Drought relief fund released-ರಾಜ್ಯ ಸರ್ಕಾರದಿಂದ 900 ಕೋಟಿ ಬರಪರಿಹಾರ ಬಿಡುಗಡೆ,ಆಧಾರ್ ನಂಬರ್ ಹಾಕಿ ನಿಮಗೆ ಬರಪರಿಹಾರ ಸಿಗತ್ತೆ ಅಥವಾ ಸಿಗಲ್ಲ ಹೀಗೆ ಚೆಕ್ ಮಾಡಿ

<Krushirushi> <ಬರಪರಿಹಾರ ಬಿಡುಗಡೆ> <Drought relief fund released> <ಬೆಳೆವಿಮೆ ಸ್ಟೇಟಸ್> <crop insurance status> <bele vime Status> <ಬೆಳೆವಿಮೆ> <crop insurance> <Cropinsurance> <PMFBY> <WBCIS> <belevime> <bele vime> <pradan mantri fasal bheema yojana> <Krushirushi> <ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಹಣ> <September month Annabhagya amount> <Annabhagya 3rd instalment> <ಅನ್ನಭಾಗ್ಯ> <ಅನ್ನ ಭಾಗ್ಯ> <Annabhagya> <Anna bhagya> <ಆಧಾರ್ ರೇಷನ್ ಕಾರ್ಡ್ ಲಿಂಕ್> <Aadhaarrationlink> <Rationcard> <BPLcard> <APLcard> <BPL Card> <APL Card> <ರೇಷನ್ ಕಾರ್ಡ್> <How to download ration card> <ಪಡೀತರಚೀಟಿ> <direct benefit transfer> <DBT> <ಆಧಾರ್> <DBT Karnataka> <Annabhagya status> <Annabhagya scheme> <ರೇಷನ್ ಕಾರ್ಡ್ ನಂಬರ್> <ಹಣ> <bank> <Ration Card status> <ರೇಷನ್ ಕಾರ್ಡ್ ಸ್ಥಿತಿ> <Gruhalakshmi> <ರೇಷನ್ ಕಾರ್ಡ್ ಲಿಸ್ಟ್>

Drought relief fund released-ರಾಜ್ಯ ಸರ್ಕಾರದಿಂದ 900 ಕೋಟಿ ಬರಪರಿಹಾರ ಬಿಡುಗಡೆ,ಆಧಾರ್ ನಂಬರ್ ಹಾಕಿ ನಿಮಗೆ ಬರಪರಿಹಾರ ಸಿಗತ್ತೆ ಅಥವಾ ಸಿಗಲ್ಲ ಹೀಗೆ ಚೆಕ್ ಮಾಡಿ

Drought relief fund released-ರಾಜ್ಯ ಸರ್ಕಾರದಿಂದ 900 ಕೋಟಿ ಬರಪರಿಹಾರ ಬಿಡುಗಡೆ, ನವೆಂಬರ್ 30ರೊಳಗೆ ಈ ಕೆಲಸ ಮಾಡಿದವರಿಗೆ ಸಿಗಲಿದೆ ಬರಪರಿಹಾರ


