Cancer content in arecanut-ಅಡಿಕೆ ಕಾನ್ಸರ್ ಕಾರಕ-ಡಬ್ಲ್ಯುಎಚ್ಒ ವರದಿ,ಆತಂಕ ಬೇಡ,ಅಡಿಕೆ ಬೆಳೆಗಾರರಿಗೆ ಇಲ್ಲಿದೆ ಪರ್ಯಾಯ ಮಾರ್ಗ

<Krushirushi> <ಅಡಿಕೆ ರೇಟು> >ಅಡಿಕೆ ಧಾರಣೆ> <ಅಡಿಕೆ ಬೆಲೆ> <ಅಡಿಕೆ ಮಾರುಕಟ್ಟೆ> <ಅಡಿಕೆ ರೇಟ್> <ಅಡಿಕೆ> <ಅಡಿಕೆ ಮಂಡಿ> <ಅಡಿಕೆ ಗಿಡ> <ಅಡಿಕೆ ತೋಟ> <Adike> <Adike rate> <adike plantation> <adike gida> <adike market> <adike mandi> <arecanut> <arecanut rate> <arecanut market> <arecanut plantation> <arecanut plant> <Arecanut export> <ರೈತ>

Cancer content in arecanut-ಅಡಿಕೆ ಕಾನ್ಸರ್ ಕಾರಕ-ಡಬ್ಲ್ಯುಎಚ್ಒ ವರದಿ,ಆತಂಕ ಬೇಡ,ಅಡಿಕೆ ಬೆಳೆಗಾರರಿಗೆ ಇಲ್ಲಿದೆ ಪರ್ಯಾಯ ಮಾರ್ಗ

Cancer content in arecanut-ಅಡಿಕೆ ಕಾನ್ಸರ್ ಕಾರಕ-ಡಬ್ಲ್ಯುಎಚ್ಒ ವರದಿ,ಅಡಿಕೆ ಬೆಳೆಗಾರರಿಗೆ ಇಲ್ಲಿದೆ ಪರ್ಯಾಯ ಮಾರ್ಗ

ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಗೆ ಮತ್ತೆ ಕ್ಯಾನ್ಸರ್‌ಕಾರಕ ಪಟ್ಟ ದಕ್ಕಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಅಂಗಸಂಸ್ಥೆಯೊಂದು ಅಡಕೆ ಬಳಕೆ ನಿಯಂತ್ರಿಸಿದರೆ ವಿಶ್ವದಲ್ಲಿ ಬಾಯಿ ಕ್ಯಾನ್ಸರ್‌ ಪ್ರಮಾಣವನ್ನು ಬಹುತೇಕ ತಗ್ಗಿಸಬಹುದು ಎಂದು ಇತ್ತೀಚೆಗೆ ವರದಿ ನೀಡಿದೆ.

ಈ ವರದಿಯು ಅಡಕೆ ಬಳಕೆ ಮೇಲೆ ನಿಯಂತ್ರಣ ಹೇರುವ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಇದೀಗ ತಂಬಾಕು ಮಾದರಿಯಲ್ಲೇ ಅಡಕೆ ಬೆಳೆ ನಿಯಂತ್ರಣ ಉಪಕ್ರಮಗಳಿಗೂ ಕಾರಣವಾಗುವ ಆತಂಕ ಬೆಳೆಗಾರರಲ್ಲಿ ಮೂಡಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಂಗಸಂಸ್ಥೆ ಇಂಟರ್‌ ನ್ಯಾಷನಲ್‌ ಏಜೆನ್ಸಿ ಫಾರ್‌ ರಿಸರ್ಚ್ ಆಯಂಡ್‌ ಕ್ಯಾನ್ಸರ್‌(ಐಎಆರ್‌ಸಿ) 2024 ಅ. 9ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಮತ್ತೆ ಅಡಕೆಯನ್ನು ಕ್ಯಾನ್ಸರ್‌ ಕಾರಕ ಎಂದು ಹೇಳಲಾಗಿದೆ. ಈ ವರದಿ ದಿ ಲ್ಯಾನ್ಸೆಟ್‌ ಅಂಕಾಲಜಿ ಎಂಬ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಐಎಆರ್‌ಸಿ ಸಂಸ್ಥೆ ಬಾಯಿ ಕ್ಯಾನ್ಸರ್‌ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಪ್ರತಿ ಐದು ವರ್ಷಕ್ಕೊಮ್ಮೆ ವಿಶ್ವ ಕ್ಯಾನ್ಸರ್‌ ವರದಿ ಪ್ರಕಟಿಸುತ್ತದೆ. ಈ ಹಿಂದಿನ ಐಎಆರ್‌ಸಿಯ ವರದಿಗಳಲ್ಲೂ ಅಡಕೆ ಕ್ಯಾನ್ಸರ್‌ಕಾರಕ ಎಂದೇ ಉಲ್ಲೇಖವಾಗಿದ್ದರೂ ಈಗಿನ ವರದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ.

