Mansoon rain 2025-ಈ ಭಾರಿ ಮೇ 13ರಿಂದಲೇ ಮನ್ಸೂನ್ ಪ್ರಾರಂಭ,ಮುಂದಿನ 4 ತಿಂಗಳು 1000 ಮೀ.ಮೀ ಮಳೆ
ಈ ಬಾರಿಯ ಮಳೆಗಾಲದಲ್ಲಿ(Mansoon rain-2025) ಭಾರತದಾದ್ಯಂತ ವಾಡಿಕೆಗಿಂತ ಶೇ. 105ರಷ್ಟು ಹೆಚ್ಚು ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.

Mansoon rain 2025-ಈ ಭಾರಿ ಮೇ 13ರಿಂದಲೇ ಮನ್ಸೂನ್ ಪ್ರಾರಂಭ,ಮುಂದಿನ 4 ತಿಂಗಳು 1000 ಮೀ.ಮೀ ಮಳೆ
ನೈಋತ್ಯ ಮಾನ್ಸೂನ್ ಮೇ 13 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಂಡಮಾನ್ ಸಮುದ್ರದ ಕೆಲವು ಭಾಗಗಳನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಅಂದಾಜಿಸಿದೆ.
ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರ ಸುಮಾರಿಗೆ ಕೇರಳಕ್ಕೆ ಮುನ್ನಡೆಯುತ್ತದೆ ಮತ್ತು ಉತ್ತರದ ಕಡೆಗೆ ಸಾಗುತ್ತದೆ.
ಜುಲೈ 15 ರ ಸುಮಾರಿಗೆ ಇಡೀ ದೇಶವನ್ನು ಆವರಿಸುತ್ತದೆ, ಇದು ಸಾಮಾನ್ಯ ಪ್ರವೃತ್ತಿಯಾಗಿದೆ. ಆದರೆ ಈ ವರ್ಷ ಮಾನ್ಸೂನ್ ನಿರೀಕ್ಷೆಗಿಂತ ಮೊದಲೇ ಆಗಮಿಸುತ್ತದೆ ಎಂದು ತೋರುತ್ತದೆ.
ಐಎಂಡಿ ಅಂದಾಜಿಸಿದಂತೆ ಮೇ 25 ರ ವೇಳೆಗೆ ಕೇರಳ ತೀರಕ್ಕೆ ಮಾನ್ಸೂನ್ ಆಗಮಿಸುತ್ತದೆ ಎಂದು ಅಂದಾಜಿಸಲಾಗಿದೆ, ಇದು ಜೂನ್ 1 ರ ಸಾಮಾನ್ಯ ದಿನಾಂಕಕ್ಕಿಂತ ಮುಂಚೆಯೇ ಇರುತ್ತದೆ. ಆದಾಗ್ಯೂ, ಹಿಂದಿನ ದತ್ತಾಂಶಗಳು ಅಂಡಮಾನ್ ಸಮುದ್ರದ ಮೇಲೆ ಮಾನ್ಸೂನ್ ಆಗಮನದ ದಿನಾಂಕಕ್ಕೂ ಕೇರಳದಲ್ಲಿ ಮಾನ್ಸೂನ್ ಆರಂಭದ ದಿನಾಂಕಕ್ಕೂ ಅಥವಾ ದೇಶದಾದ್ಯಂತ ಕಾಲೋಚಿತ ಮಾನ್ಸೂನ್ ಮಳೆಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ಐಎಂಡಿ ಹೇಳುತ್ತದೆ.
ಕೆಳ ಉಷ್ಣವಲಯದ ಮಟ್ಟದಲ್ಲಿ ನೈಋತ್ಯ ದಿಕ್ಕುಗಳು ಬಲಗೊಳ್ಳುವುದರಿಂದ, ವಿವಿಧ ಪ್ರದೇಶಗಳಲ್ಲಿ ವ್ಯಾಪಕವಾದ ಮಳೆಯಾಗುವ ಮತ್ತು ನಿರಂತರ ಮೋಡ ಕವಿದ ವಾತಾವರಣ ಇರುತ್ತದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ನೈಋತ್ಯ ಮಾನ್ಸೂನ್ ಮೇ 13, 2025 ರ ಸುಮಾರಿಗೆ ದಕ್ಷಿಣ ಅಂಡಮಾನ್ ಸಮುದ್ರ, ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಿಗೆ ಮುನ್ನಡೆಯುವ ಸಾಧ್ಯತೆಯಿದೆ ಎಂದು ಹೇಳಿದೆ.
