ಟ್ರ್ಯಾಕ್ಟರ್ ಸೇರಿದಂತೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಗಳಿಗೆ ಅರ್ಜಿ ಆಹ್ವಾನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ-Tractor subsidy scheme 2025
<Krushirushi> <Tractor subsidy scheme> <Tractor subsidy scheme 2024> <tractor> <mini tractor> <tractor subsidy scheme in Karnataka> <subsidy tractor price> <sc/st tractor subsidy in Karnataka> <mini tractor subsidy karnataka> <mini tractor subsidy in Karnataka 2024> <tractor subsidy list> <tractor subsidy apply online> <tractor subsidy Karnataka> <Horticulture department> <Horticulture> <Horticulture department schemes> <Thotagarike elake> <Natuonal horticulture mission> <ರೈತ> <ಹಣ> <ಸಂದಾಯ> <ಸಹಾಯಧನ> <ಟ್ರ್ಯಾಕ್ಟರ್> <ತೋಟಗಾರಿಕೆ ಇಲಾಖೆ> <ತೋಟಗಾರಿಕೆ ಇಲಾಖೆ ಯೋಜನೆಗಳು>

Horticulture department subsidy schemes-ತೋಟಗಾರಿಕೆ ಇಲಾಖೆಯಿಂದ 50% ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ
ರೈತರ ಆದಾಯವನ್ನು ಹೆಚ್ಚಿಸಲು ಮತ್ತು ತೋಟಗಾರಿಕಾ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ರಾಷ್ಟ್ರೀಯ ತೋಟಗಾರಿಕೆ ಮಂಡಳಿ (NHB) ಮೂಲಕ ಹಲವಾರು ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೈತರು ಶೇಡ್ ನೆಟ್(Shade net), ಹಸಿರು ಮನೆ(green house), ಪಾಲಿಹೌಸ್ ಕೃಷಿ(Poly house), ಶೀತಲೀಕರಣ ಘಟಕ(cold storage) ಮತ್ತು ಅಣಬೆ ಕೃಷಿ(Mushroom cultivation)ಸ್ಥಾಪನೆಗೆ ಶೇಕಡಾ 50 ರವರೆಗೆ ಸಬ್ಸಿಡಿ ಪಡೆಯಬಹುದು.
ಯಾವೆಲ್ಲಾ ಸೌಲಭ್ಯಗಳು ಲಭ್ಯವಿದೆ ?
ಶೇಡ್ ನೆಟ್(Shade net), ಹಸಿರು ಮನೆ(Green House) ಮತ್ತು ಪಾಲಿಹೌಸ್ ಕೃಷಿ(Poly House): ಈ ರೀತಿಯ ಕೃಷಿಗೆ ಸರ್ಕಾರವು ಶೇಕಡಾ 50 ರವರೆಗೆ ಸಬ್ಸಿಡಿ ನೀಡುತ್ತಿದೆ.
ತೆರೆದ ಜಮೀನಿನಲ್ಲಿ ಹಣ್ಣಿನ ಕೃಷಿ: ನೆಲ್ಲಿಕಾಯಿ, ಮಾವು, ಪೇರಲದಂತಹ ಹಣ್ಣುಗಳನ್ನು ಬೆಳೆಯುವ ರೈತರಿಗೆ ಶೇಕಡಾ 40 ರವರೆಗೆ ಸಬ್ಸಿಡಿ ನೀಡಲಾಗುತ್ತಿದೆ.
ಶೀತಲೀಕರಣ ಘಟಕ ಮತ್ತು ಅಣಬೆ ಕೃಷಿ: ಶೀತಲೀಕರಣ ಘಟಕ ಸ್ಥಾಪನೆಗೆ ಶೇಕಡಾ 30 ರಿಂದ 50 ರವರೆಗೆ ಮತ್ತು ಅಣಬೆ ಕೃಷಿಗೆ ಶೇಕಡಾ 40 ರವರೆಗೆ ಸಬ್ಸಿಡಿ ನೀಡಲಾಗುತ್ತಿದೆ.
ಕೃಷಿ ಸಂಬಂಧಿತ ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಹಣ್ಣು ಮತ್ತು ಹೂವುಗಳ ಕೃಷಿಯ ಜೊತೆಗೆ ಸಂಬಾರ ಪದಾರ್ಥಗಳು, ಆರೊಮ್ಯಾಟಿಕ್ ಮತ್ತು ಔಷಧೀಯ ಸಸ್ಯಗಳ ಕೃಷಿಗೂ ಸಬ್ಸಿಡಿ ನೀಡಲಾಗುತ್ತಿದೆ.
