June month rain forecast-ಜೂನ್ ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ,ವಿಶ್ವದಲ್ಲೇ ಮೊದಲ ಭಾರಿ ಕರಾರುವಕ್ಕಾದ ಹವಾಮಾನ ಮುನ್ಸೂಚನೆ ವ್ಯವಸ್ಥೆ ಅಭಿವೃದ್ದಿಪಡಿಸಿದ ಭಾರತ

June month rain forecast-ಜೂನ್ ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ,ವಿಶ್ವದಲ್ಲೇ ಮೊದಲ ಭಾರಿ ಕರಾರುವಕ್ಕಾದ ಹವಾಮಾನ ಮುನ್ಸೂಚನೆ ವ್ಯವಸ್ಥೆ ಅಭಿವೃದ್ದಿಪಡಿಸಿದ ಭಾರತ

June month rain forecast-ಜೂನ್ ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ,ವಿಶ್ವದಲ್ಲೇ ಮೊದಲ ಭಾರಿ ಕರಾರುವಕ್ಕಾದ ಹವಾಮಾನ ಮುನ್ಸೂಚನೆ ವ್ಯವಸ್ಥೆ ಅಭಿವೃದ್ದಿಪಡಿಸಿದ ಭಾರತ

June month rain forecast-ಜೂನ್ ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ,ವಿಶ್ವದಲ್ಲೇ ಮೊದಲ ಭಾರಿ ಕರಾರುವಕ್ಕಾದ ಹವಾಮಾನ ಮುನ್ಸೂಚನೆ ವ್ಯವಸ್ಥೆ ಅಭಿವೃದ್ದಿಪಡಿಸಿದ ಭಾರತ

 ದೇಶದ ಹಲವು ಭಾಗಗಳಲ್ಲಿ ಜೂನ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯಲಿದ್ದು, ಇದು ಗರಿಷ್ಠ ತಾಪಮಾನ ದಾಖಲಾಗುವ ಪ್ರದೇಶಗಳಲ್ಲಿನ ಉಷ್ಣಾಂಶವನ್ನು ತಗ್ಗಿಸಲು ಸಹಕಾರಿಯಾಗಲಿದೆ' ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ ಹೇಳಿದೆ.
ಮಳೆ ಸುರಿಯಬೇಕು. ಆದರೆ ಈ ವರ್ಷ ಶೇ 108ರಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣದ ರಾಜ್ಯಗಳು, ಈಶಾನ್ಯ ಮತ್ತು ವಾಯವ್ಯ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ' ಎಂದು ಹೇಳಿದ್ದಾರೆ.

ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ಅವರು ಮಾಹಿತಿ ನೀಡಿ, 'ಉತ್ತಮ ಮಳೆಯ ನಿರೀಕ್ಷೆ ಇರುವುದರಿಂದ, ದೇಶದ ಉತ್ತರದ ಹಲವು ಭಾಗಗಳಲ್ಲಿ ಜೂನ್‌ನಲ್ಲಿ ದಾಖಲಾಗುತ್ತಿದ್ದ ಗರಿಷ್ಠ ಉಷ್ಣಾಂಶವೂ ತಗ್ಗುವ ಸಾಧ್ಯತೆ ಇದೆ. ದೇಶದ ಮಧ್ಯ ಭಾಗದಲ್ಲಿ ಮೋಡ ಕವಿದ ವಾತಾವರಣ ಇರಲಿದೆ' ಎಂದಿದ್ದಾರೆ.

'ಜೂನ್‌ನಿಂದ ಸೆಪ್ಟೆಂಬರ್‌ವರೆಗೂ ಮಳೆಯ ಪ್ರಮಾಣ ಶೇ 106ರಷ್ಟು ಸುರಿಯಲಿದೆ. ಕಳೆದ 50 ವರ್ಷಗಳ ದಾಖಲೆಯ ಪ್ರಕಾರ ಈ ಅವಧಿಯಲ್ಲಿ (87 ಸೆಂ.ಮೀ.) ಶೇ 96ರಿಂದ ಶೇ 104ರಷ್ಟು ಮಳೆ ಸುರಿದಿದೆ. ವಾಯವ್ಯ ಭಾಗದಲ್ಲಿ ಸಾಮಾನ್ಯ ಮಳೆಯಾಗಲಿದೆ. ಈಶಾನ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಕೇಂದ್ರ ಭಾಗ ಹಾಗೂ ದಕ್ಷಿಣದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ' ಎಂದು ಅವರು ತಿಳಿಸಿದ್ದಾರೆ.

