Aslesha male-ಇಂದಿನಿಂದ ಆಶ್ಲೇಷ ಮಳೆ,ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ, ಅಸಲೆ ಮಳೆ ಕೈತುಂಬಾ ಬೆಳೆ
Aslesha male-ಇಂದಿನಿಂದ ಆಶ್ಲೇಷ ಮಳೆ,ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ, ಅಸಲೆ ಮಳೆ ಕೈತುಂಬಾ ಬೆಳೆ

Aslesha male-ಇಂದಿನಿಂದ ಆಶ್ಲೇಷ ಮಳೆ,ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ, ಅಸಲೆ ಮಳೆ ಕೈತುಂಬಾ ಬೆಳೆ
ಕರಾವಳಿ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡದ ವಾತಾವರಣದೊಂದಿಗೆ ಅಲ್ಲಲ್ಲಿ ಒಂದೆರಡು ತುಂತುರು ಮಳೆಯ ಮುನ್ಸೂಚೆನೆ ಇದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಸಾಧ್ಯತೆ ಇದೆ.
ಈಗಿನಂತೆ ಆಗಸ್ಟ್ 14ರ ತನಕವೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಗಳಿದ್ದು 15ರಿಂದ 20ರ ತನಕ ವಾಯುಭಾರ ಕುಸಿತದ ಪರಿಣಾಮದಿಂದ ಮುಂಗಾರು ಚುರುಕಾಗುವ ಲಕ್ಷಣಗಳಿವೆ.
ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಅವಧಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಅಲ್ಲಲ್ಲಿ ಸಣ್ಣ ಪ್ರಮಾಣದ ತುಂತುರು ಮಳೆಯ ಸಾಧ್ಯತೆ ಇದೆ.
ಈಗಿನಂತೆ ಆಗಸ್ಟ್ 16ರ ತನಕ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಗಳಿದ್ದು, 17ರಿಂದ 19ರ ತನಕ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಒಳನಾಡು : ಉತ್ತರ ಒಳನಾಡಿನ ಧಾರವಾಡ, ಗದಗ, ದಾವಣಗೆರೆ, ಕಲಬುರ್ಗಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದ್ದು, ರಾಯಚೂರು, ಯಾದಗಿರಿ ಜಿಲ್ಲೆಗಳ ಅಂದ್ರಾ ಗಡಿ ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ
ದಕ್ಷಿಣ ಒಳನಾಡಿನ ಮೈಸೂರಿನ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ.
ಈಗಿನಂತೆ ಆಗಸ್ಟ್ 12ರಿಂದ ಉತ್ತರ ಒಳನಾಡು ಭಾಗಗಳಲ್ಲಿ ಆಗಸ್ಟ್ 19ರ ತನಕ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಆಗಸ್ಟ್ 17ರ ತನಕ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ 16ರಂದು ಒಡಿಸ್ಸಾ ಕರಾವಳಿ ಮೂಲಕ ಪ್ರವೇಶಿಸುವ ಸಾಧ್ಯತೆಗಳಿವೆ.
Male nakshatragalu-2025ನೇ ಸಾಲಿನ ಮಳೆ ನಕ್ಷತ್ರಗಳು,ಮಳೆ ದಿನಾಂಕ ಹಾಗೂ ಗಾದೆಮಾತುಗಳು
2025 ನೇ ಸಾಲಿನ ಮಳೆ ನಕ್ಷತ್ರಗಳು(Male nakshatragalu)
1.ಅಶ್ವಿನಿ-
ದಿನಾಂಕ-14-4-2025
ಸಾಮಾನ್ಯ ಮಳೆ
ಗಾದೆ-ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು, ಅಶ್ವೀನಿ ಸನ್ಯಾಸಿನೀ,
2.ಭರಣಿ
ದಿನಾಂಕ-28-4-2025
ಸಾಮಾನ್ಯ ಮಳೆ
ಗಾದೆ-ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ,ಭರಣಿ ಸುರಿದರೆ ಧರಣಿ ಬದುಕೀತು
3.ಕೃತಿಕಾ
ದಿನಾಂಕ-11-5-2025
ಸಾಮಾನ್ಯ ಮಳೆ
ಗಾದೆ-ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು
4.ರೋಹಿಣಿ-
ದಿನಾಂಕ-25-5-2025
ಉತ್ತಮ ಮಳೆ
ಗಾದೆ-ರೋಹಿಣಿ ಮಳೆ ಓಣಿಯೆಲ್ಲಾ ಕೆಸರು
5.ಮೃಗಶಿರ
ದಿನಾಂಕ-ಜೂನ್ 8 ರಿಂದ ಜೂನ್ 21ರವರೆಗೆ
ಉತ್ತಮ ಮಳೆ
ಗಾದೆ-ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು
6.ಆರಿದ್ರಾ
ದಿನಾಂಕ(ಜೂನ್ 22 ರಿಂದ ಜುಲೈ 4ರವರೆಗೆ)
ಉತ್ತಮ ಮಳೆ
ಗಾದೆ-ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ, ಆರಿದ್ರಾ ಮಳೆ ಆರದೆ ಹುಯ್ಯುತ್ತೇ, ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ, ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.
7.ಪುನರ್ವಸು
ದಿನಾಂಕ-6-7-2025
ಉತ್ತಮ ಮಳೆ
ಗಾದೆ: ಪುನವ೯ಸು ಮಳೆ ಬಂದು ಪಂಚಾಂಗ ಓದಾಯ್ತು, ಎಳೆ ಕರು ರಾಸಾಯ್ತು.
8.ಪುಷ್ಯ
ದಿನಾಂಕ-20-7-2025
ಉತ್ತಮ ಮಳೆ
ಗಾದೆ: ಪುಷ್ಯ ಮಳೆ ಭಾಷೆ ಕೂಟ್ಟ ಮಳೆ (ತಪ್ಪಿಸುವುದಿಲ್ಲ) ಪುಷ್ಯದಲಿ ನೆಟ್ಟ ಗಿಡ ಪುಟುಗೋಸಿ ಆದೀತು.
9.ಆಶ್ಲೇಷ
ದಿನಾಂಕ-ಆಗಸ್ಟ್ 3 ರಿಂದ ಆಗಸ್ಟ್ 15ರವರೆಗೆ
ಗಾದೆ-ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ, ಅಸಲೆ ಮಳೆ ಕೈತುಂಬಾ ಬೆಳೆ, ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು
10.ಮಘ
ದಿನಾಂಕ-ಆಗಸ್ಟ್ 17 ರಿಂದ ಆಗಸ್ಟ್ 29ರವರೆಗೆ
ಉತ್ತಮ ಮಳೆ
ಗಾದೆ-ಬಂದರೆ ಮಗೆ ಹೋದರೆ ಹೊಗೆ, ಬಂದರೆ ಮಘೆ ಇಲ್ಲದಿದ್ದರೆ ಧಗೆ, ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.
11.ಹುಬ್ಬ
ದಿನಾಂಕ-31-8-2025
ಉತ್ತಮ ಮಳೆ
ಗಾದೆ-ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ. ಹುಬ್ಬೆ ಮಳೆ ಅಬ್ಬೇ ಹಾಲು ಉಂಡಂತೆ
12.ಉತ್ತರ
ದಿನಾಂಕ-13-09-2025
ಉತ್ತಮ ಮಳೆ
ಗಾದೆ-ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ. ಉತ್ತರ ಎದುರುತ್ತರದ ಮಳೆ
13.ಹಸ್ತ
ದಿನಾಂಕ-27-9-2025
ಉತ್ತಮ ಮಳೆ
14.ಚಿತ್ತ
ದಿನಾಂಕ-11-10-2025
ಉತ್ತಮ ಮಳೆ
ಗಾದೆ-ಕುರುಡು ಚಿತ್ತೆ ಎರಚಿದತ್ತ ಬೆಳೆ.
15.ಸ್ವಾತಿ
ದಿನಾಂಕ-24-10-2025
ಉತ್ತಮ ಮಳೆ
ಗಾದೆ-ಸ್ವಾತಿ ಮಳೆ ಮುತ್ತಿನ ಬೆಳೆ.
16.ವಿಶಾಖ
ದಿನಾಂಕ-6-11-2025
ಉತ್ತಮ ಮಳೆ
ಗಾದೆ-ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.
ಎಲ್ಲ ರೈತಬಾಂದವರಿಗೂ ನಮಸ್ಕಾರ
ರೈತರಿಗೆ ಕೃಷಿ ಸಂಬಂದಿತ ಮಾಹಿತಿಯನ್ನು ವೀಡಿಯೋ ಮೂಲಕ ತಿಳಿಸಲು Krushi Rushi ಎಂಬ ಯೂಟೂಬ್ ಚಾನೆಲ್ https://youtu.be/vVbsb6q_eqs ಪ್ರಾರಂಭಿಸಿದ್ದು,ಚಾನಲ್ subscribe ಮಾಡಿ ಮತ್ತು ಕೃಷಿ ಸಂಬಂದಿತ ಲೇಖನಗಳ ಮೂಲಕ ತಿಳಿಸಲು www.krushirushi.in website ಪ್ರಾರಂಬಿಸಿದ್ದು, ರೈತರು ಅದರ ಪ್ರಯೋಜನ ಪಡೆಯಲು ಈ ಕೆಳಗಿನ ಲಿಂಕ್ ಮೂಲಕ Whats app ನಲ್ಲಿ ಜಿಲ್ಲಾವಾರು Krushi Rushi group ಸೇರಬೆಕೆಂದು ಈ ಮೂಲಕ ವಿನಂತಿಸುಕೊಳ್ಳುತ್ತೇನೆ.
https://krushirushi.in/contact-us
ಇಂತಿ ನಿಮ್ಮ
ಶಿವನಗೌಡ ಪಾಟೀಲ
M.Sc(ಕೃಷಿ), ಕೀಟಶಾಸ್ತ್ರ