Thayi lakshmi bond yojane-ತಾಯಿ ಲಕ್ಮಿ ಬಾಂಡ್ ಯೋಜನೆಯಡಿ 50,000 ರೂ.ವರೆಗೆ ಹೆರಿಗೆ ಸಹಾಯಧನ

'ತಾಯಿ ಲಕ್ಷ್ಮೀ ಬಾಂಡ್' ಯೋಜನೆಯಡಿ ಹೆರಿಗೆ ಸಹಾಯಧನವನ್ನು ನೀಡುತ್ತಿದೆ. ಹೆಣ್ಣು ಮಗುವಿಗೆ 30,000 ರೂ. ಮತ್ತು ಗಂಡು ಮಗುವಿಗೆ 20,000 ರೂ. ಸಹಾಯಧನ ಪಡೆಯಬಹುದು. ಇತ್ತೀಚಿನ ನಿಯಮಗಳ ಪ್ರಕಾರ, ಒಟ್ಟು 50,000 ರೂ. ವರೆಗೆ ಸಹಾಯಧನ ಲಭ್ಯವಿದೆ. ಅರ್ಹ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಕಾರ್ಮಿಕ ಇಲಾಖೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Thayi lakshmi bond yojane-ತಾಯಿ ಲಕ್ಮಿ ಬಾಂಡ್ ಯೋಜನೆಯಡಿ 50,000 ರೂ.ವರೆಗೆ ಹೆರಿಗೆ ಸಹಾಯಧನ

Thayi lakshmi bond yojane-ತಾಯಿ ಲಕ್ಮಿ ಬಾಂಡ್ ಯೋಜನೆಯಡಿ 50,000 ರೂ.ವರೆಗೆ ಹೆರಿಗೆ ಸಹಾಯಧನ

ನೀವೆಲ್ಲರೂ ಭಾಗ್ಯಲಕ್ಷ್ಮಿ ಬಾಂಡ್‌ ಬಗ್ಗೆ ಕೇಳಿರುತ್ತೀರಿ. ಅದೇ ರೀತಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಮಹಿಳಾ ಕಾರ್ಮಿಕರಿಗೆ ಹೆರಿಗೆಯ ಸಮಯದಲ್ಲಿ ಆರ್ಥಿಕ ಭದ್ರತೆ ನೀಡಲು ತಾಯಿ ಲಕ್ಷ್ಮೀ ಬಾಂಡ್ ಎಂಬ ವಿಶಿಷ್ಟ ಯೋಜನೆಯನ್ನು ಜಾರಿಗೆ ತಂದಿದೆ. 2022ರ ಮಂಡಳಿಯ ತಿದ್ದುಪಡಿ ನಿಯಮಗಳ ಪ್ರಕಾರ, ಮಹಿಳಾ ಕಾರ್ಮಿಕರ ಹೆಣ್ಣು ಹಾಗೂ ಗಂಡು ಮಗುವಿನ ಜನನಕ್ಕೆ ಸಹಾಯಧನವನ್ನು ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಯೋಜನೆ? ಸಹಾಯಧನ ಪಡೆಯುವುದು ಹೇಗೆ? ಎಂಬುದನ್ನು ತಿಳಿಯೋಣ.

ಏನಿದು ತಾಯಿ ಲಕ್ಷ್ಮೀ ಬಾಂಡ್ ಯೋಜನೆ?

ತಾಯಿ ಲಕ್ಷ್ಮೀ ಬಾಂಡ್ (ಹೆರಿಗೆ ಸಹಾಯಧನ) ಯೋಜನೆ ಎನ್ನುವುದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೋಂದಾಯಿತ ಮಹಿಳಾ ಕಾರ್ಮಿಕರಿಗೆ ನೀಡಲಾಗುವ ಒಂದು ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯಡಿ, ಮಹಿಳಾ ಕಾರ್ಮಿಕರ ಮೊದಲ ಎರಡು ಹೆರಿಗೆಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದ್ದು, ಹೆಣ್ಣು ಮಗುವಿನ ಜನನಕ್ಕೆ 30,000 ರೂ. ಮತ್ತು ಗಂಡು ಮಗುವಿನ ಜನನಕ್ಕೆ 20,000 ರೂ. ವರೆಗೆ ಸಹಾಯಧನವನ್ನು ಬಾಂಡ್ ಅಥವಾ ನೇರ ನಗದು ವರ್ಗಾವಣೆ ಮೂಲಕ ಒದಗಿಸಲಾಗುತ್ತದೆ (ಇತ್ತೀಚಿನ ನಿಯಮ 43 ರಂತೆ ಇದು ಒಟ್ಟಾರೆ 50,000 ವರೆಗೂ ಇರಬಹುದು).

