ಕಾಲುದಾರಿ ಬಂಡಿಜಾಡು ಕುರಿತು ಹೈಕೊರ್ಟ್ ಮಹತ್ವದ ಆದೇಶ,ನಿಮ್ಮ ಗ್ರಾಮದ ಕಾಲು ದಾರಿ,ಬಂಡಿ ಜಾಡು ಇರುವ ಗ್ರಾಮನಕ್ಷೆ ಡೌನ್ಲೋಡ್ ಮಾಡಿಕೊಳ್ಳಿ-Village map
<Krushirushi> <ಕಾಲುದಾರಿ> <ಬಂಡಿದಾರಿ> <villagemap> <ಗ್ರಾಮನಕ್ಷೆ> <ಬಂಡಿಜಾಡು> <kaludari> <bandijadu>

Village map-ಕಾಲುದಾರಿ,ಬಂಡಿ ಜಾಡು ಕೂಡ ರಸ್ತೆಗಳೇ,ಯಾರೂ ಕೂಡ ತಡೆಯುವ ಹಾಗಿಲ್ಲ-ಹೈಕೊರ್ಟ್ ಮಹತ್ವದ ಆದೇಶ,ನಿಮ್ಮ ಗ್ರಾಮದ ಕಾಲು ದಾರಿ,ಬಂಡಿ ಜಾಡು ಇರುವ ಗ್ರಾಮನಕ್ಷೆ ಡೌನ್ಲೋಡ್ ಮಾಡಿಕೊಳ್ಳಿ
ರಸ್ತೆಗಳು ಎಂಬ ಪರಿಕಲ್ಪನೆಯಲ್ಲಿ ಕಾಲುದಾರಿ,
ಬಂಡಿ ಜಾಡು ಕೂಡಾ ಒಳಗೊಂಡಿರುತ್ತವೆ' ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಭೂಸ್ವಾಧೀನ ಕಾಯ್ದೆಯಡಿ ಜಮೀಣು ಸ್ವಾಧೀನಪಡಿಸಿಕೊಂಡ ಮಾತ್ರಕ್ಕೆ 'ಬಿ ಖರಾಬ್' ಭೂಮಿಯಲ್ಲಿ ಸಾರ್ವಜನಿಕರ ಹಕ್ಕನ್ನು ರದ್ದುಪಡಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
'ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 67ರ ಪ್ರಕಾರ ಎಲ್ಲಾ ಸಾರ್ವಜನಿಕ ರಸ್ತೆಗಳು, ಬೀದಿಗಳು, ಓಣಿಗಳು, ಪಥಗಳು, ಸೇತುವೆಗಳು, ಕಂದಕಗಳು, ತಡೆಗೋಡೆಗಳು ಮತ್ತು ಬೇಲಿಗಳು ಸರ್ಕಾರಕ್ಕೆ ಸೇರಿವೆ ಎಂದು ಸೂಚಿಸುತ್ತದೆ. ಕಾಲುದಾರಿ(Klau Dari) ಅಥವಾ ಬಂಡಿ ಜಾಡು (Bandi jadu)ಎಂಬ ಗಾಡಿ ಜಾಡು ಈ ಹಿಂದೆ ಕರೆಯಲಾಗುತ್ತಿದ್ದ ರಸ್ತೆಗಳೆನಿಸಿವೆ' ಎಂದು ನ್ಯಾಯಪೀಠ ಹೇಳಿದೆ.
'ಕಾಲುದಾರಿ, ಬಂಡಿ ಜಾಡು ಸ್ಥಳವನ್ನು ಗ್ರಾಮದ ನಕ್ಷೆಯಲ್ಲಿ ಮತ್ತು ಸಂಬಂಧಿತ ಕಂದಾಯ ದಾಖಲೆಗಳಲ್ಲಿ ಗುರುತಿಸಲಾಗಿದೆ. ಭೂಮಾಲೀಕರಿಗೆ ಸಂಬಂಧಿಸಿದಂತೆ ಈ ಭಾಗವನ್ನು 'ಬಿ ಖರಾಬ್' ಎಂದು ವರ್ಗೀಕರಿಸಲಾಗಿದೆ. ಈ ಜಮೀನುಗಳು ಸರ್ಕಾರಕ್ಕೆ ಸೇರಿದ್ದರೂ, ಸಾರ್ವಜನಿಕರ ಹಕ್ಕನ್ನೂ ನೀಡಲಾಗಿರುತ್ತದೆ' ಎಂದು ನ್ಯಾಯಪೀಠ ತಿಳಿಸಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 68ರ ಪ್ರಕಾರ 'ಬಿ
ಖರಾಬ್'ನಲ್ಲಿ ಸಾರ್ವಜನಿಕರ ಹಕ್ಕನ್ನು ಕಸಿದುಕೊಳ್ಳಲಾಗಿಲ್ಲ. ಈ ಸ್ಥಳದ ಮತ್ತು ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಅಥವಾ ಸಾರ್ವಜನಿಕರು ಕಾಲುದಾರಿ ಬಳಸಲು ಅರ್ಹರಾಗಿರುತ್ತಾರೆ. ಹಾಗಾಗಿ, ಅರ್ಜಿದಾರರು ಈ ಭೂಮಿಯನ್ನು ಮೀಸಲಿಡಬೇಕಾಗಿತ್ತು ಮತ್ತು ಅದನ್ನು ಮಾರುಕಟ್ಟೆ ಪ್ರಾಂಗಣದ ಉದ್ದೇಶಗಳಿಗಾಗಿ ಬಳಸಬಾರದು' ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
Village map-ನಿಮ್ಮ ಊರಿನ ಕಾಲುದಾರಿ,ಬಂಡಿದಾರಿ ತಿಳಿಯುವ ಡೈರೆಕ್ಟ್ ಲಿಂಕ್
https://landrecords.karnataka.gov.in/indexkn.aspx
ನಂತರ ಕಂದಾಯ ನಕ್ಷೆಗಳು ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೋಬಳಿ,ಗ್ರಾಮ select ಮಾಡಿ, search ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನಂತೆ ನಿಮ್ಮ ಗ್ರಾಮದ ಹೆಸರು ಕಾಣೆಸುತ್ತದೆ. ಆಗ ನಿಮ್ಮ ಗ್ರಾಮದ ಮುಂದಿರುವ pdf file ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದ ನಕ್ಷೆ ಕಾಣೆಸುತ್ತದೆ. ಅದರಲ್ಲಿ ಕಾಲುದಾರಿ,ಬಂಡಿದಾರಿ,ಕೆರೆ ಕಟ್ಟೆಯನ್ನು ನೋಡಬಹುದು.