Koli sakanike-ಕೋಳಿ ಸಾಕಾಣಿಕೆಗೆ 4.5 ಲಕ್ಷ ದಿಂದ 7.5 ಲಕ್ಷ ರೈತರ ಖಾತೆಗೆ ಜಮಾ

<Krushirushi> <ಪಶುಸಂಗೋಪನಾ ಇಲಾಖೆ> <Vetarnary department> <Krushirushi> <National livestock mission 2024> <NLM scheme 2024> <NLM> <National livestock mission> <ರಾಷ್ಟ್ರೀಯ ಜಾನುವಾರು ಮಿಷನ್> <NLM scheme in Kannada> <sheep farming in kannada> <Goat farming> <dairy farming in Karnataka> <dairy> <Silage> <ರಸಮೇವು> <ರೈತ> <ಸಹಾಯಧನ> <koli> <koli sakanike> <kuri> <Kuri sakanike>

Koli sakanike-ಕೋಳಿ ಸಾಕಾಣಿಕೆಗೆ 4.5 ಲಕ್ಷ ದಿಂದ 7.5 ಲಕ್ಷ  ರೈತರ ಖಾತೆಗೆ ಜಮಾ

Kukkata Sanjeevini yojane-500 ಕೋಳಿ ಸಾಕಾಣಿಕೆಗೆ 4.5 ಲಕ್ಷ ಸಹಾಯಧನ ಮತ್ತು 1000 ಕೋಳಿ ಸಾಕಾಣಿಕೆಗೆ 7.5ಲಕ್ಷ ಸಹಾಯಧನ


ಕೋಳಿ ಸಾಕಣೆ ಗ್ರಾಮೀಣ ಭಾಗದ ಜೀವನೋಪಾಯದ ಒಂದು ಭಾಗ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಾಟಿ ಕೋಳಿಗಳಿ ಹಾಗೂ ಅವುಗಳ ಮೊಟ್ಟೆಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಗ್ರಾಮೀಣ ಭಾಗದ ಮಹಿಳೆಯರಲ್ಲಿ ಕಕ್ಕುಟ ಉದ್ಯಮವನ್ನು ಪ್ರೋತ್ಸಾಹಿಸಲು ಸರ್ಕಾರ ಕುಕ್ಕುಟ ಸಂಜೀವಿನಿ ಯೋಜನೆ' ಯನ್ನು ಜಾರಿಗೊಳಿಸಿದೆ. ಈ ಯೋಜನೆಯು ಮಹಿಳಾ ಸ್ವಸಹಾಯ ಸಂಘಗಳು ಮತ್ತು ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ, ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮತ್ತು ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ಬಹುಮುಖಿ ಉದ್ದೇಶಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಯೋಜನೆಯಡಿ ಏನೆಲ್ಲಾ ಸೌಲಭ್ಯಗಳು ಲಭ್ಯ? ಅವುಗಳನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿಯೋಣ.

ಏನಿದು ಕುಕ್ಕುಟ ಸಂಜೀವಿನಿ ಯೋಜನೆ?

ಕುಕ್ಕುಟ ಸಂಜೀವಿನಿ ಯೋಜನೆಯು 2024-25ರ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ಒಂದು ಪ್ರಮುಖ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಸಬಲೀಕರಣ ಮತ್ತು ಉದ್ಯೋಗಾವಕಾಶ ಸೃಷ್ಟಿಗೆ ಮೀಸಲಾಗಿದೆ. ಈ ಯೋಜನೆಯಡಿ, ಪಶುಸಂಗೋಪನಾ ಇಲಾಖೆಯಿಂದ ಆರು ವಾರಗಳ ನಾಟಿ ಕೋಳಿಮರಿಗಳನ್ನು ವಿತರಿಸಲಾಗುತ್ತದೆ ಮತ್ತು ಎಂಜಿನರೇಗಾ ಯೋಜನೆ ಅಡಿಯಲ್ಲಿ ಕೋಳಿ ಶೆಡ್‌ಗಳ ನಿರ್ಮಾಣಕ್ಕೆ (500 ಕೋಳಿಗಳಿಗೆ ಸುಮಾರು 4.5 ಲಕ್ಷ ರೂ.ಮತ್ತು 1000 ಕೋಳಿಗಳಿಗೆ ಸುಮಾರು 7.5 ಲಕ್ಷ ರೂ.) ಆರ್ಥಿಕ ನೆರವು ನೀಡಲಾಗುತ್ತದೆ. ಜೊತೆಗೆ ಪ್ರತಿ ಸಂಘಕ್ಕೆ 25,000 ರೂ. ಸಹಾಯಧನವೂ ದೊರೆಯುತ್ತದೆ. ಫಲಾನುಭವಿಗಳಿಗೆ ವೈಜ್ಞಾನಿಕ ಕೋಳಿ ಸಾಕಾಣಿಕೆ ಕುರಿತು ತರಬೇತಿ ಹಾಗೂ ತಾಂತ್ರಿಕ ಸಲಹೆಗಳನ್ನು ಒದಗಿಸಲಾಗುತ್ತದೆ. ಇಲ್ಲಿ ಉತ್ಪಾದನೆಯಾಗುವ ಮೊಟ್ಟೆಗಳನ್ನು ಸರ್ಕಾರಿ ಶಾಲೆಗಳ ಮಧ್ಯಾಹ್ನದ ಊಟ ಮತ್ತು ಸ್ಥಳೀಯ ಅಂಗನವಾಡಿ ಕೇಂದ್ರಗಳಿಗೆ ನಿಗದಿತ ದರದಲ್ಲಿ ಮಾರಾಟ ಮಾಡುವ ಮೂಲಕ ಸಂಘಗಳಿಗೆ ಸುಸ್ಥಿರ ಆದಾಯದ ಮಾರ್ಗವನ್ನು ಕಲ್ಪಿಸಲಾಗುತ್ತದೆ.