'ವಾಡಿಕೆಗಿಂತ ಹೆಚ್ಚು ಮಳೆ ಸುರಿಯುವ ರಾಜ್ಯಗಳಲ್ಲಿ ಮಧ್ಯಪ್ರದೇಶ, ಛತ್ತೀಸಗಢ, ಮಹಾರಾಷ್ಟ್ರ, ಒಡಿಶಾ, ಹಿಮಾಚಲ ಪ್ರದೇಶ, ಬಿಹಾರ, ಜಾರ್ಖಂಡ್‌, ಪಶ್ಚಿಮ ಬಂಗಾಳ ಸೇರಿವೆ. ಪಂಜಾಬ್, ಹರಿಯಾಣ, ಕೇರಳ ಹಾಗೂ ತಮಿಳುನಾಡಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ' ಎಂದು ತಿಳಿಸಿದ್ದಾರೆ.

'2009ರಿಂದ ಈಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಾಡಿಕೆಗಿಂತ ಬೇಗ ಮುಂಗಾರು ಕೇರಳ ಪ್ರವೇಶಿಸಿದೆ. ಈ ಬಾರಿ ಮೇ 23ರಂದೇ ಮುಂಗಾರು ಪ್ರವೇಶಿಸಿತು. ಮುಂಬೈಗೆ 16 ದಿನ ಮುಂಚಿತವಾಗಿ ಮುಂಗಾರು ಪ್ರವೇಶಿಸಿದೆ. ಇಂಥ ವಿದ್ಯಮಾನ 1950ರಲ್ಲಿ ಆಗಿತ್ತು' ಎಂದು ಮೋಹಪಾತ್ರ ವಿವರಿಸಿದ್ದಾರೆ.

'2024ರಲ್ಲಿ ಭಾರತವು ಒಟ್ಟು 934.8 ಮಿ.ಮೀ. ಮಳೆಯನ್ನು ಕಂಡಿತ್ತು. ಕಳೆದ ಬಾರಿಗಿಂತ ಈ ವರ್ಷ ಶೇ 108ರಷ್ಟು ಮಳೆಯಾಗುವ ಸಾಧ್ಯತೆಗಳಿವೆ. 2023ರಲ್ಲಿ 820 ಮಿ.ಮೀ. (ಶೇ 94.4ರಷ್ಟು ಸರಾಸರಿ), 2022ರಲ್ಲಿ 925 ಮಿ.ಮೀ, 2021ರಲ್ಲಿ 870 ಮಿ.ಮೀ. ಹಾಗೂ 2020ರಲ್ಲಿ 958 ಮಿ.ಮೀ. ಮಳೆಯಾಗಿದೆ' ಎಂದು ಐಎಂಡಿ ಮಾಹಿತಿ ಹೇಳಿದೆ.

ಭಾರತದ ಕೃಷಿ ವಲಯವನ್ನೂ ಒಳಗೊಂಡು ದೇಶದ ಆರ್ಥಿಕತೆಯು ಮೇಲೆ ಮುಂಗಾರು ಭಾರಿ ಪ್ರಭಾವ ಹೊಂದಿದೆ. ಮಳೆಯಾಶ್ರಿತ ಬೆಳೆಗಳು, ಜಲಾಶಯ, ಕುಡಿಯುವ ನೀರು ಮತ್ತು ಜಲವಿದ್ಯುತ್‌ ಕ್ಷೇತ್ರವು ಮುಂಗಾರನ್ನೇ ಅವಲಂಬಿಸಿವೆ. ಕೃಷಿ ಕ್ಷೇತ್ರವನ್ನು ದೇಶದ 42ರಷ್ಟು ಜನಸಂಖ್ಯೆ ಅವಲಂಬಿಸಿದೆ ಹಾಗೂ ದೇಶದ ಜಿಡಿಪಿಯ ಶೇ 18.2ರಷ್ಟು ಗಾತ್ರವನ್ನು ಇದು ಹೊಂದಿದೆ

