ಬೆಳೆಪರಿಹಾರ ಪಡೆಯಲು ಷರತ್ತು ವಿಧಿಸಿದ ರಾಜ್ಯ ಸರ್ಕಾರ,ಹೊಸ ಆದೇಶದಂತೆ ಯಾರಿಗೆಲ್ಲಾ ಬೆಳೆಪರಿಹಾರ ಸಿಗಲಿದೆ ಚೆಕ್ ಮಾಡಿ-Bele parihara bidugade

<Krushirushi> <ಬೆಳೆ ಪರಿಹಾರ ಬಿಡುಗಡೆ> <ಬೆಳೆಹಾನಿ ಪರಿಹಾರ 2024-25> <Bele parihara status 2024-25> <input subsidy for croploss> <ಬೆಳೆಹಾನಿ ಪಾವತಿ ವಿಫಲ ಪ್ರಕರಣ> <Belehani parihara payment failed cases> Belehani rejected list> <ಬೆಳೆಹಾನಿ ಪರಿಹಾರ ಪಾವತಿ ವಿಫಲ ಪ್ರಕರಣ> <Belehani parihara payment failed cases> <Belehani parihara jama> <Modala kanthina belehani parihara> <Direct benefit transfer> <ಬೆಳೆಹಾನಿ ಪರಿಹಾರ ಪಟ್ಟಿ> <crop loss compensation to eligible farmers> <Baraparihara patti> <Drought relief eligible list> <ಫ್ರೂಟ್ಸ್ ಐಡಿ> <Bele parihara list> <Bele parihara list 2024-25> <Bele parihara bidugade>

ಬೆಳೆಪರಿಹಾರ ಪಡೆಯಲು ಷರತ್ತು ವಿಧಿಸಿದ ರಾಜ್ಯ ಸರ್ಕಾರ,ಹೊಸ ಆದೇಶದಂತೆ ಯಾರಿಗೆಲ್ಲಾ ಬೆಳೆಪರಿಹಾರ ಸಿಗಲಿದೆ ಚೆಕ್ ಮಾಡಿ-Bele parihara bidugade

ಬೆಳೆಪರಿಹಾರ ಪಡೆಯಲು ಷರತ್ತು ವಿಧಿಸಿದ ರಾಜ್ಯ ಸರ್ಕಾರ,ಹೊಸ ಆದೇಶದಂತೆ ಯಾರಿಗೆಲ್ಲಾ ಬೆಳೆಪರಿಹಾರ ಸಿಗಲಿದೆ ಚೆಕ್ ಮಾಡಿ-Bele parihara bidugade