ಯೋಜನೆಯ ಪ್ರಮುಖ ಸೌಲಭ್ಯಗಳು

  • ಒಂದು ವೇಳೆ ಹೆಣ್ಣು ಮಗು ಜನಿಸಿದರೆ 30,000 ರೂ. ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
  • ಒಂದು ವೇಳೆ ಗಂಡು ಮಗು ಜನಿಸಿದರೆ ರೂ. 20,000 ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
  • ಈ ಧನಸಹಾಯವನ್ನು ಸರ್ಕಾರವು ಈ ಹಿಂದೆ ಬಾಂಡ್ ರೂಪದಲ್ಲಿ ನೀಡುತ್ತಿತ್ತು, ಆದರೆ ಈಗ ನಗದು ರೂಪದಲ್ಲಿಯೂ ಪಡೆಯುವ ಅವಕಾಶವಿದೆ.
  • ಸರ್ಕಾರದ ಇತ್ತೀಚಿನ ನಿಯಮ 43ರ ಆದೇಶದಂತೆ, ಅರ್ಹ ಮಹಿಳಾ ಕಾರ್ಮಿಕರಿಗೆ ಗರಿಷ್ಠ 50,000 ರೂ. ವರೆಗೆ ಸಹಾಯಧನವನ್ನು ಮಂಜೂರು ಮಾಡಬಹುದಾಗಿದೆ.
  • ಈ ಮೊತ್ತವು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಡಿ.ಬಿ.ಟಿ (DBT) ಮೂಲಕ ಜಮಾ ಆಗುತ್ತದೆ.

    ಸಹಾಯಧನ ಪಡೆಯಲು ನಿಯಮಗಳೇನು?

    • ನೋಂದಾಯಿತ ಮಹಿಳಾ ಕಾರ್ಮಿಕರು ಮೊದಲ ಎರಡು ಜೀವಂತ ಮಕ್ಕಳಿಗೆ ಮಾತ್ರ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ (ಎರಡನೇ ಹಕ್ಕು ಸಾಧನೆ ಸಹಾಯ ಧನ ಅರ್ಜಿಯು ಎರಡನೇ ಮಗುವಿನ ಹೆರಿಗೆ ಎಂದು ಹೇಳುವ ಅಫೀಡೆವಿಟ್ ಅನ್ನು ಒಳಗೊಂಡಿರಬೇಕು).
    • ಒಂದು ವೇಳೆ ಈಗಾಗಲೇ ನೋಂದಾಯಿತ ಮಹಿಳಾ ಕಾರ್ಮಿಕರಿಗೆ ಎರಡು ಮಕ್ಕಳಿದ್ದರೆ, ಅವಳು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗುವುದಿಲ್ಲ.
    • ಜನನ ಮತ್ತು ಮರಣದ ನೋಂದಾಣಾ ಅಧಿಕಾರಿಯಿಂದ ಜನನದ ಪ್ರಮಾಣ ಪತ್ರವನ್ನು ಪಡೆಯಬೇಕು. ಅಥವಾ ಸರ್ಕಾರಿ ಆಸ್ಪತ್ರೆ, ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಅಂಗೀಕೃತ ಆಸ್ಪತ್ರೆಗಳಲ್ಲಿ ದಾಖಲಾಗಿ ಆ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿದ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