BFS-ವಿಶ್ವದಲ್ಲೇ ಮೊದಲ ಭಾರಿ ಕರಾರುವಕ್ಕಾದ ಹವಾಮಾನ ಮುನ್ಸೂಚನೆ ವ್ಯವಸ್ಥೆ ಅಭಿವೃದ್ದಿಪಡಿಸಿದ ಭಾರತ


 ಸಾಕಷ್ಟು ಹವಾಮಾನ ವೈಪರೀತ್ಯಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತ ಇದೀಗ ಸಮರ್ಪಕ ರೀತಿಯಲ್ಲಿ ಹವಾಮಾನ ಮುನ್ಸೂಚನೆ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದೆ. ಪಾರ್ಥಸಾರಥಿ ಮುಖೋಪಾಧ್ಯಾಯ ಸೇರಿದಂತೆ ಸಂಶೋಧಕರ ತಂಡವೊಂದು ಭಾರತ್ ಫೋರ್​​ಕ್ಯಾಸ್ಟಿಂಗ್ ಸಿಸ್ಟಂ (ಬಿಎಫ್​​ಎಸ್) ಅನ್ನು ನಿರ್ಮಿಸಿವೆ.

ವಿಶ್ವದಲ್ಲೇ ಅತ್ಯಂತ ಕರಾರುವಾಕ್ ಹವಾಮಾನ ಮುನ್ಸೂಚನೆ ಮಾದರಿ (precise weather forecasting model) ಎಂದು ಕರೆಯಬಹುದಾದ ಈ ಬಿಎಫ್​​ಎಸ್ ಮಾಡಲ್ ಅನ್ನು ಸರ್ಕಾರ ಅನಾವರಣಗೊಳಿಸಿದೆ.

ಭಾರತ್ ಫೋರ್​​ಕ್ಯಾಸ್ಟಿಂಗ್ ಸಿಸ್ಟಂ ನೀಡುವ ಹವಾಮಾನ ಮುನ್ಸೂಚನೆ ಬಹಳ ಕರಾರುವಾಕ್ ಆಗಿರಲಿದೆ. ಆರ್ಕಾ ಎನ್ನುವ ಹೊಸ ಸೂಪರ್​​ಕಂಪ್ಯೂಟರ್​​ನ ಶಕ್ತಿಯು ಬಿಎಫ್​​ಎಸ್​​ಗೆ ಇದೆ. ಈ ಹಿಂದೆ ಇದ್ದ ಪ್ರತ್ಯುಶ್ ಎನ್ನುವ ಸೂಪರ್ ಕಂಪ್ಯೂಟರ್​ನಲ್ಲಿ ಮುನ್ಸೂಚನೆ ಮಾದರಿಯನ್ನು ಚಲಾಯಿಸಲು 10 ಗಂಟೆ ಬೇಕಾಗುತ್ತಿತ್ತು. ಈಗ ಆರ್ಕಾದಲ್ಲಿ ಡಾಟಾ ಅನಾಲಿಸಿಸ್ ಕೇವಲ ನಾಲ್ಕು ಗಂಟೆಯಲ್ಲಿ ಮುಗಿಯುತ್ತದೆ ಎಂದು ಭೂವಿಜ್ಞಾನ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದರೆಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ.

ಈ ಹಿಂದಿನ ವೆದರ್ ಸಿಸ್ಟಂ 12 ಕಿಮೀ ಗ್ರಿಡ್​​ನಲ್ಲಿ ಕಾರ್ಯಾಚರಿಸುತ್ತಿತ್ತು. ಈಗ ಬಿಎಫ್​​ಎಸ್ ಸಿಸ್ಟಂ 6 ಕಿಮೀ ಗ್ರಿಡ್​ನಲ್ಲಿ ಆಪರೇಟ್ ಮಾಡುತ್ತದೆ. ಪಂಚಾಯಿತಿ ಮಟ್ಟದಲ್ಲಿ ಇದು ಹವಾಮಾನ ಮುನ್ಸೂಚನೆಯನ್ನು ನಿಖರವಾಗಿ ನೀಡಬಲ್ಲುದು ಎಂದು ಹೇಳಲಾಗುತ್ತಿದೆ.

