Baddi manna-ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇಂದ್ರ ಸರ್ಕಾರದಿಂದ ಬಡ್ಡಿಮನ್ನಾ ಘೋಷಣೆ
<Krushirushi> <ಬಡ್ಡಿಮನ್ನಾ> <ಬೆಳೆಸಾಲಮನ್ನಾ> <ಬೆಳೆಸಾಲ> <croploan> <croploanwavier> <belesala> <belesalamanna> <loan waiver> <direct benefit transfer>
Baddi manna-ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇಂದ್ರ ಸರ್ಕಾರದಿಂದ ಬಡ್ಡಿಮನ್ನಾ ಘೋಷಣೆ
ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅನೇಕ ಉಪಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದರ ಭಾಗವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಹೊರಡಿಸಿರುವ ಮಾರ್ಗಸೂಚಿಯು ಸಣ್ಣ, ಅತಿಸಣ್ಣ ರೈತರಿಗೆ ವರದಾನವಾಗಿದೆ.
ಬಡ್ಡಿ ಸಹಾಯಧನದ ಬೆಳೆಸಾಲ ಯೋಜನೆಯನ್ನು ಕೃಷಿ ಸಂಬಂಧಿತ ಚಟುವಟಿಕೆ (ಸೆಕೆಂಡರಿ)ಗಳಿಗೆ ವಿಸ್ತರಿಸಲಾಗಿದ್ದು, ಪ್ರಸಕ್ತ ಹಣಕಾಸು ವರ್ಷ (2023-24)ಕ್ಕೂ ಈ ಸೌಲಭ್ಯ ಮುಂದುವರಿಸಿದೆ. ಈ ಸಂಬಂಧ ಆರ್ಬಿಐ ಮಾರ್ಗಸೂಚಿ ರವಾನಿಸಿದ್ದು, ಸಾರ್ವಜನಿಕ, ಖಾಸಗಿ ಬ್ಯಾಂಕ್ಗಳು, ಗಣಕೀಕೃತ ಪ್ಯಾಕ್ಸ್, ಶೆಡ್ಯೂಲ್ಡ್ ವಾಣಿಜ್ಯಿಕ ಬ್ಯಾಂಕ್ಗಳ ಜತೆ ಸಂಯೋಜಿತ ಹಣಕಾಸು ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.
ವಾಣಿಜ್ಯಿಕ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಅಲ್ಪಾವಧಿ ಬೆಳೆ ಸಾಲಕ್ಕೆ ಶೇಕಡ 8.50 ಬಡ್ಡಿ ವಿಧಿಸುತ್ತವೆ. ಆದರೆ ಬ್ಯಾಂಕ್ಗಳ ಹಂತದಲ್ಲಿಯೇ ಕೇಂದ್ರ ಸರ್ಕಾರ ಶೇ.1.50 ಬಡ್ಡಿ ಮೊತ್ತ ಭರಿಸುವ ಕಾರಣ ಶೇ.7ಕ್ಕೆ ಇಳಿಯುತ್ತದೆ. ಅಲ್ಪಾವಧಿ ಬೆಳೆ ಸಾಲ ಪಡೆದ ರೈತರು ನಿಗದಿತ ಕಾಲಮಿತಿ ಯೊಳಗೆ ಮರು ಪಾವತಿಸಿದರೆ ಶೇ.3 ಬಡ್ಡಿ ರಿಯಾಯಿತಿ ದೊರೆಯುತ್ತದೆ. ಅಂದರೆ ಶೇ.4ರ ಬಡ್ಡಿ ದರದಲ್ಲಿ ಗರಿಷ್ಠ ಮೂರು ಲಕ್ಷ ರೂ.ಗಳ ತನಕ ಬಡ್ಡಿಸಹಾಯಧನ ಸಾಲ ಸಿಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದ ರೈತರು ಸಕಾಲಕ್ಕೆ ಚುಕ್ತಾ ಮಾಡಿದ ನಂತರ ರಿಯಾಯಿತಿ ನೀಡಲಾದ ಶೇ.3ರ ಬಡ್ಡಿ ಮೊತ್ತವನ್ನು ಕೇಂದ್ರ ಸರ್ಕಾರವೇ ನೀಡುತ್ತಿದ್ದು, ಒಟ್ಟಾರೆ ಶೇ.4.50 ಬಡ್ಡಿಸಹಾಯಧನದ ಮೊತ್ತವು ಬ್ಯಾಂಕ್ಗಳಿಗೆ ಕೇಂದ್ರದಿಂದ ಭರ್ತಿಯಾಗುತ್ತದೆ.