ಅರ್ಜಿ ಸಲ್ಲಿಸುವುದು ಹೇಗೆ ?
ರೈತರು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ಅಧಿಕೃತ ವೆಬ್‌ಸೈಟ್ www.nhb.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಯೋಜನೆಯ ವೆಚ್ಚಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಬೇಕಾಗುವ ದಾಖಲೆಗಳು
ಪ್ಯಾನ್ ಕಾರ್ಡ್
ಮತದಾರರ ಗುರುತಿನ ಚೀಟಿ
ಆಧಾರ್ ಕಾರ್ಡ್
ಪಾಲುದಾರಿಕೆ ಸಂಸ್ಥೆಯ ನೋಂದಣಿ (ಅನ್ವಯಿಸಿದರೆ)
ಕಂಪನಿ, ಸೊಸೈಟಿ, ಟ್ರಸ್ಟ್ ಇತ್ಯಾದಿಗಳ ನೋಂದಣಿ (ಅನ್ವಯಿಸಿದರೆ)
ಹೆಚ್ಚಿನ ಮಾಹಿತಿ:
ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ.
ಅಥವಾ, ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಈ ಯೋಜನೆಯು ರೈತರಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮತ್ತು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.
ಟ್ರ್ಯಾಕ್ಟರ್ ಸೇರಿದಂತೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಗಳಿಗೆ ಅರ್ಜಿ ಆಹ್ವಾನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ-Tractor subsidy scheme 2025
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಮುದಾಯ ಕೃಷಿಹೊಂಡ, ಕೃಷಿಹೊಂಡ, ಪ್ಯಾಕ್‌ಹೌಸ್, ಟ್ರ್ಯಾಕ್ಟರ್(Tractor) 20 ಪಿಟಿಒ ಎಚ್‌ಪಿ ಒಳಗಿನ ಪ್ರಾಥಮಿಕ ಸಂಸ್ಕರಣಾ ಘಟಕ ಮತ್ತು ಎಸ್.ಎಂ.ಎ.ಎಂ. ಯೋಜನೆಯಡಿಯಲ್ಲಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಹಾಗೆ ಫೈಬರ್ ದೋಟಿ(ಅಡಿಕೆ ಕಟಾವು ಮಾಡಲು) ಪ್ರಸಕ್ತ ಆರ್ಥಿಕ ಸಾಲಿನಲ್ಲಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ತಾಲ್ಲೂಕಿನ ಆಸಕ್ತ ರೈತರು ಅರ್ಜಿಯೊಂದಿಗೆ ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಪುಸ್ತಕದ ಜೆರಾಕ್ಸ್ ಪ್ರತಿ, ಜಾತಿ ಪ್ರಮಾಣ ಪತ್ರದೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಲ್ಲಾ ಪಂಚಾಯಿತಿ) ಕಚೇರಿಯಲ್ಲಿ ಹಾಗೂ ಹೋಬಳಿವಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
Horticulture department schemes-ತೋಟಗಾರಿಕೆ ಇಲಾಖೆಯಲ್ಲಿರುವ ವಿವಿಧ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ
ತೋಟಗಾರಿಕೆ ಇಲಾಖೆ(Horticulture department)ವತಿಯಿಂದ ತೋಟಗಾರಿಕೆ ಬೆಳೆ ಬೆಳೆಯುವ ರೈತ ಫಲಾನುಭವಿಗಳಿಗೆ 2024-25ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ,ತೋಟಗಾರಿಕೆ ಇಲಾಖೆಯಲ್ಲಿರುವ ಸಬ್ಸಿಡಿ ಯೋಜನೆಗಳನ್ನು ಚೆಕ್ ಮಾಡಿ
https://horticulturedir.karnataka.gov.in/info-2/Facilities+available+to+farmers/kn
ವಿವಿಧ ಯೋಜನೆಗಳು:
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತರಿ ಯೋಜನೆ:
ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ (ಬಾಳೆ, ಅಂಜೂರ, ದಾಳಿಂಬೆ, ನುಗ್ಗೆ, ಪೇರಲ, ಪಪ್ಪಾಯ, ತೆಂಗು, ಡ್ರಾಗನ್ ಫ್ರೂಟ್, ನೇರಳೆ, ಸಪೆÇೀಟ, ಮಾವು, ಸೀತಾಫಲ್, ಹುಣಸೆ, ಕರಿಬೇವು, ಮತ್ತು ಗುಲಾಬಿ ಹಾಗೂ ಇತರೆ) ಬೆಳೆಗಳಿಗೆ ಮತ್ತು ಬದುಗಳಲ್ಲಿ ತೆಂಗು ಸಸಿ ನಾಟಿ, ಕೃಷಿ ಹೊಂಡ, ಬದುಗಳ ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕ ಇತ್ಯಾದಿ ಅನುಷ್ಠಾನಗೊಳಿಸಲಾಗುವುದು.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ:
ಹೊಸ ಪ್ರದೇಶ ವಿಸ್ತರಣೆ, ಕೃಷಿಹೊಂಡ, ಈರುಳ್ಳಿ ಶೇಖರಣ ಘಟಕ, ನೆರಳು ಪರದೆ, ಪ್ಯಾಕ್‍ಹೌಸ್ ಮತ್ತು ತಳ್ಳುವ ಗಾಡಿ ವಿವಿಧ ಘಟಕಗಳಿಗೆ ಎಲ್ಲಾ ವರ್ಗದ ರೈತರಿಗೆ ಶೇ.50 ರಷ್ಟು ಲಭ್ಯತೆಯ ಮೇರೆಗೆ ಸಹಾಯಧನ ನೀಡಲಾಗುತ್ತದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ-ಹನಿ ನೀರಾವರಿ:
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ-ಹನಿ ನೀರಾವರಿ ಕಾರ್ಯಕ್ರಮದಡಿ ಸಹಾಯಧನ ನೀಡಲಾಗುತ್ತದೆ. ಸಾಮಾನ್ಯ ವರ್ಗದ ರೈತರಿಗೆ ಹೊಸದಾಗಿ ಅಳವಡಿಸುವ ಫಲಾನುಭವಿಗಳಿಗೆ ಮಾತ್ರ ಶೇ.75 ರಂತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಶೇ.90 ರಂತೆ ಸಹಾಯಧನ ವಿತರಿಸಲಾಗುವುದು.
ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ:
ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಕುರುಗೋಡು, ಕಂಪ್ಲಿ, ಸಂಡೂರು, ಸಿರುಗುಪ್ಪ ತಾಲ್ಲೂಕುಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯ ಮೇಗಾ ಮೈಕ್ರೊ ಆಗ್ರಿ-ಹಾರ್ಟಿ ಸಿಸ್ಟಮ್ ಕಾರ್ಯಕ್ರಮದಡಿ ಅನುಷ್ಠಾನಗೊಳಿಸಲಾಗುತ್ತಿರುವ ತೋಟಗಾರಿಕೆ ಬೆಳೆಗಳಾದ ಮಾವು, ಸೀತಾಫಲ, ಸೀಬೆ, ಗೇರು, ಹುಣಸೆ, ನೇರಳೆ ಮತ್ತು ಎಳೆನೀರು ತೆಂಗಿನಕಾಯಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮ ಮತ್ತು ಬೈಯೋಡೈಜಿಸ್ಟರ್ ಮತ್ತು ಅರಣ್ಯ ಬೆಳೆಗಳಾದ ಸಾಗುವಾನಿ, ಮಹಾಗನಿ ಮತ್ತು ಶ್ರೀಗಂಧ ಬೆಳೆಯಲು ಸಹ ಅರ್ಜಿ ಆಹ್ವಾನಿಸಲಾಗಿದೆ.
ಮೇಲ್ಕಂಡ ಎಲ್ಲಾ ಯೋಜನೆಗಳಡಿ ಅಲ್ಪಸಂಖ್ಯಾತರಿಗೆ ಶೇ.15, ವಿಕಲಾಂಗಚೇತನರಿಗೆ ಶೇ.5 ಮತ್ತು ರೈತ ಮಹಿಳೆಯರಿಗೆ ಶೇ.33 ರಷ್ಟು ಈ ಯೋಜನೆಗಳಡಿ ಅನುದಾನ ಮೀಸಲಿರಿಸಲಾಗಿದ್ದು, ಆಸಕ್ತ ರೈತ ಫಲಾನುಭವಿಗಳು ಈ ಯೋಜನೆಗಳ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಲಾಗಿದೆ. ಆಸಕ್ತ ತೋಟಗಾರಿಕೆ ರೈತ ಫಲಾನುಭವಿಗಳು ಆಯಾ ತಾಲ್ಲೂಕು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು.