Bele Samiksha status-ಫಲವತ್ತಾದ ಭೂಮಿಯನ್ನು ಪಾಳು ಭೂಮಿ ಎಂದು ತಪ್ಪು ವರದಿ ನೀಡಿರುವ ಪರಿಣಾಮ 2 ಲಕ್ಷಕ್ಕೂ ಅಧಿಕ ರೈತರಿಗಿಲ್ಲ ಬೆಳೆಹಾನಿ ಪರಿಹಾರ ನಿಮ್ಮ ಬೆಳೆ ಸಮಿಕ್ಷೆ ಸ್ಟೇಟಸ್ ಹೀಗೆ ಚೆಕ್ ಮಾಡಿ
<Krushirushi> <ಬೆಳೆವಿಮೆ> <ಬೆಳೆ ವಿಮೆ> <crop survey status> <ಬೆಳೆಸಮೀಕ್ಷೆ> <belevime> <bele samikshe> <cropinsurance> <bele darshak App> <ಬೆಳೆ ದರ್ಶಕ> <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <crop insurance> <belevime> <bele vime> <bele sala> <belesala> <ಬೆಳೆ ಸಾಲ> <ಬೆಳೆ ವಿಮೆ> <FID> <Fruits ID> <ಹಣ> <ರೈತ> <crop> <ಬೆಳೆಸುದ್ದಿ><ಬೆಳೆವಿಮೆ> <<dbt Karnataka> <direct benefit transfer> <ಆಧಾರ್> <ನೇರ ಲಾಭ ವರ್ಗಾವಣೆ> <cropinsurance> <ನೇರ ನಗದು ವರ್ಗಾವಣೆ> <FID> <croploss compensation> <belehani list> <crop loss details> <ರೈತ> <ಹಣ> <ಸಂದಾಯ> <bele parihara> <bele parihara list> <ಬೆಳೆಸುದ್ದಿ>
Bele Samiksha status-ಫಲವತ್ತಾದ ಭೂಮಿಯನ್ನು ಪಾಳು ಭೂಮಿ ಎಂದು ತಪ್ಪು ವರದಿ ನೀಡಿರುವ ಪರಿಣಾಮ 2 ಲಕ್ಷಕ್ಕೂ ಅಧಿಕ ರೈತರಿಗಿಲ್ಲ ಬೆಳೆಹಾನಿ ಪರಿಹಾರ,ನಿಮ್ಮ ಬೆಳೆ ಸಮಿಕ್ಷೆ ಸ್ಟೇಟಸ್ ಹೀಗೆ ಚೆಕ್ ಮಾಡಿ
ಕೇಂದ್ರ ಸರ್ಕಾರ ಕೊಟ್ಟ ಬರ ಪರಿಹಾರ ಹಣ ಬ್ಯಾಂಕ್ ಸಾಲಕ್ಕೆ ಕಡಿತವಾಯ್ತಲ್ಲ ಎಂದು ಕಣ್ಣೀರಿಟ್ಟಿದ್ದ ರಾಜ್ಯದ ರೈತರಿಗೀಗ ಮತ್ತೆರಡು ಬರೆ ಬಿದ್ದಿದೆ. ಬರ ಸಮೀಕ್ಷೆ(bele Samikshe) ನಡೆಸಿದ್ದ ಪಿಆರ್ ಸಿಬ್ಬಂದಿ ಫಲವತ್ತಾದ ಭೂಮಿಯನ್ನು ಪಾಳು ಭೂಮಿ ಎಂದು ತಪ್ಪು ವರದಿ ನೀಡಿರುವ ಪರಿಣಾಮ ಪರಿಹಾರ ಸಿಗದೆ 2 ಲಕ್ಷಕ್ಕೂ ಅಧಿಕ ರೈತರು ದಾಖಲೆ ತಿದ್ದುಪಡಿಗಾಗಿ ತಹಸೀಲ್ದಾರ್ ಹಾಗೂ ಕೃಷಿ ಕಚೇರಿಗೆ ಅಲೆದಾಡುವಂತಾಗಿದೆ.
ಮತ್ತೊಂದೆಡೆ ಕಾಲುವೆ ಹಾದು ಹೋಗಿರುವ ಜಮೀನಿನ ಮಾಲೀಕರಿಗೆ ಬರ ಪರಿಹಾರ ನೀಡಲ್ಲ ಎಂದು ಅಧಿಕಾರಿಗಳು ತಗಾದೆ ತೆಗೆದಿರುವುದು ಮುಂಗಾರು ಬಿತ್ತನೆಗೆ ಅಣಿಯಾಗುತ್ತಿದ್ದ ಅನ್ನದಾತರನ್ನು ಸಂಕಷ್ಟಕ್ಕೆ ದೂಡಿದೆ.
ಕಳೆದ ವರ್ಷ ಮಳೆ ಇಲ್ಲದೆ ಬೆಳೆ ಹಾಳಾದ ರೈತರಿಗೆ ಸರ್ಕಾರ ಬರ ಪರಿಹಾರ ನೀಡುತ್ತಿದೆ. ಆದರೆ, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಸಮೀಕ್ಷೆಗಾಗಿ ನೇಮಕಗೊಂಡ ಪ್ರೖೆವೇಟ್ ರೆಸಿಡೆಂಟ್(ಪಿಆರ್) ಸಿಬ್ಬಂದಿ ತಪ್ಪಿನಿಂದಾಗಿ ಫಲವತ್ತಾದ ಕೃಷಿ ಭೂಮಿ ಪಾಳು ಭೂಮಿ, ಎನ್ಎ ಭೂಮಿ ಎಂದು ಸಮೀಕ್ಷೆ ಆಪ್ನಲ್ಲಿ ದಾಖಲಿಸಲಾಗಿದೆ. ಇದರಿಂದಾಗಿ ಸಾಕಷ್ಟು ರೈತರು ಬೆಳೆ ಪರಿಹಾರ ಸಿಗದೆ ಕೃಷಿ ಮತ್ತು ತಹಸೀಲ್ದಾರ್ ಕಚೇರಿಗಳಿಗೆ ನಿತ್ಯ ಅಲೆದಾಡುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಚಿತ್ರದುರ್ಗ, ಕೊಪ್ಪಳ, ಮೈಸೂರು, ಮಂಡ್ಯ, ಬಳ್ಳಾರಿ, ಕಲಬುರಗಿ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳು ಹೆಚ್ಚು ಬರ ಅನುಭವಿಸಿವೆ. ಇಲ್ಲಿನ ರೈತರು ಪರ್ಯಾಯ ಉದ್ಯೋಗಕ್ಕಾಗಿ ಕೋಳಿ ಫಾಮ್ರ್, ಹಂದಿ ಸಾಕಣೆ ಉದ್ದೇಶಕ್ಕಾಗಿ 10 ರಿಂದ 12 ಗುಂಟೆ ಕೃಷಿ ಭೂಮಿ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿಕೊಂಡಿದ್ದಾರೆ.
ಕೆಲವೆಡೆ ನೀರಾವರಿ ಕಾಲುವೆಗಳಿಗೆ 2 ರಿಂದ 3 ಗುಂಟೆ ಸ್ವಾಧೀನಪಡಿಸಿಕೊಂಡಿದ್ದಾರೆ. ಆದರೆ, ಆಸ್ತಿ ದಾಖಲೆಗಳಲ್ಲಿ ಕೃಷಿ ಭೂಮಿಯನ್ನೇ ಎನ್ಎ ಎಂದು ಉಲ್ಲೇಖಿಸಿ ಎಲ್ಲ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಲಾಗಿದೆ. ಭೂಮಿ ಆಪ್ನಲ್ಲಿ ಕೃಷಿ ಜಮೀನು ಪಾಳು ಇಲ್ಲವೆ ಎನ್ಎ ಎಂದು ತೋರಿಸುತ್ತಿದೆ ಎಂದು ರೈತರು ದೂರಿದ್ದಾರೆ.
ಏನಿದು ಸಮೀಕ್ಷೆ ಎಡವಟ್ಟು?
1. ಕೆಲ ರೈತರು ಭೂಮಿಯಲ್ಲಿ ಬಿತ್ತನೆ ಮಾಡಿಲ್ಲ
2. ಹಲವೆಡೆ ಒಣಗಿದ ಕಾರಣಕ್ಕೆ ಬೆಳೆ ತೆಗೆದಿದ್ದರು
3. ಬರಪೀಡಿತ ತಾಲೂಕು ಘೋಷಣೆ ಬಳಿಕ ಸಮೀಕ್ಷೆ
4. ಬೆಳೆ ಒಣಗಿದ, ತೆಗೆದು ಹಾಕಿದ ಭೂಮಿ ಸರ್ವೆ
5. ಬಿತ್ತನೆ ಮಾಡಿದ ಕುರುಹು ಇಲ್ಲ ಎಂದು ವರದಿ
6. ಬಿತ್ತನೆ ಆಗದ ಭೂಮಿಗೆ ಪಾಳು ಭೂಮಿಯ ಪಟ್ಟ
7. ಇದರಿಂದಾಗಿ ಅರ್ಹ ರೈತರಿಗೆ ತಪ್ಪಿದ ಪರಿಹಾರ
ಡಿಜಿಟಲ್ ಸಮೀಕ್ಷೆ ವರದಿ
1. 46.11 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ಹಾನಿ
2. 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟ
3. 18,177 ಕೋಟಿ ರೂ.2023ರ ಒಟ್ಟು ಬರಗಾಲದ ನಷ್ಟ
ಪರಿಹಾರ ಸಿಗದವರು
1. ತಾಂತ್ರಿಕ ಸಮಸ್ಯೆ ಕಾರಣ-1,45,350
2. ಆಧಾರ್,ಫ್ರೂಟ್ ಐಡಿ ಹೆಸರು ವ್ಯತ್ಯಾಸ- 65,678
3. ಇತರ ಕಾರಣಗಳಿಂದಾಗಿ -78,321
ಇದನ್ನೂ ಓದಿ
Aadhaar seeding status-ಆಧಾರ್ ಸೀಡಿಂಗ್ ಸ್ಟೇಟಸ್ ನಲ್ಲಿ Active ಎಂದು ಇದ್ದವರಿಗೆ ಮಾತ್ರ ಬೆಳೆಹಾನಿ ಪರಿಹಾರ ಜಮಾ,ನಿಮ್ಮ ಸ್ಟೇಟಸ್ ಚೆಕ್ ಮಾಡಿ - https://krushirushi.in/Krushirushi-1000-1309
ಸಮೀಕ್ಷೆ ಆಪ್ನಲ್ಲಿ ತಪ್ಪು ಉಲ್ಲೇಖ, ದಾಖಲೆಗಳ ಹೊಂದಾಣಿಕೆ ಸಮಸ್ಯೆ ಸೇರಿ ಇತರ ಕಾರಣಗಳಿಂದಾಗಿ ಲಕ್ಷಕ್ಕೂ ಅಧಿಕ ರೈತರಿಗೆ ಬರ ಪರಿಹಾರ ಸಿಕ್ಕಿಲ್ಲ. ಲೋಪದೋಷ ಉಂಟಾಗಿರುವುದು ನಿಜ. ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
| ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ
ಕೃಷಿ ಇಲಾಖೆ ನೇಮಕ ಮಾಡಿರುವ ಪಿಆರ್ ಸಿಬ್ಬಂದಿ ಸಮೀಕ್ಷೆ ಆಪ್ನಲ್ಲಿ ಉಲ್ಲೇಖಿಸಿರುವ ಆಧಾರದ ಮೇಲೆ ಪರಿಹಾರ ನೀಡಲಾಗುತ್ತಿದೆ. ಬೆಳೆಗಳು ಇಲ್ಲದಿರುವ ಕಾರಣ ಪಾಳು ಭೂಮಿ ಎಂದು ಉಲ್ಲೇಖಿಸಿದ್ದಾರೆ. ಅದಕ್ಕೆ ಪರಿಹಾರ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಶೀಘ್ರವೇ 11ನೇ ಕಂತಿನಲ್ಲಿ ಬೆಳೆಹಾನಿ ಪರಿಹಾರ ವಿತರಣೆ ಆಗಲಿದೆ. ರೈತರು ಅತಂಕಪಡುವ ಅವಶ್ಯಕತೆ ಇಲ್ಲ.
| ನಿತೇಶ ಪಾಟೀಲ, ಜಿಲ್ಲಾಧಿಕಾರಿ
ವರದಿ ಕೃಪೆ-ವಿಜಯವಾಣಿ
ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ
ಮೊದಲು ಗೂಗಲ್ ಪ್ಲೇ ಸ್ಟೋರ್ ಮೂಲಕ ಅಥವಾ https://play.google.com/
ನಂತರ ರೈತ select ಮಾಡಿ
ನಂತರ ವರ್ಷ,ಋುತು, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ.
ನಂತರ ಸರ್ವೇ ನಂಬರ್ ಹಾಕಿ,ಹಿಸ್ಸಾಆಯ್ಕೆ ಮಾಡಿ,ಸಮೀಕ್ಷೆಯ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿ
ನಂತರ ಬೆಳೆವಿವರ ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿ
ನಂತರ photo ಮೇಲೆ ಕ್ಲಿಕ್ ಮಾಡಿದರೆ ನೀವು ಬೆಳೆದ ಬೆಳೆ ಹಾಗೂ ಫೋಟೊ ಅಪ್ಲೊಡ್ ಸರಿಯಾಗಿರುವುದನ್ನು ಪರಿಕ್ಷೀಸಿ.
ಸರಿಯಾಗಿರದಿದ್ದರೆ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಲು ಅವಕಾಶವಿರುತ್ತದೆ.
ಏನಿದು ಬೆಳೆ ದರ್ಶಕ ಆ್ಯಪ್?
ಈ ಅಪ್ಲಿಕೇಶನ್ ಮಾಡಿದ ಉದ್ದೇಶ ಬೆಳೆ ಸಮೀಕ್ಷೆಯನ್ನು ನೋಡಲು.. ಇದರಲ್ಲಿ ನೀವು ಅಪ್‌ಲೋಡ್ ಮಾಡಿದ ಚಿತ್ರಗಳನ್ನು ಮತ್ತು ಸಮೀಕ್ಷೆ ಮಾಡಿದ ಸರ್ವೇಯರ್ ವಿವರಗಳನ್ನು ನೋಡಬಹುದು.
ತಮ್ಮ ಮೊಬೈಲ್ ಮೂಲಕ ಬೆಳೆಗಳ ಸಮೀಕ್ಷೆ ಮಾಡಬಹುದು. ಅಥವಾ ನೆರೆಯ ಖಾಸಗಿ ವ್ಯಕ್ತಿಗಳ ಮೊಬೈಲ್ ಮೂಲಕ ಜಮೀನುಗಳ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ನಿಮ್ಮ ಜಮೀನಿನ ಸರ್ವೆ ನಂಬರ್ ಮತ್ತು ಜಮೀನಿನ ಫೊಟೋ ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಮೊಬೈಲ್ ನಲ್ಲಿ Bele darshak app ಮೂಲಕ ಕ್ಷಣಾರ್ಧದಲ್ಲಿ ನೋಡಬಹುದು. ಒಂದು ವೇಳೆ ತಪ್ಪಾಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು.
ರೈತರು ಕೃಷಿ ಇಲಾಖೆಯು ಅಭಿವೃದ್ಧಿಪಡಿಸಿದ ಬೆಳೆ ಸಮೀಕ್ಷೆ ಆ್ಯಪ್ (farmers crop survey app 2023-24) ಮೂಲಕ ಈಗಾಗಲೇ ಮುಂಗಾರು ಬೆಳೆಗಳ ಸಮೀಕ್ಷೆ ಕಾರ್ಯ ನಡೆದಿದೆ. ರೈತರು ಸ್ವತಃ ಅವರ ಮೊಬೈಲ್ ಮೂಲಕವೇ ಸಮೀಕ್ಷೆ ಮಾಡಿದ್ದಾರೆ. ಇನ್ನೂ ಕೆಲವು ರೈತರು ಖಾಸಗಿ ವ್ಯಕ್ತಿಗಳಿಂದ ಅಪ್ಲೋಡ್ ಮಾಡಿಸಿದ್ದಾರೆ. ಸರ್ವೆ ನಂಬರ್, ಅಗತ್ಯ ಮಾಹಿತಿ ಹಾಗೂ ಫೋಟ್ ಸರಿಯಾಗಿ ಅಪ್ಲೋಡ್ ಆಗಿದೆಯೇ ಎಂಬುದನ್ನು ಬೆಳೆ ದರ್ಶಕ್ ಆ್ಯಪ್ ಮೂಲಕ ನೋಡಬಹುದು.
ಬೆಳೆ ದರ್ಶಕ್ ಆ್ಯಪ್ ಇನ್ಸ್ ಸ್ಟಾಲ್ ಮಾಡಿಕೊಂಡ ನಂತರ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಇನ್ನಿತರ ಮಾಹಿತಿ ನಮೂದಿಸಬೇಕು. ಬೆಳೆ ದರ್ಶಕ್ ಆ್ಯಪ್ ಮೂಲಕ ಜಮೀನಿನಲ್ಲಿ ಬೆಳೆ ಸಮೀಕ್ಷೆ ಪ್ರಕಾರ ದಾಖಲಾಗಿರುವ ಬೆಳೆ ವಿವರಗಳು ಮತ್ತು ವಿಸ್ತೀರ್ಣದ ಮಾಹಿತಿ ಪಡೆಯಬಹುದು. ಬೆಳೆ ಸಮೀಕ್ಷೆ ಸಮಯದಲ್ಲಿ ತೆಗೆಯಲಾದ ಜಿಪಿಎಸ್ ಆಧಾರಿತ ಛಾಯಾಚಿತ್ರಗಳನ್ನು ವೀಕ್ಷಿಸಬಹುದು. ಅಲ್ಲದೆ ರೈತರ ಜಮೀನಿನ ಬೆಳೆ ಸಮೀಕ್ಷೆ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆಯ ವಿವರ, ರೈತರು ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು ನೋಡಬಹುದು.
ಒಂದು ವೇಳೆ ಮಾಹಿತಿ ತಪ್ಪಾಗಿದ್ದರೆ ಆಕ್ಷೇಪಣೆ ಸಲ್ಲಿಸಬಹುದು.ಮೇಲ್ವಿಚಾರಕರು ಸೂಕ್ತ ಬೆಳೆಗಳನ್ನು ದಾಖಲಿಸಿ ರೈತರ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುತ್ತಾರೆ. ಇನ್ನೇಕೆ ತಡ ಒಮ್ಮೆ ನಿಮ್ಮ ಬೆಳೆ ಸಮೀಕ್ಷೆಯಲ್ಲಿ ಎಲ್ಲಾ ಸರ್ವೆ ನಂಬರ್, ಮಾಹಿತಿ ಹಾಗೂ ಫೋಟೋ ಸರಿಯಾಗಿ ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ಕೊಡಿ
ಇದನ್ನೂ ಓದಿ
Bele parihara list-ಇಲ್ಲಿಯವರೆಗೂ ಬೆಳೆಪರಿಹಾರ ಜಮಾ ಆದವರ ಲಿಸ್ಟ್ ಬಿಡುಗಡೆ,ನಿಮ್ಮ ಊರಿನಲ್ಲಿ ಯಾರಿಗೆಲ್ಲಾ ಎಷ್ಟು ಪರಿಹಾರ ಜಮಾ ಆಗಿದೆ ಚೆಕ್ ಮಾಡಿ - https://krushirushi.in/Krushirushi-1000-1310
ಮೊದಲ ಹಾಗೂ ಎರಡನೇ ಕಂತಿನಲ್ಲಿ ಜಮಾ ಆಗದ ರೈತರಿಗೆ 3 ನೇ ಕಂತಿನಲ್ಲಿ ಹಣ ಬಿಡುಗಡೆ,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