Shakthi yojane smart card-ಇನ್ಮುಂದೆ ಉಚಿತ ಬಸ್ ಪ್ರಯಾಣಕ್ಕೆ ಆಧಾರ್ ಕಾರ್ಡ್ ನಡೆಯಲ್ಲ, ಮೊಬೈಲ್ ನಲ್ಲೆ ಹೀಗೆ ಮಾಡಿಕೊಳ್ಳಿ ಉಚಿತ ಸ್ಮಾರ್ಟ್ ಕಾರ್ಡ್

ಶಕ್ತಿ ಯೋಜನೆಯ ಲಾಭವನ್ನು ಇನ್ನಷ್ಟು ಸರಳವಾಗಿ ಪಡೆಯಲು ಸರ್ಕಾರ ಸ್ಮಾರ್ಟ್ ಕಾರ್ಡ್(Shakthi yojane smart card) ವಿತರಣೆ ಮಾಡುವ ನಿರ್ಧಾರ ಕೈಗೊಂಡಿದೆ.

Shakthi yojane smart card-ಇನ್ಮುಂದೆ ಉಚಿತ ಬಸ್ ಪ್ರಯಾಣಕ್ಕೆ ಆಧಾರ್ ಕಾರ್ಡ್ ನಡೆಯಲ್ಲ, ಮೊಬೈಲ್ ನಲ್ಲೆ ಹೀಗೆ ಮಾಡಿಕೊಳ್ಳಿ ಉಚಿತ ಸ್ಮಾರ್ಟ್ ಕಾರ್ಡ್

Shakthi yojane smart card-ಇನ್ಮುಂದೆ ಉಚಿತ ಬಸ್ ಪ್ರಯಾಣಕ್ಕೆ ಆಧಾರ್ ಕಾರ್ಡ್ ನಡೆಯಲ್ಲ, ಮೊಬೈಲ್ ನಲ್ಲೆ ಹೀಗೆ ಮಾಡಿಕೊಳ್ಳಿ ಉಚಿತ ಸ್ಮಾರ್ಟ್ ಕಾರ್ಡ್

ರಾಜ್ಯದ ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ನೀಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ್ದ, ಐದು ಗ್ಯಾರಂಟಿಗಳ ಪೈಕಿ ಪ್ರಮುಖವಾದ ಶಕ್ತಿ ಯೋಜನೆಗೆ ಮತ್ತಷ್ಟು ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಬಸ್‌ನಲ್ಲಿ ಪ್ರಯಾಣ ಮಾಡುವಾಗ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ.

ಶಕ್ತಿ ಯೋಜನೆಯ ಲಾಭವನ್ನು ಇನ್ನಷ್ಟು ಸರಳವಾಗಿ ಪಡೆಯಲು ಸರ್ಕಾರ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ನಿರ್ಧಾರ ಕೈಗೊಂಡಿದೆ. ಈ ಸ್ಮಾರ್ಟ್ ಕಾರ್ಡ್‌ನ್ನು ಎರಡು ತಿಂಗಳೊಳಗೆ ರಾಜ್ಯದ ಎಲ್ಲಾ ಅರ್ಹ ಮಹಿಳೆಯರಿಗೆ ಉಚಿತವಾಗಿ ನೀಡಲಾಗುವುದು. ಈಗಾಗಲೇ ಈ ಕುರಿತ ಕಡತ ಹಣಕಾಸು ಇಲಾಖೆಗೆ ಹೋಗಿದ್ದು, ಕೇವಲ ಅನುಮತಿಯ ಬಾಕಿಯಿದೆ. ಸಾರಿಗೆ ಇಲಾಖೆ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದೆ.

ಸ್ಮಾರ್ಟ್ ಕಾರ್ಡ್ ಪಡೆಯಲು ಮಹಿಳೆಯರು 'ಗ್ರಾಮ ಒನ್' ಅಥವಾ 'ಬೆಂಗಳೂರು ಒನ್' ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು. ಅಲ್ಲದೆ, ಸೇವಾಸಿಂಧು ವೆಬ್‌ಸೈಟ್‌ ಬಳಸಿ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಿದ ನಂತರ ತಕ್ಷಣವೇ ಪ್ರಿಂಟ್‌ ಮಾಡಿದ ರಸೀದಿಯೇ ಸ್ಮಾರ್ಟ್ ಕಾರ್ಡ್ ಎಂದು ಪರಿಗಣಿಸಲಾಗುತ್ತದೆ. ಮಾಸಿಕ ಪಾಸ್ ಅಥವಾ ಕಾರ್ಡ್ ವಿತರಣೆ ಇಲ್ಲ. ಇದು ಶಾಶ್ವತ ಪಾಸ್‌ನಂತೆ ಕಾರ್ಯನಿರ್ವಹಿಸುತ್ತದೆ.

ಪ್ರಿಂಟ್ ಆದ ಮಾಹಿತಿಯುಳ್ಳ ದಾಖಲೆಯೇ ಸ್ಮಾರ್ಟ್ ಕಾರ್ಡ್ ಆಗಿರಲಿದೆ. ಮಾಸಿಕ ಪಾಸಿನಂತೆ ಪ್ರತ್ಯೇಕ ಪಾಸ್ ವಿತರಣೆ ಇರಲ್ಲ. ಅರ್ಜಿ ಸಲ್ಲಿಸಿದ ಕೂಡಲೇ ನೀಡಲಾಗುವ ಪ್ರಿಂಟ್‍ಔಟ್ ಅನ್ನು ಸ್ಮಾರ್ಟ್ ಕಾರ್ಡ್ ಎಂದು ಪರಿಗಣಿಸಲಾಗುತ್ತದೆ.ಸೇವಾಸಿಂಧು ವೆಬ್‍ಸೈಟ್ ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಆಧಾರ್ ಕಾರ್ಡ್‍ನ್ನು ದಾಖಲೆಯಾಗಿ ಪರಿಗಣಿಸಿ ರಾಜ್ಯದ ಮಹಿಳೆಯರಿಗೆ ಸ್ಮಾರ್ಟ್? ಕಾರ್ಡ್ ವಿತರಣೆ ಮಾಡಲಾಗತ್ತದೆ. ಸೇವಾಕೇಂದ್ರದಲ್ಲಿಯೇ ಸ್ಮಾರ್ಟ್‍ಕಾರ್ಡ್ ಪ್ರಿಂಟ್ ಹಾಕಲಾಗುತ್ತದೆ.

ಅಲ್ಲದೇ, ಈ ಸ್ಮಾರ್ಟ್ ಕಾರ್ಡ್‌ನ್ನು ಕೇವಲ ಕರ್ನಾಟಕದ ನಿವಾಸಿಗಳಿಗಷ್ಟೇ ನೀಡಲಾಗುತ್ತದೆ. ಆಧಾರ್ ಕಾರ್ಡ್‌ನ ವಿಳಾಸ ಕರ್ನಾಟಕದೊಳಗೇ ಇರಬೇಕಾಗಿದೆ. ಶಕ್ತಿ ಯೋಜನೆಯ ಲಾಭ ಪಡೆಯಲು ಕೆಲವರು ಆಧಾರ್ ವಿಳಾಸ ಬದಲಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ ವಿಳಾಸ ಬದಲಿಸಿ ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದರೆ ಅದು ಅಂಗೀಕಾರವಾಗುವುದಿಲ್ಲ.

ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

https://sevasindhu.karnataka.gov.in/Sevasindhu/Kannada?ReturnUrl=%2F

ಮೊದಲು "ಹೊಸ ಬಳಕೆದಾರರು ಇಲ್ಲಿ ನೊಂದಾಯಿಸಿ" ಮೇಲೆ ಕ್ಲಿಕ್ ಮಾಡಿ

ಮೊದಲ ಬಾರಿ ಲಾಗಿನ್ ಆಗುತ್ತಿದ್ದರೆ,New user? Register here ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ನಂಬರ್ ಹಾಕಿ,captcha type ಮಾಡಿ,Next ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ Continue ಮೇಲೆ ಕ್ಲಿಕ್ ಮಾಡಿ

ನಂತರ Allow ಮೇಲೆ ಕ್ಲಿಕ್ ಮಾಡಿ

ನಂತರ ಇಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಹಾಕಿ, ನಿಮಗೆ ಬೇಕಾದ Password ಹಾಕಿ, captcha ಟೈಪ್ ಮಾಡಿ, submit ಮೇಲೆ ಕ್ಲಿಕ್ ಮಾಡಿ

 ನಂತರ ನಿಮ್ಮ ಸೇವಾ ಸಿಂಧು ಅಕೌಂಟ್ activate ಆಗುತ್ತದೆ. ನಂತರ login ಕ್ಲಿಕ್ ಮಾಡಿ.

ನಂತರ ನೊಂದಾಯಿತ ಬಳಕೆದಾರರು ಇಲ್ಲಿ ಲಾಗಿನ್ ಮಾಡಿ ಮೇಲೆ ಕ್ಲಿಕ್ ಮಾಡಿ 

ನಂತರ ನಿಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಹಾಕಿ, ಕ್ರಿಯೇಟ್ ಮಾಡಿದ ಪಾಸ್ವರ್ಡ್ ಹಾಕಿ ಕ್ಯಾಪ್ಚ ಟೈಪ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ 

ನಂತರ Apply for services ಮೇಲೆ ಕ್ಲಿಕ್ ಮಾಡಿ 

ನಂತರ view all available services ಮೇಲೆ ಕ್ಲಿಕ್ ಮಾಡಿದರೆ,758 ಸೇವೆಗಳು ದೊರೆಯುತ್ತವೆ.Search Box ನಲ್ಲಿ Shakthi bus pass ಎಂದು Type ಮಾಡಿ,ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ

ನಂತರ ಅರ್ಜಿ ನಮೂನೆ ತೆರೆಯುತ್ತದೆ ಅದರಲ್ಲಿ ಅರ್ಜಿದಾರರ  ಮೊಬೈಲ್ ಸಂಖ್ಯೆ ಹಾಗೂ ಅರ್ಜಿ ಸಲ್ಲಿಸುವವರ ವಿವರಗಳನ್ನು ಭರ್ತಿ ಮಾಡಿ.

ನಂತರ ಕೆಳಗಿನ ಭಾಗದ ಘೋಷಣೆಯಲ್ಲಿ ಐ ಅಗ್ರಿ ಎಂಬ ಚೆಕ್ ಬಾಕ್ಸ್ ಮೇಲೆ ಚೆಕ್ ಮಾಡಿ.

ನಂತರ ವೆರಿಫಿಕೇಶನ್ ಕೋಡನ್ನು ನೋಂದಣಿ ಮಾಡಿ ಅರ್ಜಿಯನ್ನು ಸಲ್ಲಿಸಿ.