Tamarind seeds-ಇನ್ನು ಮುಂದೆ ಹುಣಸೆ ಬೀಜ ಎಸೆಯಬೇಡಿ, ಇದು ನಿಮ್ಮ ದೇಹದ 90% ಪ್ಲಾಸ್ಟಿಕ್ ಕರಗಿಸುತ್ತೆ

Tamarind seeds-ಇನ್ನು ಮುಂದೆ ಹುಣಸೆ ಬೀಜ ಎಸೆಯಬೇಡಿ, ಇದು ನಿಮ್ಮ ದೇಹದ 90% ಪ್ಲಾಸ್ಟಿಕ್ ಕರಗಿಸುತ್ತೆ

Tamarind seeds-ಇನ್ನು ಮುಂದೆ ಹುಣಸೆ ಬೀಜ ಎಸೆಯಬೇಡಿ, ಇದು ನಿಮ್ಮ ದೇಹದ 90% ಪ್ಲಾಸ್ಟಿಕ್ ಕರಗಿಸುತ್ತೆ

ಪರಿಸರವನ್ನು ಹಾಳು ಮಾಡುತ್ತಿರುವ ಪ್ರಮುಖ ಅಂಶಗಳಲ್ಲಿ ಪ್ಲಾಸ್ಟಿಕ್‌ ಕೂಡ ಒಂದು. ನೀರು, ಮಣ್ಣಿನಲ್ಲಿ ವರ್ಷಾನುಗಟ್ಟಲೆ ಕರಗದೆ ಉಳಿದು ಪರಿಸರಕ್ಕೆ ಹಾನಿ ಮಾಡುತ್ತವೆ. ಈಗ ನೀರಿನಲ್ಲಿರುವ ಮೈಕ್ರೋಪ್ಲಾಸ್ಟಿಕ್‌ಗಳನ್ನು ಹೊರತೆಗೆಯುವ ವಿಧಾನವನ್ನು ಭಾರತದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದು, 2026ನೇ ಸಾಲಿನ ‘ಅರ್ಥ್‌ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ರಾಜಸ್ಥಾನದ ಜೈಪುರದ ವಿವಾನ್ ಚಾವ್ಚರಿಯಾ, ಅರಿಯಾನಾ ಅಗರ್ವಾಲ್ ಮತ್ತು ಅವ್ಯಾನಾ ಮೆಹ್ತಾ ಎನ್ನುವ ವಿದ್ಯಾರ್ಥಿಗಳು ಹುಣಸೆ ಬೀಜ ಬಳಸಿ ಪರಿಸರಸ್ನೇಹಿ  ಜೈವಿಕ ವಿಘಟನೀಯ ಪುಡಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಅನ್ವೇಷಣೆಗೆ ವಿದ್ಯಾರ್ಥಿಗಳ ತಂಡ ‘ಪ್ಲಾಸ್‌–ಸ್ಟಿಕ್‌’ ಎಂದು ಹೆಸರಿಟ್ಟಿದೆ. ವಿದ್ಯಾರ್ಥಿಗಳ ಈ ಅನ್ವೇಷಣೆಗೆ 2026ನೇ ಸಾಲಿನ ‘ಅರ್ಥ್‌ ಪ್ರಶಸ್ತಿ’ ಲಭಿಸಿದೆ. 

ಹುಣಸೆ ಹಣ್ಣು ಅಡುಗೆಗೆ ಬೇಕು. ಆದರೆ ಬೀಜವನ್ನು ಬಿಸಾಡುವವರೇ ಹೆಚ್ಚು. ಇವುಗಳನ್ನೇ ಸಂಗ್ರಹಿಸಿ ಪುಡಿ ಮಾಡಿ ನೀರು ಸ್ವಚ್ಛಗೊಳಿಸಲು ಇವರು ಬಳಸಿ ಯಶಸ್ವಿಯಾಗಿದ್ದಾರೆ.

‘ಕುಡಿಯುವ ನೀರಿನಲ್ಲಿ ಅಡಗಿರುವ ಸಣ್ಣ ಪ್ಲಾಸ್ಟಿಕ್‌ ಕಣಗಳು ಬರಿಗಣ್ಣಿಗೆ ಕಾಣದು. ಈ ಹುಣಸೆ ಬೀಜದ ಪೌಡರ್‌ಅನ್ನು ನೀರಿಗೆ ಹಾಕಿದರೆ, ಪ್ಲಾಸ್ಟಿಕ್‌ ಕಣಗಳು ಒಂದೆಡೆ ಸೇರಿ ಸಣ್ಣ ಉಂಡೆಯಾಗುತ್ತದೆ. ನಂತರ ಅವುಗಳನ್ನು ಕೈಯಲ್ಲಿ ಹಿಡಿಯುವ ಮ್ಯಾಗ್ನೆಟ್ ಬಳಸಿ ತೆಗೆದುಹಾಕಬಹುದು. ನೀರಿನಿಂದ ಹೊರತೆಗೆದ ಪ್ಲಾಸ್ಟಿಕ್‌ಗಳನ್ನು ಟೈಲ್ಸ್‌, ಅಥವಾ ಇನ್ನಿತರ ಬಳಕೆಗೆ ಸಿಗುವ ವಸ್ತುಗಳನ್ನಾಗಿ ಮಾಡಲಾಗುತ್ತದೆ. ಹೀಗಾಗಿ ಅವು ಮತ್ತೆ ನೀರಿಗೆ ಸೇರುವುದಿಲ್ಲ’ ಎನ್ನುವುದು ವಿದ್ಯಾರ್ಥಿಗಳ ಮಾತು ಎಂದು ಅಧಿಕೃತ ವೆಬ್‌ಸೈಟ್‌ ತಿಳಿಸಿದೆ.