ಕರ್ನಾಟಕ ಸರ್ಕಾರ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆಳೆಹಾನಿಗೆ ರೈತರಿಗೆ ಪರಿಹಾರವನ್ನು ನೀಡಲಿದೆ. ಷರತ್ತು ಮತ್ತು ನಿಬಂಧನೆಗಳ ಪಾಲನೆಗೊಳಪಟ್ಟು ಹಾಗೂ ಕಾರ್ಯವಿಧಾನದನ್ವಯ ಪರಿಹಾರವನ್ನು ಪಾವತಿಸಲು ಆದೇಶಿಸಲಾಗಿದೆ. 2024-25ನೇ ಸಾಲಿನಲ್ಲಿ ಅತಿವೃಷ್ಟಿ, ಪ್ರವಾಹ, ಬರ ಪರಿಸ್ಥಿತಿ, ಆಲಿಕಲ್ಲು ಮಳೆಯಿಂದ ಸ್ಥಳೀಯವಾಗಿ ಉಂಟಾಗುವ ಬೆಳೆಹಾನಿ ಪ್ರಕರಣಗಳಲ್ಲಿ, ನಿಯಮಾನುಸಾರ ಅರ್ಹ ರೈತ ಫಲಾನುಭವಿಗಳಿಗೆ ಪರಿಹಾರ ಸಿಗಲಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಸ್. ಆರ್. ಶಿವಶಂಕರ್ ಸರ್ಕಾರದ ಉಪ ಕಾರ್ಯದರ್ಶಿ, ಕಂದಾಯ ಇಲಾಖೆ, (ವಿಪತ್ತು ನಿರ್ವಹಣೆ ಮ್ತು ನೋಂ & ಮು) ಆದೇಶವನ್ನು ಹೊರಡಿಸಿದ್ದಾರೆ. ಅರ್ಹತೆಗನುಗುಣವಾಗಿ, ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ ಪಾವತಿಸಬಹುದಾದ ಪರಿಹಾರ ಮೊತ್ತದ ಕುರಿತು ಕೇಂದ್ರ ಸರ್ಕಾರದ ಗೃಹ ಮಂತ್ರಾಲಯವು ದಿನಾಂಕ 11/07/2023ರಂದು Revised Items of Expenditure and Norms of assistance from the State Disaster Response Fund (SDRE) ರಲ್ಲಿ ನಿಗದಿಪಡಿಸಿರುವಂತೆ, ಪರಿಹಾರ ಮೊತ್ತವನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ರಾಜ್ಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ (ನೈಸರ್ಗಿಕ ವಿಕೋಪ ನಿರ್ವಹಣೆಗಾಗಿ) ಲಭ್ಯವಿರುವ ಅನುದಾನದಿಂದ ಪರಿಹಾರ ತಂತ್ರಾಂಶದ ಮುಖಾಂತರ ಮಾತ್ರ ಪಾವತಿಸಲು ಆದೇಶಿಸಲಾಗಿದೆ.

ಷರತ್ತುಗಳು

ಸ್ಥಳೀಯವಾಗಿ ನೈಸರ್ಗಿಕ ವಿಕೋಪಗಳಿಂದ ಉಂಟಾಗಿರುವ ಬೆಳೆಹಾನಿಯನ್ನು, ಜಂಟಿ ಸಮೀಕ್ಷೆ ಮುಖಾಂತರ ಗುರುತಿಸಿ, ಮೆಮೋರೆಂಡಮ್‌ ಅನ್ನು ಸಿದ್ಧಪಡಿಸಿ ರೈತರು ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಧಿಕಾರಿಗಳು, ಸಂಬಂಧಿತ ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಗ್ರಾಮ ಪಂಚಾಯತಿ ಕಛೇರಿಗಳಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಒಂದು ವಾರದೊಳಗಾಗಿ ಪಡೆಯುವುದು ಮತ್ತು ಜಿಲ್ಲಾಧಿಕಾರಿಗಳ ಜಾಲತಾಣದಲ್ಲಿ ಪ್ರಕಟಿಸುವುದು.

* ಬೆಳೆಹಾನಿ ಪರಿಹಾರ (Input subsidy) ಅನ್ನು ಭೂಮಿ ಸೆಲ್ ನಿರ್ವಹಿಸುತ್ತಿರುವ ಪರಿಹಾರ ತತ್ರಾಂಶದ ಮೂಲಕ ಮಾತ್ರ ಬೆಳೆಹಾನಿ ಪರಿಹಾರವನ್ನು ವಿತರಿಸತಕ್ಕದ್ದು.

* ಜಂಟಿ ಸಮೀಕ್ಷೆ ಆಧಾರದ ಮೇಲೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ಕ್ರೂಢೀಕೃತ ಮತ್ತು ದೃಢೀಕೃತ ಮಾಹಿತಿಯನ್ನು FRUITS ತಂತ್ರಾಂಶದಲ್ಲಿ ನೋಂದಣಿಯಾಗಿರುವ Farmers ID ಹೊಂದಿರುವ ಆಧಾರ್ ಜೋಡಣೆಯಾಗಿರುವ ಅರ್ಹ ರೈತರ ಬ್ಯಾಂಕ್‌ ಖಾತೆಗೆ DBT ಮೂಲಕ ನಿಯಮಾನುಸಾರ ಪಾವತಿಸುವುದು.

* ಭೂಮಿ ಸೆಲ್ ರವರು payment logic ಪ್ರಕಾರ ತಾಲ್ಲೂಕಿನಲ್ಲಿ ಅತೀ ಕಡಿಮೆ ಭೂಮಿಯನ್ನು ಹೊಂದಿರುವ ಅರ್ಹ ರೈತನಿಂದ ಪ್ರಾರಂಭಿಸಿ ಅತೀ ಹೆಚ್ಚು ಭೂಮಿಯನ್ನು ಹೊಂದಿರುವ ಅರ್ಹ ರೈತನಿಗೆ ಆರೋಹಣ ಕ್ರಮದಲ್ಲಿ (ascending order) ಪಾವತಿ ಮಾಡುವುದು ಹಾಗೂ ಇದರಲ್ಲಿಯೂ ಸಹ ಮಳೆಯಾಶ್ರಿತ ಬೆಳೆ ನಂತರ ನೀರಾವರಿ ಬೆಳೆ, ತದನಂತರ ಬಹು ವಾರ್ಷಿಕ ಬೆಳೆಗೆ ಈ ಕ್ರಮದಲ್ಲಿ ಪರಿಹಾರ ಮೊತ್ತವನ್ನು ಪಾವತಿ ಮಾಡುವುದು.

* ಪಲಾನುಭವಿಯು ಜಮೀನಿಗೆ ಸಂಬಂಧಿಸಿದಂತೆ ನಿಯಮಾನುಸಾರ ಅಗತ್ಯ ದಾಖಲೆಗಳು (RTC ಇತ್ಯಾದಿ) ಹೊಂದಿರಬೇಕು.

* ಬೆಳೆಹಾನಿ ಪರಿಹಾರ ಪಡೆಯುವ ಫಲಾನುಭವಿಯ ಆಧಾರ್ ಸಂಖ್ಯೆಯು ಬ್ಯಾಂಕ್‌ ಖಾತೆಗೆ ಜೋಡಣೆಯಾಗಿರಬೇಕು ಹಾಗೂ ನಿಯಮಾನುಸಾರ ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ ಮಾತ್ರ DBT ಮೂಲಕ ಬೆಳೆ ಹಾನಿ ಪರಿಹಾರ ಪಾವತಿ ಮಾಡತಕ್ಕದ್ದು.

* ಈ ಹಿಂದೆ ನೀರಾವರಿ ಯೋಜನೆಗಳಿಗೆ ರೈತರ ಕೃಷಿ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಂಡಿರುವ ಪ್ರಕರಣಗಳಲ್ಲಿ ಪಹಣಿಗಳಲ್ಲಿ ನೀರಾವರಿ ಇಲಾಖೆಯ ಹೆಸರು ಸೇರ್ಪಡೆಯಾಗದೆ ಇರುವ ಪ್ರಕರಣಗಳಲ್ಲಿ, ಭೂಮಿ ಸೆಲ್‌ರವರು ಭೂಸ್ವಾಧೀನವಾದ ವಿಸ್ತೀರ್ಣಕ್ಕೆ ಭೂಮಿ ದತ್ತಾಂಶದಲ್ಲಿ ಬೆಳೆ ಸಮೀಕ್ಷೆಯಲ್ಲಿ ಸೇರಿದ್ದರೂ ಬೆಳೆಹಾನಿ ಪರಿಹಾರಕ್ಕೆ ಪರಿಗಣಿಸತಕ್ಕದಲ್ಲ.

* ಕೃಷಿಯೇತರ ಉದ್ದೇಶಕ್ಕಾಗಿ ಕೃಷಿ ಜಮೀನು ಭೂ-ಪರಿವರ್ತನೆಯಾಗಿರುವ ಪ್ರಕರಣಗಳನ್ನು ಭೂಮಿ ಸೆಲ್‌ರವರು ಬೆಳೆಹಾನಿ ಪರಿಹಾರಕ್ಕೆ ಪರಿಗಣಿಸತಕ್ಕದಲ್ಲ.

* ಸರ್ಕಾರಿ ಜಮೀನುಗಳನ್ನು ಭೂಮಿ ದತ್ತಾಂಶದಲ್ಲಿ ಗುರುತಿಸಿ ಬೆಳೆಹಾನಿ ಪರಿಹಾರ ನೀಡದಂತೆ ಭೂಮಿ ಸೆಲ್‌ರವರು ನೋಡಿಕೊಳ್ಳತಕ್ಕದ್ದು.

* RTC ಕಾಲಂನಲ್ಲಿ ಅಧಿಕೃತವಾಗಿ ಭೂ ಪರಿವರ್ತನೆಯಾಗದೆ ಇದ್ದರೂ ಸಹ ವಾಸ್ತವಿಕವಾಗಿ ಇತ್ತೀಚಿನ ಬೆಳೆ ಸಮೀಕ್ಷೆಯ ದತ್ತಾಂಶದಲ್ಲಿ NA (ಭೂ ಪರಿವರ್ತನೆ) ಎಂದು ದಾಖಲಿಸಿರುವ ಕೃಷಿ ಜಮೀನುಗಳನ್ನು ಭೂಮಿ ಸೆಲ್‌ರವರು ಬೆಳೆ ಹಾನಿ ಪರಿಹಾರಕ್ಕೆ ಪರಿಗಣಿಸತಕ್ಕದ್ದಲ್ಲ.

* ಜಂಟಿ ಖಾತೆದಾರರಾಗಿದ್ದಲ್ಲಿ ನಿಯಮಾನುಸಾರ FRUITS ತಂತ್ರಾಶದಲ್ಲಿ ನೋಂದಾಯಿಸಿದ ವಿಸ್ತೀರ್ಣಕ್ಕೆ ಅನುಗುಣವಾಗಿ ಬೆಳೆಹಾನಿ ಪರಿಹಾರ ಪಾವತಿಸುವುದು.

* ಒಂದೇ ಹಿಸ್ಸಾ ಜಮೀನುಗಳಲ್ಲಿ ಬಹು ಮಾಲೀಕರಿದ್ದಲ್ಲಿ ಒಂದೇ ವಿಸ್ತೀರ್ಣದ ಕ್ಷೇತ್ರಕ್ಕೆ ಎರಡು ಸಲ ಬೆಳೆ ಹಾನಿ ಪರಿಹಾರ ಪಾವತಿಯಾಗದ ಹಾಗೆ ಭೂಮಿ ಸೆಲ್ ರವರು ನೋಡಿಕೊಳ್ಳತಕ್ಕದ್ದು.

* ಒಂದೇ ಹಿಸ್ಸಾ ಜಮೀನಿಗೆ ಒಂದೇ ವಿಸ್ತೀರ್ಣಕ್ಕೆ ಎರಡು ಸಲ (ಡಬಲ್ ಪೇಮೆಂಟ್) ಬೆಳೆಹಾನಿ ಪರಿಹಾರ ಪಾವತಿಯಾಗದ ಹಾಗೆ ಭೂಮಿ ಸೆಲ್‌ರವರು ನೋಡಿಕೊಳ್ಳತಕ್ಕದ್ದು.

* ಎರಡು ಅಥವಾ ಅದಕ್ಕಿಂತಾ ಹೆಚ್ಚಿನ ತಾಲ್ಲೂಕುಗಳಲ್ಲಿ ಕೃಷಿ ಜಮೀನುಗಳನ್ನು ಹೊಂದಿದ್ದಲ್ಲಿ ಅರ್ಹತೆಯಂತೆ ಬೆಳೆ ಪರಿಹಾರವನ್ನು ಒಬ್ಬ ರೈತನಿಗೆ ಗರಿಷ್ಠ ಕ್ಷೇತ್ರ 2 ಹೆಕ್ಟೇರ್‌ಗಿಂತ ಹೆಚ್ಚಿಗೆ ನೀಡದಂತೆ ಭೂಮಿ ಸೆಲ್ ರವರು ನೋಡಿಕೊಳ್ಳತಕ್ಕದ್ದು.

