Without interest loan-5 ಲಕ್ಷದವರೆಗೆ ಬಡ್ಡಿರಹಿತ ಬೆಳೆ ಸಾಲ, ನಿಮ್ಮ ಸರ್ವೆ ನಂಬರ್ ಮೇಲೆ ಎಷ್ಟು ಸಾಲ ಇದೆ? ಇನ್ನೂ ಎಷ್ಟು ಸಾಲ ಸಿಗಲಿದೆ ಚೆಕ್ ಮಾಡಿ

<Krushirushi> <ಸರ್ವೆನಂಬರ್> <Surveynumber> <ಬೆಳೆಸಾಲ> <croploan> <bele sala> <crop loan> <belesala> <ಬೆಳೆ ಸಾಲ> <ರೈತ> <ಹಣ> <ಸಂದಾಯ> <ಸಹಾಯಧನ> <ಸಾಲ> <bele sala manna> <bele sala manna status> <ಬೆಳೆ ಸಾಲ ಮನ್ನಾ> <ಆಧಾರ್> <ಬ್ಯಾಂಕ್> <crop loan status 2024> <kisan credit card loan>

Without interest loan-5 ಲಕ್ಷದವರೆಗೆ ಬಡ್ಡಿರಹಿತ ಬೆಳೆ ಸಾಲ, ನಿಮ್ಮ ಸರ್ವೆ ನಂಬರ್ ಮೇಲೆ ಎಷ್ಟು ಸಾಲ ಇದೆ? ಇನ್ನೂ ಎಷ್ಟು ಸಾಲ ಸಿಗಲಿದೆ ಚೆಕ್ ಮಾಡಿ

Without interest loan-5 ಲಕ್ಷದವರೆಗೆ ಬಡ್ಡಿರಹಿತ ಬೆಳೆ ಸಾಲ


ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ(Farmer) ಭರ್ಜರಿ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ 5 ಲಕ್ಷವರೆಗೆ ಬಡ್ಡಿ ರಹಿತ ಸಾಲ(Without interest loan)ಸೌಲಭ್ಯ ನೀಡಲಿದೆ.

ಹೌದು, ಈ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ಹವಾಮಾನ ವೈಪರೀತ್ಯ, ಅನಿಶ್ಚಿತ ಫಸಲು ಹಾಗೂ ರೋಗರುಜಿನಗಳಿಂದ ತತ್ತರಿಸಿಹೋಗಿರುವ ಕೃಷಿ ಕ್ಷೇತ್ರದಲ್ಲಿ ಮತ್ತೆ ಉತ್ಸಾಹವನ್ನು ಕಾಣಲು ನಮ್ಮ ಸರ್ಕಾರ ಟೊಂಕ ಕಟ್ಟಿ ನಿಂತಿದೆ.

ಅನ್ನದಾತರ ಕೈಗಳಿಗೆ ಹಣ ನೀಡಿ ಅದನ್ನು ಕೃಷಿಯಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸಿ, ಆ ಮೂಲಕ ನಾಡಿನ ಆರ್ಥಿಕತೆಗೆ ಬಲತುಂಬುವುದು ನಮ್ಮ ಸರ್ಕಾರದ ಆಶಯ ಎಂದು ಹೇಳಿದ್ದಾರೆ.

5 ಲಕ್ಷ ರೂ.ಗಳವರೆಗೆ ಶೂನ್ಯ ಬಡ್ಡಿ (Zero interest loan)ರೂಪದಲ್ಲಿ ನೀಡಲಾಗುವ ಸಾಲವನ್ನು ಸಹಕಾರಿ ಕೃಷಿ ಬ್ಯಾಂಕ್ (Primary cooperative society)ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗಳಿಗೆ ವಿಸ್ತರಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿಯಾಗಿ 38 ಕೋಟಿ ರೂ. ಮೀಸಲಿರಿಸಲಾಗಿದೆ.ರೈತರ ಕಾಳಜಿ ಎನ್ನುವುದು ನಮ್ಮ ಭಾಷಣದ ಸರಕಲ್ಲ, ಆಡಳಿತದ ಕೇಂದ್ರಬಿಂದು ಎಂಬುದನ್ನು ಮತ್ತೆ ಸಾಬೀತು ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಿಮ್ಮ ಸರ್ವೆ ನಂಬರ್ ಮೇಲೆ ಎಷ್ಟು ಸಾಲ ಇದೆ? ಇನ್ನೂ ಎಷ್ಟು ಸಾಲ ಸಿಗಲಿದೆ ಚೆಕ್ ಮಾಡಿ

ರೈತರು ತಮ್ಮ ಮೊಬೈಲ್ ನಲ್ಲಿ ಸರ್ವೆ ನಂಬರ್ ನಮೂದಿಸಿ ಸಾಲದ ವಿವರದ ಇತಿಹಾಸ ತಿಳಿದುಕೊಳ್ಳಲು 

https://landrecords.karnataka.gov.in/Service2/

 ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನಂತೆ ಭೂಮಿ ತಂತ್ರಾಂಶ ತೆರೆದುಕೊಳ್ಳುತ್ತದೆ. 

 ನಂತರ ನಿಮ್ಮ ಜಿಲ್ಲೆ,ತಾಲೂಕು, ಹೋಬಳಿ,ಗ್ರಾಮ select ಮಾಡಿ ಸರ್ವೆ ನಂಬರ್ ನಂಬರ್ ನಮೂದಿಸಿ Go ಮೇಲೆ ಕ್ಲಿಕ್ ಮಾಡಿ

  ನಂತರ Surnoc,hissa,period ಹಾಗೂ year ಆಯ್ಕೆ ಮಾಡಿ
Fetch details ಮೇಲೆ ಕ್ಲಿಕ್ ಮಾಡಿ

ನಂತರ view ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಪಹಣೆ ತೆರೆದುಕೊಳ್ಳುತ್ತದೆ

ಇದನ್ನೂ ಓದಿ

ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿರುವ 31 ಸಾವಿರ ರೈತರ 232 ಕೋಟಿ ಸಾಲಮನ್ನಾ, ಯಾವ ರೈತರ ಎಷ್ಟು ಸಾಲಮನ್ನಾ ಆಗಲಿದೆ ಹೀಗೆ ಚೆಕ್ ಮಾಡಿ-Bele sala manna list - https://krushirushi.in/Bele-sala-manna-list-1427 

 ಮುಟೇಶನ್ ಒಂದನೇ ಕಾಲಂನಲ್ಲಿ ಸರ್ವೆ ನಂಬರ್(Survey number) ಹಿಸ್ಸಾ ನಂಬರ್(Hissa number) ನಲ್ಲಿರುವ ಮಾಲೀಕರ ಹೆಸರು ಇರುತ್ತದೆ. ಎರಡನೇ ಕಾಲದಲ್ಲಿ ಸರ್ವೆ ನಂಬರ್(Survey number) ಗಳು ಕರಾಬು ಜಮೀನು ಕಂದಾಯ ವಿವರ ಹಾಗೂ ಜಮೀನಿನ ಮಣ್ಣಿನ ನಮೂನೆ ಹೇಗೆ ಎಂಬ ಮಾಹಿತಿ ಇರುತ್ತದೆ.

ಸರ್ವೆ ನಂಬರಿನಲ್ಲಿ(Survey number) ಯಾವ ಮಾಲೀಕರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣುತ್ತದೆ. ಸರ್ವೆ ನಂಬರ್ ಹಾಗೂ ಸ್ವಾಧೀನದಾರರ ಹೆಸರು ಮತ್ತು ವಿಸ್ತೀರ್ಣದ ಮಾಹಿತಿ ಇರುತ್ತದೆ.

  ಇದರೊಂದಿಗೆ 11ನೇ ಕಾಲಂನಲ್ಲಿ ಋಣಗಳು ಕಾಲಂ ಕೆಳಗಡೆ ಯಾವ ಬ್ಯಾಂಕಿನಿಂದ ಎಷ್ಟು ಸಾಲ(crop loan) ಪಡೆಯಲಾಗಿದೆ.  ಎಂಬ ಮಾಹಿತಿ ಇರುತ್ತದೆ.ಕಿಸಾನ್ ಕ್ರೆಡಿಟ್ ಕಾರ್ಡ್ ನಲ್ಲಿ 3 ಲಕ್ಷದವರೆಗೆ ಸಾಲ ಪಡೆಯಲು ಅವಕಾಶ ಇರುವುದರಿಂದ,ಸಾಲದ ವಿವರ ನೊಡಿಕೊಂಡು ಉಳಿದ ಸಾಲ ಪಡೆಯಬಹುದು.

ಇದನ್ನೂ ಓದಿ

Waqf board property-ಸರ್ವೆ ನಂಬರ್ ಹಾಕಿ ನಿಮ್ಮ ಪಹಣೆ ನಿಮ್ಮ ಹೆಸರಿನಲ್ಲಿದೆಯೊ ಅಥವಾ ಬೇರೆಯವರ ಹೆಸರಿನಲ್ಲಿದೆಯೊ ಚೆಕ್ ಮಾಡಿಕೊಳ್ಳಿ - https://krushirushi.in/Waqf-board-property-1672