Bele parihara-ಮಳೆಯಿಂದಾದ ಬೆಳೆ ಹಾಗೂ ಮನೆ ಹಾನಿಗೆ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ,ಯಾರಿಗೆ ಎಷ್ಟು ಪರಿಹಾರ ಸಿಗಲಿದೆ?
Bele parihara-ಮಳೆಯಿಂದಾದ ಬೆಳೆ ಹಾಗೂ ಮನೆ ಹಾನಿಗೆ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ,ಯಾರಿಗೆ ಎಷ್ಟು ಪರಿಹಾರ ಸಿಗಲಿದೆ?

Bele parihara-ಮಳೆಯಿಂದಾದ ಬೆಳೆ ಹಾಗೂ ಮನೆ ಹಾನಿಗೆ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ,ಯಾರಿಗೆ ಎಷ್ಟು ಪರಿಹಾರ ಸಿಗಲಿದೆ?
ರಾಜ್ಯ ಸರ್ಕಾರದಿಂದ ನೈರುತ್ಯ ಮುಂಗಾರು ಹಂಗಾಮು, ಈಶಾನ್ಯ ಮುಂಗಾರು ಹಂಗಾಮಿನಲ್ಲಿನ ಅತಿವೃಷ್ಟಿ, ಪ್ರವಾಹದಿಂದ ಹಾನಿಯಾಗುವ ಮನೆಗಳ ಪುನರ್ ನಿರ್ಮಾಣ, ದುರಸ್ಥಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಿ ಆದೇಶಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದ್ದು, ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ SDRF | NDRF ರಡಿ ನೀಡಬಹುದಾದ ಪರಿಹಾರಗಳ ಕುರಿತು ಭಾರತ ಸರ್ಕಾರದ ಗ್ರಹ ಮಂತ್ರಾಲಯವು ಮೇಲೆ ಓದಲಾದ (1) ರಂತೆ ಹೊರಡಿಸಿರುವ SDRF / NDRF Items and Norms of Assistance ರ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಪರಿಹಾರ ಮೊತ್ತದ ಜೊತೆಗೆ, 2024-25 ನೇ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ (01.06.2025 ರಿಂದ 30.09.2025) ಮತ್ತು ಈಶಾನ್ಯ ಮುಂಗಾರು ಹಂಗಾಮಿನಲ್ಲಿ (01.10.2025 ರಿಂದ 31.12.2025) ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪುವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಹೆಚ್ಚುವರಿ ಮೊತ್ತವನ್ನು ನಿಗದಿಪಡಿಸಿ, ಸದರಿ ಪರಿಹಾರ ಮೊತ್ತವನ್ನು ಪಾವತಿಸಲು ಜಿಲ್ಲಾಧಿಕಾರಿಗಳು ಅನುಸರಿಸಬೇಕಾಗಿರುವ ಕ್ರಮಗಳ ಮತ್ತು ಷರತ್ತುಗಳ ಕುರಿತು ಮೇಲೆ ಓದಲಾದ (2), (3) ಮತ್ತು (4) ರ ಆದೇಶಗಳಲ್ಲಿ ಸೂಚನೆಗಳನ್ನು ನೀಡಲಾಗಿರುತ್ತದೆ.
ಪುಸ್ತುತ ಭಾರತೀಯ ಹವಾಮಾನ ಇಲಾಖೆಯು ನೈಋತ್ಯ ಮುಂಗಾರು (SouthWest) ಹಂಗಾಮು-2025 ರ ಮೊದಲ ಹಂತದ ಕಾರ್ಯಚರಣೆಯ ಧೀರ್ಘ ವ್ಯಾಪ್ತಿಯ ಮುನ್ಸೂಚನೆಯ (LRF) ಪುಕಾರ ಒಟ್ಟಾರೆಯಾಗಿ ದೇಶದಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಮೇಲೆ ಓದಲಾದ (5) ರ ದಿನಾಂಕ: 15.05.2025 ರಂದು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತದೆ. ಹಾಗಾಗಿ, ಪ್ರಸಕ್ತ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಮನೆ ಹಾನಿಗೆ ಪರಿಹಾರವನ್ನು ಪಾವತಿಸುವ ಬಗ್ಗೆ ಮಾರ್ಗಸೂಚಿಗಳನ್ನು ನೀಡುವುದು ಅವಶ್ಯಕವಾಗಿರುತ್ತದೆವಾದ್ದರಿಂದ, ಅತಿವೃಷ್ಟಿ | ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ 2024-25 ನೇ ಸಾಲಿನಲ್ಲಿ ಪಾವತಿಸಿರುವ ಪರಿಹಾರದಂತೆ 2025-26 ನೇ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ (01.06.2025 ರಿಂದ 30.09.2025) ಮತ್ತು ಈಶಾನ್ಯ ಮುಂಗಾರು ಹಂಗಾಮಿನಲ್ಲಿ (01.10.2025 ರಿಂದ 31.12.2025) ಹಾನಿಗೊಳಗಾಗುವ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನಿಯಾಮಾನುಸಾರ ಅರ್ಹತೆಯಂತೆ ಜಿಲ್ಲಾಧಿಕಾರಿರವರ ಹಂತದಲ್ಲಿಯೇ ಅವರ ಪಿ.ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಪಾವತಿಸಲು ಸರ್ಕಾರವು ನಿರ್ಧರಿಸಿ ಕೆಳಕಂಡಂತೆ ಆದೇಶಿಸಿದೆ.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಅತಿವೃಷ್ಟಿ | ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ 2024-25 ನೇ ಸಾಲಿನಲ್ಲಿ ಪಾವತಿಸಿರುವ ಕೆಳಕಂಡ ಪರಿಹಾರದಂತೆ, 2025-26 ನೇ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ (01.06.2025 ರಿಂದ 30.09.2025) ಮತ್ತು ಈಶಾನ್ಯ ಮುಂಗಾರು ಹಂಗಾಮಿನಲ್ಲಿ (01.10.2025 ರಿಂದ 31.12.2025) ಹಾನಿಗೊಳಗಾಗುವ ಮನೆಗಳ ಪುನರ್ ನಿರ್ಮಾಣ / ದುರ ಕಾರ್ಯ ಹಾಗೂ ಪುವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನಿಯಾಮಾನುಸಾರ ಅರ್ಹತೆಯಂತೆ ಪರಿಹಾರವನ್ನು ಮೇಲೆ ಓದಲಾದ (2), (3) ಮತ್ತು (4) ರ ಆದೇಶಗಳಲ್ಲಿ ವಿಧಿಸಿರುವ ಷರತ್ತುಗಳ ಪಾಲನೆಗೆ ಒಳಪಟ್ಟು, ಜಿಲ್ಲಾಧಿಕಾರಿರವರ ಹಂತದಲ್ಲಿಯೇ ಅವರ ಪಿ.ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಪಾವತಿಸಲು ಸರ್ಕಾರದ ಮಂಜೂರಾತಿ ನೀಡಿ, ಆದೇಶಿಸಿದೆ.
ಪ್ರವಾಹದಿಂದ ಹಾನಿಗೊಳಗಾದ ಮನೆಗಳನ್ನು 02 ವರ್ಗಗಳಲ್ಲಿ (ಪೂರ್ಣ ಹಾನಿಯಾದ ಮನೆಗಳ ಮರು ನಿರ್ಮಾಣ ಮತ್ತು ಭಾಗಶ: ಹಾನಿಯಾದ ಮನೆಗಳ ದುರಸ್ತಿ) ವಿಂಗಡಿಸಿ ಪರಿಹಾರ ಪಾವತಿಸುವುದು.
ಪೂರ್ಣಹಾನಿಯಾದ ಮನೆಗಳಿಗೆ ಭಾರತ ಸರ್ಕಾರದ ಗೃಹ ಮಂತ್ರಾಲಯವು ದಿನಾಂಕ:11/07/2023ರಂದು ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ / ರಾಜ್ಯ ವಿಪತ್ತು ಪರಿಹಾರ ನಿಧಿಯ Revised Items and Norms of Assistance ರ ಮಾರ್ಗಸೂಚಿಗಳನ್ವಯ ರೂ.1.20 ಲಕ್ಷಗಳ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ವಸತಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ನೀಡುವುದು. ದೇವರಾಜ್ ಅರಸು ವಸತಿ ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಮಾನ್ಯ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ರೂ.1.20 ಲಕ್ಷ ಮತ್ತು ಎಸ್ಸಿ/ಎಸ್‌ಟಿ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ರೂ.1.50 ಲಕ್ಷ ಮಂಜೂರು ಮಾಡುವುದು. ಈ ಮನೆಗಳನ್ನು ಜಿಲ್ಲಾಧಿಕಾರಿಗಳು ಅನುಮೋದನೆ ಮಾಡಿ ವಿವರಗಳೊಂದಿಗೆ ಫಲಾನುಭವಿಗಳ ಪಟ್ಟಿಯನ್ನು RGRHCL ಪರಿಹಾರ ತಂತ್ರಾಂಶದಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ವಿವರಗಳನ್ನು ದಾಖಲಿಸುವುದು.
ಅನಧಿಕೃತ ಜಮೀನಿನಲ್ಲಿ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಒಂದು ಬಾರಿ ಪರಿಹಾರವಾಗಿ ರೂ.1.00 ಲಕ್ಷಗಳನ್ನು ಪಾವತಿಸುವುದು ಮತ್ತು ಯಾವುದೇ ಮನೆಯನ್ನು ಮಂಜೂರು ಮಾಡುವಂತಿಲ್ಲ.
ಭಾರತ ಸರ್ಕಾರದ ಗ್ರಹ ಮಂತ್ರಾಲಯವು ದಿನಾಂಕ:11/07/2023ರಂದು ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ / ರಾಜ್ಯ ವಿಪತ್ತು ಪರಿಹಾರ ನಿಧಿಯ Revised Items and Norms of Assistance ರ ಮಾರ್ಗಸೂಚಿಗಳನ್ವಯ ಭಾಗಶಃ ಹಾನಿಗೊಳಗಾದ ಮನೆಗಳ ದುರಸ್ತಿಗೆ ಕನಿಷ್ಟ ರೂ.6,500/- ಗಳಿಂದ ಗರಿಷ್ಮ ರೂ.50,000/-ಗಳನ್ನು ಈ ಕೆಳಕಂಡಂತೆ ಪಾರದರ್ಶಕ ಮಾನದಂಡಗಳನ್ವಯ ಅರ್ಹತೆಯನುಸಾರ ಪಾವತಿಸುವುದು.
Crop loss compensation-ಮಳೆಯಿಂದಾದ ಬೆಳೆಹಾನಿಗೆ ಪರಿಹಾರ ಪಡೆಯುವುದು ಹೇಗೆ?
ಈ ಬಾರಿ ಮುಂಗಾರು ಆಗಮನ ವಾಡಿಕೆಗಿಂತ ಬೇಗನೆ ಆಗಮಿಸಿದ ಕಾರಣ ಮೇ ಅಂತ್ಯದ ವೇಳೆಗೆ ಕರ್ನಾಟಕ ಸೇರಿ ಭಾರತದಾದ್ಯಂತ ಭರ್ಜರಿ ಮಳೆಯಾಗುತ್ತಿದೆ. ಆದರೆ ಜೂನ್ ಮೊದಲ ವಾರದಲ್ಲಿ ಕೊಂಚ ಮಳೆ ಪ್ರಮಾಣ ಕಡಿಮೆಯಾದರೂ ಸಹ ಕರ್ನಾಟಕದಲ್ಲಿ ಜೂನ್ 8ರಿಂದ ಮಳೆ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಇನ್ನು, ಪ್ರತಿ ವರ್ಷವೂ ದೇಶದ ಹಲವು ರಾಜ್ಯಗಳಲ್ಲಿ ಮಳೆ ಮತ್ತು ಪ್ರವಾಹದಿಂದ ಮಾನ್ಸೂನ್ ಹಾನಿಯನ್ನು ಉಂಟು ಮಾಡುತ್ತದೆ. ಉತ್ತರ ಪ್ರದೇಶ, ಬಿಹಾರದಿಂದ ಈಶಾನ್ಯ ಭಾರತದ ರಾಜ್ಯಗಳವರೆಗೆ ಅನೇಕ ಪ್ರದೇಶಗಳಲ್ಲಿ ಜನರು ಮನೆ ಮತ್ತು ಕೃಷಿ ಬೆಳೆಯನ್ನೂ ಕಳೆದುಕೊಂಡಿದ್ದಾರೆ. ಆದರೆ ಅಂತಹ ವಿಪತ್ತಿನಲ್ಲಿ, ಸರ್ಕಾರವು ಮನೆ ಮತ್ತು ಬೆಳೆ ಕಳೆದುಕೊಂಡವರಿಗೆ ಆರ್ಥಿಕ ಸಹಾಯವನ್ನು ಸಹ ನೀಡುತ್ತದೆ. ನಷ್ಟವನ್ನು ಸರಿದೂಗಿಸಲು ಪರಿಹಾರವನ್ನು ಹೇಗೆ ಪಡೆಯುವುದು ಎಂದು ನೀವು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು.
ಆಡಳಿತವು ಹಾನಿ ಸಮೀಕ್ಷೆ ನಡೆಸುತ್ತೆ:
ಸ್ಥಳೀಯ ಆಡಳಿತವು ಮೊದಲು ನೈಸರ್ಗಿಕ ವಿಕೋಪ ಅಥವಾ ಭಾರೀ ಮಳೆಯಿಂದ ಉಂಟಾದ ಹಾನಿಯನ್ನು ಮೌಲ್ಯಮಾಪನ ಮಾಡುತ್ತದೆ. ಹಾನಿ ತುಂಬಾ ಹೆಚ್ಚಾದಾಗ, ರಾಜ್ಯ ಸರ್ಕಾರ ಪರಿಹಾರ ನಿಧಿ ಅಥವಾ ಪರಿಹಾರವನ್ನು ಘೋಷಿಸುತ್ತದೆ. ಇದಕ್ಕಾಗಿ, ಅಧಿಕಾರಿಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತಾರೆ.
ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಮನೆ, ಅಂಗಡಿ ಅಥವಾ ಜಮೀನು, ಬೆಳೆ, ಕೃಷಿ ಭೂಮಿ ಹೀಗೆ ಪ್ರವಾಹ ಅಥವಾ ಮಳೆಯಿಂದ ಯಾವುದೇ ಹಾನಿಗೊಳಗಾಗಿದ್ದರೂ ಸಹ ಮೊದಲು ನೀವು ಸ್ಥಳೀಯ ಆಡಳಿತಕ್ಕೆ ತಿಳಿಸಬೇಕು.
ಇದು ಅತ್ಯಂತ ಮುಖ್ಯವಾದ ಹಾಗೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯಾಗಿದೆ.
