Chrysanthemum crop under light-ಒಂದು ಎಕರೆ ಸೇವಂತಿ ಬೆಳೆಗೆ 140 ಲೈಟ್|ಎಕರೆಗೆ 10 ಲಕ್ಷ ಆದಾಯ ಗಳಿಸುತ್ತಿರುವ ರೈತ

Chrysanthemum crop under light-ಒಂದು ಎಕರೆ ಸೇವಂತಿ ಬೆಳೆಗೆ 140 ಲೈಟ್|ಎಕರೆಗೆ 10 ಲಕ್ಷ ಆದಾಯ ಗಳಿಸುತ್ತಿರುವ ರೈತ

Chrysanthemum crop under light-ಒಂದು ಎಕರೆ ಸೇವಂತಿ ಬೆಳೆಗೆ 140 ಲೈಟ್|ಎಕರೆಗೆ 10 ಲಕ್ಷ ಆದಾಯ ಗಳಿಸುತ್ತಿರುವ ರೈತ


ಸೇವಂತಿ ತಂದ ಲಾಭ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ನೀಡನೇಗಿಲು ಗ್ರಾಮದ ಯುವ ರೈತ ಹನುಮಂತಪ್ಪ ದೊಡ್ಡೇರಿ. ಹನುಮಂತಪ್ಪ ದೊಡ್ಡೇರಿಗೆ ಕೃಷಿಯಲ್ಲಿ ಏನಾದರೂ ಹೊಸತನ ತರಬೇಕು ಎನ್ನುವ ಹಂಬಲ. ಇದಕ್ಕಾಗಿ ಸಾಕಷ್ಟು ಕೃಷಿ ವಿವಿಗಳಿಗೆ ಅಲೆದಾಡಿ ಹಲವು ಮಾಹಿತಿ ಪಡೆದಿದ್ದಾರೆ. ಅಲ್ಲದೆ ಕೆಲ ವಿವಿಗಳಲ್ಲಿ ತರಬೇತಿ ಪಡೆದು ಅದನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ.

Chrysanthemum crop under ligjt|ಒಂದು ಎಕರೆ ಸೇವಂತಿ ಬೆಳೆಗೆ 140 ಲೈಟ್|ಎಕರೆಗೆ 10 ಲಕ್ಷ ಆದಾಯ ಗಳಿಸುತ್ತಿರುವ ರೈತ
https://youtu.be/QEDMBuRXzus 

ಹನುಮಂತಪ್ಪಗೆ ಹೆಚ್ಚು ಆಕರ್ಷಿಸಿದ್ದು ಸ್ಮಾರ್ಟ್ ಆಗ್ರಿ (ಸ್ಮಾರ್ಟ್ ಅಗ್ರಿಕಲ್ಟರ್). ಅದರಲ್ಲೂ ಪುಷ್ಪಕೃಷಿಯತ್ತ ವಾಲಿರುವ ಹನುಮಂತಪ್ಪ ಸೇವಂತಿ ಬೆಳೆಯುವ ಮೂಲಕ ಇದೀಗ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ತಮ್ಮ 30 ಗುಂಟೆ ಜಮೀನಿನಲ್ಲಿ ಸೆಂಟ್ ಯಲೋ ವೈರೈಟಿಯ ಸೇವಂತಿ ಬೆಳೆದಿದ್ದಾರೆ. ಈ ತಳಿಯ ವಿಶೇಷ ಅಂದರೆ ಗಿಡದಿಂದ ಹೂ ಕಟಾವ್ ಮಾಡಿದ ನಂತರ ಸುಮಾರು ನಾಲ್ಕು ದಿನಗಳ ಕಾಲ ಬಾಡದೆ ಇರುವುದು. ಹೀಗಾಗಿ ಈ ಸೆಂಟ್ ಯಲೋ ಸೇವಂತಿಗೆ ಸಾಕಷ್ಟು ಬೇಡಿಕೆ ಇದೆ.