    ಅರ್ಹತಾ ಮಾನದಂಡಗಳು

    ಅರ್ಜಿದಾರರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು ಮತ್ತು ಚಾಲ್ತಿಯಲ್ಲಿರುವ ಲೇಬರ್ ಕಾರ್ಡ್ ಹೊಂದಿರಬೇಕು.
  • ಮಹಿಳಾ ಕಾರ್ಮಿಕರಿಗೆ ಕನಿಷ್ಠ 18 ವರ್ಷ ತುಂಬಿರಬೇಕು.
  • ನೋಂದಣಿ ಮಾಡುವ ಮೊದಲು ಅಥವಾ ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ಹಿಂದಿನ 12 ತಿಂಗಳಲ್ಲಿ ಕನಿಷ್ಠ 90 ದಿನಗಳ ಕಾಲ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡಿರಬೇಕು.
  • ಈ ಸೌಲಭ್ಯವು ಮೊದಲ ಎರಡು ಹೆರಿಗೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಅರ್ಹ ಫಲಾನುಭವಿಗಳು ಈ ಯೋಜನೆಗೆ ಆನ್‌ಲೈನ್ ಅಥವಾ ಆಫ್‌ಲೈನ್ ಈ ಎರಡು ವಿಧಾನಗಳ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.
  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಚ್ಛಿಸುವವರು ಕರ್ನಾಟಕ ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್‌ sevasindhu.karnataka.gov.in/ ಗೆ ಭೇಟಿ ನೀಡಬೇಕು.
  • ಪೋರ್ಟಲ್‌ನಲ್ಲಿ "Maternity Assistance (ತಾಯಿ ಲಕ್ಷ್ಮೀ ಬಾಂಡ್‌ )" ಅಥವಾ "ಹೆರಿಗೆ ಸಹಾಯಧನ" ಎಂಬ ಸೇವೆಯನ್ನು ಹುಡುಕಿ ಆಯ್ಕೆ ಮಾಡಿಕೊಳ್ಳಬೇಕು.
  • ಅರ್ಜಿಯ ಜೊತೆಗೆ ಕೇಳಲಾದ ಅಗತ್ಯ ದಾಖಲೆಗಳನ್ನು ಸ್ಪಷ್ಟವಾಗಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವ ಮೂಲಕ ಅರ್ಜಿಯನ್ನು ಪೂರ್ಣಗೊಳಿಸಬಹುದು.
  • ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವವರು ನಿಮ್ಮ ಹತ್ತಿರದ ಅಥವಾ ಸ್ಥಳೀಯ ಕಾರ್ಮಿಕ ಇಲಾಖೆಯ ಕಚೇರಿಗೆ (ಕಾರ್ಮಿಕ ಭವನ) ಭೇಟಿ ನೀಡಿ ನಿಗದಿತ ನಮೂನೆಯ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.
  • ಈ ಯೋಜನೆಯ ಸೌಲಭ್ಯ ಪಡೆಯಲು ಮಗು ಜನಿಸಿದ 6 ತಿಂಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ, ವಿಳಂಬವಾದರೆ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ.
  • ಅಗತ್ಯವಿರುವ ದಾಖಲೆಗಳು

    • ಮಂಡಳಿ ನೀಡಿರುವ ಅಸಲಿ ಗುರುತಿನ ಚೀಟಿ
    • ಮಗುವಿನ ಜನನ ಪ್ರಮಾಣ ಪತ್ರ
    • ತಾಯಿಯ ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು).
    • ಬ್ಯಾಂಕ್ ಪಾಸ್‌ಬುಕ್ ಪ್ರತಿ
    • ತಾಯಿ ಕಾರ್ಡ್‌
    • ಕೆಲಸದ ದೃಢೀಕರಣ ಪತ್ರ (ಉದ್ಯೋಗ ದೃಢೀಕರಣ).
    • ಆಸ್ಪತ್ರೆಯ ಡಿಸ್ಚಾರ್ಜ್ ಸಾರಾಂಶ
    • ಇದು ಎರಡನೇ ಮಗುವಾಗಿದ್ದಲ್ಲಿ, ಅಫಿಡವಿಟ್ ಸಲ್ಲಿಸುವುದು ಕಡ್ಡಾಯ.


    ಇತರೆ ಸಂಬಂಧಿತ ಯೋಜನೆಗಳು

    • ತಾಯಿ ಮಗು ಸಹಾಯ ಹಸ್ತ ಯೋಜನೆಯಡಿ, ಮೂರು ವರ್ಷದೊಳಗಿನ ಮಕ್ಕಳ ಪೌಷ್ಟಿಕಾಂಶ ಮತ್ತು ಆರೋಗ್ಯದ ಆರೈಕೆಗಾಗಿ ಪ್ರತಿ ತಿಂಗಳು 500 ರೂ. ಸಹಾಯಧನವನ್ನು ನೀಡಲಾಗುತ್ತದೆ.
    • ಈ ಯೋಜನೆಯ ಮೂಲಕ ಒಂದು ಮಗುವಿಗೆ ವರ್ಷಕ್ಕೆ ಒಟ್ಟು 6,000 ರೂ.ವರೆಗೆ ಆರ್ಥಿಕ ನೆರವು ಲಭ್ಯವಾಗುತ್ತದೆ.
    • ಶೈಕ್ಷಣಿಕ ಧನಸಹಾಯ (ಕಲಿಕೆ ಭಾಗ್ಯ) ಯೋಜನೆಯಡಿ, ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ವಾರ್ಷಿಕ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
    • ವಿದ್ಯಾರ್ಥಿ ಓದುತ್ತಿರುವ ತರಗತಿ ಅಥವಾ ಕೋರ್ಸ್‌ಗೆ ಅನುಗುಣವಾಗಿ ವರ್ಷಕ್ಕೆ 2,000 ರೂ.ದಿಂದ 30,000 ರೂ.ಕ್ಕೂ ಹೆಚ್ಚು ಹಣವನ್ನು ಶಿಕ್ಷಣಕ್ಕಾಗಿ ಪಡೆಯಬಹುದು.
    • ಈ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಥವಾ ಯಾವುದೇ ಸಮಸ್ಯೆಗಳಿದ್ದಲ್ಲಿ ನಿಮ್ಮ ವ್ಯಾಪ್ತಿಯ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದು.