Lemon plantation-ಅಡಿಕೆಗಿಲ್ಲಾ ಉಳಿಗಾಲ,ಅಡಿಕೆ ಬಿಡಿ, ಬಿಜಾಪುರದ ಕಾಗ್ಜಿ ನಿಂಬೆ ನೆಡಿ

<Krushirushi> <ಅಡಿಕೆ ಬಿಡಿ ನಿಂಬೆ ನೆಡಿ> <Lemon plantation> <ಅಡಿಕೆ ಬೆಳೆ> <ಅಡಿಕೆ> <ಅಡಿಕೆ ಕ್ಷೇತ್ರ> <ಅಡಿಕೆ ರೇಟ್> <ಅಡಿಕೆ ಬೆಲೆ><Arecanut variety> <Arecanut cultivation> <Arecanut> <Arecanut price> <Arecanut> <Arecanut area> <Areca>

Lemon plantation-ಅಡಿಕೆಗಿಲ್ಲಾ ಉಳಿಗಾಲ,ಅಡಿಕೆ ಬಿಡಿ, ಬಿಜಾಪುರದ ಕಾಗ್ಜಿ ನಿಂಬೆ ನೆಡಿ

Lemon plantation-ಅಡಿಕೆಗಿಲ್ಲಾ ಉಳಿಗಾಲ,ಅಡಿಕೆ ಬಿಡಿ, ಬಿಜಾಪುರದ ಕಾಗ್ಜಿ ನಿಂಬೆ ನೆಡಿ

ಭಾರತ ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಅಡಿಕೆ ಉತ್ಪಾದನೆ ಮಾಡುವ ದೇಶ. ನಮ್ಮ  ಕರ್ನಾಟಕದಲ್ಲೇ ನೋಡುವುದಾದರೆ 2018ರ ಈಚೆಗೆ ಮೂರು ಪಟ್ಟು ಅಡಿಕೆ ಬೆಳೆ ಕ್ಷೇತ್ರ ವಿಸ್ತರಣೆಯಾಗಿದೆ. ರೈತರ ಪಾಲಿಗೆ ಗ್ಯಾರೆಂಟಿ ಬೆಳೆಯಾಗಿದ್ದ ಅಡಿಕೆಗೆ ಮತ್ತು ರೈತರಿಗೀಗ ಸಂಕಷ್ಟದ ಕಾಲ! ಒಂದು ಕಡೆ ಹತ್ತಾರು ವರ್ಷಗಳಿಂದ ಕಷ್ಟ ಪಟ್ಟು ಬೆಳೆಸಿದ ಹಸಿರ ಸಿರಿಯ ಅಡಿಕೆ ತೋಟ ಬರದ ಭೀಕರತೆಯಲ್ಲಿ ಬೆಂದು ಸ್ಮಶಾನದಂತಾಗುತ್ತಿದ್ದರೇ;  ಮತ್ತೊಂದು ಕಡೆ ಹಳದಿ ರೋಗಕ್ಕೆ ಸೂಕ್ತ ಔಷಧಿ ಪತ್ತೆಯಾಗುವ ಮೊದಲೇ ಮಾರಣಾಂತಿಕ  ಎಲೆ ಚುಕ್ಕಿ ರೋಗ ಅಡಿಕೆ ಬೆಳೆಗಾರರ ಉಸಿರು ನಿಲ್ಲಿಸಿದೆ; ಮಗದೊಂದು ಕಡೆ ಮಾತೆತ್ತಿದರೆ ರೈತರ ಉದ್ಧಾರ ಮಾಡ್ತಿದ್ದೀವಿ, ಆದಾಯ ಡಬ್ಬಲ್ ಮಾಡ್ತಿದ್ದೀವಿ ಅನ್ನೋ ನಮ್ಮದೇ ಸರ್ಕಾರ ಮತ್ತು ರಾಜಕಾರಣಿಗಳು ಕಾರ್ಪೋರೇಟ್ ಧಣಿಗಳಿಗೆ ಕಡಿಮೆ ಬೆಲೆಯಲ್ಲಿ ವಿದೇಶಗಳಿಂದ ಲಕ್ಷಾಂತರ ಟನ್ ಅಡಿಕೆ ತರಿಸಿಕೊಳ್ಳಲು ಏನೆಲ್ಲಾ ಸುಗಮ ವ್ಯವಸ್ಥೆ ಮಾಡಿಕೊಡಬೇಕೋ ಅವೆಲ್ಲವನ್ನೂ ಮಂದಹಾಸ ಬೀರುತ್ತಾ ಮಾಡಿಕೊಡುತ್ತಿಹರು, ನಮಗೆ ಚಟ್ಟ ಕಟ್ಟುತ್ತಿಹರು.

