Bele sala baddi manna-ಈ 2 ಬ್ಯಾಂಕ್ ಗಳಲ್ಲಿ ಸಾಲ ಮಾಡಿದವರಿಗೆ ಬಡ್ಡಿ ಮನ್ನಾ ಘೋಷಿಸಿದ ಸಿಎಂ ಸಿದ್ದರಾಮಯ್ಯ

<Krushirushi> <ಬಡ್ಡಿ ಮನ್ನಾ> <interest subsidy> <ಕೃಷಿ ಮೂಲಭೂತ ಸೌಕರ್ಯ> <ಕೃಷಿ ಮೂಲಭೂತ ಸೌಕರ್ಯ> <AIF> <Agriculture Infrastructure fund> <Agricultureinfrastructurefund> <Krushi mulabutha soukarya yojane> <PMFME> <ACABC> <PMEGP> <NLM> <NHB>

Bele sala baddi manna-ಈ 2 ಬ್ಯಾಂಕ್ ಗಳಲ್ಲಿ ಸಾಲ ಮಾಡಿದವರಿಗೆ ಬಡ್ಡಿ ಮನ್ನಾ ಘೋಷಿಸಿದ ಸಿಎಂ ಸಿದ್ದರಾಮಯ್ಯ

Bele sala baddi manna-ಈ 2 ಬ್ಯಾಂಕ್ ಗಳಲ್ಲಿ ಸಾಲ ಮಾಡಿದವರಿಗೆ ಬಡ್ಡಿ ಮನ್ನಾ ಘೋಷಿಸಿದ ಸಿಎಂ ಸಿದ್ದರಾಮಯ್ಯ


2024-25ನೇ ಸಾಲಿನಲ್ಲಿ 21.78 ಲಕ್ಷ ರೈತರಿಗೆ 18,960 ಕೋಟಿ ರೂ. ಕೃಷಿ ಸಾಲ(crop loan) ವಿತರಿಸಲಾಗಿದೆ. ರಿಯಾಯತಿ ಬಡ್ಡಿ ದರದಲ್ಲಿ ನೀಡುವ ಪುನರ್ಧನದ ಮಿತಿಯನ್ನು ನಬಾರ್ಡ್‌ ಶೇ.58ರಷ್ಟು ಕಡಿಮೆ ಮಾಡಿದ್ದರೂ ಸಹ, ನಿಗದಿತ ಗುರಿಯನ್ನು ಸಾಧಿಸಲು ನಾವು ಬದ್ಧರಾಗಿದ್ದೇವೆ. ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲವನ್ನು(Bele sala) ವಿತರಿಸುವ ಗುರಿಯನ್ನು ಹೊಂದಲಾಗಿದೆ.

2023-24ನೇ ಸಾಲಿನ ಬೆಳಗಾವಿ ಅಧಿವೇಶನದಲ್ಲಿ ಘೋಷಿಸಿದಂತೆ, ಡಿಸಿಸಿ (DCC) ಹಾಗೂ ಪಿಕಾರ್ಡ್‌ (PCARD) ಬ್ಯಾಂಕುಗಳಿಗೆ ಸಂಬಂಧಿಸಿದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಮೇಲಿನ 240 ಕೋಟಿ ರೂ. ಬಡ್ಡಿಯನ್ನು ಮನ್ನಾ (Bele sala baddi manna)ಮಾಡಲಾಗಿದೆ.

ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿರುವ 31 ಸಾವಿರ ರೈತರ 232 ಕೋಟಿ ಸಾಲಮನ್ನಾ, ಯಾವ ರೈತರ ಎಷ್ಟು ಸಾಲಮನ್ನಾ ಆಗಲಿದೆ ಹೀಗೆ ಚೆಕ್ ಮಾಡಿ-Bele sala manna list


ರಾಜ್ಯ ಸರ್ಕಾರ 2017 ಹಾಗೂ 2018ರಲ್ಲಿ ಘೋಷಿಸಿದ್ದ ಕೃಷಿ ಸಾಲ ಮನ್ನಾದ ಪ್ರಯೋಜನ 31 ಸಾವಿರ ರೈತರಿಗೆ ಇನ್ನೂ ಸಿಕ್ಕಿಲ್ಲ.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಎಸ್. ರವಿ, ಬಿಜೆಪಿಯ ಸುನೀಲ್ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನೀಡಲಾಗಿದ್ದ ₹50 ಸಾವಿರ ಸಾಲ ಮನ್ನಾ ಪ್ರಯೋಜನವನ್ನು 21.57 ಲಕ್ಷ ರೈತರು, 2018ರಲ್ಲಿ ಘೋಷಿಸಿದ್ದ ₹1 ಲಕ್ಷ ಸಾಲ ಮನ್ನಾ ಪ್ರಯೋಜನವನ್ನು 17.37 ಲಕ್ಷ ರೈತರು ಪಡೆದುಕೊಂಡಿದ್ದರು. ಎರಡೂ ಸಾಲ ಮನ್ನಾಕ್ಕಾಗಿ ಸರ್ಕಾರ ಕ್ರಮವಾಗಿ ₹7,662.26 ಕೋಟಿ ಹಾಗೂ 7,987.47 ಕೋಟಿ ಬಿಡುಗಡೆ ಮಾಡಿತ್ತು ಎಂದರು.


