Koli sakanike-ಉಚಿತವಾಗಿ 20 ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ
<Krushirushi> <ಪಶುಸಂಗೋಪನಾ ಇಲಾಖೆ> <Vetarnary department> <Krushirushi> <National livestock mission 2024> <NLM scheme 2024> <NLM> <National livestock mission> <ರಾಷ್ಟ್ರೀಯ ಜಾನುವಾರು ಮಿಷನ್> <NLM scheme in Kannada> <sheep farming in kannada> <Goat farming> <dairy farming in Karnataka> <dairy> <Silage> <ರಸಮೇವು> <ರೈತ> <ಸಹಾಯಧನ> <koli> <koli sakanike> <kuri> <Kuri sakanike>
Koli sakanike-ಉಚಿತ 20 ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ
ಗ್ರಾಮೀಣ ಪ್ರದೇಶದ ಬಡ ಕುಟುಂಬದವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಅಪೌಷ್ಟಿಕತೆ ಹೋಗಲಾಡಿಸುವ ಉದ್ದೇಶದಿಂದ ಉಚಿತವಾಗಿ ಕೋಳಿ ಮರಿಗಳನ್ನು ವಿತರಿಸಲು ಸರ್ಕಾರ ಮುಂದಾಗಿದೆ.
ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ(Vetarnary Department)ಕೋಳಿ ಮರಿಗಳನ್ನು ವಿತರಿಸಲಾಗುವುದು. ಜೇನು, ಕುರಿ(Sheep), ಹಸು(cow) ಸಾಕಾಣಿಕೆಗೆ ಪ್ರೋತ್ಸಾಹ ನೀಡುತ್ತಿರುವ ಮಾದರಿಯಲ್ಲಿ ನಾಟಿ ಕೋಳಿ ಸಾಕಾಣಿಕೆ(koli sakanike) ಉತ್ತೇಜಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಬಡ ಕುಟುಂಬಗಳ ಮಹಿಳೆಯರಿಗೆ ತಲಾ 20 ನಾಟಿ ಕೋಳಿ ಮರಿಗಳನ್ನು ವಿತರಿಸಲಾಗುವುದು. ಪ್ರತಿ ತಾಲೂಕಿಗೆ 106 ಫಲಾನುಭವಿಗಳಂತೆ ಗುರಿ ನಿಗದಿಪಡಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿನ ರೈತ ಮಹಿಳೆಯರು, ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು, ಪ್ರಾಥಮಿಕ ಕೋಳಿ ಸಹಕಾರ ಸಂಘದ ಮಹಿಳಾ ಸದಸ್ಯರಿಗೆ, ರೈತ ಉತ್ಪಾದಕ ಸಂಸ್ಥೆಯ ಮಹಿಳಾ ಯೋಜನೆಯಡಿ ಆದ್ಯತೆ ನೀಡಲಾಗುವುದು.
ನಾಟಿ ಕೋಳಿಗಳಿಗೆ ಪ್ರಸ್ತುತ ಬೇಡಿಕೆ ಹೆಚ್ಚಾಗಿದೆ. ಇವುಗಳ ಸಾಕಾಣೆಗೆ ಹೆಚ್ಚು ಖರ್ಚಾಗುವುದಿಲ್ಲ. ಮನೆ ಮುಂದೆ ಹಿತ್ತಲುಗಳಲ್ಲಿ ಕೋಳಿ ಸಾಕಬಹುದು, ವೆಚ್ಚಕ್ಕಿಂತ ಅಧಿಕ ಲಾಭ ಸಿಗುತ್ತದೆ. ಇವುಗಳ ಸಾಕಾಣಿಕೆಗೆ ಹೆಚ್ಚಿನ ಶ್ರಮ ಅಗತ್ಯವಿರುವುದಿಲ್ಲ. ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಗೆ ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬಡ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಆರ್ಥಿಕ ಸಬಲತೆ ಸಾಧಿಸಲು ತಲಾ 20 ಕೋಳಿ ಮರಿ ವಿತರಿಸಲಾಗುವುದು ಎಂದು ಹೇಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರ ಪಶು ಆಸ್ಪತ್ರೆ(ದನದ ಹಾಸ್ಪಿಟಲ್) ಅಥವಾ ಪಶು ಸಂಗೋಪನಾ ಇಲಾಖೆಯನ್ನು ಸಂಪರ್ಕಿಸಿ