Bele parihara rejected list-ಇನ್ನೂ 60 ರಿಂದ 70% ರೈತರಿಗೆ ತಲುಪದ ಬೆಳೆಪರಿಹಾರ,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
ರಾಜ್ಯ ಸರ್ಕಾರ ಒಟ್ಟು 34.50 ಲಕ್ಷ ರೈತರಿಗೆ ಬೆಳೆ ನಷ್ಟ ಪರಿಹಾರ ಕೊಟ್ಟಂತಾಗಲಿದೆ. ಆದರೆ ಶೇ.60 ರಿಂದ 70 ರೈತರು ಬಿಟ್ಟು ಹೋಗಿದ್ದಾರೆ.
Bele parihara rejected list-ಇನ್ನೂ 60 ರಿಂದ 70% ರೈತರಿಗೆ ತಲುಪದ ಬೆಳೆಪರಿಹಾರ
ರಾಜ್ಯ ಸರ್ಕಾರ ಒಟ್ಟು 34.50 ಲಕ್ಷ ರೈತರಿಗೆ ಬೆಳೆ ನಷ್ಟ ಪರಿಹಾರ ಕೊಟ್ಟಂತಾಗಲಿದೆ. ಆದರೆ ಶೇ.60 ರಿಂದ 70 ರೈತರು ಬಿಟ್ಟು ಹೋಗಿದ್ದಾರೆ. ಪರಿಹಾರ ಪಡೆದವರಿಗಿಂತ ವಂಚಿತರೇ ಹೆಚ್ಚು ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಪ್ರತಿ ಹೆಕ್ಟೇರ್ ಖುಷ್ಕಿ ಬೆಳೆಗೆ 8,300 ರೂ., ನೀರಾವರಿ- 17,000 ತೋಟಗಾರಿಕೆ ಬೆಳೆಗೆ 22,500 ರೂ. ನಿಗದಿಪಡಿಸಿ, ಗರಿಷ್ಠ ಎರಡು ಹೆಕ್ಟೇರ್ಗೆ ನೀಡಿದ್ದು, ರೈತರು ಹೂಡಿದ ಬಂಡವಾಳಕ್ಕೆ ಹೋಲಿಸಿದರೆ ಭಿಕ್ಷೆ ಹಾಕಿದಂತಿದೆ. ಕೇಂದ್ರದ ಜತೆಗೆ ರಾಜ್ಯ ಸರ್ಕಾರವೂ ತನ್ನ ಪಾಲಿನ ಮೊತ್ತ ಸೇರಿಸಿದ್ದರೆ ಒಂದಿಷ್ಟು ಪ್ರಯೋಜನವಾಗುತ್ತಿತ್ತು. ಕಿಸಾನ್ ಸಮ್ಮಾನ್ ನಿಧಿಯಡಿ 4000 ರೂ. ಕೊಡುವುದನ್ನು ಮುಂದುವರಿಸಿದ್ದರೆ ಕಷ್ಟ ಕಾಲದಲ್ಲಿ ಆಸರೆಯಾಗುತ್ತಿತ್ತು ಎನ್ನುವುದು ರೈತರ ವೇದನೆಯಾಗಿದೆ.
ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service89/PaymentDetailsReport.aspx
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ,payment failed cases select ಮಾಡಿ Get reports ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ಕೆಳಗಿನಂತೆ ಪರಿಹಾರ ವಿಫಲ ಪ್ರಕರಣಗಳ ಪಟ್ಟಿ ದೊರೆಯಲಿದೆ
ಅದೇ ರೀತಿ payment Success cases select ಮಾಡಿ Get reports ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ಕೆಳಗಿನಂತೆ ಪರಿಹಾರ ಯಶಸ್ಸಿನ ಪ್ರಕರಣಗಳ ಪಟ್ಟಿ ದೊರೆಯಲಿದೆ
ಮುಂಗಾರು ಬಿತ್ತನೆಗೆ ತಯಾರಿ ನಡೆದರೂ ಕಳೆದ ಬಾರಿ ಮುಂಗಾರು ಕೈಕೊಟ್ಟು, ಉಂಟಾದ ಬೆಳೆ ನಷ್ಟಕ್ಕೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ದೊರೆತಿಲ್ಲ ಎಂದು ರೈತ ಸಮೂಹ ಬೇಗುದಿಯಲ್ಲಿ ಬೇಯುತ್ತಿದೆ.
ಬರಪೀಡಿತ ತಾಲೂಕುಗಳ 17.06 ಲಕ್ಷ ರೈತ ಕುಟುಂಬಗಳ ಬ್ಯಾಂಕ್ ಖಾತೆಗೆ ಜೀವನೋಪಾಯ ಭತ್ಯೆ ತಲಾ ಮೂರು ಸಾವಿರ ರೂ.ನಂತೆ ನೇರ ವರ್ಗಾವಣೆಯಾಗಿದೆ.