ಇಲ್ಲಿದೆ ಹಂತ ಹಂತದ ವಿವರ* ಇದಕ್ಕಾಗಿ, ಗ್ರಾಮ ಪಂಚಾಯತ್, ಪುರಸಭೆ ಅಥವಾ ಬ್ಲಾಕ್ ಮಟ್ಟದಲ್ಲಿ ಲಿಖಿತ ಮಾಹಿತಿಯನ್ನು ನೀಡಬಹುದು.* ಆಡಳಿತ ಅಧಿಕಾರಿಗಳು ಹಾನಿಯನ್ನು ಪರಿಶೀಲಿಸುತ್ತಾರೆ ಮತ್ತು ವರದಿಯನ್ನು ಸಿದ್ಧಪಡಿಸುತ್ತಾರೆ.* ವರದಿಯೊಂದಿಗೆ ಬಾಧಿತ ಸ್ಥಳಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಸಹ ಕಳುಹಿಸಲಾಗುತ್ತದೆ.* ಈ ವರದಿಯು ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಹೋಗುತ್ತದೆ.* ಇದಾದ ನಂತರ ರಾಜ್ಯ ಸರ್ಕಾರ ಪರಿಹಾರ ಮೊತ್ತವನ್ನು ಘೋಷಿಸುತ್ತದೆ ಮತ್ತು ಪರಿಹಾರವನ್ನು ವಿತರಿಸಲಾಗುತ್ತದೆ.
ಮುಖ್ಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು:
> ಪರಿಹಾರಕ್ಕಾಗಿ ಸಾಧ್ಯವಾದಷ್ಟು ಬೇಗ ಮಾಹಿತಿ ನೀಡುವುದು ಇಲ್ಲಿ ಮುಖ್ಯವಾಗುತ್ತದೆ.> ನಷ್ಟಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಸುರಕ್ಷಿತವಾಗಿಡುವುದು ಮುಖ್ಯ.> ನಿಮ್ಮ ವರದಿಯನ್ನು ಸರಿಯಾಗಿ ಸಲ್ಲಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಹಕರಿಸಬೇಕು.> ಇದಾದ ಬಳಿಕ ಪರಿಹಾರವನ್ನು ಸರ್ಕಾರ ಘೋಷಿಸಿದ ಬಳಿಕ ಅಧಿಕಾರಿಗಳ ಬಳಿಕ ಹೋಗಿ ಅಗತ್ಯ ದಾಖಲೆಗಳನ್ನು ನೀಡಿ ಪಡೆಯಬೇಕು.
ಬೆಳೆ ವಿಮೆ ಮಾಡಿಸಿದ ರೈತರು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೋ ಆ ವಿಮಾ ಕಂಪನಿಗೆ ಸಂಪರ್ಕಿಸಬೇಕು. ಒಂದು ವೇಳೆ ವಿಮಾ ಕಂಪನಿಯ ನಂಬರ್ ಗೊತ್ತಿಲ್ಲದಿದ್ದರೆ ಬೆಳೆ ವಿಮೆ ಉಚಿತ ಸಹಾಯವಾಣಿ 1800 180 1551 ನಂಬರಿಗೆ ಕರೆ ಮಾಡಿ ನಿಮ್ಮ ಜಿಲ್ಲೆ ವಿಮಾ ಕಂಪನಿಯ ನಂಬರ್ ಪಡೆದು ಕರೆ ಮಾಡಬೇಕು.
ಬೆಳೆ ವಿಮೆ ಹಣ ಎಷ್ಟು ಜಮೆಯಾಗುತ್ತದೆ?
ಬೆಳೆ ವಿಮೆ ಮಾಡಿಸಿದ ನಂತರ ಬೆಳೆ ಎಷ್ಟು ಪ್ರಮಾಣದಲ್ಲಿ ಹಾಳಾಗಿದೆ ಹಾಗೂ ಬೆಳೆ ಯಾವ ಹಂತದಲ್ಲಿ ಹಾಳಾಗಿದೆ ಎಂಬುದನ್ನು ನಿರ್ಧರಿಸಿ ರೈತರಿಗೆ ವಿಮೆ ಹಣ ಪಾವತಿಸಲಾಗುವುದು.