Mahindra oja tractor-5.64 ಲಕ್ಷ ಬೆಲೆಯ ಮಹೀಂದ್ರಾ ಓಜಾ ಟ್ರ್ಯಾಕ್ಟರ್ ಬಿಡುಗಡೆ

<Krushirushi> <ಮಹೀಂದ್ರಾ ಓಜಾ ಟ್ರ್ಯಾಕ್ಟ್ರರ್ ><Mahindra oha tractor> <Mahindra lightweight tractor> <ಸೋಲಾರ್ ಟ್ರ್ಯಾಕ್ಟ್ರರ್> <Solartractor> <tractor> <ಟ್ರ್ಯಾಕ್ಟರ್> <SELCO foundation> <ಸೆಲ್ಕೊ ಫೌಂಡೇಶನ್>

Mahindra oja tractor-5.64 ಲಕ್ಷ ಬೆಲೆಯ ಮಹೀಂದ್ರಾ ಓಜಾ ಟ್ರ್ಯಾಕ್ಟರ್ ಬಿಡುಗಡೆ

Mahindra oja tractor-5.64 ಲಕ್ಷ ಬೆಲೆಯ ಮಹೀಂದ್ರಾ ಓಜಾ ಟ್ರ್ಯಾಕ್ಟರ್ ಬಿಡುಗಡೆ


ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಹೀಂದ್ರಾ (Mahindra), ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಪಾರುಪಾತ್ಯ ಮೆರೆಯುತ್ತಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಡೆದ ಫ್ಯೂಚರ್‌ಸ್ಕೇಪ್ ಈವೆಂಟ್‌ನಲ್ಲಿ ಕಂಪನಿಯ ಟ್ರಾಕ್ಟರ್ ವಿಭಾಗವಾದ 'ಮಹೀಂದ್ರಾ ರೈಸ್' ಓಜಾ ಪ್ಲಾಟ್‌ಫಾರ್ಮ್ ಆಧರಿತ ಟ್ರಾಕ್ಟರ್‌ಗಳನ್ನು ಜಾಗತಿಕವಾಗಿ ಬಿಡುಗಡೆಗೊಳಿಸಿದೆ.

'ಓಜಾ' (lightweight) ಹಗುರವಾದ ಪ್ಲಾಟ್‌ಫಾರ್ಮ್ ಆಗಿದ್ದು, ಇದರಡಿ ಉತ್ಪಾದನೆಗೊಂಡ ಟ್ರಾಕ್ಟರ್‌ಗಳು ಹೆಚ್ಚು ಶಕ್ತಿಯುತವಾಗಿರುತ್ತವೆ. ಈ ಓಜಾ (OJA) ಎಂಬ ಹೆಸರು ಸಂಸ್ಕೃತ ಪದವಾದ 'ಓಜಸ್'ನಿಂದ ಬಂದಿದೆ. ಮಹೀಂದ್ರಾ ಓಜಾ 27 hp ಟ್ರಾಕ್ಟರ್ ಬೆಲೆ ರೂ.5.64 ಲಕ್ಷ, ಓಜಾ 40 hp ಟ್ರಾಕ್ಟರ್ ದರ ರೂ.7.35 ಲಕ್ಷ (ಎಕ್ಸ್ ಶೋರೂಂ, ಪುಣೆ) ಇದೆ.

ಪ್ರಸ್ತುತ ದೇಶೀಯ ಟ್ರಾಕ್ಟರ್ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು ಶೇಕಡ 42% ಮಾರುಕಟ್ಟೆ ಪಾಲನ್ನು ಹೊಂದಿದೆ. ಕಳೆದ ವರ್ಷ, ಕಂಪನಿಯು 9.45 ಲಕ್ಷ ಯುನಿಟ್ ಟ್ರಾಕ್ಟರ್ ಮಾರಾಟ ಮಾಡಿತ್ತು. ನೂತನ ಮಹೀಂದ್ರಾ ಟ್ರಾಕ್ಟರ್‌ಗಳು, ಸಬ್-ಕಾಂಪ್ಯಾಕ್ಟ್, ಕಾಂಪ್ಯಾಕ್ಟ್ ಮತ್ತು ಸ್ಮಾಲ್ ಯುಟಿಲಿಟಿ ಎಂಬ 3 ಓಜಾ ಪ್ಲಾಟ್‌ಫಾರ್ಮ್‌ನ್ನು ಆಧರಿಸಿವೆ. ಜೊತೆಗೆ 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡಿದಿವೆ.

ಸಬ್-ಕಾಂಪ್ಯಾಕ್ಟ್ ಪ್ಲಾಟ್‌ಫಾರ್ಮ್‌ ಹೊಂದಿರುವ ಟ್ರಾಕ್ಟರ್‌ಗಳನ್ನು ಯುಎಸ್ಎ, ಸ್ಮಾಲ್ ಯುಟಿಲಿಟಿ ಪ್ಲಾಟ್‌ಫಾರ್ಮ್‌ ಪಡೆದಿರುವ ಟ್ರಾಕ್ಟರ್‌ಗಳನ್ನು ಯುಎಸ್ಎ, ಭಾರತ ಹಾಗೂ ಏಶಿಯನ್, ಕಾಂಪ್ಯಾಕ್ಟ್ ಪ್ಲಾಟ್‌ಫಾರ್ಮ್‌ನ್ನು ಆಧರಿಸಿರುವ ಟ್ರಾಕ್ಟರ್‌ಗಳನ್ನು ಯುಎಸ್ ಹಾಗೂ ಏಶಿಯನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ವಿನ್ಯಾಸ ಮಾಡಲಾಗಿದೆ. ಅದರಲ್ಲೂ ಭಾರತದ ಮಾರುಕಟ್ಟೆಗೆ ಕಂಪನಿಯು ಕಾಂಪ್ಯಾಕ್ಟ್ ಮತ್ತು ಸ್ಮಾಲ್ ಯುಟಿಲಿಟಿ ಪ್ಲಾಟ್‌ಫಾರ್ಮ್‌ನ್ನು ಪಡೆದಿರುವ 7 ಹೊಸ ಟ್ರಾಕ್ಟರ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಇವೆಲ್ಲ, 4WD ಡ್ರೈವಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, 20 hp - 40 hp (14.91kW - ​​29.82kW) ರೇಂಜ್ ನಲ್ಲಿವೆ. ಮಹೀಂದ್ರಾ ಓಜಾ ಶ್ರೇಣಿ ಟ್ರಾಕ್ಟರ್‌ಗಳು ಪ್ರೊಜಾ (PROJA), ಮಯೋಜ (MYOJA), ರೋಬೋಜ (ROBOJA) ಮೂರು ಟೆಕ್ನಲಾಜಿ ಪ್ಯಾಕ್‌ಗಳನ್ನು ಹೊಂದಿದ್ದು, ಕೃಷಿ ಕೆಲಸಕ್ಕೆ ಬಳಸುವ ಟ್ರಾಕ್ಟರ್‌ಗಳೇ ಆಗಿದ್ದರೂ ಯಾವ ಕಾರಿಗೂ ಕಮ್ಮಿ ಇಲ್ಲದಂತಹ ವೈಶಿಷ್ಟ್ಯಗಳನ್ನು ಹೊಂದಿವೆ.

ಪ್ರೊಜಾ (PROJA) ಟೆಕ್ನಲಾಜಿ ಪ್ಯಾಕ್‌ ಪಡೆದಿರುವ ಟ್ರಾಕ್ಟರ್‌, ಫಾರ್ವರ್ಡ್/ ರಿವರ್ಸ್ ಷಟಲ್ & ಕ್ರೀಪರ್, ಟಿಲ್ಟ್ ಹಾಗೂ ಟೆಲಿಸ್ಕೋಪಿಕ್ ಸ್ಟೀರಿಂಗ್, ಎಲೆಕ್ಟ್ರಿಕ್ ವೆಟ್ ಪಿಟಿಒ ಹಾಗೂ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್ ಜೊತೆಗೆಯಲ್ಲಿ ಸಿಗ್ನೇಚರ್ DRLs ವೈಶಿಷ್ಟ್ಯಗಳನ್ನು ಹೊಂದಿದೆ. ಮಯೋಜ (MYOJA) ತಂತ್ರಜ್ಞಾನ ಹೊಂದಿರುವ ಟ್ರಾಕ್ಟರ್‌ ಸರ್ವಿಸ್ ಅಲರ್ಟ್ & ಟೆಲಿಮ್ಯಾಟಿಕ್ಸ್ ಫೀಚರ್ಸ್ ಪಡೆದಿದೆ.

ರೋಬೋಜ (ROBOJA) ಟೆಕ್ನಲಾಜಿ ಪ್ಯಾಕ್‌ ಹೊಂದಿರುವ ಟ್ರಾಕ್ಟರ್‌, ಆಟೋ ಪಿಟಿಒ ಆನ್/ಆಫ್ (ಟರ್ನಿಂಗ್ & ರಿವರ್ಸ್), ಆಟೋ ಬ್ರೇಕಿಂಗ್, ಎಲೆಕ್ಟ್ರಾನಿಕ್ ಡೆಪ್ತ್ ಮತ್ತು ಡ್ರಾಫ್ಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಕ್ವಿಕ್ ರೈಸ್ ಮತ್ತು ಲೋವರ್, ಮತ್ತು ಆಟೋ ಇಂಪ್ಲಿಮೆಂಟ್ ಲಿಫ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮಹೀಂದ್ರಾ, ಓಜಾ ಶ್ರೇಣಿ ಟ್ರಾಕ್ಟರ್‌ಗಳನ್ನು ತೆಲಂಗಾಣದ ಜಹೀರಾಬಾದ್‌ನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ತಯಾರಿಸಲು ನಿರ್ಧರಿಸಿದೆ.

ಮಹೀಂದ್ರಾ ಆಂಡ್ ಮಹೀಂದ್ರಾ ಲಿಮಿಟೆಡ್‌ನ ಫಾರ್ಮ್ ವಿಭಾಗದ ಸಿಇಒ ವಿಕ್ರಮ್ ವಾಘ್ ಅವರು, ಮುಂದಿನ ಅಕ್ಟೋಬರ್‌ ತಿಂಗಳಿಂದ ಭಾರತದಲ್ಲಿ ಗ್ರಾಹಕರಿಗೆ ಟ್ರಾಕ್ಟರ್‌ಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನು, ಮಹೀಂದ್ರಾ ಟ್ರಾಕ್ಟರ್‌ಗಳು ಈಗಾಗಲೇ ದೇಶದಲ್ಲಿ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿವೆ. ಓಜಾ ಶ್ರೇಣಿ ಟ್ರಾಕ್ಟರ್‌ಗಳು ಆಕರ್ಷಕ ವೈಶಿಷ್ಟ್ಯ ಪಡೆದಿರುವುದರಿಂದ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಬಹುದು.

News source-Kannada drivespark 

Tractor subsidy-2.9 ಲಕ್ಷ ಸಬ್ಸಿಡಿಯಲ್ಲಿ ಸೋಲಾರ್ ಟ್ರ್ಯಾಕ್ಟ್ರರ್

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೊ ನೋಡಿ

https://youtube.com/shorts/ytP8-_FIBzk?feature=share

ಕೃಷಿ ವಲಯವು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ, ರೈತರು, ವಿಶೇಷವಾಗಿ ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವ ಯುವಕರು, ಕೃಷಿಯ ಹೊಸ ತಂತ್ರಜ್ಞಾನಗಳತ್ತ ಮುಖ ಮಾಡಿದ್ದಾರೆ. ಪ್ರಾಥಮಿಕವಾಗಿ ಸೌರಶಕ್ತಿ ಚಾಲಿತ ಮಿನಿ ಟ್ರ್ಯಾಕ್ಟರ್ ಇವುಗಳಲ್ಲಿ ಒಂದಾಗಿದೆ.

ಸಿದ್ದವ್ವನದುರ್ಗ ಗ್ರಾಮದಲ್ಲಿ ಪ್ರಗತಿಪರ ರೈತ ಶಿವಣ್ಣನವರ ಪುತ್ರ ಚನ್ನಬಸಪ್ಪ ಅವರು ಸೌರಶಕ್ತಿ ಚಾಲಿತ ಮಿನಿ ಟ್ರ್ಯಾಕ್ಟರ್‌ಗಳನ್ನು ಬಳಸಲು ಆರಂಭಿಸಿ ತಮ್ಮ ಹೊಲದಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಜಮೀನನ ಉಳುಮೆಗೆ ಬಳಸುತ್ತಿದ್ದ ಗೂಳಿಗಳಿಗೆ ಪರ್ಯಾಯವಾಗಿ ಈ ಟ್ರ್ಯಾಕ್ಟರ್ ಬಳಸುತ್ತಿದ್ದು, ಇದರಿಂದ ಸಾಕಷ್ಟು ಹಣ ಉಳಿತಾಯವಾಗಿದೆ. ಸೌರಶಕ್ತಿಯಿಂದ ಚಲಿಸುವ ಮಿನಿ ಟ್ರಾಕ್ಟರ್ ಸಾರ್ವಜನಿಕರ ಮನಗೆದ್ದಿದೆ.

ರಾಗಿ ಮತ್ತು ಇತರೆ ಬೆಳೆಗಳನ್ನು ಬಿತ್ತನೆ ಮಾಡುವಾಗ ಹಾಗೂ ಉಳುಮೆ ಮಾಡಲು ಟ್ರ್ಯಾಕ್ಟರ್ ಬಳಸುತ್ತಾರೆ. ಈ ಮಿನಿ ಸೌರಶಕ್ತಿ ಚಾಲಿತ ಟ್ರಾಕ್ಟರ್ ಅನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಎಂಟು ಗಂಟೆಗಳ ಕಾಲ ಅಡೆತಡೆಯಿಲ್ಲದೆ ಕೆಲಸ ಮಾಡುತ್ತದೆ.

ಸಾಂಪ್ರದಾಯಿಕ ಕೃಷಿಯಲ್ಲಿ ಬಳಸುತ್ತಿದ್ದ ಎತ್ತುಗಳಿಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಸೆಲ್ಕೋ ಫೌಂಡೇಶನ್ ಸೋಲಾರ್ ಟ್ರ್ಯಾಕ್ಟರ್‌ನ ವೆಚ್ಚವನ್ನು 2.09 ಲಕ್ಷ ರೂ.ಗಳನ್ನು ಭರಿಸಿದೆ, ಆದರೆ ಫಲಾನುಭವಿ ಚನ್ನಬಸಪ್ಪ ಅವರು ಸಲಕರಣೆಗಳ ವೆಚ್ಚವಾಗಿ 65,000 ರೂ. ವೆಚ್ಚ ಮಾಡಿದ್ದಾರೆ.

ಇಡೀ ವಿಶ್ವವೇ ಪ್ರಗತಿ ಹೊಂದುತ್ತಿರುವ ಸಂದರ್ಭದಲ್ಲಿ ಕೃಷಿ ಕ್ಷೇತ್ರವೂ ಮುನ್ನಡೆಯಬೇಕು. ಸೌರಶಕ್ತಿಯು ಕೃಷಿಯ ಯಾಂತ್ರೀಕರಣದಲ್ಲಿ ಬಳಸುವ ಪಳೆಯುಳಿಕೆ ಇಂಧನಕ್ಕೆ ಪರ್ಯಾಯವಾಗಿದೆ ಎಂದು ಅಭಿಪ್ರಾಯವಾಗಿದೆ

Tractor junction-ಟ್ರ್ಯಾಕ್ಟರ್ ಜಂಕ್ಷನ್ ಮೊಬೈಲ್ ದರದಲ್ಲಿ ಟ್ರ್ಯಾಕ್ಟರ್ ಹಾಗೂ ಕೃಷಿ ಉಪಕರಣಗಳ ಮಾರುಕಟ್ಟೆ

ಅದೆಷ್ಟೇ ಮುಂದುವರೆದರೂ ಪ್ರತಿಯೊಂದಕ್ಕೂ ಮಾರ್ಕೆಟ್‌ ಅಥವಾ ಸರಕಾರಿ ಕಚೇರಿಯಿಂದಲೇ ಮಾಹಿತಿ ಪಡೆಯುವಂತಹ ಸ್ಥಿತಿಯಿದೆ. ಆದ್ರೀಗ ರೈತರಿಗೆ ಯಂತ್ರೋಪಕರಣಗಳನ್ನು ಸುಲಭವಾಗಿ ಸಿಗುವಂತಾಗಲು ಹೊಸ ವೇದಿಕೆಯೊಂದು ಸಿದ್ಧವಾಗಿದೆ.

ಅದು ಬೇರೆ ಡಿಜಿಟಲ್‌ ವೇದಿಕೆಯಾಗಿದ್ದು, ವೆಬ್‌ಸೈಟ್‌ ಮೂಲಕವೇ ಪ್ರತಿಯೊಂದು ಯಂತ್ರೋಪಕರಣಗಳ ಮಾಹಿತಿ ಇಲ್ಲಿ ಸಿಗುತ್ತೆ. ವಿಶೇಷ ಅಂದ್ರೆ ಸೆಕೆಂಡ್‌ ಹ್ಯಾಂಡ್‌ ಟ್ರ್ಯಾಕ್ಟರ್‌ ಸಹಿತ ಹೊಸ ಕೃಷಿ ಉಪಕರಣಗಳನ್ನು ಕೂಡಾ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದಾಗಿದೆ.