ರಾಜ್ಯದಲ್ಲಿ ಮುಂದಿನ ಮಳೆಗಾಲದವರೆಗೆ ಐದಾರು ತಿಂಳು ಬರ ಪರಿಸ್ಥಿತಿ ನಿರ್ವಹಣೆಗಾಗಿ 900 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಈಗಾಗಲೇ 750 ಕೋಟಿ ರೂ.ಗಳನ್ನು ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಂಗಾರಪೇಟೆ ತಾಲೂಕಿನ ಬಲಮಂದೆ ಗ್ರಾಮದಲ್ಲಿ ಯರಗೋಳ ಜಲಾಶಯದ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರು ಹಾಗೂ ಜಾನುವಾರಗಳಿಗೆ ಮೇವು ಕಡಿಮೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಬರ ನಿರ್ವಾಹಣೆಗಾಗಿ 900 ಕೋಟಿ ರೂ. ಮಿಸಲಿಟ್ಟಿದ್ದು, ಈಗಾಗಲೇ 750 ಕೋಟಿ ಅನ್ನು ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಇತಿಹಾಸದಲ್ಲಿಯೇ ಈ ಬಾರಿ ಅತಿ ಭೀಕರ ಬರಗಾಲಕ್ಕೆ (Karnataka Drought) ರಾಜ್ಯ ತುತ್ತಾಗಿದೆ. 236 ತಾಲೂಕುಗಳ ಪೈಕಿ 223 ತಾಲೂಕುಗಳು ಸಂಪೂರ್ಣ ಬರಪೀಡಿತವಾಗಿವೆ. ಇನ್ನು ಬಾಕಿ ಕೇವಲ 13 ತಾಲೂಕುಗಳು ಮಾತ್ರವೇ ಬರಪೀಡಿತ ಪಟ್ಟಿಯಿಂದ ಹೊರಗುಳಿದಂತೆ ಆಗಿದೆ.

ಈಗಾಗಲೇ ರಾಜ್ಯ ಸರ್ಕಾರ (Karnataka Government) ಸಹ 324 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಈಗ ರೈತರು ಬರ ಪರಿಹಾರವನ್ನು ಪಡೆಯಬೇಕೆಂದರೆ ಅದಕ್ಕೆ 15 ದಿನಗಳ ಒಳಗೆ ರಾಜ್ಯದ ಫ್ರೂಟ್ಸ್‌ (FRUITS Karnataka) ಪೋರ್ಟಲ್‌ನಲ್ಲಿ ಕೆಲವು ಮಾಹಿತಿಯನ್ನು ಭರ್ತಿ ಮಾಡಬೇಕಿದೆ.

ಫ್ರೂಟ್ ಐಡಿಯಲ್ಲಿ (FRUITS ID) ದಾಖಲಾಗಿರುವ ಜಮೀನಿನ ಮಾಹಿತಿ ಆಧಾರದ ಮೇಲೆ ಪರಿಹಾರ ಪಾವತಿ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Revenue Minister Krishna ByreGowda) ಹೇಳಿದ್ದಾರೆ. ರೈತರು ತಮ್ಮ ಜಮೀನಿನ ನಿಖರ ಮಾಹಿತಿಯನ್ನು ಮುಂದಿನ 15 ದಿನಗಳ ಒಳಗೆ ಫ್ರೂಟ್ಸ್ ದತ್ತಾಂಶದಲ್ಲಿ (Fruits Data) ಭರ್ತಿ ಮಾಡಿಸಬೇಕು. ಇದರಿಂದ ಅಕ್ರಮಗಳು ತಪ್ಪುವುದಲ್ಲದೆ, ನೈಜ ಫಲಾನುಭವಿಗಳಿಗೆ ಪರಿಹಾರದ ಹಣ ಬಿಡುಗಡೆಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಒಂದು ತಿಂಗಳೊಳಗೆ ಇದನ್ನು ಸರಿಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

ಆಧಾರ್ ನಂಬರ್ ಹಾಕಿ ನಿಮ್ಮ FID  ತಿಳಿದುಕೊಳ್ಳಿ

ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/GetDetailsByAadhaar.aspx 

ನಂತರ ನಿಮ್ಮ ಆಧಾರ್ ನಂಬರ್ ಹಾಕಿ,search ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ FID ದೊರೆಯಲಿದೆ.


ನಿಮ್ಮ ಮೊಬೈಲ್ ನಲ್ಲೇ FID ನೊಂದಣೆ ಮಾಡುವುದು ಹೇಗೆ?

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruits.karnataka.gov.in/OnlineUserLogin.aspx 

ನಂತರ ಈ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ."Citizen Registration" ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು,ಆಧಾರ್ ನಂಬರ್ ಹಾಕಿ,I agree ಮೇಲೆ ಟಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ನಂಬರ್, ಇಮೆಲ್ ಐಡಿ ಹಾಕಿ,Proceed ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ Password create ಮಾಡಿ,ಲಾಗಿನ್ ಆಗಿ ಅಗತ್ಯ ಮಾಹಿತಿ ಭರ್ತಿ ಮಾಡಿದರೆ ನಿಮ್ಮ FID ಸಿಗಲಿದೆ.

ಹೀಗೆ ಸೃಜಿಸಲಾದ FID ಯನ್ನು ಕೃಷಿ ಇಲಾಖೆ,ರೇಷ್ಮೆ ಇಲಾಖೆ,ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರೀಶಿಲಿಸಿ Approve ಕೊಡಬೇಕು.

ಈ FID ಯನ್ನು ಪಿಎಂಕಿಸಾನ್,ಬೆಳೆಸಾಲ,ಬೆಳೆವಿಮೆ ಹಾಗೂ ಸರ್ಕಾರದ ಸವಲತ್ತು ಪಡೆಯಲು ಬಳಸಬಹುದು

ಇದಕ್ಕೆ ಬೇಕು ಎಫ್‌ಐಡಿ ಸಂಖ್ಯೆ (FID Number)

ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಎಲ್ಲ ಇಲಾಖೆಗಳಲ್ಲಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆಯಲು ರೈತರು ಎಫ್.ಐ.ಡಿ (FID number) ಕಡ್ಡಾಯವಾಗಿದೆ. ಇದನ್ನು ಕೃಷಿ ಇಲಾಖೆಯಿಂದ ಮಾಡಿಸಿಕೊಳ್ಳಬೇಕು. ಬರ ಪರಿಹಾರ, ಬೆಳೆ ವಿಮೆ, ವಿವಿಧ ಯೋಜನೆಯಡಿ ಯಂತ್ರೋಪಕರಣಗಳ ಸಹಾಯಧನ ಪಡೆಯಲು ಹೀಗೆ ಅನೇಕ ಯೋಜನೆಯಡಿ ರೈತರು ಸೌಲಭ್ಯ ಪಡೆಯಲು ಈ ನಂಬರ್ ಅತಿ ಅವಶ್ಯಕವಾಗಿದೆ.

ಬರ ಪರಿಹಾರಕ್ಕಾಗಿ FID ನಂಬರ್‌ ಬೇಕೇ ಬೇಕು

ಬರ ಪರಿಹಾರದ ಹಣವನ್ನು ರೈತರು ಪಡೆದುಕೊಳ್ಳಬೇಕು ಎಂದರೆ ಇದಕ್ಕೆ ಎಫ್‌ಐಡಿ ಸಂಖ್ಯೆಯನ್ನು ಹೊಂದಬೇಕಾಗಿರುತ್ತದೆ. ಇಲ್ಲದಿದ್ದರೆ ಸರ್ಕಾರ ನಿಮ್ಮ ಖಾತೆಗೆ ಹಣ ಮಾಡುವುದಿಲ್ಲ. ಇಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆಯನ್ನು ಮಾಡಲಾಗಿದೆ.

ಎಫ್‌ಐಡಿ ಮಾಡಿಸದವರು ಈಗ ಏನು ಮಾಡಬೇಕು?

ಇದುವರೆಗೂ ಎಫ್‌ಐಡಿ ಮಾಡಿಸದೇ ಇದ್ದರೆ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಇಲ್ಲವೇ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಎಫ್‌ಐಡಿ ಮಾಡಿಸಬೇಕು.

"ಪ್ರೂಟ್ಸ್" ನಂಬರ್ ಎಂದರೆ ಏನು? ಏಕೆ ಉಪಯೋಗ?

