Crop loan wavier-ಹಸಿರು ಪಟ್ಟಿಯಲ್ಲಿರುವ 31 ಸಾವಿರ ರೈತರ 167 ಕೋಟಿ ಸಾಲ ಮನ್ನಾಗೆ ಪ್ರಸ್ತಾವನೆ-ಕೆ ರಾಜಣ್ಣ, ಹಾಗಾದರೆ ಹಸಿರು ಪಟ್ಟಿಯಲ್ಲಿರುವ ರೈತರ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್
<Krushirushi> <ಬೆಳೆಸಾಲಮನ್ನಾ> <ಬೆಳೆಸಾಲ> <croploan> <croploanwavier> <belesala> <belesalamanna> <loan waiver>
Crop loan wavier-ಹಸಿರು ಪಟ್ಟಿಯಲ್ಲಿರುವ 31 ಸಾವಿರ ರೈತರ 167 ಕೋಟಿ ಸಾಲ ಮನ್ನಾಗೆ ಪ್ರಸ್ತಾವನೆ-ಕೆ ರಾಜಣ್ಣ
ಕಳೆದ ಐದು ವರ್ಷಗಳ ಹಿಂದೆ ಜಾರಿಗೊಳಿಸಲಾದ ಒಂದು ಲಕ್ಷ ರೂ.ಗಳ ಸಾಲಮನ್ನಾ ಯೋಜನೆಯ ಸೌಲಭ್ಯವನ್ನು ರಾಜ್ಯದ 17.35 ಲಕ್ಷ ರೈತರು ಪಡೆದುಕೊಂಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಲಿಖಿತ ಮಾಹಿತಿ ನೀಡಿರುವ ಅವರು, 2018 ರಲ್ಲಿ ಒಂದು ಲಕ್ಷ ರೂ.ಗಳವರೆಗೆ ಬೆಳೆಸಾಲವನ್ನು ಮನ್ನಾ ಮಾಡಲು ನಿರ್ಧರಿಸಲಾಯಿತು.
2018 ರಲ್ಲಿ ಜಾರಿಯಾದ ಯೋಜನೆಯ ಪೈಕಿ ಸಹಕಾರ ಸಂಘಗಳು, ಭೂಮಾಪನ ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಇಲಾಖೆ ಅಭಿವೃದ್ಧಿಪಡಿಸಿದ ಸಾಲತಂತ್ರಾಂಶದಲ್ಲಿ 19.07 ಲಕ್ಷ ರೈತರ ಮಾಹಿತಿಯನ್ನು ಅಳವಡಿಸಲಾಯಿತು. ಅದರಲ್ಲಿ ಅರ್ಹತೆ ಹೊಂದದಿರುವ 1.57 ಲಕ್ಷ ರೈತರನ್ನು ತಂತ್ರಾಂಶದಿಂದ ತಿರಸ್ಕರಿಸಲಾಯಿತು. ಬಾಕಿ ಉಳಿದ 17.50 ಲಕ್ಷ ರೈತರ ಪೈಕಿ ಎಲ್ಲಾ ಷರತ್ತುಗಳನ್ನೂ ಪೂರೈಸಿರುವ 17.32 ಲಕ್ಷ ರೈತರಿಗೆ 8,154.98 ಕೋಟಿ ರೂ. ಸಾಲಮನ್ನಾ ಮಾಡಲು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಿಂದ ಹಸಿರು ಪಟ್ಟಿ ನೀಡಲಾಯಿತು.
ಸರ್ಕಾರ 17.06 ಲಕ್ಷ ರೈತರಿಗೆ 7,987.47 ಕೋಟಿ ರೂ.ಗಳನ್ನು ಉಳಿತಾಯ ಖಾತೆಗೆ ಬಿಡುಗಡೆ ಮಾಡಿ ಸಾಲಮನ್ನಾ ಸೌಲಭ್ಯವನ್ನು ದೊರಕಿಸಿದೆ ಎಂದು ವಿವರಿಸಿದ್ದಾರೆ. ಸಾಲಮನ್ನಾ ತಂತ್ರಾಂಶದಲ್ಲಿ ಅರ್ಹತೆ ಹೊಂದಿ 2020-21 ನೇ ಸಾಲಿನಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ಹಸಿರು ಪಟ್ಟಿ ನೀಡಿದ 31 ಸಾವಿರ ರೈತರಿಗೆ 167.51 ಕೋಟಿ ರೂ.ಗಳ ಅನುದಾನ ಬಿಡುಗಡೆ ಭೂದಾಖಲೆಗಳ ಇಲಾಖೆಯಿಂದ ಹಸಿರು ಪಟ್ಟಿ ನೀಡಲಾಯಿತು.
ಸರ್ಕಾರ 17.06 ಲಕ್ಷ ರೈತರಿಗೆ 7,987.47 ಕೋಟಿ ರೂ.ಗಳನ್ನು ಉಳಿತಾಯ ಖಾತೆಗೆ ಬಿಡುಗಡೆ ಮಾಡಿ ಸಾಲಮನ್ನಾ ಸೌಲಭ್ಯವನ್ನು ದೊರಕಿಸಿದೆ ಎಂದು ವಿವರಿಸಿದ್ದಾರೆ. ಸಾಲಮನ್ನಾ ತಂತ್ರಾಂಶದಲ್ಲಿ ಅರ್ಹತೆ ಹೊಂದಿ 2020-21 ನೇ ಸಾಲಿನಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ಹಸಿರು ಪಟ್ಟಿ ನೀಡಿದ 31 ಸಾವಿರ ರೈತರಿಗೆ 167.51 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅಲ್ಲಿ ಅಂಗೀಕಾರಗೊಂಡ ಬಳಿಕ ಸಾಲಮನ್ನಾದ ಅನುದಾನವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಕೆಲವು ಡಿಸಿಸಿ ಬ್ಯಾಂಕ್ಗಳ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಗಳಲ್ಲಿ ಸಾಲಮನ್ನಾ ಆಗಿರುವ ರೈತರಿಗೆ ಪುನಃ ಸಾಲ ನೀಡದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.