ಯೋಜನೆಯ ಮುಖ್ಯ ಉದ್ದೇಶಗಳು

  • ಆರ್ಥಿಕ ಸಬಲೀಕರಣ: ಗ್ರಾಮೀಣ ಮಹಿಳೆಯರಿಗೆ ಕೋಳಿ ಸಾಕಾಣಿಕೆ ಮೂಲಕ ಉದ್ಯೋಗಾವಕಾಶಗಳನ್ನು ಕಲ್ಪಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು.
  • ಲಿಂಗ ಸಮಾನತೆ: ಮಹಿಳಾ ಸ್ವಸಹಾಯ ಸಂಘಗಳಿಗೆ ನೆರವು ನೀಡುವ ಮೂಲಕ ಲಿಂಗ ಸಮಾನತೆಯನ್ನು ಸಾಧಿಸುವುದು.
  • ಪೌಷ್ಟಿಕಾಂಶದ ಭದ್ರತೆ: ಸರ್ಕಾರಿ ಮಧ್ಯಾಹ್ನದ ಊಟದ ಯೋಜನೆ ಮತ್ತು ಅಂಗನವಾಡಿಗಳಿಗೆ ಮೊಟ್ಟೆ ಮತ್ತು ಕೋಳಿ ಉತ್ಪನ್ನಗಳ ಬೇಡಿಕೆಯನ್ನು ಸ್ಥಳೀಯವಾಗಿ ಪೂರೈಸುವುದು.

ಯೋಜನೆಯಡಿ ದೊರೆಯುವ ಸೌಲಭ್ಯಗಳೇನು?

  • ಕುಕ್ಕುಟ ಸಂಜೀವಿನಿ ಯೋಜನೆಯ ಮುಖ್ಯ ಫಲಾನುಭವಿಗಳು 5 ರಿಂದ 10 ಸದಸ್ಯರನ್ನು ಹೊಂದಿರುವ ಮಹಿಳಾ ಸ್ವಸಹಾಯ ಸಂಘಗಳು ಮತ್ತು ಕೋಳಿ ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿರುವ ಗ್ರಾಮ ಪಂಚಾಯತ್ ಮಟ್ಟದ ಸಂಘಗಳಾಗಿವೆ.
  • ಈ ಯೋಜನೆಯಡಿ ಸಹಾಯದ ಸ್ವರೂಪವು ಬಹುಮುಖಿಯಾಗಿದೆ. ಪಶುಸಂಗೋಪನೆ ಇಲಾಖೆಯಿಂದ ಆರು ವಾರಗಳ ನಾಟಿ ಕೋಳಿ ಮರಿಗಳನ್ನು ವಿತರಿಸಲಾಗುತ್ತದೆ.
  • ಕೋಳಿ ಶೆಡ್ ನಿರ್ಮಾಣಕ್ಕಾಗಿ ಎಂಜಿ ನರೇಗಾ ಯೋಜನೆ ಅಡಿಯಲ್ಲಿ 500 ಕೋಳಿಗಳಿಗೆ 4.5 ಲಕ್ಷ ರೂ. ಮತ್ತು 1000 ಕೋಳಿಗಳಿಗೆ 7.5 ಲಕ್ಷ ರೂ.ದವರೆಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ.
  • ಇದರ ಜೊತೆಗೆ, ಪಶುಸಂಗೋಪನೆ ಇಲಾಖೆ ಅಥವಾ ಜಿಲ್ಲಾ ಪಂಚಾಯತ್‌ನಿಂದ ಪ್ರತಿ ಸಂಘಕ್ಕೆ 25,000 ರೂ.ಗಳ ಹೆಚ್ಚುವರಿ ಸಹಾಯಧನವನ್ನು ನೀಡಲಾಗುತ್ತದೆ.
  • ಯೋಜನೆಯ ಮೂಲಕ ಮಹಿಳಾ ಸಂಘಗಳಿಗೆ ಆದಾಯ ಹೆಚ್ಚಳಕ್ಕೆ ಉತ್ತಮ ಮಾರ್ಗಗಳನ್ನು ಕಲ್ಪಿಸಲಾಗಿದೆ.
  • ಉತ್ಪಾದನೆಯಾದ ಮೊಟ್ಟೆಗಳನ್ನು ಸರ್ಕಾರಿ ಶಾಲೆಗಳು ಮತ್ತು ಸ್ಥಳೀಯ ಅಂಗನವಾಡಿ ಕೇಂದ್ರಗಳಿಗೆ ನಿಗದಿತ ದರದಲ್ಲಿ ಮಾರಾಟ ಮಾಡಲು ಅವಕಾಶವಿದೆ. ಇದು ಸುಸ್ಥಿರ ಮಾರುಕಟ್ಟೆಯನ್ನು ಒದಗಿಸುತ್ತದೆ.

ಫಲಾನುಭವಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನ

ಯಶಸ್ವಿ ಕೋಳಿ ಸಾಕಾಣಿಕೆಗಾಗಿ, ಫಲಾನುಭವಿಗಳಿಗೆ ಸಮಗ್ರ ತರಬೇತಿ ನೀಡಲಾಗುತ್ತದೆ. ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಪ್ರಾದೇಶಿಕ ಕೇಂದ್ರಗಳು ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಸಹಯೋಗದೊಂದಿಗೆ ಅಲ್ಪಾವಧಿ ವೈಜ್ಞಾನಿಕ ಕೋಳಿ ಸಾಕಾಣಿಕಾ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಪಶುಪಾಲನಾ ಇಲಾಖೆಯಿಂದಲೂ ತರಬೇತಿ ಮತ್ತು ತಾಂತ್ರಿಕ ಸಲಹೆ ದೊರೆಯುತ್ತದೆ. ಸಾಮಾನ್ಯವಾಗಿ 5 ರಿಂದ 10 ದಿನಗಳವರೆಗೆ ತರಬೇತಿ ಇರುತ್ತದೆ. ಕೋಳಿಗಳ ಆರೈಕೆ, ಆಹಾರ ನೀಡುವ ವಿಧಾನ, ರೋಗ ನಿಯಂತ್ರಣ ಮತ್ತು ವೈಜ್ಞಾನಿಕ ಸಾಕಾಣಿಕೆ ಕುರಿತು ತಿಳಿವಳಿಕೆ ನೀಡಲಾಗುತ್ತದೆ.

ಕುಕ್ಕುಟ ಸಂಜೀವಿನಿ ಯೋಜನೆಯಡಿ ನೀಡಲಾಗುವ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ದಿನವೊಂದಕ್ಕೆ 200 ರೂ. ರಂತೆ ಭತ್ಯೆ ನೀಡಲಾಗುತ್ತದೆ. ಜೊತೆಗೆ ಪ್ರವಾಸ ವೆಚ್ಚ ಮತ್ತು ಲೇಖನಿ ಸಾಮಗ್ರಿಗಳಿಗಾಗಿ 800 ರೂ. ಅನುದಾನ ಹಾಗೂ ಕೋಳಿ ಸಾಕಾಣಿಕೆಯ ಕೈಪಿಡಿ ಮತ್ತು ಕಿಟ್ ವಿತರಣೆಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ತರಬೇತಿಗೆ ಮೊದಲು ಬಂದು ನೋಂದಾಯಿಸುವವರಿಗೆ ಆದ್ಯತೆ ನೀಡಲಾಗುತ್ತದೆ. ಆದರೆ ಕೋಳಿಮರಿಗಳನ್ನು (ವಿಶೇಷವಾಗಿ ಆರಂಭಿಕ 3-4 ತಿಂಗಳು) ಸೂಕ್ತವಾಗಿ ಪಾಲನೆ ಮಾಡಲು ಉತ್ತಮ ಪ್ರಾಯೋಗಿಕ ಅನುಭವ ಅವಶ್ಯಕವಿರುವುದರಿಂದ ನಾಟಿ ಕೋಳಿ ಮರಿಗಳನ್ನು ಸಾಕಿದ ಅನುಭವ ಇರುವವರು ಅರ್ಜಿ ಸಲ್ಲಿಸಿದರೆ ಉತ್ತಮ ಎಂಬ ಪ್ರಾಯೋಗಿಕ ಸಲಹೆಯನ್ನು ನೀಡಲಾಗಿದೆ.