ಪಹಣಿಗೆ ಆಧಾರ್ ಜೋಡಣೆಯಿಂದ ರೈತರಿಗಾಗುವ ಅನುಕೂಲಗಳೇನು.? Aadhaar ಲಿಂಕ್ ಆಗಿರುವುದನ್ನು ಚೆಕ್ ಮಾಡುವುದು ಹೇಗೆ?
ಪಹಣಿಗೆ ಆಧಾರ್ ಜೋಡಣೆಯಿಂದ ರೈತರಿಗಾಗುವ ಅನುಕೂಲಗಳೇನು.? Aadhaar ಲಿಂಕ್ ಆಗಿರುವುದನ್ನು ಚೆಕ್ ಮಾಡುವುದು ಹೇಗೆ?
ಕಂದಾಯ ಇಲಾಖೆ ಪ್ರಕಟಣೆಯ ಪ್ರಕಾರ, ರೈತರು ತಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಪಹಣಿಗಳಿಗೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಲಿಂಕ್ ಮಾಡಿಕೊಳ್ಳಬೇಕು. ಗ್ರಾಮೀಣ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಆಂದೋಲನ ಮಾದರಿಯಲ್ಲಿ RTCಗಳಿಗೆ ಆಧಾರ್ ಲಿಂಕ್ ಮಾಡುವ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಹಣಿಗೆ ಆಧಾರ್ ಜೋಡಣೆ ಪ್ರಕ್ರಿಯೆಯಿಂದ ರಾಜ್ಯದಲ್ಲಿನ ಕೃಷಿ ಭೂಮಿ, ಕೃಷಿಕರು, ಭೂಮಿ ಬಳಕೆ ಉದ್ದೇಶ, ಭೂಮಿಯ ಸ್ವರೂಪ ಬದಲಾವಣೆಯಂತಹ ಅಂಶಗಳನ್ನು ನಿಖರವಾಗಿ ಗುರುತಿಸಲು ಅನುಕೂಲವಾಗಲಿದೆ. ಪಹಣಿಗೆ ಆಧಾರ್ ಜೋಡಣೆ ಪ್ರಕ್ರಿಯೆಗೆ ರೈತರು ಸ್ವಯಂಪ್ರೇರಿತವಾಗಿ ಸಹಕರಿಸಬೇಕು. ಇದರಿಂದ ತಮ್ಮ ಭೂಮಿ ಸುರಕ್ಷತೆ ಹೆಚ್ಚಿಸಿಕೊಳ್ಳುವ ಜತೆಗೆ ನಾನಾ ಸವಲತ್ತು ಪಡೆಯಲು ಅನುಕೂಲವಾಗಲಿದೆ
ಪ್ರಯೋಜನಗಳು
* ಯಾರದ್ದೋ ಆಸ್ತಿಯನ್ನು ಯಾರೋ ಅಕ್ರಮವಾಗಿ ಮಾರಾಟ ಮಾಡುವುದಕ್ಕೆ ಕಡಿವಾಣ
* ಕೃಷಿ ಭೂಮಿಯಲ್ಲಿ ಏನೇ ಬದಲಾವಣೆಗಳಾದರೂ ತಕ್ಷಣ ಮಾಹಿತಿ ಲಭ್ಯ
* ಮೂಲ ಮಾಲೀಕರ ಸಮ್ಮತಿ ಇಲ್ಲದೆ ಭೂಮಿ ಪರಭಾರೆ ಸಾಧ್ಯವಿಲ್ಲ
* ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಸಂಪರ್ಕಕ್ಕೂ ಆಧಾರವಾಗಿ ಪರಿಗಣಿಸಬಹುದು
* ಬೆಳೆ ನಷ್ಟ ಸಮೀಕ್ಷೆ- ಪರಿಹಾರಕ್ಕೆ ಬಳಸುವ 'ಫ್ರೂಟ್ಸ್' ಆಯಪ್‌ಗೂ ಸಹಕಾರಿ
* ಅರ್ಹ ರೈತರಿಗೆ ನಾನಾ ಸವಲತ್ತು ತಲುಪಿಸಲು ಉಪಯುಕ್ತ
ಆಧಾರ್ ಲಿಂಕ್ ಅಗತ್ಯವಿರುವ ಕಾರಣಗಳು:
ಜಮೀನಿನ ನೈಜ ಮಾಲೀಕತ್ವ ಖಚಿತಪಡಿಸಿಕೊಳ್ಳಲು:
ನಿಖರವಾದ ಆಕಾರ್‌ಬಂಡ್ ಮಾಹಿತಿಯಿಲ್ಲದೆ RTC/ಪಹಣಿಗೆ ಆಧಾರ್ ಲಿಂಕ್ ಸಾಧ್ಯವಿಲ್ಲ.
ಬಾಕಿ ಪೋಡಿ ಅಥವಾ ದುರಸ್ತಿ ಪ್ರಕರಣಗಳನ್ನು ನಿರ್ವಹಿಸಲು ನಿಖರ ಮಾಹಿತಿ ಅಗತ್ಯ.
ಡಿಜಿಟಲೀಕರಣ ಯೋಜನೆ:
ಮುಂದಿನ 2 ತಿಂಗಳಲ್ಲಿ 65 ಲಕ್ಷ ಆಕಾರ್‌ಬಂಡ್ ಡಿಜಿಟಲೀಕರಣಗೊಳ್ಳಲಿದೆ.
ಈ ಕಾರ್ಯಕ್ಕಾಗಿ ಪಹಣಿ/RTC ಗೆ ಆಧಾರ್ ಲಿಂಕ್ ಮಾಡುವುದು ಮುಖ್ಯ.
ರೈತರಿಗೆ ಸಹಾಯ:
ಕಂದಾಯ ಇಲಾಖೆ ರೈತರ ಜಮೀನಿನ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಿಸಬಹುದು.
ಪಹಣಿ/RTC/ಉತಾರ್ ಗೆ ಆಧಾರ್ ಲಿಂಕ್ ಸ್ಥಿತಿ ಪರಿಶೀಲಿಸುವ ವಿಧಾನ:
Step 1:
ಭೂಮಿ ವೆಬ್‌ಸೈಟ್‌ನಲ್ಲಿ "RTC Aadhaar Link Status" ಲಿಂಕ್ ಕ್ಲಿಕ್ ಮಾಡಿ.
ಜಮೀನಿನ ಮಾಲೀಕರ ಮೊಬೈಲ್ ನಂಬರ್ ನಮೂದಿಸಿ, ಕ್ಯಾಪ್ಚ್ ಕೋಡ್ ಹಾಕಿ SEND OTP ಕ್ಲಿಕ್ ಮಾಡಿ.
ಮೊಬೈಲ್‌ಗೆ ಬಂದ 6 ಅಂಕಿಯ OTP ಹಾಕಿ LOGIN ಕ್ಲಿಕ್ ಮಾಡಿ.
Step 2:
ಅರ್ಜಿದಾರರ ಆಧಾರ್ ನಂಬರ್ ಮತ್ತು ಕಾರ್ಡಿನ ಹೆಸರನ್ನು ಭರ್ತಿ ಮಾಡಿ Verify ಕ್ಲಿಕ್ ಮಾಡಿ.
"ಆಧಾರ್ ಯಶಸ್ವಿಯಾಗಿ ಪರಿಶೀಲಿಸಲಾಗಿದೆ" ಎಂದು ಸಂದೇಶ ಕಾಣುತ್ತದೆ.
Step 3:
"ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ" ಬಟನ್ ಕ್ಲಿಕ್ ಮಾಡಿ.
ಆಧಾರ್ ನಂಬರ್ ಹಾಕಿ OTP ಪಡೆಯಿರಿ, ಮೊಬೈಲ್‌ಗೆ ಬಂದ OTP ನಮೂದಿಸಿ ಸಲ್ಲಿಸು ಕ್ಲಿಕ್ ಮಾಡಿ.
Step 4:
ಮುಖಪುಟದ ಎಡಬದಿಯಲ್ಲಿ "Link Aadhaar" ಆಯ್ಕೆಯನ್ನು ಕ್ಲಿಕ್ ಮಾಡಿ.
ನಿಮ್ಮ ಸರ್ವೆ ನಂಬರ್ ಟಿಕ್ ಮಾಡಿ Link ಕ್ಲಿಕ್ ಮಾಡಿ.
ಮೊಬೈಲ್‌ಗೆ ಬಂದ OTP ನಮೂದಿಸಿ Yes/ಹೌದು ಕ್ಲಿಕ್ ಮಾಡಿದರೆ, "ಈ ಸರ್ವೆ ನಂಬರ್ ಈಗಾಗಲೇ ಲಿಂಕ್ ಆಗಿದೆ" ಎಂಬ ಸಂದೇಶ ಕಾಣಿಸುತ್ತೇ, ಪಹಣಿಗೆ ಆಧಾರ್ ಲಿಂಕ್ ಆಗಿರುವುದು ದೃಢವಾಗುತ್ತದೆ.
ಈ ಕ್ರಮದ ಮೂಲಕ ರೈತರು ತಮ್ಮ ಪಹಣಿ/RTC ಆಧಾರ್ ಲಿಂಕ್ ಆಗಿದೆಯೇ ಅಥವಾ ಇಲ್ಲವೆ ಎಂದು ಸುಲಭವಾಗಿ ಪರಿಶೀಲಿಸಬಹುದು.