ಅವ್ಯನಾ, ಅರಿಯಾನಾ ಮತ್ತು ವಿವಾನ್ ಈ ಆವಿಷ್ಕಾರ ಮಾಡಲು ಪ್ರೇರಣೆಯಾಗಿದ್ದು ಒಂದು ಗ್ರಾಮೀಣ ಭಾಗದ ಭೇಟಿ. ಅಲ್ಲಿ ಒಂದು ಮಗು ಯಾವುದೇ ಶುದ್ಧೀಕರಣ ವ್ಯವಸ್ಥೆ ಇಲ್ಲದ, ಹಳೆಯ ಪ್ಲಾಸ್ಟಿಕ್ ಡಬ್ಬದಲ್ಲಿದ್ದ ನೀರನ್ನು ಕುಡಿಯುತ್ತಿದ್ದುದನ್ನು ಇವರು ಗಮನಿಸಿದ್ದರು. ಆ ಪ್ಲಾಸ್ಟಿಕ್ ಡಬ್ಬಿಗಳಿಂದ ನೀರಿಗೆ ಸೇರಿರಬಹುದಾದ ಮೈಕ್ರೋಪ್ಲಾಸ್ಟಿಕ್ ಆ ಮಗುವಿನ ಹೊಟ್ಟೆಯನ್ನು ಸೇರುತ್ತವೆ ಎನ್ನುವುದನ್ನು ಅರಿತು, ಗ್ರಾಮೀಣ ಜನರಿಗಾಗಿ ಅತ್ಯಂತ ಸುಲಭ ಮತ್ತು ಅಗ್ಗದ ನೀರಿನ ಫಿಲ್ಟರ್ ತಯಾರಿಸಲು ಇವರು ನಿರ್ಧರಿಸಿದ್ದರು. 

‘ಜಾಗತಿಕ ಅರ್ಥ್ ಪ್ರಶಸ್ತಿ ವಿಜೇತರು ಎಂದು ಕರೆಯಿಸಿಕೊಳ್ಳಲು ನಮಗೆಲ್ಲರಿಗೂ ಸಂತಸವಾಗಿದೆ. ವಿಶೇಷವಾಗಿ ಈ ಮನ್ನಣೆಯನ್ನು ಪಡೆದ ಭಾರತದಿಂದ ಮೊದಲ ತಂಡವಾಗಿದ್ದೇವೆ, ಇದು ನಂಬಲಾಗದಷ್ಟು ವಿಶೇಷವೆನಿಸಿದೆ’ ಎಂದು ಮೂವರು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದಾರೆ.

ಅಧಿಕೃತ ವೆಬ್‌ಸೈಟ್ ಪ್ರಕಾರ, ಜಾಗತಿಕ ವಿಜೇತರನ್ನು ಸಾರ್ವಜನಿಕ ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಏಳು ಪ್ರಾದೇಶಿಕ ವಿಜೇತರಲ್ಲಿ ತಮ್ಮ ನೆಚ್ಚಿನ ತಂಡವನ್ನು ಆಯ್ಕೆ ಮಾಡಲು ಮತ್ತು ‘ದಿ ಅರ್ಥ್ ಪ್ರೈಜ್ 2026’ ಗ್ಲೋಬಲ್ ವಿನ್ನರ್ ಅನ್ನು ನಿರ್ಧರಿಸಲು ಪ್ರಪಂಚದಾದ್ಯಂತ ಸುಮಾರು 23,000 ಜನರು ಮತಚಲಾಯಿಸಿದ್ದಾರೆ. 

ಹವಾಮಾನ ಮತ್ತು ಪರಿಸರದ ಸಮಸ್ಯೆಗಳಿಗೆ ಪರಿಹಾರವನ್ನು ಅನ್ವೇಷಿಸುವ ಯುವಜನರಿಗೆ ‘ಅರ್ಥ್ ಪ್ರಶಸ್ತಿ’ ನೀಡಲಾಗುತ್ತದೆ. ಇದು 13 ರಿಂದ 19 ವರ್ಷದೊಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಲಾಗುವ ವಿಶ್ವದ ಅತಿ ದೊಡ್ಡ ಪರಿಸರ ಸುಸ್ಥಿರತೆಯ ಸ್ಪರ್ಧೆಯಾಗಿದೆ. ಇದನ್ನು ಜಿನೀವಾದ 'ದಿ ಅರ್ಥ್ ಫೌಂಡೇಶನ್' ಆಯೋಜಿಸುತ್ತದೆ. ಹುಣಸೆ ಬೀಜದಿಂದ ಪ್ಲಾಸ್ಟಿಕ್‌ ಹೊರತೆಗೆಯುವ ಆವಿಷ್ಕಾರವು ವಿಜ್ಞಾನಕ್ಕೆ ಮತ್ತು ಮೈಕ್ರೋಪ್ಲಾಸ್ಟಿಕ್ ತೆಗೆಯುವ ತಂತ್ರಜ್ಞಾನಕ್ಕೆ ಪೂರಕವಾಗಿದೆ.