ಬಡ್ಡಿಸಹಾಯಧನ ವಿಸ್ತರಣೆ: ಸಾಗುವಳಿ ಜಮೀನು ಒಂದರಿಂದ ಐದು ಎಕರೆ ಒಳಗೆ ಹೊಂದಿರುವ ಅತಿಸಣ್ಣ, ಸಣ್ಣ ರೈತರು ಬರೀ ಕೃಷಿಯನ್ನು ನೆಚ್ಚಿಕೊಂಡರೆ ಆದಾಯ ವೃದ್ಧಿ ಸಾಧ್ಯವಿಲ್ಲವೆಂದು ಅಧ್ಯಯನಗಳು, ತಜ್ಞರ ವರದಿಗಳು ಮನಗಾಣಿಸಿವೆ. ಈ ಹಿನ್ನೆಲೆಯಲ್ಲಿ ರೈತರ ಆದಾಯದುಪ್ಪಟ್ಟು ಮಾಡಲು ಮೌಲ್ಯವರ್ಧನೆ, ಕೊಯ್ಲೋತ್ತರ ತಂತ್ರಜ್ಞಾನ, ಯಾಂತ್ರೀಕರಣ, ರೈತ ಉತ್ಪಾದಕ ಕಂಪನಿಗಳ ಸ್ಥಾಪನೆ ಇನ್ನಿತರ ಉಪಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಅಲ್ಲದೆ, ಕೃಷಿ ಸಂಬಂಧಿತ ಉಪಕಸಬುಗಳಾದ ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ, ಕುರಿ, ಜೇನು ಸಾಕಾಣಿಕೆ ಚಟುವಟಿಕೆಗಳನ್ನು ಸೆಕೆಂಡರಿ ಕೃಷಿಗೆ ಸೇರಿಸಿದೆ. ಸೆಕೆಂಡರಿ ಕೃಷಿ ಚಟುವಟಿಕೆಗಳು ರೈತರ ಆದಾಯ ಹೆಚ್ಚಿಸುತ್ತವೆ. ಕೃಷಿಯಲ್ಲಿ ಸ್ಥಿರತೆ, ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾಗುತ್ತವೆ ಎಂಬ ಕಾರಣಕ್ಕೆ ಕೇಂದ್ರ ಹೆಚ್ಚಿನ ಒತ್ತು ನೀಡಿದೆ. ಇದರಿಂದಾಗಿ ಬಡ್ಡಿಸಹಾಯಧನ ಯೋಜನೆಯನ್ನು ಸೆಕೆಂಡರಿ ಕೃಷಿಗೆ ಆರ್ಬಿಐ ಎರಡು ವರ್ಷಗಳ ಹಿಂದೆಯೇ ವಿಸ್ತರಿಸಿದೆ. ಪ್ರಸಕ್ತ ಹಣಕಾಸು ವರ್ಷಕ್ಕೂ ಈ ಸೌಲಭ್ಯ ಮುಂದುವರಿಸಿದ್ದರ ಕುರಿತು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಪುನರ್ ರಚಿತ ಸಾಲಕ್ಕೂ ಅನ್ವಯ: ಅಧಿಕೃತ ನಿಯಮಾವಳಿ ಪ್ರಕಾರ ನೈಸರ್ಗಿಕ ವಿಕೋಪ ಬಾಧಿತ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಿಸಿದ್ದರೆ, ಅರ್ಹ ರೈತರ ಬೆಳೆ ಸಾಲ ಪುನರ್ ರಚನೆಗೆ ಆರ್ಬಿಐ ಅನುಮತಿ ನೀಡಿದೆ. ಬಾಧಿತ ರೈತರ ಅಲ್ಪಾವಧಿ ಬೆಳೆ ಸಾಲ ಪುನರ್ ರಚನೆ ಹಾಗೂ ಸಾಲ ಮರು ಪಾವತಿ ಅವಧಿಯನ್ನು ಮೂರು ವರ್ಷ ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಲು ಆರ್ಬಿಐ ಅವಕಾಶ ನೀಡಿದೆ.
ಬೆಳೆ ಸಾಲ ಪುನರ್ ರಚಿಸಿದ ನಂತರ ನಿಗದಿತ ಅವಧಿಯೊಳಗೆ ಮರು ಪಾವತಿಸಿದ ರೈತರಿಗೆ ಶೇ.4ರ ರಿಯಾಯಿತಿ ಬಡ್ಡಿ ದರವೂ ಅನ್ವಯಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರ ಘೋಷಿಸಿದ 216 ಬರ ಪೀಡಿತ ತಾಲೂಕು ರೈತರಿಗೆ ನೆರವಾಗಲಿದೆ. ರಾಜ್ಯದ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ ವಿಶೇಷ ಸಭೆ ಇತ್ತೀಚೆಗೆ ನಡೆದು, ಆರ್ಬಿಐ ಮಾರ್ಗಸೂಚಿ ಪ್ರಕಾರ ನಿರ್ಣಯ ಕೈಗೊಂಡಿದೆ. ಬರಬಾಧಿತ ಅರ್ಹ ರೈತರ ಬೆಳೆ ಸಾಲ ಪುನರ್ ರಚಿಸಬೇಕು ಎಂದು ವಾಣಿಜ್ಯಿಕ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೆ ಈ ಕುರಿತು ನಿರ್ದೇಶನ ನೀಡಿ, ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ ಉಸ್ತುವಾರಿ ಸಂಚಾಲಕ ಬಿ.ಪಾರ್ಶ್ವನಾಥ್ ಪತ್ರ ಬರೆದಿದ್ದಾರೆ.
* ಬೆಳೆ ಜತೆಗೆ ಉಪಕಸಬುಗಳಿಗೆ ಶೇ.50 ಸಾಲ ಸೌಲಭ್ಯ
* ರಾಜ್ಯದ 57 ಲಕ್ಷ ಅನ್ನದಾತರಿಗೆ ಪ್ರಯೋಜನ ಅಂದಾಜು
* ಬರ ಹಿನ್ನೆಲೆಯಲ್ಲಿ ಸಾಲ ಪುನರ್ ರಚನೆ, ಅವಧಿ ವಿಸ್ತರಣೆ
ಬಡ್ಡಿ ಸಹಾಯಧನ ಯೋಜನೆಯಿಂದ ಸೆಕೆಂಡರಿ ಕೃಷಿ ಬಲವರ್ಧಿಸುತ್ತದೆ. ಸಣ್ಣ, ಅತಿಸಣ್ಣ ರೈತರಿಗೆ ಹೆಚ್ಚುವರಿ ಆದಾಯ ಚಟುವಟಿಕೆಗಳಿಗೆ ಅನುಕೂಲ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗಲಿದೆ.
| ಮನೋಹರ್ ಮಸ್ಕಿ ಸಂಸ್ಥಾಪಕ ಅಧ್ಯಕ್ಷ, ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ
57 ಲಕ್ಷ ರೈತರಿಗೆ ಪ್ರಯೋಜನ
ಶೇ.4ರ ರಿಯಾಯಿತಿ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲ ಪಡೆದ ಸಣ್ಣ, ಅತಿಸಣ್ಣ ರೈತರು ನಿಗದಿತ ಕಾಲಮಿತಿಯೊಳಗೆ ಮರು ಪಾವತಿಸಿದ್ದರೆ ಈ ಸೌಲಭ್ಯ ಪಡೆಯಬಹುದಾಗಿದೆ. ಗರಿಷ್ಠ ಮೂರು ಲಕ್ಷ ರೂ.ವರೆಗೆ ಶೇ.4ರ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲ ನೀಡಲಾಗುತ್ತದೆ. ಈ ಪೈಕಿ ಶೇ.50 ಅಥವಾ ಗರಿಷ್ಠ ಎರಡು ಲಕ್ಷ ರೂ.ಗಳವರೆಗೆ ಶೇ.4ರ ಬಡ್ಡಿ ದರದಲ್ಲಿ ಸೆಕೆಂಡರಿ ಕೃಷಿ ಚಟುವಟಿಕೆಗಳಿಗೆ ಸಾಲ ಲಭಿಸುತ್ತದೆ. ರಾಜ್ಯದಲ್ಲಿರುವ 68 ಲಕ್ಷ ರೈತರ ಪೈಕಿ 57 ಲಕ್ಷ ಸಣ್ಣ, ಅತಿಸಣ್ಣ ರೈತರು ಸೇರಿದ್ದಾರೆ. ಈ ಸೌಲಭ್ಯದ ಬಗ್ಗೆ ಸರಿಯಾದ ಮಾಹಿತಿ ನೀಡಿದರೆ ಅಷ್ಟೂ ರೈತರು ಪ್ರಯೋಜನ ಪಡೆಯಲು ಸಾಧ್ಯವಿದೆ ಎಂದು ಕೃಷಿ, ಆರ್ಥಿಕ ತಜ್ಞರು ಹೇಳುತ್ತಾರೆ.
Crop loan waiver status-ಬರಗಾಲದಲ್ಲಿ ಸಾಲಮನ್ನಾ ನೀರಿಕ್ಷೆಯಲ್ಲಿದ್ದ ರೈತರಿಗೆ ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ
ಬರಗಾಲದಿಂದ ತತ್ತರಿಸಿರುವ ಅನ್ನದಾತರಿಗೆ ಆಸರೆಯಾಗಲು ಬ್ಯಾಂಕ್ಗಳು ಮುಂದೆ ಬಂದಿದ್ದು, ಸಾಲ ಮರು ಪಾವತಿ ಹೊರೆಗೆ ತಾತ್ಕಾಲಿಕ ರಿಲೀಫ್ ಸಿಗಲಿದೆ !. ಅರ್ಹ ರೈತರ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸಾಲಗಳನ್ನು ಪುನರ್ ರಚಿಸಬೇಕೆಂಬ ಸೂಚನೆ ರವಾನೆಯಾಗಿದೆ.
ಇದರಿಂದಾಗಿ ಅಲ್ಪಾವಧಿ ಸಾಲಗಳು ದೀರ್ಘಾವಧಿ ಸಾಲದ ರೂಪದಲ್ಲಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ರಿಸರ್ವ್ ಬ್ಯಾಂಕ್ ಆ್ ಇಂಡಿಯಾ ನಿರ್ದೇಶನದಂತೆ ಪರಿಹಾರ ಕ್ರಮಗಳನ್ನು ಬ್ಯಾಂಕ್ಗಳು ಕೈಗೊಳ್ಳಲಿವೆ.
ಮುಂಗಾರು ಮಳೆ ವೈಲ್ಯ, ತೀವ್ರತರ ಶುಷ್ಕ ವಾತಾವರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬರ ಪೀಡಿತ ತಾಲೂಕುಗಳು ಎಂದು ಘೋಷಿಸಿ, ಅಗತ್ಯ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
ಬೆಳೆಸಾಲ ಪುನರ್ ರಚನೆ ಎಂದರೇನು?
ಉದಾಹರಣೆಗೆ ನೀವು ಈ ವರ್ಷ 1 ಲಕ್ಷ ಬೆಳೆಸಾಲ ತೆಗೆದುಕೊಂಡಿದ್ದರೆ, ಅದನ್ನು ಈ ವರ್ಷಾಂತ್ಯಕ್ಕೆ ವಾಪಸ್ ಕಟ್ಟುವ ಅವಶ್ಯಕತೆಯಿಲ್ಲ.ನಿಮಗೆ 3 ರಿಂದ 5 ವರ್ಷದವರೆಗೆ ಸಾಲ ವಾಪಸ್ ಕಟ್ಟಲು ಅವಕಾಶ ಸಿಗುತ್ತದೆ. ಆದರೆ ಓಟಿಎಸ್ ಗೆ ಅವಕಾಶ ಇರುವುದಿಲ್ಲ. 3 ಅಥವಾ 5 ವರ್ಷದ ಒಳಗಡೆ ಸಾಲ ಕಟ್ಟಲೇಬೇಕು
ಹಾಗೂ ದೀರ್ಘಾವದಿ ಸಾಲವನ್ನು 10 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಿಲಾಗಿದೆ.
ಎಸ್ಎಲ್ಬಿಸಿ ವಿಶೇಷ ಸಭೆ ನಿರ್ಧಾರ
ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಆಯುಕ್ತರಾದ ಡಾ.ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ (ಎಸ್ಎಲ್ಬಿಸಿ) ವಿಶೇಷ ಸಭೆ ನಡೆದು, ಅರ್ಹ ರೈತರ ಸಾಲಗಳ ಮರು ರಚನೆ ತೀರ್ಮಾನ ತೆಗೆದುಕೊಂಡಿದೆ.
ಕೃಷಿ, ತೋಟಗಾರಿಕೆ ಬೆಳೆಗಳ ನಷ್ಟದ ಆಧಾರದಲ್ಲಿ ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳು ಎಂದು ೋಷಿಸಿ, ನೈಸರ್ಗಿಕ ವಿಕೋಪ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ. ಈಗಾಗಲೇ 161 ತೀವ್ರ, 34 ಸಾಧಾರಣ ಬರಪೀಡಿತ ತಾಲೂಕಗಳನ್ನು ಗುರುತಿಸಿದ್ದು, ಇನ್ನೂ 21 ತಾಲೂಕುಗಳನ್ನು ಬರ ಪೀಡಿತಪಟ್ಟಿಗೆ ಸೇರಿಸಲು ತಯಾರಿ ನಡೆಸಿದೆ.
ಸರ್ಕಾರ ಕೈಗೊಳ್ಳಲಿರುವ ಪರಿಹಾರ ಕ್ರಮಗಳನ್ನು ವಿಸ್ತರಿಸುವ ಭಾಗವಾಗಿ ಅರ್ಹ ರೈತರ ಸಾಲಗಳ ಪುನರ್ ರಚಿಸಬೇಕು ಎಂದು ತೀರ್ಮಾನಿಸಿದ್ದು, ಸೂಕ್ತ ಕ್ರಮವಹಿಸುವಂತೆ ಎಲ್ಲ ಶೆಡ್ಯೂಲ್ ವಾಣಿಜ್ಯ ಬ್ಯಾಂಕ್ಗಳು ಮತ್ತು ಆರ್ಆರ್ಬಿಗಳಿಗೆ ಸಭೆ ನಡವಳಿ ಸಹಿತ ಸೂಚನೆ ರವಾನಿಸಲಾಗಿದೆ.
ಪರಿಹಾರ ಕ್ರಮ ಕೈಗೊಳ್ಳುವಾಗ ಆರ್ಬಿಐ ನಿರ್ದೇಶನವನ್ನು ಪಾಲಿಸಬೇಕು ಎಂದು ಈ ಬ್ಯಾಂಕ್ ಶಾಖೆಗಳು ಮತ್ತು ಆರ್ಆರ್ಬಿಗಳಿಗೆ ತಿಳಿಸುವಂತೆ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದು ಎಸ್ಎಲ್ಬಿಸಿ ಉಸ್ತುವಾರಿ ಸಂಚಾಲಕ ಬಿ.ಪಾರ್ಶ್ವನಾಥ್ ತಿಳಿಸಿದ್ದಾರೆ.
