ಕ್ವಿಂಟಾಲ್ ಗೆ 71 ಸಾವಿರ ರೂ. ಗಡಿ ದಾಟಿದ ಕೆಂಪು ಮೆಣಸಿನಕಾಯಿ ದರ

ಕ್ವಿಂಟಾಲ್ ಗೆ 71 ಸಾವಿರ ರೂ. ಗಡಿ ದಾಟಿದ ಕೆಂಪು ಮೆಣಸಿನಕಾಯಿ ದರ

ಕ್ವಿಂಟಾಲ್ ಗೆ 71 ಸಾವಿರ ರೂ. ಗಡಿ ದಾಟಿದ ಕೆಂಪು ಮೆಣಸಿನಕಾಯಿ ದರ

ಏರುಗತಿಯಲ್ಲಿ ಸಾಗುತ್ತಿರುವ ಕೆಂಪು ಮೆಣಸಿನಕಾಯಿ ದರ ಕ್ವಿಂಟಾಲ್ ಗೆ 71 ಸಾವಿರ ರೂಪಾಯಿ ಗಡಿ ದಾಟಿದೆ.

ಶನಿವಾರ ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಕೆಂಪು ಮೆಣಸಿನಕಾಯಿ ದರ 70 ಸಾವಿರ ರೂ.ಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ. ಇದು ಈ ವರ್ಷದ ಸೀಸನ್ ಆರಂಭದ ಗರಿಷ್ಠ ದರವಾಗಿದೆ.

ಮುಂದಿನ ದಿನಗಳಲ್ಲಿ ಒಂದು ಕ್ವಿಂಟಾಲ್ ಕೆಂಪು ಮೆಣಸಿನಕಾಯಿ ದರ ಒಂದು ಲಕ್ಷ ರೂ.ಗೆ ತಲುಪಬಹುದು ಎನ್ನಲಾಗಿದೆ.

ಬ್ಯಾಡಗಿ ತಳಿಯ ಡಬ್ಬಿ ಮತ್ತು ಕಡ್ಡಿ ಮೆಣಸಿನ ಕಾಯಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಎಪಿಎಂಸಿಗೆ ಬರುತ್ತಿದೆ. ಶನಿವಾರ 1400 ಕ್ವಿಂಟಾಲ್ ಮೆಣಸಿನಕಾಯಿ ಆವಕವಾಗಿತ್ತು. ಕುಂದಗೋಳ ಪ್ರದೇಶದಲ್ಲಿ ಬೆಳೆಯುವ ಕಡ್ಡಿ ತಳಿಯ ಮೆಣಸಿನಕಾಯಿಗೆ ಅಂಗಡಿಯೊಂದರಲ್ಲಿ ಕ್ವಿಂಟಾಲ್ ಗೆ 53,119 ರೂ., ಡಬ್ಬಿ ತಳಿ ಮೆಣಸಿನಕಾಯಿಗೆ 71,333 ರೂಪಾಯಿ ಗರಿಷ್ಠ ದರ ಲಭ್ಯವಾಗಿದೆ. ಬೇರೆ ಕಡೆಗಳಿಂದ ಹುಬ್ಬಳ್ಳಿ ಎಪಿಎಂಸಿಗೆ ಬರುವ ಖರೀದಿದಾರರು ಟೆಂಡರ್ ಹಾಕುತ್ತಿರುವುದರಿಂದ ಬೆಳೆಗಾರರಿಗೆ ಉತ್ತಮ ದರ ಸಿಗುತ್ತಿದೆ.