ಗಂಗಾ ಕಲ್ಯಾಣ ಯೋಜನೆಯಡಿ ಬೊರ್ವೇಲ್ ಕೊರೆಸಲು 3.5 ಲಕ್ಷ ಸಬ್ಸಿಡಿ, ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್-Ganga kalyana yojane 2024
<Krushirushi> <ಗಂಗಾಕಲ್ಯಾಣ ಯೋಜನೆ> <ಗಂಗಾಕಲ್ಯಾಣಯೋಜನೆ> <ಗಂಗಾಕಲ್ಯಾಣ ಯೋಜನೆ 2024> <Ganga Kalyan yojana 2024> <Gangakalyanyojane2024> <Freeborewell> <Free borewell> <ಉಚಿತ ಬೋರ್ ವೆಲ್> <ಉಚಿತಬೋರ್ವೇಲ್> <ರೈತ> <ಸಹಾಯಧನ> <ಸಂದಾಯ> <ಹಣ> <ನೀರಾವರಿ>
ಗಂಗಾ ಕಲ್ಯಾಣ ಯೋಜನೆಯಡಿ ಬೊರ್ವೇಲ್ ಕೊರೆಸಲು 3.5 ಲಕ್ಷ ಸಬ್ಸಿಡಿ, ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್-Ganga kalyana yojane 2024
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://kmdconline.karnataka.gov.in/Portal/login
ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಆಧಾರ್ ನಂಬರ್ ಹಾಕಿ,captcha code ಹಾಕಿ Next ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ನಂಬರ್ ಗೆ ಬರುವ OTP ಹಾಕಿ,continue ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ Digilocker account ತೆರೆದುಕೊಳ್ಳುತ್ತದೆ, Allow ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಬೇಕಾದ 6 ಸಂಖ್ಯೆಯ mPIN ಹಾಕಿ ಸಲ್ಲಿಸಿ ಕ್ಲಿಕ್ ಮಾಡಿ
ನಂತರ ಅಗತ್ಯ ದಾಖಲೆಗಳನ್ನು ಅಪ್ಲೌಡ್ ಮಾಡಿ ಅರ್ಜಿ ಸಲ್ಲಿಸಿ
ಅಥವಾ
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ,ಅರ್ಜಿ ನಮೂನೆಯನ್ನು ಭರ್ತಿ ಮಾಡಿ,ದೇವರಾಜ ಅರಸು ಇಲಾಖೆಗೆ ಸಲ್ಲಿಸಿ
https://kvcdc.karnataka.gov.in/uploads/media_to_upload1658122511.pdf
ಯೋಜನೆಯಡಿ ಸಣ್ಣ ಹಾಗೂ ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಿ ಉಚಿತವಾಗಿ ಕೊಳವೆ ಬಾವಿ/ ತೆರೆದ ಬಾವಿಯ ಸೌಲಭ್ಯ ಪಡೆಯಬಹುದಾಗಿದ್ದು ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಸರಕಾರದ ಬಜೆಟ್‌ನಲ್ಲಿ ಬಿಡುಗಡೆಯಾದ ಅನುದಾನದ ಆಧಾರದ ಮೇಲೆ ಗಂಗಾ ಕಲ್ಯಾಣ ಯೋಜನೆಗೆ ಹಣ ಬಿಡುಗಡೆ ಆಗುತ್ತದೆ.
ಅಂದರೆ ಆಯಾ ನಿಗಮಗಳಲ್ಲಿ ಅದರದ್ದೇ ಆದ ನಿಯಮಗಳು ಜಾರಿಯಲ್ಲಿವೆ.
ಆಯ್ಕೆ ಪಟ್ಟಿ ಮತ್ತು ವಿಧಾನ ಹೇಗೆ?
ಜಿಲ್ಲಾ ವ್ಯವಸ್ಥಾಪಕರು ಪ್ರತೀ ಜಿಲ್ಲೆಯಲ್ಲಿ ಜಾಹೀರಾತಿನ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸುತ್ತಾರೆ. ಆನ್‌ಲೈನ್‌ನಲ್ಲಿ ದಾಖಲಾತಿಯೊಂದಿಗೆ ಸಲ್ಲಿಸಿದ ಅರ್ಜಿಗಳನ್ನು ಜಿಲ್ಲಾ ವ್ಯವಸ್ಥಾಪಕರು ಗಮನಿಸಿ ಶಾಸಕರ ನೇತೃತ್ವದ ತಾಲೂಕು ಸಮಿತಿಗೆ ಅರ್ಜಿ ವರ್ಗಾಯಿಸುತ್ತಾರೆ. ಅನಂತರ ಸಮಿತಿಯು ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುತ್ತದೆ. ಈ ಸಂಬಂಧ ಗಂಗಾ ಕಲ್ಯಾಣ ಯೋಜನೆಯ ವಿವರಗಳನ್ನು https://kmvstdcl.karnataka.gov.in/info-2/Ganga+Kalyana+Scheme/en ನಲ್ಲಿ ಪಡೆಯಬಹುದಾಗಿದೆ. ಅಲ್ಲದೇ ಹೆಚ್ಚಿನ ಮಾಹಿತಿಗಾಗಿ ಅರ್ಹರು +91 08022864720ಕ್ಕೆ ಸಂಪರ್ಕಿಸಬಹುದು.
ಏನಿದು ಗಂಗಾ ಕಲ್ಯಾಣ?
ಬೋರ್‌ವೆಲ್ ಕೊರೆಯುವ ಮೂಲಕ ಹಾಗೂ ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲ್ಯಾಣ ಯೋಜನೆಯಾಗಿದೆ. ಅಲ್ಲದೇ ಈ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ಪಂಪ್-ಮೋಟಾರ್ ಅಳವಡಿಸುವುದಾಗಿದೆ.
ಎಲ್ಲೆಲ್ಲಿ ಅರ್ಜಿ?
1. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
2. ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮ
3. ಪರಿಶಿಷ್ಟ ಜಾತಿ- ವರ್ಗಗಳ ಅಭಿವೃದ್ಧಿ ನಿಗಮ
4. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
5. ವಿಶ್ವಕರ್ಮ ಅಭಿವೃದ್ಧಿ ನಿಗಮ
6. ಉಪ್ಪಾರ ಅಭಿವೃದ್ಧಿ ನಿಗಮ
7. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
8. ನಿಜಗುಣ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
ಅರ್ಹರು ಯಾರ್ಯಾರು?
ಸಣ್ಣ ಮತ್ತು ಅತೀ ಸಣ್ಣ ರೈತರಾಗಿರಬೇಕು.
ಪ್ರವರ್ಗ 1, 2ಎ, 3ಎ, 3ಬಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು.
ಕನಿಷ್ಠ 1.20 ಎಕ್ರೆ ಗರಿಷ್ಠ 5 ಎಕ್ರೆ ಜಮೀನು ಹೊಂದಿರಬೇಕು.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಯ ರೈತರಿಗೆ ಕನಿಷ್ಠ 1 ಎಕ್ರೆ ಇದ್ದರೆ ಸಾಕು
ಅರ್ಜಿದಾರ ಯಾವುದೇ ಕೇಂದ್ರ-ರಾಜ್ಯ ಸರಕಾರದ ಹುದ್ದೆಯಲ್ಲಿ ಇರಬಾರದು
ರಾಜ್ಯ ಖಾಯಂ ನಿವಾಸಿ ಆಗಿರಬೇಕು
ಅರ್ಜಿದಾರರು 18-55 ವರ್ಷಗಳ ನಡುವೆ ಇರಬೇಕು
9. ಬೋವಿ ಸಮುದಾಯದ ಅಭಿವೃದ್ಧಿ ನಿಗಮ
ವೈಯಕ್ತಿಕ ಬೋರ್‌ವೆಲ್‌ಗೆ ಠೇವಣಿ
1. ನೋಂದಣಿ ಶುಲ್ಕ – 50 ರೂ. ಪ್ಲಸ್ ಶೇ.18 ಜಿಎಸ್‌ಟಿ
2. ಭದ್ರತಾ ಠೇವಣಿ ಶುಲ್ಕ- 1290 ರೂ., 1 ಎಚ್‌ಪಿಗೆ
3. ಮೀಟರ್ ಸುರಕ್ಷ ಠೇವಣಿ 3 ಸಾವಿರ ರೂ.,
4. ಮೀಟರ್ ಬಾಕ್ಸ್ 2100 ರೂ.