*ಬಂಧುಗಳೇ...*
ಇಡೀ ಒಕ್ಕೂಟ ಭಾರತದಲ್ಲಿ ಅಸ್ಸಾಂ ರಾಜ್ಯದ ನಿಂಬೆ ತಳಿ ಬಿಟ್ಟರೇ ಭೌಗೋಳಿಕ ಮಾನ್ಯತೆ ದಕ್ಕಿಸಿಕೊಂಡಿರೋ ಮತ್ತೊಂದು ನಿಂಬೆ ತಳಿ ಎಂದರೆ ಅದು ನಮ್ಮ ಕನ್ನಡ ನಾಡಿನ ಬೆಳವಲ ಭೂಮಿಯ ಜಗದ್ವಿಖ್ಯಾತ ಬಿಜಾಪುರದ ಕಾಗ್ಜಿ ನಿಂಬೆ. ಅಸ್ಸಾಂ ನಿಂಬೆ ಹಣ್ಣು ಸೌತೆಕಾಯಿಯಂತೆ ಉದ್ದವಿದ್ದರೇ, ಬಿಜಾಪುರದ ಕಾಗ್ಜಿ ನಿಂಬೆ ಹಣ್ಣು ಕ್ರಿಕೆಟ್ ಬಾಲ್ ನಂತೆ ಗುಂಡಾಗಿರುವುದು. ಹಂಗಾಗಿ ಹಳ್ಳಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಿಜಾಪುರದ ಕಾಗ್ಜಿ ನಿಂಬೆಗೆ ಬೇಡಿಕೆ, ಬೆಲೆ ಮತ್ತು ಗ್ರಾಹಕರ ಮೆಚ್ಚುಗೆ ಹೆಚ್ಚು.

*ಭೌಗೋಳಿಕ ಮಾನ್ಯತೆ (Geographical Indication)  ಪಡೆದಿರೋ ಬಿಜಾಪುರದ ಕಾಗ್ಜಿ ನಿಂಬೆ ಹಣ್ಣಿನ ಗುಣ-ವಿಶೇಷತೆಗಳ ಸಂಕ್ಷಿಪ್ತವಾಗಿ ಹೇಳುವುದಾದರೆ...*
ಅ. 'ಸಿ' ವಿಟಮಿನ್ ನಿಂದ ಸಮೃದ್ಧವಾದ 74% ರಷ್ಟು ಸ್ವಾದಿಷ್ಟ ರಸಭರಿತ ಹಣ್ಣು
ಆ.  ಕ್ರಿಕೆಟ್ ಬಾಲ್ ನಂತ ಗುಂಡಾಕಾರ
ಇ. ಆಕರ್ಷಕ ಬಣ್ಣ ಮತ್ತು ಹೊಳಪು
ಈ. ಹೂನಂತಾ ಪರಿಮಳ
ಉ. ಕಹಿ ಅಂಶವಿಲ್ಲದ ಸಿಹಿ ಹುಳಿ
ಊ. ಬಹುಪಯೋಗಿ, ಜನೋಪಯೋಗಿ ಮತ್ತು ತಾಳಿಕೆ ಹಾಗೂ ಬಾಳಿಕೆ 
ಋ. ವರ್ಷ ಪೂರ್ತಿ ಫಸಲು, ಭರಪೂರ ಲಾಭ 
ಎ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾರೀ ಬೇಡಿಕೆ

*ಎಲ್ಲಾ ಲೆಕ್ಕಾಚಾರದಲ್ಲೂ ಬಿಜಾಪುರದ ಕಾಗ್ಜಿ ನಿಂಬೆ ಕೃಷಿ ಅಡಿಕೆ ಬೆಳೆಗಿಂತ ದುಪ್ಪಟ್ಟು ಲಾಭದ ಬೆಳೆ, ರೈತರ ಪಾಲಿಗೆ ATM ಇದ್ದಂತೆ! ಅಡಿಕೆ ಫಸಲು ವರ್ಷಕ್ಕೊಮ್ಮೆ ಕೊಯ್ಲು, ಆದರೆ ನಿಂಬೆ ಬಹುತೇಕ ವರ್ಷ ಪೂರ್ತಿ ಫಸಲು. ತಂತು ಬೇರಿನ ಅಡಿಕೆ ಬೆಳೆಗೆ ಹೆಚ್ಚು ನೀರು ಬೇಕು, ನೀರಿನ ಕೊರತೆಯಾದರೆ ತೋಟ ಮತ್ತು ರೈತರ ಬದುಕು ಎರಡು ಒಣಗುವುದು. ನಿಂಬೆ ತಾಯಿ ಬೇರು ಜಾತಿಯ ಮರ - ಬರ ಸಹಿಸುವ ಶಕ್ತಿ ಇದೆ, ಬೇಸಿಗೆ ಮತ್ತು ಬರದಲ್ಲಂತೂ ನಿಂಬೆ ಫಸಲಿಗೆ ಬಂಗಾರದ ಬೇಡಿಕೆ ಮತ್ತು ಬೆಲೆಯೂ ದಕ್ಕುವುದು. ಅಡಿಕೆ ಭವಿಷ್ಯವಿಲ್ಲದ ವಾಣಿಜ್ಯ ಬೆಳೆ, ಅದೇ ನಿಂಬೆ ಆಹಾರ ಮತ್ತು ಔಷಧಿಯ ಬೆಳೆ. ಹಂಗಾಗಿ ಜನೋಪಯೋಗಿ, ಬಹುಪಯೋಗಿ. ಆದ್ದರಿಂದ ಮಾರುಕಟ್ಟೆ ಸಮಸ್ಯೆ ಎಂದೂ ಬಾರದು! ನಿಂಬೆ ಹಣ್ಣು ಭಾರತದಿಂದ ವಿದೇಶಗಳಿಗೆ ರಫ್ತಾಗಿ ದಿನೇ ದಿನೇ ಮತ್ತಷ್ಟು ಬೇಡಿಕೆ ಸೃಷ್ಠಿಸಿಕೊಳ್ಳುತ್ತಿದ್ದರೇ, ಇತ್ತ ಅಡಿಕೆ ವಿದೇಶಗಳಿಂದಲೇ ನಯಾಪೈಸೆ ಆಮದು ಶುಲ್ಕವಿಲ್ಲದೇ ಭಾರತಕ್ಕೆ ಹೆಚ್ಚೆಚ್ಚು ಲಗ್ಗೆ ಇಡುತ್ತಿದೆ, ಅಡಿಕೆಯನ್ನೇ ನಂಬಿದ್ದ ರೈತರ ಕಂಗೆಡಿಸಿದೆ*


