Fertiliser feeder-ಗೊಬ್ಬರ ಹಾಕಲು ಬಂತು ಸುಲಭ ಸಾಧನ-ಇದರಿಂದ ಉಳಿಯಲಿದೆ ಹೆಚ್ಬಿನ ಗೊಬ್ಬರ,ಕೂಲಿಕಾರ್ಮಿಕರ ಖರ್ಚು

<Krushirushi> <Fertiliser feeder> <ಗೊಬ್ಬರ ಹಾಕುವ ಸಾಧನ> <ಗೊಬ್ಬರ> <ರಸಗೊಬ್ಬರ>

Fertiliser feeder-ಗೊಬ್ಬರ ಹಾಕಲು ಬಂತು ಸುಲಭ ಸಾಧನ-ಇದರಿಂದ ಉಳಿಯಲಿದೆ ಹೆಚ್ಬಿನ ಗೊಬ್ಬರ,ಕೂಲಿಕಾರ್ಮಿಕರ ಖರ್ಚು

Fertliser feeder-ಗೊಬ್ಬರ ಹಾಕಲು ಬಂತು ಸುಲಭ ಸಾಧನ-ಇದರಿಂದ ಉಳಿಯಲಿದೆ ಹೆಚ್ಬಿನ ಗೊಬ್ಬರ,ಕೂಲಿಕಾರ್ಮಿಕರ ಖರ್ಚು 

ರೈತ ಬಾಂಧವರೇ ನಾವೆಲ್ಲ ಬೆಳೆಗಳಿಗೆ ಔಷಧಿ ಸಿಂಪಡಿಸಲು  ಸ್ಪ್ರೇಯರ್  ಗಳನ್ನು ಬೆನ್ನಿಗೆ ಕಟ್ಟಿಕೊಳ್ಳುವುದನ್ನು ನೋಡಿದ್ದೇವೆ. ಈ ಸ್ಪ್ರೇಯರ್ ಗಳನ್ನು ಬಳಸಿ ಕೀಟ ಮತ್ತು ರೋಗಗಳನ್ನು ಹತೋಟಿ ಮಾಡುತ್ತಿದ್ದೇವೆ. ಅದೇ ರೀತಿಯಾಗಿ ಈ ಸ್ಪೇಯರ್ ಗಳಲ್ಲಿ ನೀರಿನಲ್ಲಿ ಕರಗುವಂತಹ ಗೊಬ್ಬರಗಳನ್ನು ಸಿಂಪರಣೆ ಮಾಡುತ್ತಿದ್ದೇವೆ.

 ಆದರೆ ಹರಳು ರೂಪದ ಗೊಬ್ಬರಗಳನ್ನ ಹಾಕಲು ಈಗಲೂ ಸಹ ರೈತರು ಸೊಂಟಕ್ಕೆ  ಬಟ್ಟೆಯನ್ನು ಕಟ್ಟಿಕೊಂಡು ಅಥವಾ ಬಕೆಟ್ ಬಳಸುತ್ತಾರೆ. ಇದರಿಂದ ರೈತರಿಗೆ ಶ್ರಮದಾಯಕ. ಒಂದು ಎಕರೆ ಗೊಬ್ಬರ ಹಾಕಲು ಕನಿಷ್ಠ ಇಬ್ಬರು ಕೃಷಿ ಕಾರ್ಮಿಕರ ಅಗತ್ಯ ಬೀಳುತ್ತದೆ. ಹಾಗೂ ಗೊಬ್ಬರ ಹಾಕುವಾಗ ಸರಿಯಾದ ಪ್ರಮಾಣದಲ್ಲಿ ಗೊಬ್ಬರ ಗಿಡಗಳಿಗೆ ಬೀಳುವುದಿಲ್ಲ. ಬಕೆಟ್ ನಿಂದ ಗೊಬ್ಬರ ಹಾಕುವಾಗ ಸಾಕಷ್ಟು ಗೊಬ್ಬರ  ನೆಲದ ಮೇಲೆ ಬಿದ್ದು ಹಾಳಾಗುತ್ತದೆ.

 ಈ ಎಲ್ಲ ಸಮಸ್ಯೆಗಳನ್ನು ಮನಗಂಡ Adaptive agritech solution  ರೈತರಿಗೆ ಅನುಕೂಲ ವಾಗುವ ರೀತಿಯಲ್ಲಿ ಗೊಬ್ಬರ ಹಾಕುವ ಸಾಧನವನ್ನು  ಕಂಡುಹಿಡಿದಿದೆ. ಇದನ್ನು ಫರ್ಟಿಲೈಸರ್ ಫೀಡರ್ ಎಂದು ಕರೆಯಬಹುದು.

 ಈ ಫರ್ಟಿಲೈಝರ್ ಫೀಡರ್ ನಲ್ಲಿ 16 ಕೆಜಿ ಗೊಬ್ಬರವನ್ನು ಹಾಕಿಕೊಂಡು, ಗಿಡಗಳಿಗೆ ಸುಲಭವಾಗಿ, ಯಾವುದೇ ಆಯಸವಿಲ್ಲದೆ,ಸರಿಯಾದ ಪ್ರಮಾಣದಲ್ಲಿ ಹಾಕಬಹುದು. ಇದನ್ನು ನಾವು ಸ್ಪ್ರೇಯರ್ ಅನ್ನು  ಹೇಗೆ ಬೆನ್ನಿಗೆ ಕಟ್ಟಿಕೊಳ್ಳುತ್ತೇವೆ ಹಾಗೆ ಬೆನ್ನಿಗೆ ಕಟ್ಟಿಕೊಂಡು ಗೊಬ್ಬರವನ್ನು ಹಾಕಬಹುದು.ಬೆಳೆಗಳಿಗೆ ಅನುಗುಣವಾಗಿ ಯಾವ ಗೊಬ್ಬರ ಬೇಕು, ಅದೇ ರೀತಿಯಾಗಿ ನಾವು ಅದನ್ನು ಅಡ್ಜಸ್ಟ ಮಾಡಬಹುದು.ಸಣ್ಣ ಕಾಳು,ದೊಡ್ಡ ಕಾಳು,ಸಾಲು ಗೊಬ್ಬರ ಹೀಗೆ ಬೇಕಾದ ರೀತಿಯಲ್ಲಿ ಬಳಸಬಹುದು. ಗೊಬ್ಬರ ಹಾಕಿದ ನಂತರ ಇದೇ ಸಾಧನದ attachment ಬಳಸಿ ಮಣ್ಣು ಮುಚ್ಚಬಹುದು.ಇದರಿಂದ ಗೊಬ್ಬರ ಆವಿಯಾಗುವುದಿಲ್ಲ.

 ಇದರಿಂದ ಗೊಬ್ಬರದ ಸರಿಯಾದ ಪ್ರಮಾಣ ಗಿಡಗಳಿಗೆ ದೊರಕಲಿದೆ. ಹೆಚ್ಚಿನ ಪ್ರಮಾಣದ ಗೊಬ್ಬರ ಹಾಳಾಗುವುದಿಲ್ಲ. ಹೆಚ್ಚಿನ ಪ್ರಮಾಣದ ಗೊಬ್ಬರದಿಂದ ಕಳೆಗಳು ಹುಟ್ಟುತ್ತವೆ. ಈ ಸಾಧನದಿಂದ ಹೆಚ್ಚಿನ ಪ್ರಮಾಣದ ಗೊಬ್ಬರ ಬೀಳದೆ ಇರುವುದರಿಂದ ಕಳೆಗಳು ಹುಟ್ಟುವುದಿಲ್ಲ.ಒಂದು ಗಂಟೆಯಲ್ಲಿ ಒಂದು ಎಕರೆಯಷ್ಟು ಜಮೀನಿಗೆ ಗೊಬ್ಬರವನ್ನು ಹಾಕಬಹುದು.

 ಈ ಗೊಬ್ಬರ ಹಾಕುವ ಸಾಧನವನ್ನು ಬೆನ್ನಿಗೆ ಕಟ್ಟಿಕೊಂಡು ನಾವು ಆಯಾಸವಿಲ್ಲದೆ ಫೋನಿನಲ್ಲಿ ಮಾತನಾಡಿಕೊಂಡು, ಧಣಿವಾದಾಗ ನೀರು ಕುಡಿದುಕೊಂಡು ಆರಾಮವಾಗಿ ಬಳಸಬಹುದು.


 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

Adaptive Agritech solution 

80951 63303