Yugadi good news-ಯುಗಾದಿ ಹಬ್ಬಕ್ಕೆ ರೈತರಿಗೆ ಡಬಲ್ ಗುಡ್ ನ್ಯೂಸ್ ಕೊಟ್ಟ ಕೃಷಿ ಸಚಿವ ಚೆಲುವರಾಯ ಸ್ವಾಮಿ
ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ರೈತರಿಗೆ ಡಬಲ್ ಖುಷಿ ಸುದ್ದಿ ಕೊಟ್ಟಿದ್ದಾರೆ.

Yugadi good news-ಯುಗಾದಿ ಹಬ್ಬಕ್ಕೆ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಕೃಷಿ ಸಚಿವ ಚೆಲುವರಾಯ ಸ್ವಾಮಿ
ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ರೈತರಿಗೆ ಡಬಲ್ ಖುಷಿ ಸುದ್ದಿ ಕೊಟ್ಟಿದ್ದಾರೆ. ನಗರದಲ್ಲಿ ಇಂದು ನಡೆದ ಸಭೆಯಲ್ಲಿ ರಾಗಿ, ಜೋಳ, ತೊಗರಿಗೆ MSP ದರ ನಿಗದಿ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ರಾಗಿ, ಜೋಳ, ತೊಗರಿ ಖರೀದಿ ಮಾಡುತ್ತಿದ್ದೇವೆ. 7550 ರೂ. ತೊಗರಿಗೆ ಕೇಂದ್ರ ನಿಗದಿ ಮಾಡಿದೆ. ಇದಕ್ಕೆ 450 ರೂ. ಹೆಚ್ಚುವರಿ ಕೊಟ್ಟು ಖರೀದಿ ಮಾಡುತ್ತಿದ್ದೇವೆ. ಜಿಯೋ ಟ್ಯಾಗ್ ಕೊಟ್ಟು ಖರೀದಿ ಮಾಡಲಾಗುತ್ತೆ. ರಾಗಿಯನ್ನ 20 ಕ್ವಿಂಟಾಲ್ ನಿಂದ 30 ಕ್ವಿಂಟಾಲ್ ಖರೀದಿಗೆ ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನು ಇದೇ ವೇಳೆ ರೈತರಿಗೆ ಮತ್ತೊಂದು ಗುಡನ್ಯೂಸ್ ನೀಡಿದ್ದಾರೆ. ಬೆಂಗಳೂರಿನ ಕಾವೇರಿ ಆಸ್ಪತ್ರೆಯು CSR ಫಂಡ್ ನಲ್ಲಿ 100 ಜನ ರೈತರಿಗೆ ಮಂಡಿ ಚಿಪ್ಪು ಸಮಸ್ಯೆಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿದ್ದಾರೆ. 15 ಕೋಟಿ ರೂ. ವೆಚ್ಚದಲ್ಲಿ 100 ರಿಂದ 150 ಜನ ರೈತರಿಗೆ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ. ರೋಬೋಟಿಕ್ ಮೂಲಕ ಚಿಕಿತ್ಸೆ ನೀಡುತ್ತಿದ್ದು, ಓರ್ವ ರೋಗಿಗೆ 3- 4 ಲಕ್ಷ ಆಗುತ್ತದೆ. ಆಯಾ ತಾಲ್ಲೂಕು, ಜಿಲ್ಲಾ ಹೆಡ್ ಕ್ವಾಟ್ರಸ್ ನಿಂದ ಪ್ರಕ್ರಿಯೆ ಶುರುವಾಗಲಿದೆ ಎಂದಿದ್ದಾರೆ.
ಚಿಕಿತ್ಸೆ ಒಳಗಾಗುವವಿಗೆ ಬೇಕಾಗುವ ದಾಖಲೆಗಳು:-
ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ
MSP for bilijola-ಕನಿಷ್ಟ ಬೆಂಬಲ ಯೋಜನೆಯಡಿ ಬಿಳಿಜೋಳ ಖರೀದಿ,ಮಾರಾಟ,ಹಣ ಪಾವತಿಯ ಸಂಪೂರ್ಣ ಮಾಹಿತಿ
ರಾಜ್ಯ ಸರ್ಕಾರ 2024-25ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಬಿಳಿಜೋಳ ಖರೀದಿಸಲು ಆದೇಶ ಮಾಡಿದೆ.
ಜಿಲ್ಲಾ ಟಾಸ್ಕ್‌ಫೋರ್ಸ್‌ಗಳ ಶಿಫಾರಸ್ಸಿನಂತೆ ವಿಜಯಪುರ, ಕಲಬುರಗಿ, ಬಾಗಲಕೋಟೆ, ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ, ಬೆಳಗಾವಿ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ರೈತಬಾಂಧವರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಬಿಳಿಜೋಳವನ್ನು ಮಾರಾಟ ಮಾಡದೇ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.
ಬೆಂಬಲ ಬೆಲೆ ಎಷ್ಟು?
ಹೈಬ್ರಿಡ್ ಜೋಳ ರೂ.3,371/- (ಪ್ರತಿ ಕ್ವಿಂಟಾಲ್ ಗೆ)
ಮಾಲ್ದಂಡಿ ಜೋಳ ರೂ.3,421/- (ಪ್ರತಿ ಕ್ವಿಂಟಾಲ್ಗೆ)
ಪ್ರತಿ ಎಕರೆಗೆ ನಿಗದಿಪಡಿಸಿರುವ ಪ್ರಮಾಣ : 20 ಕ್ವಿಂಟಾಲ್
ಪ್ರತಿ ರೈತರಿಂದ ಖರೀದಿ ಪ್ರಮಾಣ : 150 ಕ್ವಿಂಟಾಲ್
ಮಾರಾಟ ಹೇಗೆ?
ಫೂಟ್ಸ್ ಐ.ಡಿ. ಯೊಂದಿಗೆ ಬಯೋಮೆಟ್ರಿಕ್ ನೀಡಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿ. ಅಧಾರ್ ಜೋಡಣೆಯಾದ ಎನ್.ಸಿ.ಪಿ.ಐ. ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಖಾತರಿಪಡಿಸಿ. ಎಫ್.ಎ.ಕ್ಕೂ ಗುಣಮಟ್ಟದ ಬಗ್ಗೆ ಗ್ರೇಡರ್ ಪರಿಶೀಲಿಸಿ ದೃಢೀಕರಿಸಿದ ನಂತರ ಖರೀದಿ.ಮದ್ಯವರ್ತಿಗಳು ಖರೀದಿ ಕೇಂದ್ರಗಳನ್ನು ದುರ್ಬಳಕೆ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಸಲಾಗುವುದು.
ಹಣ ಪಾವತಿ ಹೇಗೆ?
ರೈತರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಹಣ ನೇರವಾಗಿ ಜಮೆ ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಉಚಿತ ದೂರವಾಣಿ ಸಂಖ್ಯೆಗೆ 1800 425 1552 ಕರೆ ಮಾಡಬಹುದಾಗಿದೆ.