Milk incentive-ಬರಗಾಲದಲ್ಲಿ 3 ತಿಂಗಳಿನಿಂದ ಕೈಕೊಟ್ಟ ಹಾಲಿನ ಪ್ರೋತ್ಸಾಹಧನ,ಹಾಗಾದರೆ ಇಲ್ಲಿಯವರಿಗಿನ ಪ್ರೋತ್ಸಾಹಧನ ಚೆಕ್ ಮಾಡುವ ಡೈರೆಕ್ಟ್ ಲಿಂಕ್
<Krushirushi> <Milk incentive> <ಹಾಲಿನ ಪ್ರೋತ್ಸಾಹಧನ> <KMF> <Karnataka milk federation> <Milk incentive status> <Milk incentive status checking link>
Milk incentive-ಬರಗಾಲದಲ್ಲಿ3 ತಿಂಗಳಿನಿಂದ ಕೈಕೊಟ್ಟ ಹಾಲಿನ ಪ್ರೋತ್ಸಾಹಧನ
ಕೊರೊನಾ ಬಳಿಕ ಬರಗಾಲದ ಹೊಡೆತದಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಕಳೆದ ಮೂರು ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ಸಿಕ್ಕಿಲ್ಲ. ಹಾಲು ಉತ್ಪಾದಕರಿಗೆ ಉತ್ತೇಜಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಪ್ರತಿ ಲೀಟರ್ ಹಾಲಿಗೆ ನೀಡಬೇಕಿದ್ದ 5 ರೂ. ಪ್ರೋತ್ಸಾಹ ಧನಕ್ಕಾಗಿ ಹೈನುಗಾರರು ಎದುರು ನೋಡುವಂತಾಗಿದೆ.
ಕೈಗೆ ಬಂದ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರಿಗೆ ಸದ್ಯ ಹೈನುಗಾರಿಕೆಯೇ ಆಧಾರ. ಆದರೆ ರಾಜ್ಯದಲ್ಲಿ ಜುಲೈವರೆಗೆ ಮಾತ್ರ ಪ್ರೋತ್ಸಾಹ ಧನ ವಿತರಣೆಯಾಗಿದ್ದು, ಅಕ್ಟೋಬರ್ ಅಂತ್ಯಕ್ಕೆ ಮೂರು ತಿಂಗಳಿಂದ ಬಾಕಿ ಉಳಿದಂತಾಗಲಿದೆ.
ನಿತ್ಯ 4 ಕೋಟಿ ಪ್ರೋತ್ಸಾಹ ಧನ ಬೇಕು: ರಾಜ್ಯದಲ್ಲಿ ಅಂದಾಜು 80 ಲಕ್ಷ ಲೀಟರ್ ಹಾಲು ಕೆಎಂಎಫ್‌ಗೆ ಪೂರೈಸಲಾಗುತ್ತಿದೆ. ಪ್ರತಿ ಲೀಟರ್ ಹಾಲಿಗೆ 5 ರೂ. ಗಳಂತೆ ಪ್ರತಿ ನಿತ್ಯ 4 ಕೋಟಿ ರೂ. ಪ್ರೋತ್ಸಾಹ ಧನವನ್ನು ಹೈನುಗಾರರಿಗೆ ಭರಿಸಬೇಕಿದೆ. ತಿಂಗಳಿಗೆ 120 ಕೋಟಿ ರೂ.ಗಳಂತೆ ಮೂರು ತಿಂಗಳಿಗೆ 360 ಕೋಟಿ ರೂ. ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕಿದೆ.