ಈ ಬಾರಿಯ ಮಳೆಗಾಲದಲ್ಲಿ ಭಾರತದಾದ್ಯಂತ ವಾಡಿಕೆಗಿಂತ ಶೇ. 105ರಷ್ಟು ಹೆಚ್ಚು ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ನೈಋತ್ಯ ಮುಂಗಾರು ಮಾರುತಗಳು ಮೇ ತಿಂಗಳ ಕಡೆಯ ವಾರದಿಂದಲೇ ದಕ್ಷಿಣದ ಕೇರಳದ ಮೂಲದ ಭಾರತವನ್ನು ಪ್ರವೇಶಿಸಲಿವೆ ಎಂದು ಇಲಾಖೆ ತಿಳಿಸಿದೆ.
ಈ ಕುರಿತಂತೆ, ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿರುವ ಕೇಂದ್ರ ಭೂಗರ್ಭ ಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ರವೀಂದ್ರನ್ ಕೂಡ ಇದೇ ವಿಷಯವನ್ನು ತಿಳಿಸಿದ್ದಾರೆ. ಸೆಪ್ಟಂಬರ್ ಮಧ್ಯಭಾಗದವರೆಗೂ ಮುಂಗಾರು ಮಾರುತಗಳ ಪ್ರಭಾವ ಭಾರತದಾದ್ಯಂತ ಇರಲಿದೆ. ಸೆಪ್ಟಂಬರ್ ಮಧ್ಯಭಾಗದ ನಂತರ ಮಾರುತಗಳ ಪ್ರಮಾಣ ಕಡಿಮೆಯಾಗಲಿದೆ. ಆದರೆ ಅಲ್ಲಿಯವರೆಗೆ ಭಾರತದಾದ್ಯಂತ ಉತ್ತಮವಾಗಿ ಮಳೆ ಬೀಳಲಿದೆ ಎಂದು ಹೇಳಿದ್ದಾರೆ. ವಾಡಿಕೆಗಿಂತ ಹೆಚ್ಚು ಅಂದರೆ ಶೇ. 105ರಷ್ಟು ಮಳೆ ಬೀಳುವ ಮುನ್ಸೂಚನೆ ಸಿಕ್ಕಿರುವುದು ಕೃಷಿ ವಲಯಕ್ಕೆ ನಿಜಕ್ಕೂ ಶುಭ ಸಮಾಚಾರವೇ ಸರಿ ಎಂದು ಅವರು ತಿಳಿಸಿದ್ದಾರೆ.
ಹೆಚ್ಚು ಮಳೆ ಲೆಕ್ಕಾಚಾರ ಹೇಗೆ?
ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತದೋ, ಕಡಿಮೆ ಮಳೆಯಾಗುತ್ತದೋ ಎಂಬುದನ್ನು ಅಳೆಯಲು ಕೇಂದ್ರ ಹವಾಮಾನ ಇಲಾಖೆ (ಐಎಂಡಿ) ಒಂದು ಸಿದ್ಧ ಸೂತ್ರವನ್ನಿಟ್ಟುಕೊಂಡಿದೆ. ಯಾವುದೇ ವರ್ಷದಲ್ಲಿ ಮುಂಗಾರು ಮಳೆ ಎಷ್ಟಾಗಬಹುದು ಎಂಬ ಮಾಹಿತಿ ಉಪಗ್ರಹಗಳಿಂದ ಸಿಕ್ಕ ಕೂಡಲೇ ಅದನ್ನು ಆ ವರ್ಷದಿಂದ ಹಿಂದಕ್ಕೆ ಸುಮಾರು 50 ವರ್ಷಗಳ ಸರಾಸರಿ ಮುಂಗಾರು ಮಳೆಯ ಪ್ರಮಾಣಕ್ಕೆ ಹೋಲಿಕೆ ಮಾಡಲಾಗುತ್ತದೆ.
ಶೇ. 96ರಿಂದ 104ರವರೆಗಿನ ಅಂದಾಜಿನಲ್ಲಿ ಮಳೆ ಸುರಿಯುತ್ತದೆ ಎಂದಾದರೆ ಅದನ್ನು ಸಾಮಾನ್ಯ ಮುಂಗಾರು ಎಂದು ಪರಿಗಣಿಸುತ್ತದೆ. ಶೇ. 104ಕ್ಕಿಂತ ಹೆಚ್ಚು ಮಳೆಯಾಗುತ್ತದೆ ಎಂದರೆ ಅದು ಉತ್ತಮ ಮುಂಗಾರು ಎಂದು ಪರಿಗಣಿಸಲಾಗುತ್ತದೆ. 2025ರ ಮುಂಗಾರು ಮಳೆಯು ಶೇ. 105ರಷ್ಟಿರಲಿದೆ ಎಂಬ ಲೆಕ್ಕಾಚಾರ ಇರುವುದರಿಂದ ಈ ಬಾರಿ ಉತ್ತಮ ಮುಂಗಾರು ಸಾಧ್ಯವಿದೆ ಎಂದು ತಜ್ಞರು ಲೆಕ್ಕಾಚಾರ ಹಾಕಿದ್ದಾರೆ. ಈಗಾಗಲೇ ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪೂರ್ವ ಮುಂಗಾರು ಮಳೆ ಆಗುತ್ತಿದೆ.