ಹೌದು, ಇನ್ಮುಂದೆ ರೈತರು ಮನೆಯಲ್ಲಿಯೇ ಕೂತು "ಟ್ರ್ಯಾಕ್ಟರ್‌ ಜಂಕ್ಷನ್”" ಆನ್‌ಲೈನ್‌ ವೇದಿಕೆ ಮೂಲಕ ಟ್ರ್ಯಾಕ್ಟರ್‌ ಸೇರಿದಂತೆ ಇತರೆ ಕೃಷಿ ಉಪಕರಣಗಳನ್ನು ಮಾರಾಟ ಮಾಡಬಹುದು ಅಥವಾ ಖರೀದಿಸಬಹುದಾಗಿದೆ.

ಕೃಷಿ ಉಪಕರಣಗಳ ಖರೀದಿ ಸಮಯದಲ್ಲೂ ಅದರ ಕುರಿತು ನಿಖರವಾದ ಹಾಗೂ ವಿಶ್ವಾಸಾರ್ಹ ಮಾಹಿತಿಯನ್ನ ಈ ವೆಬ್‌ಸೈಟ್‌ ಒದಗಿಸಲಿದೆ.

ಸೆಕೆಂಡ್‌ ಹ್ಯಾಂಡ್‌ ಟ್ರ್ಯಾಕ್ಟರ್‌ ಸಹಿತ ಇತರೆ ಕೃಷಿ ಉಪಕರಣಗಳನ್ನ ಇಲ್ಲಿಯೇ ಖರೀದಿಸಬಹುದಾಗಿದೆ. ಜೊತೆಗೆ ಹೊಸದಾಗಿ ಕೃಷಿ ಉಪಕರಣಗಳನ್ನು ಖರೀದಿಸುವುದಾದರೂ ಅದರ ಬಗ್ಗೆ ಸ್ಪಷ್ಟವಾದ ಮಾಹಿತಿ, ಯಾವ ಕಂಪೆನಿ ಅದೆಲ್ಲದರ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

 

ಅಷ್ಟೇ ಅಲ್ಲ ಖರೀದಿಸುವಂತಹ ಕೃಷಿ ಉಪಕರಣಗಳಿಗೆ ಸಾಲ ಸೌಲಭ್ಯವನ್ನು ಈ ವೇದಿಕೆ ಮೂಲಕವೇ ಕಲ್ಪಿಸಿಕೊಡಲಾಗುತ್ತೆ. ಈ ಮೂಲಕ ತಮ್ಮ ಸ್ಮಾರ್ಟ್‌ ಫೋನ್‌ನಿಂದಲೇ ಇಂತಹದ್ದೊಂದು ಅವಕಾಶವನ್ನ ಯುವ ರೈತರು ಬಳಸಿಕೊಳ್ಳಬಹುದಾಗಿದೆ.

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.tractorjunction.com/

ನಂತರ ಹಳೆಯ ಅಥವಾ ಸೆಕೆಂಡ್ ಹ್ಯಾಂಡ್ ಟ್ರ್ಯಾಕ್ಟರ್ ಖರೀದಿಸಲು old tractors ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ ಟ್ರ್ಯಾಕ್ಟರ್ select ಮಾಡಿ

ನಂತರ ನಿಮ್ಮ ಹೆಸರು,ಮೊಬೈಲ್ ನಂಬರ್,ರಾಜ್ಯ,ಜಿಲ್ಲೆ,ನಿಮ್ಮ ಬೆಲೆಯನ್ನು ನಮೂದಿಸಿ,contact seller ಮೇಲೆ ಕ್ಲಿಕ್ ಮಾಡಿ

ನಂತರ view loan offer ಮೇಲೆ ಕ್ಲಿಕ್ ಮಾಡಿ,ನಿಮ್ಮ ಹೆಸರು,ಮೊಬೈಲ್ ನಂಬರ್,model ನಂಬರ್,ನಿಮ್ಮ ಸ್ಥಳ select ಮಾಡಿ,view loan offer ಮೇಲೆ ಕ್ಲಿಕ್ ಮಾಡಿದರೆ,ನಿಮಗೆ ಖರೀದಿಸಲು ಸಾಲ ಸೌಲಭ್ಯವೂ ದೊರೆಯಲಿದೆ