Bangalore krishimela 2024-ಬೆಂಗಳೂರು ಕೃಷಿಮೇಳಕ್ಕೆ ದಿನಾಂಕ ಪ್ರಕಟ,ಈ ವರ್ಷದ ವಿಶೇಷತೆಗಳೇನು?
<Krushirushi> <Bangalore Krushimela 2024> <Bengaluru krishimela 2024> <Bangalore Krushi meal> <Krushimela 2024> <Gkvk krushimela> <ಜಿಕೆವಿಕೆ ಕೃಷಿಮೇಳ> <ಜಿಕೆವಿಕೆ> <Gkvk> <ಕೃಷಿಮೇಳ> <ಬೆಂಗಳೂರು ಕೃಷಿಮೇಳ> <ಬೆಂಗಳೂರು ಕೃಷಿಮೇಳ 2024> <Bangalore Krishi mela date>
Bangalore krishimela 2024-ಬೆಂಗಳೂರು ಕೃಷಿಮೇಳಕ್ಕೆ ದಿನಾಂಕ ಪ್ರಕಟ,ಈ ವರ್ಷದ ವಿಶೇಷತೆಗಳೇನು?
ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK) ವತಿಯಿಂದ ನವೆಂಬರ್ ತಿಂಗಳಲ್ಲಿ ಪ್ರಸಕ್ತ ಸಾಳಿನ 'ಬೃಹತ್ ಕೃಷಿ ಮೇಳ 2024' (Gkvk krishimela 2024)ಆಯೋಜನೆ ಮಾಡಿದೆ. ಇದರಲ್ಲಿ ರೈತರಿಗೆ ಆದಾಯ ಹೆಚ್ಚಿಸುವ ಹೊಸ ಹೊಸ ಬೀಜ ತಳಿ ಬಿಡುಗಡೆ ಆಗಲಿವೆ. ಕೃಷಿ ತಾಂತ್ರಿಕ ಸಲಕರಣೆಗಳು ಪರಿಚಯಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳ ಉದ್ಘಾಟಿಸುವ ಸಾಧ್ಯತೆ ಇದೆ.
ಬೆಂಗಳೂರಿನ(Bangalore krishimela) ಯಲಹಂಕದಲ್ಲಿ ನಡೆಯಲಿರುವ ಗಾಂಧಿ ಕೃಷಿವಿಜ್ಞಾನ ಕೇಂದ್ರದ (GKVK) ಆವರಣದಲ್ಲಿ ನವೆಂಬರ್ 14 ರಿಂದ 17ರವರೆಗೆ ಮೂರು ದಿನ ರೈತರ ಜಾತ್ರೆ ರೀತಿಯಲ್ಲಿ ಈ ಕೃಷಿ ಮೇಳ ನಡೆಯುತ್ತದೆ. ಈ ಭಾರಿ 'ಹವಾಮಾನ ಚತುರ ಡಿಜಿಟಲ್ ಕೃಷಿ' ಎಂಬ ಘೋಷವಾಕ್ಯದೊಂದಿಗೆ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಕೆವಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೆಕ್ಕೆಜೋಳ, ಸೂರ್ಯಕಾಂತಿ ಹೊಸ ತಳಿ ಬಿಡುಗಡೆ
ಇನ್ನೂ ಈ ಮೇಳದಲ್ಲಿ ವಿಶೇಷವಾಗಿ ಅಧಿಕ ಇಳುವರಿ ಕೊಡುವ ನಾಲ್ಕು ಮೆಕ್ಕೆಜೋಳ ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದರೊಂದಿಗೆ ಅಲಸಂಧಿ, ಜೋಳ, ಸೋರ್ಯಕಾಂತಿ ಹೊಸ ತಳಿಗಳು ಲೋಕಾರ್ಪಣೆಗೊಳ್ಳಲಿವೆ. ಅಲ್ಲದೇ ಕಳೆದ ನಿರ್ಮೂಲನೆ, ಕೀಟ ಹತೋಟಿಗೆ ಇಟ್ಟುಕೊಳ್ಳಬಹುದಾದ ತಾಂತ್ರಿಕತೆಗಳು ರೈತರಿಗೆ ಪರಿಚಿತಗೊಳ್ಳಲಿವೆ. ಅಗತ್ಯ ಸಲಹೆ ಸೂಚನೆಗಳು ರೈತರಿಗೆ ಈ ಮೇಳದಿಂದ ಸಿಗಲಿವೆ.