ಅಡಕೆ ಬೆಳೆ ನಿಯಂತ್ರಣಕ್ಕೆ ಶಿಫಾರಸು:

ಐಎಆರ್‌ಸಿ ವರದಿಯಲ್ಲಿ ತಂಬಾಕು ಮಿಶ್ರಿತ ಅಡಕೆ ಮಾತ್ರವಲ್ಲ, ನೇರವಾಗಿ ಅಡಕೆ ಬೆಳೆಯನ್ನೇ ನಿಯಂತ್ರಿಸುವ ಪ್ರಸ್ತಾಪವಿದೆ. ಹೊಗೆ ರಹಿತ ತಂಬಾಕು(ತಿಂದು ಉಗುಳುವ) ಮತ್ತು ಅಡಕೆ ಬಳಕೆಗೆ ಕಡಿವಾಣ ಹಾಕುವ ಮೂಲಕ ವಿಶ್ವದ ಮೂರನೇ ಒಂದರಷ್ಟು ಬಾಯಿ ಕ್ಯಾನ್ಸರ್‌ ತಡೆಯಬಹುದು ಎಂಬ ವರದಿಯಲ್ಲಿ ಹೇಳಲಾಗಿದೆ.

ಜಾಗತಿಕವಾಗಿ ಹೊಗೆ ರಹಿತ ತಂಬಾಕಿನಿಂದ ಉಂಟಾಗಿರುವ 1,20,200 ಬಾಯಿ ಕ್ಯಾನ್ಸರ್‌ ಪ್ರಕರಣಗಳಲ್ಲಿ 83,400 ಪ್ರಕರಣ ಭಾರತದಲ್ಲೇ ದಾಖಲಾಗಿದೆ. 2022ರಲ್ಲಿ ಈ ಅಧ್ಯಯನ ನಡೆಸಿದ್ದು, ಬಹುತೇಕ ಅಧ್ಯಯನ ಉತ್ತರ ಭಾರತದಲ್ಲೇ ನಡೆದಿರುವುದು ಗಮನಾರ್ಹ. ಜಾಗತಿಕವಾಗಿ 300 ಮಿಲಿಯನ್‌ ಮಂದಿ ಹೊಗೆರಹಿತ ತಂಬಾಕು ದಾಸರಾಗಿದ್ದು, 600 ಮಿಲಿಯನ್‌ ಮಂದಿ ಅಡಕೆ ಬಳಸುತ್ತಾರೆ. ದಕ್ಷಿಣ ಮಧ್ಯ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಇತರೆ ಹೆಚ್ಚಿನ ದೇಶಗಳಲ್ಲಿ ಅಡಕೆ ಬಳಕೆಯಲ್ಲಿದೆ. ಹೊಗೆ ರಹಿತ ತಂಬಾಕು ಮತ್ತು ಅಡಕೆ ಉತ್ಪನ್ನಗಳು ಗ್ರಾಹಕರಿಗೆ ವಿವಿಧ ರೂಪದಲ್ಲಿ ಲಭ್ಯವಿರುತ್ತವೆ.

ತಂಬಾಕು, ಗುಟ್ಕಾ ಹಾಗೂ ಅಡಕೆಯಂಥ ಹೊಗೆರಹಿತ ತಂಬಾಕು ಉತ್ಪನ್ನಗಳ ಹೆಚ್ಚಿನ ಬಳಕೆಯಿಂದ ಏಷ್ಯಾದ ದೇಶಗಳಲ್ಲಿ ಭಾರತ ಅತೀ ಹೆಚ್ಚು ಬಾಯಿ ಕ್ಯಾನ್ಸರ್‌ ಪ್ರಕರಣ ಹೊಂದಿದೆ ಎಂದು ಕ್ಯಾನ್ಸರ್‌ ವಿಭಾಗದ ವಿಜ್ಞಾನಿ ಡಾ.ಹ್ಯಾರಿಯೆಟ್‌ ರುಮ್ಗೇ ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಹೊಗೆರಹಿತ ತಂಬಾಕು ಮತ್ತು ಅಡಕೆ ಬಳಕೆಯಿಂದ ಉಂಟಾಗುವ ಎಲ್ಲ ಬಾಯಿ ಕ್ಯಾನ್ಸರ್‌ ಪ್ರಕರಣಗಳಲ್ಲಿ ಭಾರತದಲ್ಲಿ 83,400, ಬಾಂಗ್ಲಾದೇಶ 9,700, ಪಾಕಿಸ್ತಾನ 8,900, ಚೀನಾ 3,200, ಮ್ಯಾನ್ಮಾರ್‌ 1,600, ಶ್ರೀಲಂಕಾ 1,300, ಇಂಡೋನೇಷ್ಯಾ 990 ಹಾಗೂ ಥಾಯ್‌ಲ್ಯಾಂಡ್‌ನಲ್ಲಿ 785 ಕೇಸ್‌ಗಳು ವರದಿಯಾಗಿದೆ.