ಇದು ರೈತರಿಗಾಗಿ ಮಾಡಿರುವ ಪೋರ್ಟಲ್‌ ಆಗಿದೆ. ಕೃಷಿ ಜಮೀನಿನ ಮಾಹಿತಿಯನ್ನು ಇದರಲ್ಲಿ ನೀಡಲಾಗುತ್ತದೆ. ಈ ಪೋರ್ಟಲ್‌ ಮೂಲಕ ನೋಂದಾಯಿಸಿಕೊಂಡಾಗ ರೈತರಿಗೆ ಎಫ್‌ಐಡಿ ನಂಬರ್ ಲಭ್ಯವಾಗುತ್ತದೆ. ಇಲ್ಲಿ ಒಮ್ಮೆ ಎಫ್‌ಐಡಿ ನಂಬರ್‌ ಅನ್ನು ಪಡೆದರೆ ಆ ರೈತರ ಸಂಪೂರ್ಣ ಜಮೀನಿನ ಮಾಹಿತಿಯು ಇಲ್ಲಿ ಸಿಗುತ್ತದೆ. ಜಮೀನಿನ ವಿವರ, ಬೆಳೆದ ಬೆಳೆಗಳ ಸಹಿತ ಸರ್ಕಾರದಿಂದ ದೊರೆಯುವ ಕೃಷಿ ಸೌಲಭ್ಯಗಳನ್ನು ಪಡೆಯಲು ನೋಂದಾಯಿಸಿಕೊಳ್ಳಬಹುದು.

ನೋಂದಣಿ ಹೇಗೆ? ಯಾವೆಲ್ಲ ದಾಖಲೆಗಳು ಬೇಕು?

ಸಮೀಪದ ಕೃಷಿ ಇಲಾಖೆ (ಹೋಬಳಿಯ ರೈತ ಸಂಪರ್ಕ ಕೇಂದ್ರ), ತೋಟಗಾರಿಕೆ ಇಲಾಖೆಗೆ ದಾಖಲೆಗಳೊಂದಿಗೆ ರೈತ ಭೇಟಿ ನೀಡಬೇಕು.

ಆರ್.ಟಿ.ಸಿ / ಪಹಣಿ / ಉತಾರ್, ಆಧಾರ್‌ ಕಾರ್ಡ್, ರಾಷ್ಟ್ರೀಕೃತ ಬ್ಯಾಂಕ್‌ನ ಪಾಸ್ ಪುಸ್ತಕದ ಪ್ರತಿ, ಪಾಸ್‌ಪೋರ್ಟ್ ಅಳತೆಯ ಫೋಟೊ, ಮೊಬೈಲ್ ನಂಬರ್ ನೀಡಿದರೆ ನಿಮ್ಮ ಹೆಸರು ಪೋರ್ಟಲ್‌ನಲ್ಲಿ ಸೇರ್ಪಡೆಗೊಂಡು ಬಳಿಕ ಎಫ್.ಐ.ಡಿ. (FID) ನಂಬರ್ ದೊರೆಯುತ್ತದೆ.

ಎಫ್.ಐ.ಡಿ ಸಂಖ್ಯೆಯಿಂದ ಏನೆಲ್ಲ ಲಾಭ?

