Sprinkler set-ರೈತರಿಗೆ ಗುಡ್ ನ್ಯೂಸ್,ಸ್ಪ್ರಿಂಕ್ಲರ್ ಸೆಟ್ ವಿತರಣೆಯಲ್ಲಿ ಮಹತ್ವದ ಬದಲಾವಣೆ
ಸೂಕ್ಷ್ಮ (ತುಂತುರು) ನೀರಾವರಿಗೆ(Micro irrigation)ಸಹಾಯಧನದಡಿ ಪರಿಕರಗಳನ್ನು ಪಡೆಯಲಿದ್ದ ನಿರ್ಬಂಧವನ್ನು ಸರ್ಕಾರ ಸಡಿಲಿಸಿ, ಎಲ್ಲ ವರ್ಗದ ರೈತರಿಗೆ ಸಬ್ಸಿಡಿ ನವೀಕರಣ ಸೌಲಭ್ಯ ವಿಸ್ತರಿಸಿ ಆದೇಶಿಸಿದೆ.

Sprinkler set-ರೈತರಿಗೆ ಗುಡ್ ನ್ಯೂಸ್,ಸ್ಪ್ರಿಂಕ್ಲರ್ ಸೆಟ್ ವಿತರಣೆಯಲ್ಲಿ ಮಹತ್ವದ ಬದಲಾವಣೆ
ಸೂಕ್ಷ್ಮ (ತುಂತುರು) ನೀರಾವರಿಗೆ(Micro irrigation)ಸಹಾಯಧನದಡಿ ಪರಿಕರಗಳನ್ನು ಪಡೆಯಲಿದ್ದ ನಿರ್ಬಂಧವನ್ನು ಸರ್ಕಾರ ಸಡಿಲಿಸಿ, ಎಲ್ಲ ವರ್ಗದ ರೈತರಿಗೆ ಸಬ್ಸಿಡಿ ನವೀಕರಣ ಸೌಲಭ್ಯ ವಿಸ್ತರಿಸಿ ಆದೇಶಿಸಿದೆ. ಪರಿಶಿಷ್ಟ ಜಾತಿ, ಪಂಗಡಗಳ ರೈತ ಫಲಾನುಭವಿಗಳು ಏಳು ವರ್ಷಗಳ ನಂತರ ಅದೇ ಜಮೀನಿಗೆ ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.
ಇದೀಗ ಇತರ ವರ್ಗಗಳ ರೈತರಿಗೂ ಸರ್ಕಾರ ವಿಸ್ತರಿಸಿದೆ. ಈ ಹಿಂದೆ ಇತರ ವರ್ಗದ ರೈತರಿಗೆ ಒಮ್ಮೆ ಮಾತ್ರ ಒಂದು ನಿರ್ದಿಷ್ಟ ಜಮೀನಿಗೆ ಹನಿ ನೀರಾವರಿ(Drip irrigation), ತುಂತುರು ನೀರಾವರಿ(Sprinkler irrigation)ಘಟಕ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಸಚಿವರ ಪ್ರಯತ್ನ ಫಲಪ್ರದ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಎಲ್ಲ ಜಿಲ್ಲೆಗಳ ರೈತರು ಇತರೆ ವರ್ಗಗಳ ರೈತರಿಗೆ ವಿಧಿಸಿರುವ ನಿರ್ಬಂಧ ಸಡಿಲಿಸಲು ಪದೇಪದೆ ವಿನಂತಿಸಿದ್ದರು. ಈ ಮನವಿಯನ್ನು ಎನ್.ಚಲುವರಾಯಸ್ವಾಮಿ ಗಂಭೀರವಾಗಿ ಪರಿಗಣಿಸಿದ್ದರು. ನಿರಂತರ ಪ್ರಯತ್ನ ಕೊನೆಗೂ ಫಲಪ್ರದವಾಗಿದೆ. ಇತರೆ ವರ್ಗಗಳ ರೈತರ ಮೇಲಿನ ನಿರ್ಬಂಧ ಸಡಿಲಿಸಿ, ಏಳು ವರ್ಷಗಳ ನಂತರ ಮತ್ತದೇ ಜಮೀನಿಗೆ ಸಬ್ಸಿಡಿ ನವೀಕರಣದ ಅವಕಾಶದ ಆದೇಶ ಹೊರಬಿದ್ದಿದೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ಕೃಷಿ ಯೋಜನೆಯಡಿ ಒಂಭತ್ತು ಘಟಕಗಳನ್ನು ಸೇರ್ಪಡೆಗೊಳಿಸಿ ಪ್ರಧಾನಮಂತ್ರಿ ರಾಷ್ಟ್ರೀಯ ವಿಕಾಸ ಯೋಜನೆ (ಪಿಎಂ-ಆರ್ಕೆವಿವೈ) ಎಂದು ಮರು ನಾಮಕರಣ ಮಾಡಿದೆ. ಇದರ ವ್ಯಾಪ್ತಿಗೆ ಒಳಪಡಿಸುವಂತೆ ರೈತರಿಗೆ ಸೌಲಭ್ಯ ಪಡೆಯಲು ಅವಕಾಶ ನೀಡಿ ಆದೇಶಿಸಿದೆ.