ಬಿಜಾಪುರ ಸೇರಿದಂತೆ ಕನ್ನಡ ನಾಡಿನ ವಿವಿಧ ಭಾಗದ 30 ಸಾವಿರಕ್ಕೂ ಹೆಚ್ಚು ರೈತರು ಸಾವಿರಾರು ವರ್ಷಗಳಿಂದ  ಪಾರಂಪರಿಕವಾಗಿ ನಿಂಬೆ ಬೆಳೆಯುತ್ತಾ ಹೇಗೆ ಸುಂದರ ಬದುಕು-ಬೇಸಾಯ ಕಟ್ಟಿಕೊಂಡಿಹರೋ ಅದೇ ಅನುಭವದ ಬೆಳಕಿನಲ್ಲಿ 'ಪೂಚಂತೇ ಪರಪಂಚ' ಕನ್ನಡ ನಾಡಿನ ಸಾವಿರಾರು ರೈತರಿಗೆ ಕಾಗ್ಜಿ ನಿಂಬೆ ಕೃಷಿಯ ಸ್ಫೂರ್ತಿ ತುಂಬುತ್ತಿದೆ, ಒಂದು ಹನಿ - ಒಂದು ಕಾಳು ರಾಸಾಯನಿಕ ಬಳಸದೇ ಸಂಪೂರ್ಣವಾಗಿ ನೈಸರ್ಗಿಕ ಕೃಷಿಯಲ್ಲಿ ಬೆಳೆಸಿರುವ ಜಗದ್ವಿಖ್ಯಾತ ಬಿಜಾಪುರದ ಕಾಗ್ಜಿ ನಿಂಬೆ ಹಣ್ಣಿನ ಗಿಡಗಳನ್ನ ಪೂರೈಸುತ್ತಿದೆ. ನಿಂಬೆ ಬೆಳೆದು ಬದುಕು ಬೆಳಗಿಕೊಳ್ಳಲು ಹೊರಟವರಿಗೆ ನಿರಂತರ ಸಾಥ್ ನೀಡುತ್ತಿದೆ. ನಿಂಬೆ ಗಿಡಗಳ ಹುಡುಕಿ ನಾಡಿನ ಬೇರೆ ಬೇರೆ ಭಾಗದಿಂದ ಬರುವ ರೈತರ ಅನುಕೂಲಕ್ಕೆಂದು 50ಕ್ಕೂ ಹೆಚ್ಚು ವೈವಿಧ್ಯ ಹಣ್ಣಿನ ಗಿಡಗಳು, ಸಾಂಬಾರ ಪದಾರ್ಥ ಗಿಡಗಳು, ಮೊದಲಾದವೂ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ಒಟ್ಟಾರೆ ಜಾಗತಿಕ ತಾಪಮಾನ ವರ್ಷದಿಂದ ವರ್ಷಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಾ ಹೋಗುವುದರಿಂದ ನಿಂಬೆಗೆ ನಿಬ್ಬೆರಗಾಗುವಂತಹ ಬೇಡಿಕೆ ಮತ್ತು ಬೆಲೆ ಸೃಷ್ಟಿಯಾಗುತ್ತಲೇ ಹೋಗುತ್ತವೆ. ಬಿಜಾಪುರದ ಕಾಗ್ಜಿ ನಿಂಬೆ ಹಣ್ಣಿನ ಕೃಷಿಯಲ್ಲಿ ಆಸಕ್ತಿ ಇರುವ ರೈತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

*ಪೂಚಂತೇ ಪರಪಂಚ*
ವಿಸ್ಮಯಗಳ ಅಕ್ಷಯ ಪಾತ್ರೆ!
ಬೆಳವಾಡಿ, ಅರಕಲಗೂಡು ತಾಲ್ಲೂಕು, 
ಹಾಸನ 573113
9591066583