ಈ ವೆಬ್‌ ಪೋರ್ಟಲ್‌ನಲ್ಲಿ ಹೆಸರನ್ನು ನೋಂದಾಯಿಸಿಕೊಂಡರೆ ವಿವಿಧ ಕೃಷಿಗೆ ಪೂರಕ ಇಲಾಖೆಗಳ ಸೌಲಭ್ಯ, ಬೆಳೆ ಸಾಲ, ಬೆಳೆ ವಿಮೆ, ಕೃಷಿಕನ ಮಕ್ಕಳಿಗೆ ಸಿಗುವ ವಿದ್ಯಾನಿಧಿ, ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನ ಮಾರಾಟ ಹಾಗೂ ಕೃಷಿಗೆ ಪೂರಕವಾದ ಇತರೆ ಸೌಲಭ್ಯಗಳು ದೊರೆಯುತ್ತವೆ. ಇನ್ನು ಕಳೆದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ ರೈತ ಶಕ್ತಿ ಯೋಜನೆಯಡಿ ಪ್ರತಿಯೊಬ್ಬ ಕೃಷಿಕನಿಗೂ 1 ಎಕರೆಗೆ 250 ರೂ.ಯಂತೆ ಗರಿಷ್ಠ 5 ಎಕರೆಗೆ 1250 ರೂ. ಇಂಧನ ವೆಚ್ಚ ಕೃಷಿಕನ ಖಾತೆಗೆ ನೇರ ಜಮೆಗೊಳ್ಳುತ್ತದೆ. ಹೀಗಾಗಿ ಇದೂ ಸೇರಿದಂತೆ ಸರ್ಕಾರದ ಹಲವು ಯೋಜನೆಗಳ ಲಾಭವನ್ನು ಪಡೆಯಬೇಕು ಎಂದರೆ ಕೃಷಿಕ ಕಡ್ಡಾಯವಾಗಿ ಎಫ್‌ಐಡಿ ಸಂಖ್ಯೆಯನ್ನು ಹೊಂದಿರಬೇಕು.


ಬರ ಪರಿಹಾರದ ಹಣ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಲೇಬೇಕು. ಒಂದು ವೇಳೆ ಎಫ್‌ಐಡಿ ಮಾಡಿಸದಿದ್ದರೆ ಹಣ ಬರುವುದಿಲ್ಲ. ಎಫ್‌ಐಡಿ ಮಾಡದೆ ಇರುವ ಕೂಡಲೇ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್‌ಐಡಿ ಮಾಡಿಸಬೇಕು.

ಈವರೆಗೆ ಎಫ್‌ಐಡಿ ಮಾಡಿಸದೇ ಇರುವ  ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೊಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ತಮ್ಮ ಆಧಾರ ಕಾರ್ಡ್​, ಪಹಣಿ, ಬ್ಯಾಂಕ್ ಪಾಸ್ ಬುಕ್, ತಮ್ಮ ಮೂಬೈಲ್ ಸಂಖ್ಯೆಯೊಂದಿಗೆ ಹೋಗಿ ತುರ್ತಾಗಿ ಎಫ್‌ಐಡಿ ಮಾಡಿಸಬೇಕು. ಇದಕ್ಕೆ ತಪ್ಪಿದಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ರೈತರು ವಂಚಿತರಾಗಬೇಕಾಗುತ್ತದೆ.

ಬರ ಪರಿಹಾರದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿರುವ ಅಂಕಿ ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗುವುದರಿಂದ, ರೈತರು ತಮ್ಮ ಜಮೀನಿನ ನಿಖರವಾದ ವಿಸ್ತೀರ್ಣವನ್ನು ಫ್ರುಟ್ಸ್ ತಂತ್ರಾಂಶದಲ್ಲಿ ಆಧಾರ್-ಪಹಣಿ ಜೋಡಣೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ನಷ್ಟ ವಿವರವನ್ನು ನಮೂದಿಸಿ, ಅದಕ್ಕನುಗುಣವಾಗಿ ಪರಿಹಾರ ಮೊತ್ತ ನೀಡುವ ವ್ಯವಸ್ಥೆ ಇತ್ತು. ಸರ್ಕಾರವು 2023 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವನ್ನು ಬೆಳೆ ಸಮೀಕ್ಷೆ ಮತ್ತು ಫ್ರುಟ್ಸ್ ನಲ್ಲಿ ನೊಂದಣಿಯಾಗಿರುವ ಬೆಳೆ ಮತ್ತು ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಿರುವುದರಿಂದ, ರೈತರು ತಮ್ಮ ಜಮೀನಿನ ಯಾವುದೇ ಸರ್ವೆ ನಂಬರ್ ಬಿಟ್ಟುಹೋಗದಂತೆ, ಎಲ್ಲಾ ಸರ್ವೆ ನಂಬರ್‍ಗಳನ್ನು ನೊಂದಣಿ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ.