ಇದಕ್ಕಾಗಿ 536 ಕೋಟಿ ರೂ.ವೆಚ್ಚವನ್ನು ಎನ್ಡಿಆರ್ಎಫ್ನಡಿ ಭರಿಸಲಾಗಿದೆ. ಮಳೆಯಾಶ್ರಿತ, ಕಾಲುವೆ ಕೊನೆಯ ಭಾಗದ ಅಚ್ಚುಕಟ್ಟು ಪ್ರದೇಶದ ಬೆಳೆ ನಷ್ಟಕ್ಕೆ ಪರಿಹಾರ ವಿತರಣೆಗೆ 466 ಕೋಟಿ ರೂ. ಕಾದಿರಿಸಿದೆ. ದತ್ತಾಂಶ ಅಂತಿಮವಾದ ಬಳಿಕ ಜಮೆಗೆ ಕ್ರಮವಹಿಸಲಿದ್ದು, ಬೆಳೆ ನಷ್ಟ ಬಾಕಿಯಿರುವ ಎರಡು ಲಕ್ಷ ರೈತರ ತಾಂತ್ರಿಕ ಸಮಸ್ಯೆ ನಿವಾರಣೆ ಅಂತಿಮ ಘಟ್ಟದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೆ 27.50 ಲಕ್ಷ ರೈತರಿಗೆ ಬೆಳೆ ಪರಿಹಾರ ಪಾವತಿಯಾಗಿದೆ. ಇದಕ್ಕಾಗಿ 2,451 ಕೋಟಿ ರೂ. ವ್ಯಯಿಸಲಾಗಿದ್ದು, ರೈತರ ಒತ್ತಾಯದ ಮೇರೆಗೆ ಮಳೆಯಾಶ್ರಿತ, ಕಾಲುವೆ ಭಾಗದ ಏಳು ಲಕ್ಷ ರೈತರನ್ನೂ ಇನ್ಪುಟ್ ಸಬ್ಸಿಡಿಗೆ ಪರಿಗಣಿಸಲಾಗಿದೆ. ಎನ್ಡಿಆರ್ಎಫ್ನಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 3,454 ಕೋಟಿ ರೂ.ಗಳಲ್ಲಿ ಬೆಳೆ ಪರಿಹಾರ, ಜೀವನೋಪಾಯ ಭತ್ಯೆ ವೆಚ್ಚ ಸರಿದೂಗಿಸಲಾಗಿದೆ. ರೈತರ ಕೋರಿಕೆ ಪರಿಗಣಿಸಿದ್ದರಿಂದ ಹೆಚ್ಚುವರಿ ಮೊತ್ತ ಅಗತ್ಯವಿದೆ. ಎನ್ಡಿಆರ್ಎಫ್ನಲ್ಲಿ ಉಳಿದ ಮೊತ್ತಕ್ಕೆ ಎಸ್ಡಿಆರ್ಎಫ್ನಡಿ 272 ಕೋಟಿ ರೂ. ಬಳಸಿಕೊಂಡು ಹೆಚ್ಚುವರಿ ಪರಿಹಾರ ಸರಿದೂಗಿಸಲಾಗುತ್ತಿದೆ ಎನ್ನುತ್ತವೆ ಇಲಾಖೆ ಮೂಲಗಳು.
ನಿರ್ಲಕ್ಷ್ಯಕ್ಕೆ ಬೇಸರ: ಮಳೆ ಕೊರತೆಯಿಂದಾದ ಬೆಳೆ ನಷ್ಟವನ್ನು ಮಾತ್ರ ಸಮೀಕ್ಷೆಗೆ ಪರಿಗಣಿಸಲಾಗಿದೆ. ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದ, ಜಲಾಶಯದಲ್ಲಿ ನೀರಿನ ಕೊರತೆ, ಹಿಂಗಾರು ಹಂಗಾಮಿನ ಬೆಳೆ ನಷ್ಟ ಮಾಡಿಕೊಂಡ ರೈತರನ್ನು ಇಲಾಖೆ ನಿರ್ಲಕ್ಷಿಸಿದೆ. ವೈಜ್ಞಾನಿಕವಾಗಿ ಮರು ಸಮೀಕ್ಷೆ ಮಾಡಿ ಎಂದು ಒತ್ತಾಯಿಸಿದ ಬಳಿಕ ಕಾಲುವೆ ಕೊನೇ ಭಾಗದ ಅಚ್ಚುಕಟ್ಟು ಪ್ರದೇಶದ ರೈತರಿಗೂ ಬೆಳೆ ನಷ್ಟ ಪರಿಹಾರ ನೀಡುವುದಾಗಿ ತಿಳಿಸಿದ್ದರೂ ಪ್ರಕ್ರಿಯೆ ಮಂದ ಗತಿಯಲ್ಲಿದೆ ಎಂದು ರೈತರು ದೂರುತ್ತಿದ್ದಾರೆ.
ಅಪೂರ್ಣ ಪರಿಹಾರ: ಎಸ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಖುಷ್ಕಿ, ನೀರಾವರಿ ಹಾಗೂ ಬಹುವಾರ್ಷಿಕ ಬೆಳೆಗಳಿಗೆ (ಇನ್ಪುಟ್ ಸಬ್ಸಿಡಿ) ಪಾವತಿಸಿದೆ. ಮೊದಲ ಕಂತಿನಲ್ಲಿ ನೀಡಿದ ಎರಡು ಸಾವಿರ ರೂ. ಕಡಿತ ಮಾಡಿ ವಿತರಿಸಿದ್ದರಿಂದ ಬಹುತೇಕ ರೈತರಿಗೆ ಪುಡಿಗಾಸು ಸಿಕ್ಕಿದೆ. ಬೆಳೆ ನಷ್ಟಕ್ಕೆ ನ್ಯಾಯೋಚಿತ ಪರಿಹಾರ ಪೂರ್ಣ ಪ್ರಮಾಣದಲ್ಲಿ ದೊರೆತಿಲ್ಲ. ಕಿಸಾನ್ ಸಮ್ಮಾನ್ ನಿಧಿಯಡಿ ರಾಜ್ಯದ ಪಾಲಿನ ನಾಲ್ಕು ಸಾವಿರ ರೂ.ನಿಲ್ಲಿಸಿ, ಸಂಕಷ್ಟಕ್ಕೆ ತಳ್ಳಿದೆ ಎನ್ನುವುದು ಅನ್ನದಾತರ ಅಳಲು.
ವಂಚಿತರೇ ಹೆಚ್ಚು
ರಾಜ್ಯ ಸರ್ಕಾರ ಒಟ್ಟು 34.50 ಲಕ್ಷ ರೈತರಿಗೆ ಬೆಳೆ ನಷ್ಟ ಪರಿಹಾರ ಕೊಟ್ಟಂತಾಗಲಿದೆ. ಆದರೆ ಶೇ.60 ರಿಂದ 70 ರೈತರು ಬಿಟ್ಟು ಹೋಗಿದ್ದಾರೆ. ಪರಿಹಾರ ಪಡೆದವರಿಗಿಂತ ವಂಚಿತರೇ ಹೆಚ್ಚು ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಪ್ರತಿ ಹೆಕ್ಟೇರ್ ಖುಷ್ಕಿ ಬೆಳೆಗೆ 8,300 ರೂ., ನೀರಾವರಿ- 17,000 ತೋಟಗಾರಿಕೆ ಬೆಳೆಗೆ 22,500 ರೂ. ನಿಗದಿಪಡಿಸಿ, ಗರಿಷ್ಠ ಎರಡು ಹೆಕ್ಟೇರ್ಗೆ ನೀಡಿದ್ದು, ರೈತರು ಹೂಡಿದ ಬಂಡವಾಳಕ್ಕೆ ಹೋಲಿಸಿದರೆ ಭಿಕ್ಷೆ ಹಾಕಿದಂತಿದೆ. ಕೇಂದ್ರದ ಜತೆಗೆ ರಾಜ್ಯ ಸರ್ಕಾರವೂ ತನ್ನ ಪಾಲಿನ ಮೊತ್ತ ಸೇರಿಸಿದ್ದರೆ ಒಂದಿಷ್ಟು ಪ್ರಯೋಜನವಾಗುತ್ತಿತ್ತು. ಕಿಸಾನ್ ಸಮ್ಮಾನ್ ನಿಧಿಯಡಿ 4000 ರೂ. ಕೊಡುವುದನ್ನು ಮುಂದುವರಿಸಿದ್ದರೆ ಕಷ್ಟ ಕಾಲದಲ್ಲಿ ಆಸರೆಯಾಗುತ್ತಿತ್ತು ಎನ್ನುವುದು ರೈತರ ವೇದನೆಯಾಗಿದೆ.
ರಾಜ್ಯ ಸರ್ಕಾರ ಬಿಡಿಗಾಸು ಪರಿಹಾರ ಕೊಟ್ಟು ಕೈತೊಳೆದುಕೊಂಡಿದೆ. ಶೇ. 60 ರಿಂದ 70 ರೈತರು ವಂಚಿತರಾಗಿದ್ದಾರೆ. ಕಿಸಾನ್ ಸಮ್ಮಾನ್ ನಿಧಿಯಡಿ ನಾಲ್ಕು ಸಾವಿರ ರೂ. ಕೊಡುವುದನ್ನೂ ನಿಲ್ಲಿಸಿ ರೈತಾಪಿ ವರ್ಗವನ್ನು ಸಂಕಷ್ಟಕ್ಕೆ ದೂಡಿದೆ.
| ಕುರುಬೂರು ಶಾಂತಕುಮಾರ್ ಅಧ್ಯಕ್ಷ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