ಸಬ್ಸಿಡಿ ದರದಲ್ಲಿ ಮಾನವ ರಹಿತ ರಿಮೋಟ್ ಕಂಟ್ರೊಲ್ ವೆಹಿಕಲ್-Robotics in agriculture

<Krushirushi> <Xmatic unmanned ground vehicle> <ಮಾನವರಹಿತ ರಿಮೋಟ್ ಕಂಟ್ರೋಲ್ ಕಾರ್ಟ್> <Agriculture machinery> <Agriculture> <Agriculture machines> <ರೈತ> ಕೃಷಿ ಉಪಕರಣ> <Agriculturemachine> <Agricultureimpliments> <Robotics in agriculture>

ಸಬ್ಸಿಡಿ ದರದಲ್ಲಿ ಮಾನವ ರಹಿತ ರಿಮೋಟ್ ಕಂಟ್ರೊಲ್ ವೆಹಿಕಲ್-Robotics in agriculture

ಸಬ್ಸಿಡಿ ದರದಲ್ಲಿ ಮಾನವ ರಹಿತ ರಿಮೋಟ್ ಕಂಟ್ರೊಲ್ ವೆಹಿಕಲ್-Robotics in agriculture 


ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೊ ನೋಡಿ


https://youtu.be/LEnzQgh7s2Q 

ಇದೊಂದು ಸಾಧನ. ಥೇಟ್ ರಿಮೋಟ್ ಕಂಟ್ರೋಲ್ ಕಾರ್ ತರಹ ಇದು ರಿಮೋಟ್ ಕಂಟ್ರೋಲ್ ಕಾರ್ಟ್. ಆಟಿಕೆ ಅಲ್ಲ. ನಮ್ಮೆಲ್ಲಾ ಕೆಲಸಗಳಿಗೂ ಆಸರೆ ಈ ಸಾಧನ. ಈ ಸಾಧನವನ್ನು ಶಿವಮೊಗ್ಗದ (Shivamogga) ಕೀಳಂಬಿ ಅಗ್ರಿ ಪ್ರೊಡಕ್ಟ್ಸ್ ಹೊಸನಗರ ಜಾರಿಗೆ ತಂದಿದೆ. ಎಕ್ಸ್ ಮಾಟಿಕ್ಸ್(Xmatic) ಎಂಬ ಸಂಸ್ಥೆಯ ಮೂಲಕ ರಾಜೇಶ್ ಕೀಳಂಬಿಯವರ ನೇತೃತ್ವ ಹಾಗೂ ಮಿಥುನ್ ಎಸ್ ಕೃಪಾನಂದ ಅವರ ಅಗಾಧ ಶ್ರಮ ಹಾಗೂ ಅನ್ವೇಷಣೆಯೊಂದಿಗೆ ಈ ಸ್ವಯಂ ಚಾಲಿತ ಕಾರ್ಟ್ ಸಾಧನ ಮಾರುಕಟ್ಟೆಗೆ ಬಂದಿದೆ.

100% ಭಾರತದಲ್ಲೇ ನಿರ್ಮಿತವಾದ ವಾಹನ
ಈ ವಾಹನದ ವಿಶೇಷತೆ ಏನೆಂದರೆ 100% ಭಾರತದಲ್ಲೇ ನಿರ್ಮಿತ, ಬ್ಯಾಟರಿ ಚಾಲಿತ, ಕಡಿಮೆ ನಿರ್ವಹಣಾ ವೆಚ್ಚ, ರಿಮೋಟ್ ನಿಯಂತ್ರಿತ, 40ಡಿಗ್ರಿ ರೊಟೇಟಿಂಗ್ ಇದಿಷ್ಟು ಚಾಲನಾ ಸಾಮರ್ಥ್ಯಗಳಾದರೆ 500 ಕೆಜಿಯಷ್ಟು ಯಾವುದೇ ಕೃಷಿ ಹಾಗೂ ಕೃಷಿಯೇತರ ವಸ್ತುಗಳನ್ನು ಸಾಗಿಸಬಲ್ಲದು ಎಂಬುದು ಸಾಗಾಣಿಕಾ ಸಾಮರ್ಥ್ಯದ ಮಾಹಿತಿ, ಅಲ್ಲದೇ ನಿಂತಲ್ಲೇ ಬೇಕಾದ ಹಾಗೆ ಈ ಗಾಡಿಯನ್ನು ತಿರುಗಿಸಬಹುದು.

ಇದಕ್ಕೆ ಬೂಮ್ ಸ್ಪ್ರೇಯರ್, 350 ಲೀಟರ್ ಟ್ಯಾಂಕ್ ಹಾಗೂ ಒಂದು ಹೆಚ್ ಪಿ ಪಂಪ್ ಹಾಗೆಯೇ ರಸಗೊಬ್ಬರ ಡಿಸ್ಪೆನ್ಸರ್ ಕೂಡ ಜೋಡಿಸಲಾಗಿದೆ. ಇನ್ನೇನು ಟಿಲ್ಲರ್ ಹಾಗೂ ಕಟ್ಟರ್ ಜೋಡಿಸಲಾಗುತ್ತಿದ್ದು ಏಕಕಾಲದಲ್ಲಿ ಎಲ್ಲಾ ಕೃಷಿ ಸೌಲಭ್ಯ ಲಭ್ಯವಾಗಬಲ್ಲ ಅತ್ಯಾಧುನಿಕ ಸಾಧನ ಇದಾಗಲಿದೆ.

5 ತಾಸು ಚಾರ್ಜ್ ಮಾಡಿದರೆ 8 ತಾಸು ಬಾಳಿಕೆ ಬರುತ್ತದೆ ಹೊಲ, ಗದ್ದೆ, ತೋಟ, ಕಾಡು, ರಸ್ತೆ ಎಲ್ಲಿ ಬೇಕಾದರೂ ಸಾಗಿಸಬಹುದು. 5 ಕ್ವಿಂಟಾಲ್ ತನಕ ನಿಮ್ಮ ವಸ್ತುಗಳ ಭಾರ ಹೊರಬಲ್ಲ ಈ ಸಾಧನ ಕೃಷಿಗೆ ವರದಾನವಾಗಿದೆ. ಶಿವಮೊಗ್ಗದ ಹೊಸನಗರದ ಉತ್ಸಾಹಿ ಯುವಕರ ತಂಡದ ಈ ಪ್ರಯತ್ನಕ್ಕೆ ನಿಮ್ಮ ಮೆಚ್ಚುಗೆ ಇರಲಿ