ಇದುವರೆಗೂ ಫ್ರುಟ್ಸ್ ನಲ್ಲಿ ನೊಂದಣಿ ಆಗದೇ ಇರುವ ರೈತರು ಆಧಾರ್ ಕಾರ್ಡ್, ಪಹಣಿ, ಜಾತಿ ಪ್ರಮಾಣಪತ್ರ ಮತ್ತು ಬ್ಯಾಂಕ್ ಪಾಸ್ ಪುಸ್ತಕ ವಿವರಗಳನ್ನು ಫ್ರುಟ್ಸ್‍ನಲ್ಲಿ ದಾಖಲಿಸಿಕೊಂಡು ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಹಾಗೂ ವಿವಿಧ ಇಲಾಖೆಗಳ ಸೌಲಭ್ಯ ಪಡೆದುಕೊಳ್ಳುವಂತೆ ಕೋರಲಾಗಿದೆ.

ಫ್ರುಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಜಮೀನಿನ ವಿವರವನ್ನು ನೊಂದಾಯಿಸಿ, ರೈತರ ಗುರುತಿನ ಚೀಟಿ ಸಂಖ್ಯೆ ಪಡೆದುಕೊಳ್ಳುವುದು ಅಗತ್ಯವಾಗಿರುತ್ತದೆ. ಈ ಮಾಹಿತಿಯು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳನ್ನು ನೀಡುವುದಲ್ಲದೆ, ಇತರೆ ಇಲಾಖೆಗಳಿಗೂ ಸಹ ಉತ್ತಮ ಮಾಹಿತಿಯಾಗಿರುತ್ತದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂದರ್ಭದಲ್ಲಿ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳಾಗಲು ಹಾಗೂ ಪರಿಹಾರ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲು ರೈತರು ಫ್ರುಟ್ಸ್ ತಂತ್ರಾಂಶದಲ್ಲಿ ನೊಂದಣಿ ಮಾಡಿಸಿ, ಎಫ್‍ಐಡಿ ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿದೆ.

ಫ್ರುಟ್ಸ್ ನಲ್ಲಿ ನೊಂದಣಿ ಮಾಡಿಕೊಳ್ಳದೇ ಇರುವ ರೈತರು ಕೂಡಲೆ ಫ್ರುಟ್ಸ್‍ನಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕು. ಈಗಾಗಲೆ ಫ್ರುಟ್ಸ್‍ನಲ್ಲಿ ನೊಂದಣಿ ಮಾಡಿಸಿಕೊಂಡವರು, ಅಂದರೆ ಉದಾಹರಣೆಗೆ 7 ಎಕರೆ ಇದ್ದರೂ, ಕೇವಲ 01 ಎಕರೆ ಮಾತ್ರ ನಮೂದಿಸಿರುತ್ತಾರೆ, ಅಂತಹವರಿಗೆ ಕೇವಲ 01 ಎಕರೆಗೆ ಮಾತ್ರ ಪರಿಹಾರ ಮೊತ್ತ ಬರುತ್ತದೆ, ಹೀಗಾಗಿ ರೈತರು ತಮ್ಮ ಜಮೀನಿನ ಸರಿಯಾದ ಪಹಣಿಯ ವಿಸ್ತೀರ್ಣದ ಪ್ರಮಾಣವನ್ನು ಫ್ರುಟ್ಸ್ ನಲ್ಲಿ ದಾಖಲಿಸಿಕೊಂಡಲ್ಲಿ ಮಾತ್ರ, ಅಂತಹವರಿಗೆ ಅವರ ಜಮೀನಿನ ವಿಸ್ತೀರ್ಣತೆಗೆ ಅನುಗುಣವಾಗಿ ಗರಿಷ್ಟ ಬೆಳೆ ಪರಿಹಾರ ಹಣ ಪಾವತಿಯಾಗುತ್ತದೆ, ಇಲ್ಲದಿದ್ದಲ್ಲಿ ಅವರು ನಮೂದಿಸಿರುವ ಜಮೀನಿನ ವಿಸ್ತೀರ್ಣತೆಗೆ ಮಾತ್ರ ಪರಿಹಾರ ಹಣ ಪಾವತಿಯಾಗುತ್ತದೆ. ಹೀಗಾಗಿ ರೈತರು ತಮ್ಮ ಜಮೀನಿನ ಸರಿಯಾದ ವಿಸ್ತೀರ್ಣದ ಪ್ರಮಾಣವನ್ನು ಫ್ರುಟ್ಸ್ ನಲ್ಲಿ ನೊಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಫ್ರುಟ್ಸ್ ನೊಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ರೈತರು ತಮ್ಮ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ಕೂಡಲೆ ಜೋಡಣೆ ಮಾಡಲು ಆಯಾ ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳು, ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ, ರೇಷ್ಮೆ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬಹುದು.