Sala Manna-ಸಾಲಮನ್ನಾ ಅರ್ಹತೆ,ದಾಖಲೆ ಹಾಗೂ ಇಲ್ಲಿಯವರೆಗೂ ಯಾರಿಗೆಲ್ಲಾ ಸಾಲಮನ್ನಾ ಆಗಿದೆ ಎಂದು ಹೀಗೆ ಚೆಕ್ ಮಾಡಿ
https://mahitikanaja.karnataka.gov.in/department
ನಂತರ "ಕಂದಾಯ ಇಲಾಖೆ" ಮೇಲೆ ಕ್ಲಿಕ್ ಮಾಡಿ
ನಂತರ "ಕಂದಾಯ ಇಲಾಖೆ ಸೇವೆಗಳು" ಮೇಲೆ ಕ್ಲಿಕ್ ಮಾಡಿ
ನಂತರ ವಾಣಿಜ್ಯ ಬ್ಯಾಂಕ್ ನ ಸಾಲಮನ್ನಾ ಚೆಕ್ ಮಾಡಲು "Loan waiver report for commercial bank" ಮೇಲೆ ಕ್ಲಿಕ್ ಮಾಡಿ. ಸೊಸೈಟಿಯಲ್ಲಿನ ಸಾಲಮನ್ನಾ ಚೆಕ್ ಮಾಡಲು "Loan waiver report for primary agricultural cooperative societies" ಮೇಲೆ ಕ್ಲಿಕ್ ಮಾಡಿ
ನಂತರ ಮಾದರಿ "ರೈತ" ಎಂದು Select ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ ಮತ್ತು ಗ್ರಾಮವನ್ನು Select ಮಾಡಿ "ಸಲ್ಲಿಸು" ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆಲ್ಲಾ ಸಾಲಮನ್ನಾ ಆಗಿದೆ ಎಂದು ಚೆಕ್ ಮಾಡಬಹುದು.Search button ಅಲ್ಲಿ ನಿಮ್ಮ ಹೆಸರು ಹಾಕಿದರೆ ನಿಮ್ಮ ಹೆಸರು ಸಿಗುತ್ತದೆ.
ಬಹಳಷ್ಟು ರೈತರು ತಮ್ಮ ಸಾಲಮನ್ನಾ ಆಗಿಲ್ಲ ಎಂದು ಕೇಳುವುದುಂಟು.ಆದರೆ ಸಾಲಮನ್ನಾ ಮಾಡಲು ಕೆಲವು ದಾಖಲೆ ಮತ್ತು ಅರ್ಹತೆಗಳಿವೆ.
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ, ರೈತರ ಸಾಲಮನ್ನಾ ಆಗಬೇಕಾದರೆ ಏನೇಲ್ಲಾ ದಾಖಲೆ ಹಾಗೂ ಅರ್ಹತೆ ಹೊಂದಿರಬೇಕು ಎಂದು ತಿಳಿಯಬಹುದು
Sala manna-ಸಾಲಮನ್ನಾಗೆ ಬೇಕಾದ ದಾಖಲೆ ಮತ್ತು ಅರ್ಹತೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://mahitikanaja.karnataka.gov.in/department
ನಂತರ ಕಂದಾಯ ಇಲಾಖೆ ಮೇಲೆ ಕ್ಲಿಕ್ ಮಾಡಿ
ನಂತರ ಕಂದಾಯ ಇಲಾಖೆ ಸೇವೆಗಳು ಮೇಲೆ ಕ್ಲಿಕ್ ಮಾಡಿ
ನಂತರ CLWS ರೈತನ ಅರ್ಹತೆ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ ಮತ್ತು ಬ್ಯಾಂಕ್ select ಮಾಡಿ,ಸಲ್ಲಿಸು ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ರೈತನ ಹೆಸರು,ಸಾಲ ಮನ್ನಾಗೆ ಬೇಕಾದ ಅರ್ಹತೆ ಹಾಗೂ ಸ್ಥಿತಿಗತಿ ಚೆಕ್ ಮಾಡಬಹುದು
Salamanna-ಯಾರಿಗೆಲ್ಲಾ ವಾಣೆಜ್ಯ ಬ್ಯಾಂಕ್ ಹಾಗೂ ಸೊಸೈಟಿ ಸಾಲಮನ್ನಾ ಆಗಿದೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-198