Mini tractor subsidy-90% ಸಬ್ಸಿಡಿಯಲ್ಲಿ ಮಿನಿ ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಯಂತ್ರೊಪಕರಣಗಳ ಖರೀದಿಗೆ ಅರ್ಜಿ ಆಹ್ವಾನ
<Krushirushi> <mini tractor subsidy> <mini tractor> <tractor> <mini tractor subsidy scheme> <agriculture mechanisation> <Agriculture> <farmer> <Agro processing> <rotovator> <flour mill> <oil mill> <roti machine> <power weeder> <power sprayer> <brush cutter> <diseal pumpset> <farm pond> <sprinkler> <krushi bhagya> <Hitech harvester hub> <motocarp> <Pradan mantri krishi sincahayi yojana> <PMKSY> <ರೈತ> <ಹಣ> <ಸಂದಾಯ> <ಸಹಾಯಧನ> <ಕೃಷಿ> <ಕೃಷಿಹೊಂಡ> <ಡಿಸೇಲ್ ಪಂಪಸೆಟ್> <ರೊಟೊವೆಟರ್> <ಪವರ್ ವಿಡರ್> <ಪವರ್ ಸ್ಪ್ರೇಯರ್> ತಂತುರು ನೀರಾವರಿ> <ಕೃಷಿ ಸಂಸ್ಕರಣೆ> <ಕೃಷಿ ಯಂತ್ರೋಪಕರಣ>
Mini tractor subsidy-90% ಸಬ್ಸಿಡಿಯಲ್ಲಿ ಮಿನಿ ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಯಂತ್ರೊಪಕರಣಗಳ ಖರೀದಿಗೆ ಅರ್ಜಿ ಆಹ್ವಾನ
ಸಹಾಯಧನ ಪಡೆದು ಕೃಷಿ ಯಂತ್ರೋಪಕರಣಗಳನ್ನು (Agricultural machinery) ಖರೀದಿಸಲು ಅರ್ಹ ರೈತರಿಂದ (Farmer) ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ.50 ರ ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90 ರ ರಿಯಾಯಿತಿಯಲ್ಲಿ (Tractor Subsidy) ಟ್ರಾಕ್ಟರ್ ಖರೀದಿಗೆ ಅರ್ಜಿ ಆಹ್ವಾನಿಸಲಾಗಿದೆ.
2024-25ರ ಸಾಲಿನ ಕೃಷಿ ಯಾಂತ್ರೀಕರಣ(Agriculture mechanisation) ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ(agro processing) ಮಿನಿ ಟ್ರ್ಯಾಕ್ಟರ್(Mini tractor), ಪವರ್ ಟಿಲ್ಲರ್(power tiller), ರೋಟೋವೇಟರ್(Rotovator), ಕಳೆ ಕೊಚ್ಚುವ ಯಂತ್ರಗಳು(brush cutter), ಪವರ್ ವೀಡರ್(Power weeder) , ಪವರ್ ಸ್ಪ್ರೇಯರ್ಸ್(power sprayer), ಡೀಸೆಲ್ ಪಂಪ್‍ಸೆಟ್(Diseal pumpset), ಪ್ಲೋರ್‌ಮಿಲ್(flour mill), ಯಂತ್ರ ಚಾಲಿತ ಮೋಟೋಕಾರ್ಟ್(Motocarp), ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು(oil mill) ಮತ್ತು ಇತರೆ ಹೈಟೆಕ್ ಕೃಷಿ ಉಪಕರಣಗಳನ್ನು(Hi tech harvester hub) ಹಾಗೂ ತುಂತುರು ನೀರಾವರಿ(Sprinkler) ಯೋಜನೆಯಡಿಯಲ್ಲಿ ಶೇ.90ರ ರಿಯಾಯ್ತಿ ದರದಲ್ಲಿ ತುಂತುರು ನೀರಾವರಿ ಘಟಕ (ಹೆಚ್‍ಡಿಪಿಇ ಪೈಪ್ಸ್) ವಿತರಿಸಲಾಗುತ್ತಿದೆ.
ಆಸಕ್ತ ರೈತರು ಪಹಣಿ(ಆರ್‍ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಎರಡು ಭಾವಚಿತ್ರ, ರೂ.100 ರ ಛಾಪಾ ಕಾಗದದೊಂದಿಗೆ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಕೃಷಿ ಭಾಗ್ಯ(Krushi bhagya)ಯೋಜನೆಯಡಿಯಲ್ಲಿ ರೈತರಿಗೆ ನೀರು ಸಂಗ್ರಹಣಾ ರಚನೆ(ಕೃಷಿ ಹೊಂಡ), ಕೃಷಿ ಹೊಂಡದ(farm pond) ಸುತ್ತಲೂ ತಂತಿ ಬೇಲಿ ನಿರ್ಮಾಣ, ಹೊಂಡದಿಂದ ನೀರು ಎತ್ತಲು ಡೀಸೆಲ್/ ಸೋಲಾರ್ ಪಂಪ್ ಸೆಟ್(ಅಪ್ ಟು 10 ಹೆಚ್‍ಪಿ) ಮತ್ತು ಬೆಳೆಗೆ ನೀರು ಹಾಯಿಸಲು ಸೂಕ್ಷ್ಮ ನೀರಾವರಿ ಘಟಕಗಳ ಸೌಲಭ್ಯಗಳನ್ನು ಸಾಮಾನ್ಯ ರೈತರಿಗೆ ಶೇ.80ರ ಸಹಾಯಧನದಲ್ಲಿ /ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.90ರ ಸಹಾಯಧನದಲ್ಲಿ ನೀಡಲಾಗುವುದು.
ಕೃಷಿ ಭಾಗ್ಯ ಯೋಜನೆಗೆ ರೈತರು ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೇ ನಂಬರ್‌ನಲ್ಲಿ ಕನಿಷ್ಠ 1 ಎಕರೆ ಭೂಮಿ ಹೊಂದಿರಬೇಕು. ಹಿಂದಿನ ಸಾಲುಗಳಲ್ಲಿ ಕೃಷಿ ಭಾಗ್ಯ ಯೋಜನೆ ಅಥವಾ ಇನ್ನಾವುದೇ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವ ರೈತರು ಈ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ, ಇದನ್ನು ಕೆ ಕಿಸಾನ್ ಪೋರ್ಟಲ್‍ನಲ್ಲಿ ಪರಿಶೀಲಿಸಿ ಖಾತರಿಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