ಇನ್ನೂ ಒಂದೇ ಹೆಕ್ಟೇರ್‌ಗೆ 80 ದಿನಗಳಲ್ಲಿ 24 ಕ್ವಿಂಟಾಲ್ ನಷ್ಟು ಇಳುವರಿ ನೀಡುವ ಕೆಬಿಎಸ್‌ಎಚ್ 90 ಸೂರ್ಯಕಾಂತಿ ತಳಿಯನ್ನು ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ಧಿ ಪಡಿಸಿದೆ. ಅಧಿಕ ಇಳುವರಿ ಜೊತೆಗೆ ಉತ್ತಮ ಗುಣಮಟ್ಟದ್ದಾಗುವ ಕಾರಣ ಅಧಿಕ ತೈಲ ಅಂಶ ಈ ಸೂರ್ಯ ಕಾಂತಿಯಲ್ಲಿ ಇರಲಿದೆ.
ಮುಸುಕಿನ ಜೋಳದಲ್ಲಿ ಎಂಎಎಚ್ 15ರಿಂದ 84 ಎಂಬ ಮಧ್ಯಮಾವಧಿಯ ತಳಿಯನ್ನು ವಿಶ್ವವಿದ್ಯಾಲಯ ಕಂಡು ಹಿಡಿದಿದೆ. ಈ ಮೆಕ್ಕೆಜೋಳದ ತಳಿಯು ಹೆಕ್ಟೆರ್‌ಗೆ 92ರಿಂದ 95ಕ್ವಿಂಟಾಲ್ ಇಳುವರಿ ನೀಡುವ ಸಾಮರ್ಥ್ಯ ಹೊಂದಿವೆ. ಈ ನೂತನ ತಳಿಗಳು ರೈತರ ಆದಾಯ ಹೆಚ್ಚಿಸಲಿವೆ ಎಂಬ ವಿಶ್ವಾಸ ವಿಶ್ವವಿದ್ಯಾಲಯ ಹೊಂದಿದೆ.
ಸುಧಾರಿತ ಬೇಸಾಯ ವ್ಯವಸ್ಥೆಗೆ ಆದ್ಯತೆ
ವಿಶ್ವವಿದ್ಯಾಲಯವು ಸುಧಾರಿತ ಕೃಷಿ ವ್ಯವಸ್ಥೆ ಆದ್ಯತೆ ನೀಡುತ್ತಿದೆ. ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರ ಮಾಡಿ ರೈತರಿಗೆ ಪರಿಚಯ ಮಾಡುತ್ತಿದೆ. 19 ಹೊಸ ತಾಂತ್ರಿಕತೆಗಳನ್ನು ವಿವಿ ಶೋಧಿಸಿದೆ. ಕೈ ಚಾಲಿತ ರಾಗಿ, ಗೊಬ್ಬರದ ಕೂರಿಗೆ ಸಂಶೋಧಿಸಿದೆ. ಇದರಿಂದ 1.5 ಎಕರೆ ಭೂಮಿಯನ್ನು ಇಬ್ಬರೇ ಬಿತ್ತನೆ ಮಾಡಬಹುದು.
ಅದೇ ರೀತಿ ಶೇಂಗಾವನ್ನು ಗಿಡದಿಂದ ಬೇರ್ಪಡಿಸುವ ಯಂತ್ರವನ್ನು ಆವಿಷ್ಕರಿಸಿದೆ. ಶೇಂಗಾ ಜೊತೆಗೆ ಸೂರ್ಯಕಾಂತಿ, ಮೆಕ್ಕಜೋಳ ಬೀಜಗಳನ್ನು ಬೇರ್ಪಡಿಸಲು ಈ ಯಂತ್ರಗಳನ್ನು ಬಳಸಬಹುದು. ಇದರೊಂದಿಗೆ ಅನೇಕ ಹಸು, ಹೋರಿ ತಳಿಗಳನ್ನು ಖರೀದಿಸಬಹುದು. ಹೈನುಗಾರಿಕೆ, ತೋಟಗಾರಿಕೆಗೆ, ಇನ್ನಿತರ ವಾಣಿಜ್ಯ ಬೆಳೆಗಳಿಗೆ ಉಪಯುಕ್ತ ಸಲಹೆಗಳು ಇಲ್ಲಿ ನೀಡಲಾಗುತ್ತಿದೆ.
ಇನ್ನೂ ಕೃಷಿ ವಲಯದಲ್ಲಿ ಅಸಾಧಾರಣ ಸಾಧನೆ ಮಾಡಿದವರನ್ನು ವಿಶ್ವವಿದ್ಯಾಲಯ ಇದೇ ವೇಳೆ ಸನ್ಮಾನಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