ಕೃತಕ ಹಗಲು ಸೃಷ್ಟಿ

ಚಿಕ್ಕಬಳ್ಳಾಪುರದ ಲೈಟಿಂಗ್ ಕೃಷಿ ಬಗ್ಗೆ ಹೆಚ್ಚು ಆಕರ್ಷಿತರಾದ ಹನುಮಂತಪ್ಪ ಅಕ್ಟೋಬರ್ ತಿಂಗಳಲ್ಲಿ ಸೇವಂತಿ ಬೆಳೆದಿದ್ದಾರೆ. ಅಕ್ಟೋಬರ್ ಮತ್ತು ನವಂಬರ್ ತಿಂಗಳಲ್ಲಿ ಬೆಳೆಯುವ ಸೇವಂತಿಯ ಈ ತಳಿಗೆ ಕೃತಕ ಹಗಲು ಸೃಷ್ಠಿಸಬೇಕಾಗುತ್ತದೆ. ಸೇವಂತಿ ಸಸಿ ನಾಟಿ ಮಾಡಿದ ನಂತರ ಸುಮಾರು 40 ದಿನಗಳ ಕಾಲ ಈ ಸಸಿಗಳಿಗೆ ದಿನಕ್ಕೆ ನಾಲ್ಕು ಗಂಟೆ ಲೈಟಿಂಗ್ ಮಾಡಬೇಕಾಗುತ್ತದೆ. ಜಮೀನಿನಲ್ಲಿ ಕೃತಕವಾಗಿ ಹಗಲು ಸೃಷ್ಟಿಸಿ ಬೆಳಕಿನ ವ್ಯವಸ್ತೆ ಮಾಡಲಾಗುತ್ತದೆ.

ಹನುಮಂತಪ್ಪ ತಮ್ಮ 30 ಗುಂಟೆ ಜಮೀನಿನ ಸೇವಂತಿಗೆ ಸುಮಾರು 140 ಲೈಟ್‌ಗಳನ್ನು ಹಾಕಿ ಕೃತಕ ಹಗಲು ಸೃಷ್ಠಿಸಿದ್ದಾರೆ. ಅಕ್ಟೋಬರ್ ಮತ್ತು ನವಂಬರ್ ತಿಂಗಳಲ್ಲಿ ರಾತ್ರಿ ಹೆಚ್ಚು ಮತ್ತು ಹಗಲು ಕಡಿಮೆ ಇರುತ್ತೆ. ಹೀಗಾಗಿ ಕೃತಕ ಹಗಲು ಸೃಷ್ಟಿಸಬೇಕಾಗುತ್ತದೆ ಎನ್ನುತ್ತಾರೆ ಹನುಮಂತಪ್ಪ. ಈ ದಿನಗಳಲ್ಲಿ ದಿನಕ್ಕೆ ರಾತ್ರಿ ಐದು ಗಂಟೆ ಕೃತಕ ಹಗಲು ಸೃಷ್ಠಿಸುವದರಿಂದ ಸೇವಂತಿ ಸಸಿಗಳು ಹೆಚ್ಚು ಹೆಚ್ಚು ಟಿಸಿಲುಗಳಾಗುತ್ತವೆ. ಹೆಚ್ಚು ಟಿಸಿಲುಗಳಾಗುವದರಿಂದ ಅತ್ಯೇಧಿಕ ಮೊಗ್ಗುಗಳು ಬರುತ್ತವೆ. ಅಲ್ಲದೆ ಅತ್ಯಧಿಕ ಪುಷ್ಪಗಳು ಅರಳುತ್ತವೆ. ಅದಲ್ಲದೆ ಪುಷ್ಪಗಳ ಗಾತ್ರ ಸಹ ಅಧಿಕವಾಗಿದ್ದು ಅಧಿಕ ಲಾಭ ಪಡೆಯಬಹುದು ಎನ್ನುತ್ತಾರೆ ಹನುಮಂತಪ್ಪ.

ಒಂದು ಗಿಡದಿಂದ ಎರಡೂವರೆ ಕೆಜಿ ಸೇವಂತಿ

ಕೃತಕ ಬೆಳಕಿನ ವ್ಯವಸ್ಥೆ ಇಲ್ಲದೆ ಒಂದು ಸೇವಂತಿ ಗಿಡದಿಂದ 500 ಗ್ರಾಂ ಪುಷ್ಪ ಪಡೆಯಬಹುದು. ಆದರೆ ಲೈಟಿಂಗ್ ಮಾಡಿ ಬೆಳೆದರೆ ಸೇವಂತಿ ಒಂದು ಗಿಡದಿಂದ ಎರಡು ಕೆಜಿಯವರೆಗೆ ಸೇವಂತಿ ಬೆಳೆಯಬಹುದು ಎನ್ನುತ್ತಾರೆ ಹನುಮಂತಪ್ಪ. ಸೇವಂತಿ ಬೆಳೆ ಸುಮಾರು ಆರು ತಿಂಗಳ ಬೆಳೆಯಾಗಿದ್ದು ಒಂದು ಬಾರಿ ಪುಷ್ಪ ಬಿಡಲು ಆರಂಭಿಸಿದರೆ 50 ದಿನಗಳ ಕಾಲ ಸೇವಂತಿ ಪುಷ್ಪ ಪಡೆಯಬಹುದು.

ಸೆಂಟ್ ಯಲೋ ಪುಷ್ಪಕ್ಕೆ ಸಾಕಷ್ಟು ಬೇಡಿಕೆ ಇದ್ದು ಒಂದು ಕೆಜಿಗೆ ನೂರೈವತ್ತು ರೂಪಾಯಿ ಬೆಲೆ ಇದೆ. ಸೇವಂತಿ ಬೆಳೆಯಲ್ಲಿ ಸೊಂಪಾಗಿ ಬೆಳೆದಿದ್ದು ಪ್ರತಿದಿನ ಒಂದು ಕ್ವಿಂಟಲ್ ಸೇವಂತಿ ಪುಷ್ಪ ಬರುತ್ತಿದೆ. ಇದರಿಂದ ದಿನಕ್ಕೆ 15 ಸಾವಿರ ರೂಪಾಯಿ ಲಾಭ ಬರುತ್ತಿದ್ದು ಅದರಲ್ಲಿ ಆಳು ಸಾಗಾಣಿಕೆ ಖರ್ಚು ತಗೆದರೆ ಪ್ರತಿನಿತ್ಯ 13 ಸಾವಿರ ರೂಪಾಯಿ ನಿವ್ವಳ ಲಾಭವಾಗುತ್ತದೆ ಎನ್ನುತ್ತಾರೆ ಹನುಮಂತಪ್ಪ.ಹಾವೇರಿ ಜಿಲ್ಲೆಯಲ್ಲಿಯೇ ಸೇವಂತಿಯನ್ನ ಲೈಟ್ ಹಾಕಿ ಬೆಳೆದ ಪ್ರಥಮ ರೈತ ನಾನು ಎನ್ನುತ್ತಾರೆ ಹನುಮಂತಪ್ಪ.

ಇವರ ಈ ಲೈಟ್ ಕೃಷಿ ಸ್ಥಳೀಯ ರೈತರಗೆ ಆಶ್ಚರ್ಯ ತಂದಿದೆ. ಜೊತೆಗೆ ಹನುಮಂತಪ್ಪನ ಜೊತೆ ಈ ಕುರಿತಂತೆ ರೈತರು ಮಾಹಿತಿ ಪಡೆದಿದ್ದಾರೆ. ರೈತರು ಸಂಪ್ರದಾಯಕ ಬೆಳೆಗಳಿಂದ ಹೊರಬರಬೇಕು ಬೇರೆ ಬೇರೆ ರೀತಿಯ ಕೃಷಿಗಳನ್ನು ಮಾಡಬೇಕು. ಹಿಂದಿನ ಕಾಲದಂತೆ ಮೆಕ್ಕೆಜೋಳ,ಶೇಂಗಾ, ಹತ್ತಿ ಸೇರಿದಂತೆ ಸಾಂಪ್ರದಾಯಕ ಬೆಳೆಗಳನ್ನು ಬಿಟ್ಟು ಕೃಷಿಯಲ್ಲಿನ ಹೊಸ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳಬೇಕು.

ಇದರಿಂದ ರೈತರು ಅಧಿಕ ಲಾಭಗಳಿಸಬಹುದು ಎನ್ನುತ್ತಾರೆ ಹನುಮಂತಪ್ಪ. ಹನುಮಂತಪ್ಪಗೆ ಪತ್ನಿ ಜ್ಯೋತಿ ಸಾಥ್ ನೀಡಿದ್ದು ದಂಪತಿಯ ಈ ಪುಷ್ಪ ಕೃಷಿ ಆರು ತಿಂಗಳ ಕಾಲಾವಧಿ ಹೊಂದಿದ್ದು 30 ಗುಂಟೆ ಜಮೀನಿನಲ್ಲಿ ಆರು ತಿಂಗಳಲ್ಲಿ ಐದು ಲಕ್ಷ ರೂಪಾಯಿ ಆದಾಯವನ್ನು ಈ ದಂಪತಿ ಗಳಿಸಿದ್ದಾರೆ.

Chrysanthemum crop under ligjt|ಒಂದು ಎಕರೆ ಸೇವಂತಿ ಬೆಳೆಗೆ 140 ಲೈಟ್|ಎಕರೆಗೆ 10 ಲಕ್ಷ ಆದಾಯ ಗಳಿಸುತ್ತಿರುವ ರೈತ
https://youtu.be/QEDMBuRXzus