5. ಮೇಲ್ವಿಚಾರಣ ಶುಲ್ಕ 150 ಪ್ಲಸ್ ಶೇ.18 ಜಿಎಸ್‌ಟಿ
ಅರ್ಜಿ ಸಲ್ಲಿಕೆಗೆ ಸೆ.18 ಕೊನೇ ದಿನ
ಅಂತರ್ಜಲ ಕಡಿಮೆಯಾಗಿರುವ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಅನ್ವಯವಾಗುತ್ತದೆ. ಇತರ ಜಿಲ್ಲೆಗಳಿಗೆ 3 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಕೆಗೆ ಸೆ.18 ಕೊನೇ ದಿನವಾಗಿದ್ದು ಅರ್ಹ ರೈತರು https://kmvstdcl.karnataka.gov.ininfo-2/Ganga+ Kalyana+Scheme/en P ಕ್ಕೆ ಭೇಟಿ ನೀಡಬಹುದಾಗಿದೆ.
ಏನೇನು ಬೇಕು?
ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಫಲಾನುಭವಿಗಳ ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್, ಹೊಲದ ದಾಖಲೆ, ಜಾತಿ-ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಸ್ವಯಂ ಘೋಷಿತ ಪತ್ರ ಅವಶ್ಯ.
Gangakalyan-2023:ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ ವೆಲ್ ಕೊರೆಸಲು 4 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ
ಉದ್ದೇಶ:
ಗ್ರಾಮಾಂತರ ಕೃಷಿ ಕಾರ್ಮಿಕರು ಕಡಿಮೆ ಜಮೀನು ಹೊಂದಿರುವವರು ಮಳೆಯ ನೀರನ್ನು ಅವಲಂಬಿಸಿಕೊಂಡು ಕೃಷಿ ಮಾಡುವುದು ಕಷ್ಟಕರವಾಗಿರುತ್ತದೆ. ಅವರಿಗೆ ಕೊಳವೆ ಬಾವಿ ಅಥವಾ ತೆರೆದ ಬಾವಿ ತೆಗೆಸುವುದರಿಂದ ವಾಣಿಜ್ಯ ಫಸಲುಗಳನ್ನು ಬೆಳೆದು, ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು ಅನುಕೂಲವಾಗುತ್ತದೆ.ಬೆಳಗಾವಿ, ಬಾಗಲಕೋಟೆ, ಬಿಜಾಪುರ ಮುಂತಾದ ಕಡೆಗಳಲ್ಲಿ ಸಮೀಪದಲ್ಲಿಯೇ ನದಿಗಳು ಹರಿಯುವುದರಿಂದ ತೆರೆದ ಬಾವಿಗಳಿಗೆ ಹೆಚ್ಚಿನ ಬೇಡಿಕೆ ಇದೆ.ಕೊಳವೆಬಾವಿಗಳಿ ಅವಶ್ಯವಿರುವಲ್ಲಿ ಕೊಳವೆಬಾವಿಗಳನ್ನು ಮತ್ತು ತೆರೆದಬಾವಿಗಳ ಅವಶ್ಯಕತೆ ಇರುವಲ್ಲಿ ತೆರೆದ ಬಾವಿಗಳಿಗೆ ಆರ್ಥಿಕ ಸೌಲಭ್ಯ ಒದಗಿಸಿದರೆ, ಕೃಷಿಕನ ಜೀವನ ಸುಧಾರಿಸುತ್ತದೆ.ಈ ಹಿನ್ನೆಲೆಯಲ್ಲಿ, ಈ ಯೋಜನೆಗೆ ನಿಗಮದ ಮೂಲಕ ಆರ್ಥಿಕ ಸಹಾಯವನ್ನು ನೀಡಲು ಉದ್ದೇಶಿಸಿದೆ.