Annabhagya-ಈ ಪಟ್ಟಿಯಲ್ಲಿರುವವರಿಗೆ ಸಿಗಲಿದೆ ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಹಣ,ಇಲ್ಲಿದೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್

1 ಸದಸ್ಯರಿರುವ ಕುಟುಂಬಕ್ಕೆ 170 ರೂಪಾಯಿ
2 ಸದಸ್ಯರಿರುವ ಕುಟುಂಬಕ್ಕೆ 340 ರೂಪಾಯಿ
3 ಸದಸ್ಯರಿರುವ ಕುಟುಂಬಕ್ಕೆ 510 ರೂಪಾಯಿ
4 ಸದಸ್ಯರಿರುವ ಕುಟುಂಬಕ್ಕೆ 680 ರೂಪಾಯಿ

ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಫಲಾನುಭವಿಗಳ ಪಟ್ಚಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿರುವ ರೇಷನ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ನಂಬರ್, ಹೆಸರು,ವಿಳಾಸ,ಕಾರ್ಡ್ ನ ವಿಧ ಹಾಗೂ ಕುಟುಂಬದ ಸದಸ್ಯರ ಸಂಖ್ಯೆ ತೋರಿಸುತ್ತದೆ,ಅದರಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಇದನ್ನೂ ಓದಿ


Annabhagya-ನನ್ನ ಖಾತೆಗೆ 680 ರೂಪಾಯಿ ಅನ್ನಭಾಗ್ಯ ಯೋಜನೆಯ ಹಣ ಜಮಾ,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ ಇರುವ ಇ-ಸ್ಥಿತಿ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ ಇರುವ ಡಿಬಿಟಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗೆ ಕೊಟ್ಟಿರುವ ಜಿಲ್ಲೆಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯನ್ನು select ಮಾಡಿ

ನಂತರ ನೇರ ನಗದು ವರ್ಗಾವಣೆ ಸ್ಥಿತಿ ಮೇಲೆ ಕ್ಲಿಕ್ ಮಾಡಿ

ನಂತರ ವರ್ಷ,ತಿಂಗಳು,ರೇಷನ್ ಕಾರ್ಡ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗನಂತೆ ನಿಮ್ಮ ಹೆಸರು,member ID,ಕುಟುಂಬ ಸದಸ್ಯರ ಸಂಖ್ಯೆ,ನಿಮಗೆ ಸಿಗುವ ಅಕ್ಕಿಯ ಅಳತೆ ಹಾಗೂ ನಿಮ್ಮ ಖಾತೆಗೆ ಜಮಾ ಆದ ಹಣದ ಮೊತ್ತವನ್ನು ತೋರಿಸುತ್ತದೆ

ಇದನ್ನೂ ಓದಿ

Free electricity-ಇಂದಿನಿಂದ ಗೃಹಜ್ಯೊತಿ ಯೋಜನೆಯಡಿ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಕೆ ಆರಂಭ, ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-305 

ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ನಿಮ್ಮ ಕರೆಂಟ್ ಬಿಲ್ ನಂಬರ್,ಆಧಾರ್ ನಂಬರ್ ಹಾಕಿ,ಮಾಲಿಕ ಅಥವಾ ಬಾಡಿಗೆದಾರ ಎಂದು select ಮಾಡಿ 200 ಯುನಿಟ್ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಸಿ

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೊ ನೋಡಿ

https://youtu.be/2YougfZyKUQ 

Aadhaar Photo change-ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ವ? ಬದಲಾಯಿಸಲು ಹೀಗೆ ಮಾಡಿ - https://krushirushi.in/Krushirushi-1000-197 

Male nakshatra-2023 ನೇ ಸಾಲಿನ ಮಳೆ ನಕ್ಷತ್ರಗಳು ಹಾಗೂ ಮಳೆ ದಿನಾಂಕ - https://krushirushi.in/Krushirushi-1000-261 

Crop insurance-ನನ್ನ ಖಾತೆಗೆ 11,354 ರೂಪಾಯಿ ಬೆಳೆವಿಮೆ ಜಮಾ-ನಿಮ್ಮ ಬೆಳೆವಿಮೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-257 

District incharge ministers-ಇವರೇ ನೋಡಿ ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು - https://krushirushi.in/Krushirushi-1000-268 

Karnataka ministers-ಕೊನೆಗೂ ಖಾತೆ ಹಂಚಿಕೆ ಅಂತಿಮ ಪಟ್ಟಿ ಬಿಡುಗಡೆ - https://krushirushi.in/Krushirushi-1000-254 

DBT Karnataka-ಸರ್ಕಾರದಿಂದ ನಿಮಗೆ ಇಲ್ಲಿಯವರೆಗೂ ಯಾವ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-259 

Yuvanidhi-ಯುವನಿಧಿ ಯೋಜನೆಯಡಿ 3000 ರೂಪಾಯಿ-ಷರತ್ತು ಮತ್ತು ನಿಬಂಧನೆಗಳ ಅಧಿಕೃತ ಆದೇಶ - https://krushirushi.in/Krushirushi-1000-267 

Aadhaar-ಆಧಾರ್ ನಂಬರ್ ಹಾಕಿ ರಾಜ್ಯ ಸರ್ಕಾರದಿಂದ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡಿ - https://krushirushi.in/Krushirushi-1000-266 

Aadhaar bank seeding status-ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-260 

5 Guarantees approved-5 ಗ್ಯಾರಂಟಿಗಳಿಗೆ ಸಚಿವ ಸಂಪುಟ ಸಭೆಯಿಂದ ಒಪ್ಪಿಗೆ - https://krushirushi.in/Krushirushi-1000-265 

Crop loss-20160 ಹೇಕ್ಟೆರ್ ಬೆಳೆಹಾನಿ ಪರಿಹಾರ ಬಿಡುಗಡೆ-ಕಂದಾಯ ಸಚಿವ ಕೃಷ್ಞಬೈರೆಗೌಡ - https://krushirushi.in/Krushirushi-1000-264 

Krushi bhagya-ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ- ಕೃಷಿ ಸಚಿವ ಚೆಲುವರಾಯಸ್ವಾಮಿ - https://krushirushi.in/Krushirushi-1000-262 

Free bus pass-ನಾಳೆಯಿಂದ ರಾಜ್ಯದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ - https://krushirushi.in/Krushirushi-1000-256 

Pmkisan name correction as per Aadhaar-ಆಧಾರ್ ನಲ್ಲಿರುವಂತೆ ನಿಮ್ಮ ಹೆಸರು ಬದಲಾವಣೆ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-252 

Crop insurance-ಬೆಳೆವಿಮೆ ಜಮಾ ಪ್ರಾರಂಭವಾಗಿದ್ದು,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-253