2.60 ಲಕ್ಷ ರೈತರಿಗೆ ಅನುಕೂಲ: ಪಿಎಂಕೆಎಸ್ಐ(PMKSY)ಮತ್ತು ಪಿಎಂಎಂಎಸ್(PMMS) ಯೋಜನೆಯಡಿ ಸೂಕ್ಷ್ಮ ನೀರಾವರಿ ಯೋಜನೆಗೆ 274 ಕೋಟಿ ರೂ. ಮೀಸಲಿರಿಸಲಾಗಿತ್ತು. ಇದರಿಂದ 2.60 ಲಕ್ಷ ರೈತರಿಗೆ ಅನುಕೂಲ ತಲುಪಲಿದೆ. ಅಲ್ಲದೆ ಟಾಪ್ಅಪ್ ಯೋಜನೆಯಡಿ ಸೂಕ್ಷ್ಮ ನೀರಾವರಿ ಪರಿಕರಗಳಿಗೆ ಆರ್ಥಿಕ ನೆರವು ಒದಗಿಸಲು 252 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಸುಸ್ಥಿರ ಕೃಷಿ ಅಭಿವೃದ್ಧಿ, ಯಾಂತ್ರೀಕರಣ ಮತ್ತು ಡಿಜಿಟಿಲೀಕರಣ, ಪ್ರತಿ ಹನಿ ನೀರು ಪರಿಣಾಮಕಾರಿ ಬಳಕೆ ಮುಂತಾದ ಉದ್ದೇಶಗಳನ್ನು ಪಿಎಂ-ಆರ್ಕೆವಿವೈ ಒಳಗೊಂಡಿದೆ.
ವಿಸ್ತೃತ ಯೋಜನಾ ವರದಿ, ಮಣ್ಣಿನ ಆರೋಗ್ಯ ನಿರ್ವಹಣೆ, ಮಳೆಯಾಶ್ರಿತ ಪ್ರದೇಶದ ಅಭಿವೃದ್ಧಿ, ಕೃಷಿ ಅರಣ್ಯ, ಪಾರಂಪರಿಕ ಕೃಷಿ, ಕೃಷಿ ಯಾಂತ್ರೀಕರಣ, ಪ್ರತಿ ಹನಿಗೂ ಹೆಚ್ಚಿನ ಬೆಳೆ, ಬೆಳೆ ಉಳಿಕೆ ನಿರ್ವಹಣೆ, ಬೆಳೆ ವೈವಿಧ್ಯಕರಣ, ಕೃಷಿ ನವೋದ್ಯಮಗಳಿಗೆ ವೇಗವರ್ಧಕ ನಿಧಿ ಘಟಕಗಳನ್ನು ಈ ಯೋಜನೆಯಡಿ ವಿಲೀನಗೊಳಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 60:40 ಅನುಪಾತದಡಿ ಯೋಜನಾ ವೆಚ್ಚವನ್ನು ಭರಿಸಲಿದೆ. ಸೂಕ್ಷ್ಮ ನೀರಾವರಿಗೆ ಪ್ರೋತ್ಸಾಹಿಸಲೆಂದು ರೈತರಿಗೆ ಸಬ್ಸಿಡಿ ಸೌಲಭ್ಯ ಕಲ್ಪಿಸಲಾಗಿದೆ.
ಪಿಎಂ-ಆರ್ಕೆವಿವೈಯಡಿ(PM-RKVY) 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರ 582.24 ಕೋಟಿ ರೂ. ಆರಂಭಿಕ ಹಂಚಿಕೆ ಮಾಡಿತ್ತು. ನಂತರ 761.89 ಕೋಟಿ ರೂ.ಗಳಿಗೆ ಏರಿಸಿದ್ದು, ಹೆಚ್ಚುವರಿ ಮೊತ್ತದ ಪೈಕಿ ಕೃಷಿ ಯಾಂತ್ರೀಕರಣ ಮತ್ತು ಉಳಿಕೆ ಬೆಳೆ ನಿರ್ವಹಣೆಗೆ 120 ಕೋಟಿ ರೂ., ಮಣ್ಣಿನ ಆರೋಗ್ಯ- 12 ಕೋಟಿ ರೂ., ವಿಸ್ತೃತ ಯೋಜನಾ ವರದಿ ಘಟಕಕ್ಕೆ 46.65 ಕೋಟಿ ರೂ. ಸೇರಿತ್ತು. ಯೋಜನೆಯಡಿ 526.75 ಕೋಟಿ ರೂ., 2024-25ನೇ ವರ್ಷಕ್ಕೆ ಹಂಚಿಕೆಯಾದ ಮೊತ್ತದಲ್ಲಿ 326.02 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಸೂಕ್ಷ್ಮ ನೀರಾವರಿಗೆ ಸಬ್ಸಿಡಿ ಸೌಲಭ್ಯವೆಷ್ಟು?