರ ಚೀಟಿದಾರರ ಗಮನಕ್ಕೆ ತರಲಾಗಿದೆ.


ಸರ್ಕಾರದ ಮಾನದಂಡಗಳನ್ವಯ ಒಂದೇ ಕುಟುಂಬದಲ್ಲಿ ಒಂದಂಕ್ಕಿಂತ ಹೆಚ್ಚು ಪಡಿತರ ಚೀಟಿ ಇರುವುದು ಹಾಗೂ ಅನರ್ಹ ಪಡಿತರ ಚೀಟಿ ಪಡೆದುಕೊಂಡಿರುವವರು ಮತ್ತು ಆರ್ಥಿಕವಾಗಿ ಸಬಲರಾಗಿದ್ದು, ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚಿಟಿ ಪಡೆದುಕೊಂಡಿರುವವರು ಕೂಡಲೇ ತಾಲ್ಲೂಕು ಕಚೇರಿ/ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ತಮ್ಮ ಪಡಿತರ ಚೀಟಿಯನ್ನು ಹಿಂದಿರುಗಿಸುವಂತೆ ಆಹಾರ ಇಲಾಖೆ ತಿಳಿಸಿದೆ.

Ration card ekyc status-ನಿಮ್ಮ ರೇಷನ್ ಕಾರ್ಡ್ ಇಕೆವೈಸಿ ಸ್ಟೇಟಸ್ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/Home/EServices

ನಂತರ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ e-status ಮೇಲೆ ಕ್ಲಿಕ್ ಮಾಡಿ

ನಂತರ DBT Status ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ select ಮಾಡಿ

 

ನಂತರ "Status of Ration Card/ಪಡಿತರ ಚೀಟಿ ವಿವರ"ಮೇಲೆ ಕ್ಲಿಕ್ ಮಾಡಿ

ನಂತರ without OTP Select ಮಾಡಿ

ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ರೇಷನ್ ಕಾರ್ಡ್ ನ ಸಂಪೂರ್ಣ ವಿವರ,ನಿಮ್ಮ ಕುಟುಂಬದಲ್ಲಿ ಎಷ್ಟು ಜನರ ಇಕೆವೈಸಿ ಆಗಿದೆ,ಎಷ್ಟು ಜನರ ಇಕೆವೈಸಿ ಬಾಕಿ ಇದೆ ಎಂಬ ವಿವರ ಹಾಗೂ ಇಲ್ಲಿಯವರೆಗೂ ಎಷ್ಟು ಅಕ್ಕಿ ಪಡೆದಿದ್ದಿರಿ ಎಂಬ ಮಾಹಿತಿ ಸಿಗಲಿದೆ


ಇಕೆವೈಸಿ ಆಗಿರದಿದ್ದರೆ,ಹತ್ತಿರದ ಪಡಿತರ ವಿತರಿಸುವ ಕೇಂದ್ರಕ್ಕೆ ಹೋಗಿ ಬಯೊಮೆಟ್ರಿಕ್ ನಲ್ಲಿ ನಿಮ್ಮ ಹೆಬ್ಬೆಟ್ಟು ಒತ್ತಿ ,ಇಕೆವೈಸಿ ಮಾಡಿಸಿ