News source-ಈ ಸಂಜೆ
2018 ಡಿಸೆಂಬರ್ 31ರವರೆಗಿನ 2 ಲಕ್ಷದವರೆಗಿನ ಎಲ್ಲಾ ರೈತರ ಸಾಲಮನ್ನಾ ಆಗಿದೆ. ಆದರೆ ಕೆಲವು ರೈತರ ಸಾಲಮನ್ನಾ ಆಗಿಲ್ಲ,ಅದಕ್ಕೆ ಕಾರಣ ಪಹಣೆ,ಆಧಾರ್,ರೇಷನ್ ಕಾರ್ಡ್,ಬ್ಯಾಂಕ್ ಪಾಸ್ ಬುಕ್ ನಲ್ಲಿ ಹೆಸರು ಬೇರೆ ಬೇರೆ ಇರುವುದು.
ಹಾಗಾದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ,ಯಾರಿಗೆಲ್ಲಾ ಎಷ್ಟು ಸಾಲ ಮನ್ನಾ ಆಗಿದೆ? ಸಾಲಮನ್ನಾ ಅರ್ಹತೆ ಹಾಗೂ ದಾಖಲೆ ಚೆಕ್ ಮಾಡಿ
ಹಾಗಾದರೆ ಹಸಿರು ಪಟ್ಟಿಯಲ್ಲಿರುವ ರೈತರ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://mahitikanaja.karnataka.gov.in/department
ನಂತರ "ಕಂದಾಯ ಇಲಾಖೆ" ಮೇಲೆ ಕ್ಲಿಕ್ ಮಾಡಿ
ನಂತರ "ಕಂದಾಯ ಇಲಾಖೆ ಸೇವೆಗಳು" ಮೇಲೆ ಕ್ಲಿಕ್ ಮಾಡಿ
ನಂತರ ವಾಣಿಜ್ಯ ಬ್ಯಾಂಕ್ ನ ಸಾಲಮನ್ನಾ ಚೆಕ್ ಮಾಡಲು "Loan waiver report for commercial bank" ಮೇಲೆ ಕ್ಲಿಕ್ ಮಾಡಿ. ಸೊಸೈಟಿಯಲ್ಲಿನ ಸಾಲಮನ್ನಾ ಚೆಕ್ ಮಾಡಲು "Loan waiver report for primary agricultural cooperative societies" ಮೇಲೆ ಕ್ಲಿಕ್ ಮಾಡಿ
ನಂತರ ಮಾದರಿ "ರೈತ" ಎಂದು Select ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ ಮತ್ತು ಗ್ರಾಮವನ್ನು Select ಮಾಡಿ "ಸಲ್ಲಿಸು" ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆಲ್ಲಾ ಸಾಲಮನ್ನಾ ಆಗಿದೆ ಎಂದು ಚೆಕ್ ಮಾಡಬಹುದು.Search button ಅಲ್ಲಿ ನಿಮ್ಮ ಹೆಸರು ಹಾಕಿದರೆ ನಿಮ್ಮ ಹೆಸರು ಸಿಗುತ್ತದೆ.
ಬಹಳಷ್ಟು ರೈತರು ತಮ್ಮ ಸಾಲಮನ್ನಾ ಆಗಿಲ್ಲ ಎಂದು ಕೇಳುವುದುಂಟು.ಆದರೆ ಸಾಲಮನ್ನಾ ಮಾಡಲು ಕೆಲವು ದಾಖಲೆ ಮತ್ತು ಅರ್ಹತೆಗಳಿವೆ.
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ, ರೈತರ ಸಾಲಮನ್ನಾ ಆಗಬೇಕಾದರೆ ಏನೇಲ್ಲಾ ದಾಖಲೆ ಹಾಗೂ ಅರ್ಹತೆ ಹೊಂದಿರಬೇಕು ಎಂದು ತಿಳಿಯಬಹುದು
Sala manna-ಸಾಲಮನ್ನಾಗೆ ಬೇಕಾದ ದಾಖಲೆ ಮತ್ತು ಅರ್ಹತೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://mahitikanaja.karnataka.gov.in/department
ನಂತರ ಕಂದಾಯ ಇಲಾಖೆ ಮೇಲೆ ಕ್ಲಿಕ್ ಮಾಡಿ
ನಂತರ ಕಂದಾಯ ಇಲಾಖೆ ಸೇವೆಗಳು ಮೇಲೆ ಕ್ಲಿಕ್ ಮಾಡಿ
ನಂತರ CLWS ರೈತನ ಅರ್ಹತೆ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ ಮತ್ತು ಬ್ಯಾಂಕ್ select ಮಾಡಿ,ಸಲ್ಲಿಸು ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ರೈತನ ಹೆಸರು,ಸಾಲ ಮನ್ನಾಗೆ ಬೇಕಾದ ಅರ್ಹತೆ ಹಾಗೂ ಸ್ಥಿತಿಗತಿ ಚೆಕ್ ಮಾಡಬಹುದು
Salamanna-ಯಾರಿಗೆಲ್ಲಾ ವಾಣೆಜ್ಯ ಬ್ಯಾಂಕ್ ಹಾಗೂ ಸೊಸೈಟಿ ಸಾಲಮನ್ನಾ ಆಗಿದೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-198