Anugraha yojane-ಅನುಗ್ರಹ ಯೋಜನೆಯಡಿ ಜಾನುವಾರು ಪರಿಹಾರ ಮೊತ್ತ ಹೆಚ್ಚಳ, ಯಾವುದಕ್ಕೆ ಎಷ್ಟು ಪರಿಹಾರ ಹೆಚ್ಚಳ?

<Krushirushi> <ಅನುಗ್ರಹ ಯೋಜನೆ> <Anugraha yojane amount increased> <Anugraha> <kuri> <cow> <ox> <Buffelow> <sheep> <goat> <ಕುರಿ> <ಆಡು> <ಜಾನುವಾರು> <ಆಕಳು> <ಎಮ್ಮೆ> <ಎತ್ತು>

Anugraha yojane-ಅನುಗ್ರಹ ಯೋಜನೆಯಡಿ ಜಾನುವಾರು ಪರಿಹಾರ ಮೊತ್ತ ಹೆಚ್ಚಳ, ಯಾವುದಕ್ಕೆ ಎಷ್ಟು ಪರಿಹಾರ ಹೆಚ್ಚಳ?

Anugraha yojane-ಅನುಗ್ರಹ ಯೋಜನೆಯಡಿ ಜಾನುವಾರು ಪರಿಹಾರ ಮೊತ್ತ ಹೆಚ್ಚಳ

ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಣೆಗೆ "ಅನುಗ್ರಹ" ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಡಿ ಹಸು, ಎಮ್ಮೆ ಮತ್ತು ಎತ್ತುಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು 10,000 ರೂ. ಗಳಿಂದ 15,000 ರೂ. ಗಳಿಗೆ; ಕುರಿ/ಮೇಕೆಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 5,000 ರೂ. ಗಳಿಂದ 7,500 ರೂ. ಗಳಿಗೆ ಹಾಗೂ 3-6 ತಿಂಗಳ ಕುರಿ/ಮೇಕೆ ಮರಿಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 3,500 ರೂ.ಗಳಿಂದ 5,000 ರೂ.ಗಳಿಗೆ ಹೆಚ್ಚಿಸಲಾಗುವುದು.

ಕೃಷಿ ಮತ್ತು ಹೈನುಗಾರಿಕೆ ಒಂದನ್ನೊಂದು ಅವಲಂಬಿಸಿಕೊಂಡಿವೆ. ಬರದಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿರುವುದರಿಂದ ಸಹಜವಾಗಿಯೇ ಇದು ಹೈನುಗಾರಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಹೈನುಗಾರ ಕುಟುಂಬಗಳನ್ನು ಈ ಸಂಕಷ್ಟದಿಂದ ಪಾರುಮಾಡುವ ಉದ್ದೇಶದಿಂದ ಕುರಿ, ಮೇಕೆ, ಹಸು ಮುಂತಾದ ಜಾನುವಾರುಗಳು ಆಕಸ್ಮಿಕ ಮರಣಕ್ಕೆ ತುತ್ತಾದರೆ ಅದರ ಮಾಲೀಕರಿಗೆ ಆರ್ಥಿಕ ಪರಿಹಾರ ನೀಡುವ ಅನುಗ್ರಹ ಯೋಜನೆಗೆ ಮರುಚಾಲನೆ ನೀಡಲಾಗಿದೆ, ಹಾಲಿಗೆ ನೀಡುವ ಪ್ರೋತ್ಸಾಹಧನದಿಂದ 24 ಲಕ್ಷ ಹೈನುಗಾರರಿಗೆ ಅನುಕೂಲವಾಗಿದೆ, ಸಾಕುಪ್ರಾಣಿಗಳನ್ನು ಬಾಧಿಸುವ ವಿವಿಧ ಮಾರಕ ರೋಗಗಳನ್ನು ತಡೆಗಟ್ಟಲು 2.6 ಕೋಟಿಗೂ ಅಧಿಕ ಲಸಿಕೆ ಹಾಕಲಾಗಿದೆ. ಹೀಗೆ ನಾಡಿನ ಹೈನುಗಾರರ ರಕ್ಷಣೆಗೆ ನಮ್ಮ ಸರ್ಕಾರ ಕಂಕಣಬದ್ಧವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.