ಮುಂಗಾರು ಮಳೆಯ ಮಹತ್ವ
ಭಾರತದಂಥ ಸಮಶೀತೋಷ್ಣ ವಲಯದಲ್ಲಿರುವ ದೇಶಗಳಿಗೆ ಮುಂಗಾರು ಮಳೆ ಅತ್ಯಗತ್ಯವಾಗಿ ಬೇಕೇಬೇಕು. ಕೇವಲ ಕೃಷಿಗೆ ಮಾತ್ರವಲ್ಲ, ಕುಡಿಯುವ ನೀರು, ಜಲವಿದ್ಯುತ್ ತಯಾರಿಕೆಗೆ ಮುಂಗಾರು ಮಳೆಯೇ ಮೂಲ. ಭಾರತದಲ್ಲಿ ಒಟ್ಟು ಇರುವ ಕೃಷಿ ಭೂಮಿಯಲ್ಲಿ ಶೇ. 52ರಷ್ಟು ಭೂಮಿಯು ಮಳೆಯಾಧಾರಿತವಾಗಿದೆ. ಹಾಗಾಗಿ, ಮುಂಗಾರು ಮಳೆಯು ಉತ್ತಮವಾಗಿ ಸುರಿದರೆ ಮಳಯಾಧಾರಿತ ಕೃಷಿಗೆ ಹೆಚ್ಚು ಇಂಬು ನೀಡುತ್ತದೆ. ಜೊತೆಗೆ, ನದಿಗಳು, ಅಣೆಕಟ್ಟುಗಳು, ಕಾಲುವೆಗಳು ತುಂಬಿ ಆ ಮೂಲಕ ನೀರಾವರಿ ಭೂಮಿಯಲ್ಲೂ ಉತ್ತಮ ಫಸಲು ಸಿಗುತ್ತದೆ. ಈ ಬಾರಿ ಐಎಂಡಿ ಕೊಟ್ಟಿರುವ ಈ ಬಾರಿಯ ಮುಂಗಾರಿನ ವಿವರಗಳು ರೈತಾಪಿ ಜನರಲ್ಲಿ ಸಹಜವಾಗಿ ಖುಷಿ ತಂದಿದೆ.
ತಜ್ಞರಲ್ಲಿ ಕೊಂಚ ಆತಂಕ
ಉತ್ತಮವಾಗಿ ಮಳೆಯೇನೋ ಆಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದ್ದರೂ ಅಲ್ಲಿರುವ ತಜ್ಞರದ್ದು ಬೇರೆಯದ್ದೇ ಆತಂಕವಿದೆ. ಅದೇನೆಂದರೆ, ಮೇ ತಿಂಗಳ ಅಂತ್ಯದಿಂದ ಸೆಪ್ಟಂಬರ್ ಮಧ್ಯಭಾಗದವರೆಗೆ ಚಾಲ್ತಿಯಲ್ಲಿರುವ ಮುಂಗಾರು ಹಂತಹಂತವಾಗಿ ಮಳೆ ಸುರಿಸುತ್ತವೋ ಅಥವಾ ಕೆಲವು ದಿನಗಳ ಮಾತ್ರ ಭಾರೀ ಮಳೆ ಸೃಷ್ಟಿಸಿ ಅವಾಂತರ ಸೃಷ್ಟಿಸುತ್ತವೋ ಎಂಬ ಆತಂಕವಿದೆ. ಹಂತಹಂತವಾಗಿ ಬಿತ್ತನೆಗೆ ಎಷ್ಟು ಬೇಕೋ ಅಷ್ಟು ಸುರಿಯುತ್ತಾ ಹೋದರೆ ಚೆಂದ. ಆದರೆ, ಇಂದು ಮಳೆಬರುವುದು, ಆನಂತರ ಎರಡು ಮೂರು ವಾರ ಮಳೆಯ ಸುಳಿವಿಲ್ಲ. ಆನಂತರ ದಬದಬನೆ ಆಕಾಶಕ್ಕೆ ತೂತು ಬಿದ್ದಂತೆ ಧಾರಾಕಾರವಾಗಿ ಸುರಿಯುವುದು ಆದರೆ ರೈತರಿಗೆ ಕಷ್ಟವಾಗಬಹುದು ಎಂಬುದು ತಜ್ಞರ ಮಾತು. ಅದನ್ನು ನಿಖರವಾಗಿ ಮುಂದಿನ ದಿನಗಳಲ್ಲಿ ಅಳೆಯಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
https://vijaykarnataka.com/news/karnataka/karnataka-monsoon-rain-predictions-this-year-good-rain-in-state-farmers-are-happy/amp_videoshow/120891292.cms