ಅಡಕೆ ಬೆಳೆ ಮೇಲೆ ಪರಿಣಾಮ:

ಅಡಕೆ ಕ್ಯಾನ್ಸರ್‌ಕಾರಕ ಎಂಬ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕೆಲ ವರ್ಷಗಳಿಂದ ವಿಚಾರಣೆ ನಡೆಯುತ್ತಲೇ ಇದೆ. 1998 ರಿಂದಲೂ ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿ ಅಡಕೆ ಹಾನಿಕಾರಕ ಎಂದೇ ಉಲ್ಲೇಖಿಸಲಾಗುತ್ತಿದೆ. ಅಡಕೆ ಆರೋಗ್ಯದಾಯಕ, ಸಾಂಪ್ರದಾಯಿಕವಾಗಿಯೂ ಅಡಕೆ ಬಳಸುತ್ತಾರೆ. ಮೌಲ್ಯವರ್ಧಿತ ಉತ್ಪನ್ನವಾಗಿಯೂ ಉಪಯೋಗಿಸುತ್ತಾರೆ ಎಂಬುದನ್ನು ಆಧಾರ ಸಹಿತ ಸಾಬೀತುಪಡಿಸಲಾಗಿದೆ. ಇದರ ಜತೆಗೆ ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಮಾರುಕಟ್ಟೆ ಅಧ್ಯಯನ ವರದಿಗಳೂ ಅಭಿಪ್ರಾಯ ಮಂಡಿಸಿದ್ದರೂ ಅದು ಐಎಆರ್‌ಸಿ ತಲುಪಿಲ್ಲ. ಹೀಗಾಗಿ ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಸಾಬೀತುಪಡಿಸಲು ಸಾಧ್ಯವಾಗದೇ ಇರುವುದು ಈಗ ಅಡಕೆ ಬೆಳೆ ಮೇಲೆ ನಿಷೇಧದ ತೂಗುಗತ್ತಿಗೆ ಕಾರಣವಾಗಿದೆ.

ರೋಗಬಾಧೆಯಿಂದಾಗುವ ಅಡಕೆ ಬೆಳೆಹಾನಿ ಪರಿಹಾರಕ್ಕೆ ಯೋಜನೆಯಿಲ್ಲ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ

ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಚೀನಾ:

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡಕೆ ಹಾನಿಕಾರಕ ಎಂದು ವರದಿಗಳು ಬರುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಅಡಕೆ ಬೆಳೆಯುವ ಚೀನಾ ಅಡಕೆ ನಿಷೇಧಕ್ಕೂ ಮೊದಲೇ ಮೌಲ್ಯವರ್ಧಿತ ಆಹಾರ ಉತ್ಪನ್ನವಾಗಿ ಮಾರ್ಪಡಿಸಿ ಅಡಕೆ ಬೆಳೆ ಉಳಿಸಿಕೊಳ್ಳಲು ಉಪಾಯ ಕಂಡುಕೊಂಡಿದೆ. ಮುಂದಿನ ಡಬ್ಲ್ಯೂಎಚ್‌ಒ ಶೃಂಗ ಚೀನಾದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಡಕೆ ವಿಚಾರದಲ್ಲಿ ಚೀನಾ ಈಗಾಗಲೇ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

ಹಾಗಾದರೆ ಭಾರತೀಯರು ನಾವೇನು ಮಾಡಬಹುದು?ಇಲ್ಲಿದೆ ಪರಿಹಾರ

ಎಲೆ ಎಂದಾಕ್ಷಣ ಅಡಿಕೆ ಎಂಬ ಮಾತು ಹಿಂದೆನೇ ಬರುತ್ತೆ, ಅಡಿಕೆ ತಿನ್ನಲು ರುಚಿಯ ಜೊತೆಗೆ ಆರೋಗ್ಯಪೂರ್ಣ ಹೌದು ಹೀಗಾಗಿ ಅಡಿಕೆಯಲ್ಲಿರುವ ಔಷಧಿ ಗುಣಗಳ ಬಗ್ಗೆ ತಿಳಿದುಕೊಳ್ಳುವ ಲೇಖನ ನಿಮಗಾಗಿ


ಅಡಿಕೆ ಮಹತ್ವವನ್ನು ನಮ್ಮ ಗಾದೆಗಳಲ್ಲಿ ಅರ್ಥವತ್ತಾಗಿ ಹೇಳಿದ್ದಾರೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು ಅಡಿಕೆ ಕತ್ತರಿ ಒಳಗೆ ಸಿಕ್ಕಿಕೊಂಡಂತೆ ಹೋದರೆ ಒಂದು ಗೂಟ ಅಡಿಕೆ ಆದರೆ ಒಂದು ಮರ ಮುಂತಾದ ಗಾದೆಗಳಲ್ಲಿ ಅಡಿಕೆಯ ಪ್ರಮುಖತೆಯನ್ನು ವರ್ಣಿಸಲಾಗಿದೆ.

 ಅಡಿಕೆಯ ವೈವಿಧ್ಯತೆ ಹಲವಾರು ಬಗೆ
 ಇದಕ್ಕೆ ಸಾಮಾಜಿಕ ಧಾರ್ಮಿಕ ಹಾಗೂ ಆರ್ಥಿಕ ಮಹತ್ವಗಳಿವೆ. ಅಡಿಕೆ ಇಲ್ಲದೆ ಯಾವುದೇ ಪೂಜೆ ಪುನಸ್ಕಾರ ಸಭೆ ಸಮಾರಂಭ ಶುಭ ಕಾರ್ಯ ಅತಿಥಿಸತ್ಕಾರ ಸನ್ಮಾನ ಮದುವೆ ಮುಂಜಿ ಉಪನಯನ ನಾಮಕರಣ ಶವಸಂಸ್ಕಾರ ಇತ್ಯಾದಿ ನಡೆಯುವುದಿಲ್ಲ.

 ಅಡಿಕೆಯ ಔಷಧೀಯ ಗುಣಗಳು


 ಅಡಿಕೆ ಔಷಧಿಯ ಗುಣಗಳಿಂದಾಗಿಯೇ ಇದನ್ನು ಆಹಾರದ ನಂತರ ಹಾಗೂ ಪೂರ್ವದಲ್ಲಿ ಸೇವಿಸುವ ರೂಢಿ ಇದೆ

 ಎಲೆ ಮತ್ತು ಸುಣ್ಣದೊಂದಿಗೆ ಅಡಿಕೆಯನ್ನು ಜಗಿದಲ್ಲಿ ಬಾಯಿಯ ದುರ್ಗಂಧ ದೂರಗೊಳ್ಳುತ್ತದೆ.

 ಅಡಿಕೆಯನ್ನು ಬಯಡಿಸುವುದರಿಂದ ದವಡೆ ಮತ್ತು ಕೆನ್ನೆಗೆ ಒಳ್ಳೆಯ ವ್ಯಾಯಾಮವಾಗುತ್ತದೆ.

 ತಲೆ ಸಿಡಿತ ಹಲ್ಲು ನೋವು ನಾರು ಹುಣ್ಣು ತಿವಿಸೋರುವುದು ಮುಂತಾದವುಗಳಿಗೆ ಅಡಿಕೆ ಸೇವನೆ ಉಪಯುಕ್ತ

 ಅಡಿಕೆಯ ಸೇವನೆ ಕೆಲವೊಂದು ಅಣು ಜೀವಿಗಳನ್ನು(Anti Bacterial property)ಹತ್ತಿಕ್ಕವಲ್ಲದು.

 ಅಡಿಕೆಯನ್ನು ಹದವಾಗಿ ಹುರಿದು ಪುಡಿ ಮಾಡಿ ಕಾಫಿ ಅಂತ ಪಾನೀಯವನ್ನು ತಯಾರಿಸಿ ಕುಡಿಯುವುದುಂಟು.

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆಯಿಂದ ತಯಾರಿಸಿದ ಸುಪಾನ ಹಾಗೂ ಪೂಗ ಪಾನಿಯಗಳು ಅತಿ ಜನಪ್ರಿಯ

 ಆಯುರ್ವೇದದಲ್ಲಿ ವಿಶೇಷವಾಗಿ ಹಲವು ವಿಧದ ಚರ್ಮರೋಗಗಳಿಗೆ ( ವಿಸರ್ಪ ಗಜಕರ್ಣ ತುರಿಕಚ್ಚಿ ಇತ್ಯಾದಿ ) ಎಲೆ ಅಡಿಕೆ ಹಾಗೂ ಹಣ್ಣು ಅಡಿಕೆಗಳನ್ನ ಉಪಯೋಗಿಸುತ್ತಾರೆ.

 ಈ ಗುಣಗಳಿಂದ ಅಡಿಕೆಯನ್ನು ಔಷಧಿಕೃತ ಸಾಬೂನುಗಳ ತಯಾರಿಕೆಯಲ್ಲಿ ಬಳಸಲು ವಿಫಲ ಅವಕಾಶವಿದೆ.

 ಮಧುಮೇಹ ಹಾಗೂ ರಕ್ತದ ಒತ್ತಡಗಳಲ್ಲಿ ಅಡಿಕೆಯು ವಿಶೇಷ ಪರಿಣಾಮಕಾರಿಯಾಗಿರುವುದು ಎಂಬುದನ್ನು ಬಹಳ ಹಿಂದೆ ಆಯುರ್ವೇದ ತಜ್ಞರು ಕಂಡುಕೊಂಡಿದ್ದಾರೆ.

 ಟೇಪ್ ವರ್ಮ್ ಜಂತುಹುಳು ಇತ್ಯಾದಿಗಳಿಗೆ ಅಡಿಕೆ ಪರಿಣಾಮಕಾರಿ ಔಷಧಿ.

 ಅಡಿಕೆಯಲ್ಲಿ ಹಲ್ಲು ಪುಡಿ ತಯಾರಿಕೆಯಲ್ಲೂ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಟೂತ್ಪೇಸ್ಟ್ ಗಳನ್ನು ಉಪಯೋಗಿಸಬಹುದಾಗಿದೆ.

 ವಾತ ವ್ಯಾದಿಗೆ ಅಡಿಕೆಯನ್ನು ಉಪಯೋಗಿಸುತ್ತಾರೆ

 ಅಡಿಕೆಯಲ್ಲಿ  tasanin 15 ಪರ್ಸೆಂಟ್ ಕೊಬ್ಬು 14% ಅರೆ ಕೈ 0.1% ಅರೆಕೋಲೈಲ್ 0.07% ಮತ್ತು ಕೆಲವು ಸಸ್ಯ ಕ್ಷಾರ ಅಲ್ಕ ಲೊಯಿಲ್ಡ್ ಗಳಿವೆ.

 ಅರೆ ಕೋ ಲೈನ್ ಎಂಬ ಸಸ್ಯಕ್ಶರ ಆಲ್ಕಲೈನಲ್ಲಿ ಸ್ವಲ್ಪ ಪ್ರಮಾಣದ ಉತ್ತೇಜನ ಜನ್ನ ಅಂಶವಿರುತ್ತದೆ. ಆ ಕಾರಣದಿಂದ ಕೃಷಿ ಕೆಲಸಗಳಲ್ಲಾಗಲಿ ಅಥವಾ ಇತರ ಕೆಲಸ ಕಾರ್ಯಗಳಲ್ಲಿ ತೊಡಗಿರುವವರು ಆಯಾಸ ಪರಿಹಾರಕ್ಕಾಗಿ ಸ್ವಲ್ಪ ಹೊತ್ತು ಎಲೆ ಅಡಿಕೆ ಜಗೆಯುವುದು ಸಾಮಾನ್ಯ.

 ಅಡಿಕೆಯಲ್ಲಿ ಟ್ಯಾನಿಂಗ್ ಅಥವಾ ಚೊ lಗರು( ಹಸಿ ಅಡಿಕೆಯನ್ನು ಸಂಸ್ಕರಿಸಿ ಬೇಯಿಸಿದಾಗ ಲಭಿಸುವ ಅಂಶ )ಎಂಬ ಅಂಶವಿರುತ್ತದೆ. ಅದನ್ನು ಚರ್ಮದ ಮಾಡಲು ಮಸಿ ಅಥವಾ ಶಾಹಿ ರಟ್ಟುಗಳನ್ನು ಅಂಟಿಸಲು ಒಂದು ವಸ್ತುವಾಗಿ ಹಾಗೂ ಉಣ್ಣೆ ಮತ್ತು ಕಾಗದ ಗಳಿಗೆ ಬಣ್ಣ ಹಚ್ಚಲು ಉಪಯೋಗಿಸಲಾಗುತ್ತದೆ.

 ಅಡಿಕೆಯಿಂದ ತಯಾರಿಸಿದ ಬಣ್ಣವನ್ನು ಬಟ್ಟೆಗಳಿಗೆ ಬಣ್ಣ ಕೊಡಲು ಬಳಸುವುದುಂಟು.

 ಅಡಿಕೆ ಕಾಯಿಗಳಲ್ಲಿ 10 ರಿಂದ 14% ಕೊಬ್ಬು ಜಿಡ್ಡು ಇರುತ್ತದೆ ಸದ್ಯಕರಿಸಿದ ಅಡಿಕೆ ಕೊಬ್ಬು ಬೆಣ್ಣೆ ಅಥವಾ ಕೋಕೋ ಬೆನ್ನಿಗಿಂತ ಗಟ್ಟಿ ಇರುತ್ತದೆ ಇದರಿಂದ ತಯಾರಾದ ಸಿಹಿ ತಿನಿಸುಗಳು ವನಸ್ಪತಿಗಳನ್ನು ಬಳಸಿ ತಯಾರಿಸುವ ತಿಂಡಿಗಳಷ್ಟೇ ಉತ್ತಮವಾಗಿರುತ್ತದೆ.

 ಸುಗಂಧ ಸುಪಾರಿ ಅಥವಾ ಪರಿಮಳಯುಕ್ತ ಅಡಿಕೆ ಪುಡಿ

 ಒಣಗಿಸಿದ ಅಡಿಕೆಯನ್ನು ಒಡೆದು ಸಣ್ಣ ಸಣ್ಣ ಚೂರು ಅಥವಾ ಹೋಳುಗಳನ್ನಾಗಿ ಮಾಡಿ ಸುವಾಸನೆಯುಕ್ತ ವಸ್ತು (ಸುಗಂಧದ ದ್ರವ್ಯ) ಗಳು, ಅಡಿಕೆ ಪುಡಿ ಕಲ್ಲು ಸಕ್ಕರೆ ಲವಂಗ ಆಹಾರದ ಬಣ್ಣ ಪಚ್ಚ ಕರ್ಪೂರ ಮುಂತಾದವುಗಳನ್ನು ಸೇರಿಸಿ ಪೊಟ್ಟಣಗಳನ್ನಾಗಿ ಮಾಡಿ ಮಾರಾಟ ಮಾಡುತ್ತಾರೆ 

 ಈ ಸುಫರಿಯನ್ನು ಚಾಲಿ ಮತ್ತು ಕೆಂಪಡಿಕೆಗಳನ್ನು ಬಳಸಿ ತಯಾರಿಸುತ್ತಾರೆ

 ಒಣಕೊಬ್ಬರಿ ಸಕ್ಕರೆ ಮತ್ತು ಸಾಂಬಾರ್ ವಸ್ತುಗಳ ಪುಡಿಯಲ್ಲಿ ಸೇರಿಸುವುದುಂಟು.

 ಅಡಿಕೆ ಚೂರುಗಳು ಲವಂಗ ಜಾಯಿಕಾಯಿ ಜಾಪತ್ರೆ ಏಲಕ್ಕಿ ದಾಲ್ಚಿನ್ನಿ, ಕುಂಕುಮ ಕೇಸರಿ ಮೆಣಸು ಮುಂತಾದವುಗಳನ್ನು ಬಳಸಿ ಇದನ್ನು ತಯಾರಿಸುತ್ತಾರೆ.

 ಇತರ ಎಲ್ಲಾ ವಸ್ತುಗಳೊಂದಿಗೆ ಅಡಿಕೆ ಚೂರುಗಳನ್ನು ಬೇರೆ ಸಿಟ್ಟು ಗುಲಾಬಿ ತೈಲವನ್ನು ಈ ಮಿಶ್ರಣಕ್ಕೆ ಚುಮುಕಿಸಿ ಆನಂತರ ಡಬ್ಬಿ ಗಳಲ್ಲಿ ತುಂಬಿ ಭದ್ರಪಡಿಸುತ್ತಾರೆ

ವಿದೇಶಿ ವಸ್ತ್ರಕ್ಕೆ ಅಡಿಕೆ ಬಣ್ಣದ ಬಳಕೆ

ವಸ್ತ್ರೋದ್ಯಮದಲ್ಲಿ ಅಡಿಕೆಯ ಬಣ್ಣದ ಬಳಕೆ ಈಗ ವಿದೇಶಗಳಲ್ಲಿಯೂ ಹೆಚ್ಚುತ್ತಿದೆ. ಈ ನೈಸರ್ಗಿಕ ಬಣ್ಣದ ಉತ್ಕೃಷ್ಟತೆಯನ್ನು ಇನ್ನಷ್ಟು ಹೆಚ್ಚಿಸಿದರೆ ಅಡಿಕೆ ಕೃಷಿಯಲ್ಲಿ ಹೊಸ ಕ್ರಾಂತಿ ಉಂಟಾಗುವ ಸಾಧ್ಯತೆ ಇದೆ ಎಂದು ಅಡಿಕೆ ಕೃಷಿ ತಜ್ಞರು ಹೇಳುತ್ತಿದ್ದಾರೆ.

 ಕೆಂಪಡಿಕೆಯ ಕೊಯ್ಲೋತರ ಸಂಸ್ಕರಣೆಯ ಉಪ ಉತ್ಪನ್ನ ಚೊಗರು ಅಥವಾ ತೊಗುರು ಅನ್ನು ನೈಸರ್ಗಿಕ ಬಣ್ಣಕ್ಕೆ ಬಳಸಲಾಗುತ್ತಿದೆ. ಅಡಿಕೆಯ ತೊಗರಿನಿಂದ ಬಣ್ಣ ತಯಾರಿಕೆ ಬಹಳ ವರ್ಷಗಳಿಂದ ಇದೆ. ಅದು ಅತಿ ಕಡಿಮೆ ಪ್ರಮಾಣದಲ್ಲಿ ಇತ್ತು ಈಗ ಜಾಗತಿಕವಾಗಿ ಬೇಡಿಕೆ ಪಡೆದುಕೊಳ್ಳುತ್ತಿದೆ.

 ಮಧ್ಯವರ್ತಿಗಳಿಂದ ಚೊಗರು ಖರೀದಿಸಿ ಅಲ್ಪ ಪ್ರಮಾಣದಲ್ಲಿ ಸಂಸ್ಕರಿಸಿ ರಾಜಸ್ಥಾನ್ ಗುಜರಾತ್ ಉತ್ತರಪ್ರದೇಶದ ಕಂಪನಿಗಳಿಗೆ ಪೂರೈಸುತ್ತಿದ್ದೇವೆ ಎನ್ನುತ್ತಾರೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶೆಡ್ತಿಕೆರೆ ಗ್ರಾಮದ ಹವ್ಯಕ ಕೃಷಿ ಉದ್ಯೋಗ ಮತ್ತು ಕೈಗಾರಿಕಾ ಕಂಪನಿಯ ಸಂತೋಷ್ ಕುಮಾರ್.


 ಹಾಲಿನ ಪೌಡರ್ ನಂತೆ ಅಡಿಕೆಯ ತೊಗರಿನಿಂದ ಪೌಡರನ್ನು ಬೆಂಗಳೂರು ಹಾಗೂ ರಾಜಸ್ಥಾನದಲ್ಲಿ ಉತ್ಪಾದಿಸಿ ನಟ್ ಬ್ರೌನ್ ಹೆಸರಿನಲ್ಲಿ ಈ ಬಣ್ಣವನ್ನು ದೇಶ ವಿದೇಶಗಳಿಗೆ ಪೂರೈಸಲಾಗುತ್ತಿದೆ ಇದಕ್ಕೆ ಬೇಡಿಕೆಯು ಹೆಚ್ಚುತ್ತಿದೆ ಕಳಪೆ ಗುಣಮಟ್ಟದ ಅಡಿಕೆಯ ಬಣ್ಣ ವೃದ್ಧಿಸಲು ತೊಗರನ್ನು ಈಗಲೂ ಕೆಲವು ವ್ಯಾಪಾರಿಗಳು ಬಳಕೆ ಮಾಡುತ್ತಿದ್ದಾರೆ ಇದರಿಂದ ರೈತರಿಗೆ ಯಾವುದೇ ಲಾಭವಿಲ್ಲ ಬಣ್ಣ ತಯಾರಿಕೆಗೆ ಮಾರಾಟ ಮಾಡಿದರೆ ರೈತರು ಎರಡರಿಂದ ಮೂರು ಪಟ್ಟು ಆದಾಯ ಗಳಿಸಬಹುದು ಎಂದರು.


 ಶಿವಮೊಗ್ಗ ಜಿಲ್ಲೆ ಹೆಗ್ಗೋಡಿ ಎಲ್ಲಿರುವ ಪ್ರಸನ್ನ ಅವರ ಚರಕ ಸಂಸ್ಥೆಯವರು ಎರಡು ದಶಕಗಳಿಂದ ತೊಗರಿನಿಂದ ನೈಸರ್ಗಿಕ ಬಣ್ಣ ತಯಾರಿಸಿ ಅದನ್ನು ವಸ್ತ್ರೋದ್ಯಮದಲ್ಲಿ ವ್ಯಾಪಕವಾಗಿ ಬಳಸುತ್ತಿದ್ದಾರೆ ಜಗತ್ತಿನ ಪ್ರಸಿದ್ಧ 50 ವಸ್ತ್ರ ಉತ್ಪಾದನಾ ಸಂಸ್ಥೆಗಳು ಅಡಿಕೆ ಬಣ್ಣಬಳಕೆ ಆರಂಭಿಸಿವೆ. ರೇಷ್ಮೆ ಬಟ್ಟೆಗೂ ಇದನ್ನು ಬಳಸಲಾಗುತ್ತಿದೆ. ತಮಿಳುನಾಡು ಮತ್ತು ಚೆನ್ನಪಟ್ಟಣದ ಗೊಂಬೆ ತಯಾರಕರಾದ ವೆಂಕಟೇಶ್ ಅವರು ಗೊಂಬೆಗಳಿಗೆ ಈ ಬಣ್ಣ ಬಳಸಲು ಮುಂದಾಗಿದ್ದಾರೆ. ಇದು ಆಶಾದಾಯಕ ಬೆಳವಣಿಗೆ ಎಂಬುದು ಅಡಿಕೆ ತಜ್ಞ ಶ್ರೀ ಪಡ್ರೆ ಅವರ ವಿವರಣೆ.

 ಅಡಿಕೆಯಿಂದ ಬಣ್ಣ ತಯಾರಾಗುತ್ತದೆ ಎಂಬುದು ಅಡಿಕೆ ಬೆಳೆಯುವ ಶೇಕಡ 80ರಷ್ಟು ರೈತರಿಗೆ ಗೊತ್ತಿಲ್ಲ. ಅಡಿಕೆ ತೊಗರು ನೈಸರ್ಗಿಕ ಬಣ್ಣವಾಗಿ ಬಳಸಬಹುದು ಎಂಬುದು ಬಹುಪಾಲು ವಸ್ತ್ರೋದ್ಯಮಿಗಳಿಗೆ ಅರಿವಿಗೆ ಬಂದಿಲ್ಲ. ಈಗ ವರ್ಷಕ್ಕೆ ಅಂದಾಜು ಒಂದು ಲಕ್ಷ ಲೀಟರ್ ಟಗರು ಉತ್ಪಾದನೆ ಆಗುತ್ತಿದ್ದು ವ್ಯವಸ್ಥಿತವಾಗಿ ಮಾಡಿದರೆ 4 ಲಕ್ಷ ಲೀಟರ್ ವರೆಗೆ ಉತ್ಪಾದಿಸುವ ಅವಕಾಶ ಇದೆ ಚಗರು ಸಂಸ್ಕರಣೆ ಮತ್ತು ಅದರಿಂದ ಉತ್ಕೃಷ್ಟ ಗುಣಮಟ್ಟದ ನೈಸರ್ಗಿಕ ಬಣ್ಣ ತಯಾರಿಕೆಯ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕು. ಅದಕ್ಕೆ ರೈತರನ್ನು ಅನಿಗೊಳಿಸಿದರೆ ಅಡಿಕೆಯ ತೊಗರಿನಿಂದಲೂ ರೈತರು ಹೆಚ್ಚಿನ ಆದಾಯ ಗಳಿಸುವ, ಚೊಗರೇ ಮುಖ್ಯ ಉತ್ಪನ್ನ ವಾಗುವ ಅವಕಾಶ ಇದೆ ಎನ್ನುವುದು ಅವರ ವಿಶ್ವಾಸ.

 ಮಲೆನಾಡಿನಲ್ಲಿ ತಂಪು ವಾತಾವರಣದ ಪ್ರದೇಶದಲ್ಲಿ ಬೆಳೆಯುವ ಕೆಂಪಡಿಕೆಯಿಂದ ಪೊಗರು ಹೆಚ್ಚು ಉತ್ಪಾದನೆಯಾಗುತ್ತಿದೆ.ದ್ರವರೂಪದಲ್ಲಿರುವ ಅದನ್ನು ಖರೀದಿಸಿ ಸಂಸ್ಕರಿಸಿ ಹರಳೆಣ್ಣೆ ಅಥವಾ ಜೊನೆ ಬೆಲ್ಲದ ಮಾದರಿಗೆ ತಂದು ಮಾರಾಟ ಮಾಡುತ್ತೇವೆ ಎಂದು ಹೆಗ್ಗೋಡಿನ ಶ್ರೀಕಾಂತ್ ಹೇಳಿದರು ಈ ಬಣ್ಣದ ಬಳಕೆ ಚರಕ ಸಂಸ್ಥೆಯಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಅವರು ವಿವರಿಸಿದರು.

 ಅಚ್ಚು ಹಾಕುವಲ್ಲಿಯೂ ಅಚ್ಚುಮೆಚ್ಚು

 ನೂಲನ್ನು ಬಣ್ಣದಲ್ಲಿ ಅದ್ದುವ ವಿಧಾನಕ್ಕೆ ಅಡಿಕೆ ಬಣ್ಣ ಬಳಸುವ ವಿಧಾನ ಜನಪ್ರಿಯವಾಗಿದೆ. ಅಡಿಕೆಯಿಂದ ನೈಸರ್ಗಿಕ ಬಣ್ಣ ತಯಾರಿಸಿ ವಸ್ತ್ರೋದ್ಯಮಕ್ಕೆ ಬಳಸುವ ವಿಧಾನದ ಕುರಿತು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ 1996 ರಲ್ಲಿ ಡಾಕ್ಟರ್ ಗೀತಾ ಮಹಾಲೆ ಅವರು ಸಂಶೋಧನೆ ನಡೆಸಿದರು ಅಚ್ಚು ಹಾಕುವ ವಿಧಾನದಲ್ಲಿಯೂ ಈ ಬಣ್ಣಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆ.

 ಅಡಿಕೆಯ ಚೊಗರಿನ ದ್ರವರೂಪದ ಬಣ್ಣ ಬಳಸಿ ಬಟ್ಟೆಗೆ ಹಚ್ಚು ಹಾಕುವ ಪ್ರಯೋಗವನ್ನ ನಾವು ಆರಂಭಿಸಿದ್ದೇವೆ ಎಂದು ಗದಗ ಜಿಲ್ಲೆಯ ಹುಲಕೋಟಿಯ ರೂರಲ್ ಇಂಜಿನಿಯರಿಂಗ್ ಕಾಲೇಜಿನ ಟೆಕ್ಸ್ಟೈಲ್ ತಂತ್ರಜ್ಞಾನ ವಿಭಾಗ ಮುಖ್ಯಸ್ಥ ಪ್ರೊಫೆಸರ್  ಸೋಮನಗೌಡ ತಿಳಿಸಿದರು.

 ಏನಿದು ಚೊಗರು?

 ಎರಡು ವಿಧ ಒಂದು ಚಾಲಿ ಅಡಿಕೆ ಅಂದರೆ ಬಿಳಿ ಅಡಿಕೆ ಇದನ್ನು ಮರದಲ್ಲಿ ಅಡಿಕೆ ಹಣ್ಣು ಆದಾಗ ಕೊಯ್ದು ಒಣಗಿಸಿ ಮಾರಾಟ ಮಾಡಲಾಗುತ್ತದೆ.


 ಕೆಂಪಡಿಕೆ ಅಡಿಕೆ ಸುಲಿದು ಬಯಸುತ್ತಾರೆ ಕರ್ನಾಟಕದಲ್ಲಿ ಬೆಳೆಯುವ ಅಡಿಕೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಮಾಣ ಕೆಂಪು ಅಡಿಕೆ ಎದ್ದು ಶಿವಮೊಗ್ಗ ಉತ್ತರ ಕನ್ನಡ ಹಾಗೂ ಬಯಲು ಸೀಮೆಯಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತಿದೆ ಎಂದು ಕರೆಯಲಾಗುತ್ತಿದೆ.


 ತೊಗರನ್ನು ಸಾರ ಪೇಸ್ಟ್ ಪೌಡರ್ ರೂಪದಲ್ಲಿ ತಯಾರಿಸುವ ವಿಧಾನದಲ್ಲೂ ಆಗಲೇ ರೂಢಿಸಿಕೊಂಡಿದ್ದೇವೆ. ಅಡಿಕೆಯ ಬಣ್ಣದಿಂದ 50 ರಿಂದ 60 ಶೇಡ್ ಗಳನ್ನು ತರಬಹುದು ಎನ್ನುತ್ತಾರೆ ಡಾಕ್ಟರ್ ಗೀತಾ ಮಹಾಲೆ.


 ಅಡಿಕೆ ತೊಗರಿನಲ್ಲಿ ಗೆದ್ದಲು ನಿಯಂತ್ರಕ ಅಂಶ ಇದೆ ಪ್ಲೈವುಡ್ ತಯಾರಿಕೆಗೆ ಬೇಕಿರುವ ಅಂಟನ್ನು ತಯಾರಿಸಬಹುದು ನೈಸರ್ಗಿಕ ಬಣ್ಣ ಸೇರಿದಂತೆ ಪರ್ಯಾಯ ಬಳಕೆಗೆ ಒತ್ತು ನೀಡಿ ಅಡಿಕೆಯನ್ನು ಅಪರಾಧಿಪ್ರಜ್ಞೆಯಿಂದ ಮುಕ್ತಗೊಳಿಸಬೇಕಿದೆ ಎನ್ನುತ್ತಾರೆ ಅಡಿಕೆ ಕೃಷಿ ತಜ್ಞ ಶ್ರೀ ಪಡ್ರೆ.