Waqf property-ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ, ನಿಮ್ಮ ಹೊಲ ಮನೆ ಪಹಣೆಯಲ್ಲಿ ವಕ್ಫ್ ಬೊರ್ಡ್ ಹೆಸರಿದೆಯೆ ಹೀಗೆ ಚೆಕ್ ಮಾಡಿಕೊಳ್ಳಿ

ವಕ್ಫ್ (ತಿದ್ದುಪಡಿ) ಮಸೂದೆ 2024, 1995 ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆಯಾಗಿದೆ. ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನ ಇಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.(Waqf property)

Waqf property-ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ, ನಿಮ್ಮ ಹೊಲ ಮನೆ ಪಹಣೆಯಲ್ಲಿ ವಕ್ಫ್ ಬೊರ್ಡ್ ಹೆಸರಿದೆಯೆ ಹೀಗೆ ಚೆಕ್ ಮಾಡಿಕೊಳ್ಳಿ

Waqf property-ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ

ವಕ್ಫ್ ಮಸೂದೆ(Waqf amendment bill-2025) ಎಂದರೇನು?

ವಕ್ಫ್ (ತಿದ್ದುಪಡಿ) ಮಸೂದೆ 2024, 1995 ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆಯಾಗಿದೆ. ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನ ಇಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ವಕ್ಫ್ ಆಸ್ತಿಗಳ ನಿರ್ವಹಣೆ, ಪಾರದರ್ಶಕತೆ ಮತ್ತು ದುರುಪಯೋಗ ತಡೆಗಟ್ಟುವಿಕೆಗಾಗಿ ನಿಯಮಗಳನ್ನು ಬಿಗಿಗೊಳಿಸುವುದು ಇದರ ಉದ್ದೇಶವಾಗಿದೆ. ಇದು ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು ಮತ್ತು ಮಹಿಳಾ ಸದಸ್ಯರನ್ನು ಸೇರಿಸುವುದು, ಕಲೆಕ್ಟರ್‌ಗೆ ಆಸ್ತಿಯನ್ನು ಸಮೀಕ್ಷೆ ಮಾಡುವ ಹಕ್ಕನ್ನು ನೀಡುವುದು ಮತ್ತು ವಕ್ಫ್ ನ್ಯಾಯಮಂಡಳಿಯ ನಿರ್ಧಾರಗಳನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ನಿಬಂಧನೆಯನ್ನು ಒಳಗೊಂಡಿದೆ.

Waqf property-ನಿಮ್ಮ ಹೊಲ ಮನೆ ಪಹಣೆಯಲ್ಲಿ ವಕ್ಫ್ ಬೊರ್ಡ್ ಹೆಸರಿದೆಯೆ ಹೀಗೆ ಚೆಕ್ ಮಾಡಿಕೊಳ್ಳಿ

ನಿಮಗೆ ಗೊತ್ತಿಲ್ಲದೇ ಹಾಗೆ ನಿಮ್ಮ ಪಹಣಿಯಲ್ಲಿ(RTC) ಅವರ ಹೆಸರು ಹಾಕಿದ್ದಾರೆ ಎಂಬುದನ್ನು ರೈತರು ಒಮ್ಮೆ ಪರಿಶೀಲಿಸಿ. ಈ ಕೆಲಸವನ್ನು ಪ್ರತಿಯೊಂದು ರೈತರು ಆದಷ್ಟು ಬೇಗ ಮಾಡಬೇಕು. ಈ ಮಾಹಿತಿ ನಿಮ್ಮ ಕಾನೂನು ಹೋರಾಟಕ್ಕೆ ನಿರ್ಣಾಯಕ ಹಾಗೂ ಸಾಕ್ಷ್ಯ ಸಂಗ್ರಹಿಸಲು ಅಗತ್ಯವಾದ ಪ್ರಕ್ರಿಯೆ ಆಗಿರುತ್ತದೆ. ಆದ್ದರಿಂದ ಇಂದೇ ನಿಮ್ಮ ಪಹಣಿಯ(Uthara) ಕಾಪಿ ಪಡೆದು ಪರಿಶೀಲನೆ ಮಾಡಿ, ಒಂದು ವೇಳೆ ಯಾರಾದರು ಎಂದು ನಮೂದಿಸಲಾಗಿದ್ದಲ್ಲಿ ಕೂಡಲೇ ಜಮೀನಿನ ದಾಖಲೆ(Land records) ಹಾಗೂ ಪಹಣಿಯೊಂದಿಗೆ ತಹಶಿಲ್ದಾರ್ ಅಥವಾ ಜಿಲ್ಲಾದಿಕಾರಿಗಳಿಗೆ ದೂರು ಸಲ್ಲಿಸಿ

ನಿಮ್ಮ ಪಹಣೆಯಲ್ಲಿ(pahani) ಯಾರ ಹೆಸರಿದೆ ಎಂದು ತಿಳಿದುಕೊಳ್ಳಲು ಮೊದಲು ಈ ಕೆಳಗಿನ ಲಿಂಕ್ ಮೋಲೆ ಕ್ಲಿಕ್ ಮಾಡಿ

https://landrecords.karnataka.gov.in/Service2/

 ನಂತರ ನಿಮ್ಮ ಜಿಲ್ಲೆ,ತಾಲೂಕು, ಹೋಬಳಿ,ಗ್ರಾಮ select ಮಾಡಿ ಸರ್ವೆ ನಂಬರ್ ನಂಬರ್ ನಮೂದಿಸಿ Go ಮೇಲೆ ಕ್ಲಿಕ್ ಮಾಡಿ

  ನಂತರ Surnoc,hissa,period ಹಾಗೂ year ಆಯ್ಕೆ ಮಾಡಿ
Fetch details ಮೇಲೆ ಕ್ಲಿಕ್ ಮಾಡಿ

ನಂತರ view ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಪಹಣೆ ತೆರೆದುಕೊಳ್ಳುತ್ತದೆ

ಪಹಣೆಯಲ್ಲಿ ಮುಟೇಶನ್ ಒಂದನೇ ಕಾಲಂನಲ್ಲಿ ಸರ್ವೆ ನಂಬರ್(Survey number) ಹಿಸ್ಸಾ ನಂಬರ್(Hissa number) ನಲ್ಲಿರುವ ಮಾಲೀಕರ ಹೆಸರು ಇರುತ್ತದೆ. ಎರಡನೇ ಕಾಲದಲ್ಲಿ ಸರ್ವೆ ನಂಬರ್ ಗಳು ಕರಾಬು ಜಮೀನು ಕಂದಾಯ ವಿವರ ಹಾಗೂ ಜಮೀನಿನ ಮಣ್ಣಿನ ನಮೂನೆ ಹೇಗೆ ಎಂಬ ಮಾಹಿತಿ ಇರುತ್ತದೆ.

ಸರ್ವೆ ನಂಬರಿನಲ್ಲಿ ಯಾವ ಮಾಲೀಕರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣುತ್ತದೆ. ಸರ್ವೆ ನಂಬರ್ ಹಾಗೂ ಸ್ವಾಧೀನದಾರರ ಹೆಸರು ಮತ್ತು ವಿಸ್ತೀರ್ಣದ ಮಾಹಿತಿ ಇರುತ್ತದೆ.