ಸೌಲಭ್ಯ:
೧. ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆ: ಈ ಯೋಜನೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಫಲಾನುಭವಿಯು ಕನಿಷ್ಟ ಒಂದು (೦೧) ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಟ ಎರಡು (೦೨) ಎಕರೆ ಜಮೀನು ಇರಬೇಕು.
ಘಟಕ ವೆಚ್ಚ:ರೂ.೪,೦೦,೦೦೦/- ಗಳು,ಸಹಾಯಧನ : ರೂ.೩,೫೦,೦೦೦/-, ಸಾಲ ರೂ.೫೦,೦೦೦/- ಶೇ.೪ ರ ಬಡ್ಡಿ ದರ, ಮರುಪಾವತಿ ಅವಧಿ: ೩೬ ತಿಂಗಳು.
ಕೊರೆದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಆರ್ ಆರ್ ಸಂಖ್ಯೆ ನೀಡಿದ ನಂತರ ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುದ್ದೀಕರಣ ವೆಚ್ಚವಾಗಿ ಪ್ರತಿ ಕೊಳವೆ ಬಾವಿಗೆ ರೂ.೫೦,೦೦೦/- ಗಳಂತೆ ಘಟಕ ವೆಚ್ಚದಲ್ಲಿ ಪಾವತಿಸಲಾಗುವುದು.
ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ವೈಯಕ್ತಿಕ ಕೊಳವೆ ಬಾವಿಯ ಘಟಕ ವೆಚ್ಚ ರೂ.೪,೦೦,೦೦೦/- ಗಳು. ಇದರಲ್ಲಿ ರೂ.೩,೫೦,೦೦೦/- ಗಳ ಸಹಾಯಧನ ಹಾಗೂ ರೂ.೫೦,೦೦೦/- ಗಳ ಸಾಲ ಪಡೆಯಲು ಅವಕಾಶವಿರುತ್ತದೆ.
೨. ಸಾಮೂಹಿಕ ನೀರಾವರಿ ಕೊಳವೆಬಾವಿ ಯೋಜನೆ: ಒಕ್ಕಲಿ ಸಮುದಾಯಕ್ಕೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರು ಹೊಂದಿರುವ ೦೮ ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ಜಮೀನಿಗೆ ಸಾಮೂಹಿಕ ನೀರಾವರಿ ಸೌಲಭ್ಯ.
ಘಟಕ ವೆಚ್ಚ: ೮-೧೫ ಎಕರೆ ಜಮೀನಿಗೆ ರೂ.೬,೦೦,೦೦೦/- ಗಳ ವೆಚ್ಚದಲ್ಲಿ ಎರಡು ಕೊಳವೆಬಾವಿ ಹಾಗೂ ೧೫ ಎಕರೆಗಿಂತ ಹೆಚ್ಚು ಜಮೀನು ಒಳಪಡುವ ಘಟಕಗಳಿಗೆ ನಿಗಧಿತ ಘಟಕ ವೆಚ್ಚ ರೂ.೮,೦೦,೦೦೦/- ಗಳ ವೆಚ್ಚದಲ್ಲಿ ೦೩ ಕೊಳವೆಬಾವಿಗಳನ್ನು ಕೊರೆಯಿಸಿ ಪಂಪ್ ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡುವುದು ಹಾಗೂ ವಿದ್ಯುದ್ದೀಕರಣಕ್ಕೆ ಠೇವಣಿ ಪಾವತಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸುವುದು. ಇದು ಪೂರ್ಣ ಅನುದಾನವಾಗಿರುತ್ತದೆ.
೩. ತೆರೆದ ಬಾವಿ: ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಕರಾವಳಿ ಮಲೆನಾಡು ಪ್ರದೇಶದ ಜಿಲ್ಲೆ ತೆರೆದಬಾವಿ ನೀರಾವರಿ ಸೌಲಭ್ಯ ಒದಗಿಸಲು ಅವಕಾಶವಿರುತ್ತದೆ.
೪. ಸಾಮೂಹಿಕ ಏತ ನೀರಾವರಿ ಯೋಜನೆ:ಭೂಮಟ್ಟದಲ್ಲಿ ಶಾಶ್ವತವಾಗಿ ದೊರೆಯುವ ಜಲ ಸಂಪನ್ಮೂಲಗಳಾದ ನದಿ. ಕೆರೆ, ಹಳ್ಳ ಇವುಗಳಿಗೆ ಮೋಟಾರು ಅಳವಡಿಸಿ, ಪೈಪ್‌ಲೈನ್ ಮೂಲಕ ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು.
ಘಟಕ ವೆಚ್ಚ: ಸಾಮೂಹಿಕ ನೀರಾವರಿ ಕೊಳವೆ ಬಾವಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಈ ಸೌಲಭ್ಯ ಒದಗಿಸಲಾಗುವುದು.
೫. ಕರ್ನಾಟಕ ಅಂರ್ತಜಲ ಅಧಿನಿಯಮದನ್ವಯ ಈ ಕೆಳಕಂಡ ೪೩ ತಾಲ್ಲೂಕುಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯುವ ಮುನ್ನ ಅಂರ್ತಜಲ ಪ್ರಾಧಿಕಾರದಿಂದ ಅನುಮತಿ ಪಡೆಯತಕ್ಕದ್ದು. ಅನುಮತಿ ಪಡೆದಂತಹ ಫಲಾನುಭವಿಗಳ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಯಲು ಕ್ರಮವಹಿಸಲಾಗುವುದು.
ಈ ಮೇಲ್ಕಂಡ ಯೋಜನೆಗಳ ಅನುಷ್ಟಾನಕ್ಕಾಗಿ ಮಾರ್ಗಸೂಚಿಗಳು ಈ ಕೆಳಕಂಡಂತಿವೆ:
೧. ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.೯೮,೦೦೦/- ಗಳ ಮಿತಿಯಲ್ಲಿರಬೇಕು.
೨. ಅರ್ಜಿದಾರರ ವಯಸ್ಸು ೧೮-೫೫ ವರ್ಷದೊಳಗಿರಬೇಕು.
೩. ಕರ್ನಾಟಕ ರಾಜ್ಯ ಖಾಯಂ ನಿವಾಸಿಯಾಗಿರಬೇಕು- ಕನಿಷ್ಟ ೧೦ ವರ್ಷ.
೪. ಈ ಹಿಂದೆ ಸರ್ಕಾರದ / ನಿಗಮಗಳ ಯೋಜನೆಗಳಲ್ಲಿ ಸೌಲಭ್ಯ ಪಡೆದಿರಬಾರದು.
೫. ಮೂರು ವರ್ಷಗಳ ಒಳಗಾಗಿ ಸಾಲ ಮತ್ತು ಬಡ್ಡಿಯನ್ನು ಚುಕ್ತಾ ಮಾಡುವುದು.
೬. ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು.
೭. ಅರ್ಜಿದಾರರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹೊಂದಿರಬೇಕು.
೮. ಈ ಯೋಜನೆಯ ಅಡಿಯಲ್ಲಿ ಕೈಗೊಳ್ಳುವ ಚಟುವಟಿಕೆಯ ಬಗ್ಗೆ ತರಬೇತಿ / ಅನುಭವ / ತಿಳುವಳಿಕೆ ಹೊಂದಿರಬೇಕು.
೯. ನಿಗಮದ ಮಂಡಳಿ ಸಭೆಯ ವಿವೇಚನಾ ಕೋಟಾದಡಿಯಲ್ಲಿ ಶೇ.೧೦ ರಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
೧೦. ಫಲಾನುಭವಿಗಳ ಆಯ್ಕೆಯನ್ನು ಸಂಬಂಧಿಸಿದ ಶಾಸಕರ ಅಧ್ಯಕ್ಷತೆಯ ಸಮಿತಿಯ ಮೂಲಕ ಮಾಡಲಾಗುವುದು.