* ಜಿಲ್ಲಾಧಿಕಾರಿ ಅನುಮೋದಿಸುವ ಮೆಮೊರೆಂಡಂನಲ್ಲಿ ಸಲ್ಲಿಸಲಾದ ತಾಲ್ಲೂಕುವಾರು, ಬೆಳೆವಾರು ಬೆಳೆಹಾನಿ ವಿವರಗಳಲ್ಲಿ, ಒಂದೇ ಹಿಸ್ಸಾ ಕ್ಷೇತ್ರದಲ್ಲಿ ಒಂದಕ್ಕಿಂತಾ ಹೆಚ್ಚು ಬೆಳೆಗಳನ್ನು ಬೆಳೆದಿದಲ್ಲಿ ಯಾವ ಬೆಳೆಯು ಗರಿಷ್ಟ ಪ್ರಮಾಣದಲ್ಲಿ ಬೆಳೆಯಲಾಗಿದೆಯೋ, ಆ ಬೆಳೆಯನ್ನು ಪರಿಹಾರ ಮೊತ್ತವನ್ನು ನೀಡಲು payment logic ನಲ್ಲಿ ಭೂಮಿ ಸೆಲ್‌ರವರು ಪರಿಗಣಿಸತಕ್ಕದ್ದು.

* RTCಯಲ್ಲಿರುವ ವಿಸ್ತೀರ್ಣ ಮತ್ತು ಬೆಳೆ ಸಮೀಕ್ಷೆಯಲ್ಲಿರುವ ವಿಸ್ತೀರ್ಣದಲ್ಲಿ ವ್ಯತ್ಯಾಸವಿರುವ ಪಕರಣಗಳನ್ನು ಗ್ರಾಮ ಲೆಕ್ಕಾಧಿಕಾರಿ ರವರ ಲಾಗಿನ್‌ಗೆ ಭೂಮಿ ಸೆಲ್ ರವರು ಕಳುಹಿಸುವುದು. ಅಂತಹ ಪ್ರಕರಣಗಳನ್ನು ಸ್ಥಳೀಯವಾಗಿ ವಾಸ್ತವಾಂಶಗಳ ಪರಿಶೀಲನೆ ಮಾಡಿ ಮೂರು (3) ದಿನಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ರವರು ನಿಯಮಗಳಂತೆ bio-metric ದೃಢೀಕರಣದ ಮೂಲಕ ಷರಾ ನಮೂದಿಸುವುದು.

* ಬೆಳೆಹಾನಿ ಪರಿಹಾರ ಪ್ರಾರಂಭ ಮಾಡುವುದಕ್ಕಿಂತ ಪೂರ್ವದಲ್ಲಿ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆಹಾನಿ ಪರಿಹಾರ ಪಾವತಿಸಲು ಜಿಲ್ಲೆಯಲ್ಲಿನ ಪರಿಹಾರ ದತ್ತಾಂಶಕ್ಕೆ digital signature ಮೂಲಕ ಜಿಲ್ಲಾಧಿಕಾರಿಗಳು ಅನುಮೋದನೆ ನೀಡುವುದು

ಹೊಸ ಆದೇಶದಂತೆ ಯಾರಿಗೆಲ್ಲಾ ಬೆಳೆಪರಿಹಾರ ಸಿಗಲಿದೆ ಚೆಕ್ ಮಾಡಿ-Bele parihara bidugade

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service89/PaymentDetailsReport.aspx

 

ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ,payment failed cases select ಮಾಡಿ Get reports ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ಕೆಳಗಿನಂತೆ ಪರಿಹಾರ ವಿಫಲ ಪ್ರಕರಣಗಳ ಪಟ್ಟಿ ದೊರೆಯಲಿದೆ

ಅದೇ ರೀತಿ payment Success cases select ಮಾಡಿ Get reports ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ಕೆಳಗಿನಂತೆ ಪರಿಹಾರ ಯಶಸ್ಸಿನ ಪ್ರಕರಣಗಳ ಪಟ್ಟಿ ದೊರೆಯಲಿದೆ