ರಾಜ್ಯದಲ್ಲಿ ಹೈನುಗಾರಿಕೆಗೆ ಉತ್ತೇಜಿಸುವ ದಿಸೆಯಲ್ಲಿ ಹಿಂದಿನ ಸರ್ಕಾರ “ಕ್ಷೀರಧಾರೆ’ ಯೋಜನೆಯಡಿ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನ ನೀಡುತ್ತ ಬಂದಿದ್ದು, ಪ್ರತಿ ಲೀಟರ್ ಹಾಲಿಗೆ 2 ರೂ. ಇದ್ದ ಪ್ರೋತ್ಸಾಹ ಧನವನ್ನು ಸದ್ಯ 5 ರೂ.ಗೆ ಹೆಚ್ಚಿಸಲಾಗಿದೆ. ಪ್ರೋತ್ಸಾಹ ಧನವನ್ನು ಲೀಟರ್‌ಗೆ ಹೆಚ್ಚುವರಿಯಾಗಿ ಒಂದು ರೂ. ಪಾವತಿಸುವ ಬಗ್ಗೆ ಸರ್ಕಾರ ಈ ಹಿಂದೆ ಘೋಷಿಸಿತ್ತು. ಆದರೆ, ಸದ್ಯ ನೀಡಲಾಗುವ ಹಣ ಮೂರ್‍ನಾಲ್ಕು ತಿಂಗಳಿಗೊಮ್ಮೆ ಪಾವತಿಸುತ್ತಿರುವುದು ಹಾಲು ಉತ್ಪಾದಕರಿಗೆ ರಾಸುಗಳ ನಿರ್ವಹಣೆ ಹೈರಾಣಾಗಿಸಿದೆ.
ಹೈನುಗಾರ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲು ರಾಜ್ಯ ಸರ್ಕಾರ ಹೊಸ ಸಾಫ್ಟವೇರ್ ಮೂಲಕ ನೇರ ಲಾಭ ವರ್ಗಾವಣೆ (ಡಿಬಿಟಿ) ಪದ್ಧತಿ ಜಾರಿಗೊಳಿಸಿದೆ. ಆದರೆ, ಡಿಬಿಟಿ ಪದ್ಧತಿ ಅನುಷ್ಠಾನದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವ ಕಾರಣ ಪ್ರೋತ್ಸಾಹ ಧನ ಪಾವತಿ ವಿಳಂಬಕ್ಕೆ ಕಾರಣವಾಗುತ್ತಿದೆ. ಬೆಳೆ ನಷ್ಟದಿಂದ ಒದ್ದಾಡುತ್ತಿರುವ ಅನ್ನದಾತರು ಜಾನುವಾರುಗಳಿಗೆ ಆಹಾರ ಪದಾರ್ಥ, ಮೇವುಗಾಗಿ
ಪರದಾಡುತ್ತಿದ್ದಾರೆ. ಇನ್ನೊಂದೆಡೆ ಲಿಂಪಿಸ್ಕಿನ್ ಮತ್ತು ಕಾಲುಬಾಯಿ ಜ್ವರ ಸೇರಿದಂತೆ ವಿವಿಧ ರೋಗಗಳು ರಾಸುಗಳಲ್ಲಿ ಕಂಡು ಬರುತ್ತಿರುವುದು ಹೈನುಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಈ ಹಂತದಲ್ಲಿ ಪ್ರತಿ ತಿಂಗಳಿಗೊಮ್ಮೆ ಪ್ರೋತ್ಸಾಹ ಧನ ನೀಡಬೇಕಾದ ಸರ್ಕಾರ ವಿಳಂಬ ಧೋರಣೆ ತಾಳುತ್ತಿರುವುದು ಅಸಮಾಧಾನ ವ್ಯಕ್ತವಾಗುತ್ತಿದೆ
ಹಾಗಾದರೆ ಇಲ್ಲಿಯವರಿಗಿನ ಪ್ರೋತ್ಸಾಹಧನ(Milk incentive) ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://mahitikanaja.karnataka.gov.in/Klda/MilkIncentive?ServiceId=5399&Type=TABLE&DepartmentId=3119
ನಂತರ ನಿಮ್ಮ ಜಿಲ್ಲೆ,ತಾಲೂಕು,Milk Union,ಗ್ರಾಮ, select ಮಾಡಿ,Submit ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ಇಲ್ಲಿಯವರೆಗೂ ನಿಮ್ಮ ಗ್ರಾಮದಲ್ಲಿ ಯಾರಿಗೆಲ್ಲಾ ಎಷ್ಟು ಹಾಲಿನ ಪ್ರೋತ್ಸಾಹಧನ(Milk incentive) ಬಂದಿದೆ ಎಂದು ತಿಳಿಯಲಿದೆ