ಅಂದರೆ, ಪ್ರತೀ ಆರು ಚದರ ಕಿಮೀ ವ್ಯಾಪ್ತಿ ಪ್ರದೇಶಕ್ಕೆ ಸೀಮಿತವಾಗಿ ಹವಾಮಾನ ಮುನ್ಸೂಚನೆಯನ್ನು ಬಿಎಫ್​​ಎಸ್ ಪ್ರೆಡಿಕ್ಟ್ ಮಾಡಬಲ್ಲುದು. ದೇಶಾದ್ಯಂತ ಇರುವ 40 ಡಾಪ್ಲರ್ ವೆದರ್ ರಾಡಾರ್​​ಗಳ ನೆಟ್ವರ್ಕ್ ಅನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ನಿಖರ ಹವಾಮಾನ ಮುನ್ಸೂಚನೆ ನೀಡಲಾಗುತ್ತದೆ.

ನಲವತ್ತು ಇರುವ ಈ ಡಾಪ್ಲರ್ ರಾಡಾರ್​​ಗಳ ಸಂಖ್ಯೆಯನ್ನು ಸದ್ಯದಲ್ಲೇ ನೂರಕ್ಕೆ ಏರಿಸಲಾಗುತ್ತಿದೆ. ಮುಂದಿನ ಎರಡು ಗಂಟೆಯಲ್ಲಿ ಯಾವ್ಯಾವ ಪ್ರದೇಶಗಳಲ್ಲಿ ಏನು ಹವಾಮಾನ ವೈಪರೀತ್ಯ ಸಂಭವಿಸಬಹುದು ಎಂಬ ಕಿರು ಅವಧಿ ಮುನ್ಸೂಚನೆಯನ್ನೂ ಇದು ನೀಡಬಲ್ಲುದು.

ಬ್ರಿಟನ್, ಅಮೆರಿಕ, ಐರೋಪ್ಯ ದೇಶಗಳಲ್ಲಿ ಇರುವ ಫೋರ್​​ಕ್ಯಾಸ್ಟ್ ಮಾಡಲ್​​ಗೊಳಿಗಿಂತ ಬಿಎಫ್​​ಎಸ್ ಹೆಚ್ಚು ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದರಿಂದ ಹವಾಮಾನ ವೈಪರೀತ್ಯ ಘಟನೆಯು ಹೆಚ್ಚು ಸ್ಪಷ್ಟವಾಗಿ ಗೋಚರವಾಗಬಹುದು.

ಭಾರತಕ್ಕೆ ಬಹಳ ಮುಖ್ಯ ಈ ಬಿಎಫ್​​ಎಸ್

ಭಾರತವು ಬಹಳಷ್ಟು ವೈಪರೀತ್ಯ ಹವಾಮಾನಗಳಿರುವ ಪ್ರದೇಶಗಳಿಂದ ಕೂಡಿದೆ. ಬರ, ಪ್ರವಾಹ ಪರಿಸ್ಥಿತಿ ಯಾವಾಗ ವಕ್ಕರಿಸುತ್ತದೆ ಎಂದು ಹೇಳುವುದು ಕಷ್ಟ. ರೈತರು ಎಚ್ಚೆತ್ತುಕೊಳ್ಳುವಷ್ಟರಲ್ಲಿ ಬೆಲೆಗಳು ಹಾಳಾಗಿಹೋಗಬಹುದು. ಕಳೆದ ಮೂರ್ನಾಲ್ಕು ವರ್ಷಗಳಿಂದ ಭಾರತದಲ್ಲಿ ಸಾಕಷ್ಟು ಬೆಳೆಗಳು ಬರ ಮತ್ತು ಪ್ರವಾಹಗಳಿಗೆ ಬಲಿಯಾಗಿವೆ.