ತಾಂತ್ರಿಕ ಕಾರಣಗಳಿಂದ 31 ಸಾವಿರ ರೈತರಿಗೆ ಸೌಲಭ್ಯ ಸಿಕ್ಕಿಲ್ಲ. ಅವರಿಗೆ ನೀಡಬೇಕಿರುವ ಮೊತ್ತ ₹167.51 ಕೋಟಿ, ಅರ್ಹತೆ ಗುರುತಿಸಲು ಬಾಕಿ ಇರುವ ರೈತರ ಬಾಬು ₹64.49 ಕೋಟಿ ಸೇರಿ ಒಟ್ಟು ₹232 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಎಲ್ಲರಿಗೂ ಪ್ರಯೋಜನ ದೊರಕಲಿದೆ ಎಂದು ಹೇಳಿದರು.

ಹಾಗಾದರೆ ಕರ್ನಾಟಕದಲ್ಲಿ ಇಲ್ಲಿಯವರೆಗೂ ಎಷ್ಟು ಬೆಳೆಸಾಲಮನ್ನಾ ಆಗಿದೆ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://mahitikanaja.karnataka.gov.in/department

ನಂತರ "ಕಂದಾಯ ಇಲಾಖೆ/Revenue department" ಮೇಲೆ ಕ್ಲಿಕ್ ಮಾಡಿ

ನಂತರ "ಕಂದಾಯ ಇಲಾಖೆ ಸೇವೆಗಳು/Revenue department services" ಮೇಲೆ ಕ್ಲಿಕ್ ಮಾಡಿ

ನಂತರ ಸೊಸೈಟಿಯಲ್ಲಿನ ಸಾಲಮನ್ನಾ ಚೆಕ್ ಮಾಡಲು "Loan waiver report for primary agricultural cooperative societies" ಮೇಲೆ ಕ್ಲಿಕ್ ಮಾಡಿ

ನಂತರ ಮಾದರಿ "ರೈತ/farmer" ಎಂದು Select ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ ಮತ್ತು ಗ್ರಾಮವನ್ನು Select ಮಾಡಿ "ಸಲ್ಲಿಸು/Submit" ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆಲ್ಲಾ ಸಾಲಮನ್ನಾ ಆಗಿದೆ ಎಂದು ಚೆಕ್ ಮಾಡಬಹುದು.Search button ಅಲ್ಲಿ ನಿಮ್ಮ ಹೆಸರು ಹಾಕಿದರೆ ನಿಮ್ಮ ಹೆಸರು ಸಿಗುತ್ತದೆ.

ಹಸಿರು ಪಟ್ಟಿಯಲ್ಲಿ ನಿಮ್ಮ ಅರ್ಹತೆ ಹೀಗೆ ಚೆಕ್ ಮಾಡಿ

https://mahitikanaja.karnataka.gov.in/department

ನಂತರ ಕಂದಾಯ ಇಲಾಖೆ ಮೇಲೆ ಕ್ಲಿಕ್ ಮಾಡಿ

ನಂತರ ಕಂದಾಯ ಇಲಾಖೆ ಸೇವೆಗಳು ಮೇಲೆ ಕ್ಲಿಕ್ ಮಾಡಿ

ನಂತರ CLWS ರೈತನ ಅರ್ಹತೆ ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ ಮತ್ತು ಬ್ಯಾಂಕ್ select ಮಾಡಿ,ಸಲ್ಲಿಸು ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ರೈತನ ಹೆಸರು,ಸಾಲ ಮನ್ನಾಗೆ ಬೇಕಾದ ಅರ್ಹತೆ ಹಾಗೂ ಸ್ಥಿತಿಗತಿ ಚೆಕ್ ಮಾಡಬಹುದು

ಈ ಕೆಳಗಿನಂತೆ ಹಸಿರು ಪಟ್ಟಿಯಲ್ಲಿ "Yes" ