Rtc aadhaar link status 2024-ಯಾರದೋ ಬೆಳೆ ನಷ್ಟ ಪರಿಹಾರವನ್ನು ಮತ್ತೊಬ್ಬರು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ನಿಮ್ಮ ಜಮೀನುಗಳಿಗೆ ಆಧಾರ್ ಲಿಂಕ್ ಹೀಗೆ ಮಾಡಿ
<Krushirushi> <ಆರ್ ಟಿಸಿ ಆಧಾರ್ ಲಿಂಕ್> <Rtc aadhaar link status 2024> <How to link RTC to Aadhaar card link> <RTC link to aadhaar> <ಉತಾರ ಆಧಾರ್ ಲಿಂಕ್> <ಹೊಲ> <ಜಮೀನು> <Aadhaar seeding> <NPCI Status> <Aadhaar update> <ಹಣ> <ರೈತ> <crop> <ಬೆಳೆಸುದ್ದಿ> <ಅನ್ನಭಾಗ್ಯ> <Annabhagya><ಬೆಳೆವಿಮೆ> <<dbt Karnataka> <direct benefit transfer> <ಆಧಾರ್> <ನೇರ ಲಾಭ ವರ್ಗಾವಣೆ> <cropinsurance>
Rtc aadhaar link status 2024-ಯಾರದೋ ಬೆಳೆ ನಷ್ಟ ಪರಿಹಾರವನ್ನು ಮತ್ತೊಬ್ಬರು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ನಿಮ್ಮ ಜಮೀನುಗಳಿಗೆ ಆಧಾರ್ ಲಿಂಕ್ ಹೀಗೆ ಮಾಡಿ
ಬರ ಪರಿಹಾರದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಹಾಗೂ ಫ್ರೂಟ್ಸ್ (FID)ತಂತ್ರಾಂಶದಲ್ಲಿರುವ ಅಂಕಿ ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗುವುದರಿಂದ, ರೈತರು ತಮ್ಮ ಜಮೀನಿನ ನಿಖರವಾದ ವಿಸ್ತೀರ್ಣವನ್ನು ಫ್ರುಟ್ಸ್ ತಂತ್ರಾಂಶದಲ್ಲಿ ಆಧಾರ್-ಪಹಣಿ ಜೋಡಣೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಸಾರ್ವಜನಿಕ ಪ್ರಕಟಣೆಗಾಗಿ
“ಯಾರದೋ ಜಮೀನನ್ನು ಮತ್ತೊಬ್ಬರು ಲಪಟಾಯಿಸುವುದನ್ನು ತಡೆಯಲು, ಬೆಳೆ ನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ”
ಕೃಷ್ಣಬೈರೇಗೌಡ, ಕಂದಾಯ ಸಚಿವರು
ಹೀಗೆ ಮಾಡಿ ಆರ್ ಟಿಸಿ ಆಧಾರ್ ಕಾರ್ಡ್ ಲಿಂಕ್
https://landrecords.karnataka.gov.in/service4
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ,Captcha code ಹಾಕಿ,Send OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಆಧಾರ್ ನಂಬರ್ ಹಾಕಿ,ಆಧಾರ್ ನಲ್ಲಿರುವಂತೆ ಹೆಸರು ಹಾಕಿ
ನಂತರ "ನಾನು ಇಲ್ಲಿ ಸ್ವಯಂಪ್ರೇರಣೆಯಿಂದ ಆಧಾರ್ ಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇನೆ" ಮೇಲೆ ಕ್ಲಿಕ್ ಮಾಡಿ,Varify ಮೇಲೆ ಕ್ಲಿಕ್ ಮಾಡಿ
ಈ ಕೆಳಗಿನಂತೆ "ಆಧಾರ್ ಅನ್ನು ಯಶಸ್ವಿಯಾಗಿ ಪರೀಶಿಲಿಸಲಾಗಿದೆ" ಎಂಬ ಸಂದೇಶ ಬರುತ್ತದೆ.
ನಂತರ ok ಮೇಲೆ ಕ್ಲಿಕ್ ಮಾಡಿ
ನಂತರ "ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ" ಮೇಲೆ ಕ್ಲಿಕ್ ಮಾಡಿ
ಇಲ್ಲಿ ಮತ್ತೊಮ್ಮೆ ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ OTP ಮೇಲೆ ಕ್ಲಿಕ್ ಮಾಡಿ ಒಟಿಪಿ ಪಡೆಯಿರಿ/Generate OTP ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಹಾಕಿ "ಸಲ್ಲಿಸು/Submit" ಮೇಲೆ ಕ್ಲಿಕ್ ಮಾಡಬೇಕು.
ನಂತರ ಎಡಬದಿಯಲ್ಲಿ ಕಾಣುವ "ಲಿಂಕ್ ಆಧಾರ್/Link Aadhar" ಮೇಲೆ ಕ್ಲಿಕ್ ಮಾಡಿ ಕೆಳಗಡೆ ಕಾಣುವ ನಿಮ್ಮ ಸರ್ವೆ ನಂಬರ್ ಮೇಲೆ ಟಿಕ್ ಮಾಡಿಕೊಂಡು ಅದರ ಮುಂದೆ ಕಾಣುವ "Link" ಬಟನ್ ಮೇಲೆ ಕ್ಲಿಕ್ ಮಾಡಬೇಕು
ನಂತರ ಮತ್ತೆ ನಿಮ್ಮ ಮೊಬೈಲ್ ಗೆ ಬರುವ OTP ಅನ್ನು ನಮೂದಿಸಿ "Verify OTP" ಬಟನ್ ಮೇಲೆ ಕ್ಲಿಕ್ ಮಾಡಬೇಕು ಅಗ "ಪಹಣಿಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಲು ನೀವು ಬಯಸುವಿರಾ?/ Do you want to link your Aadhaar with the RTC?" ಎಂದು ಪ್ರಶ್ನೆ ತೋರಿಸುತ್ತದೆ ಅದಕ್ಕೆ ಹೌದು/Yes ಎಂದು ಕ್ಲಿಕ್ ಮಾಡಿದರೆ ನಿಮ್ಮ ಪಹಣಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ/Your RTC is linked with the Aadhaar ಎನ್ನುವ ಸಂದೇಶ ಬರುತ್ತದೆ.
ಇದೇ ರೀತಿ ಒಂದೊಂದು ಸರ್ವೆ ನಂಬರ್ ಅನ್ನು ಟಿಕ್ ಮಾಡಿಕೊಂಡು OTP ಪಡೆದು ಆಧಾರ್ ಕಾರ್ಡ ಅನ್ನು ನಿಮ್ಮ ಎಲ್ಲಾ ಸರ್ವೆ ನಂಬರ್ ಗಳಿಗೆ ಲಿಂಕ್ ಮಾಡಬೇಕು.
ಇಷ್ಟು ಮಾಡಿದರೆ ನಿಮ್ಮ RTC ಗೆ ಆಧಾರ್ ಲಿಂಕ್ ಆಗಿದೆ ಎಂದು ಅರ್ಥ
ಅಥವಾ ಗ್ರಾಮ ಪಂಚಾಯತಿಗೆ ಹೋಗಿ ಗ್ರಾಮ ಆಡಳಿತಾಧಿಕಾರಿಯನ್ನು ಸಂಪರ್ಕಿಸಿ,RTC ಗೆ ಆಧಾರ್ ಲಿಂಕ್ ಮಾಡಿಸಿ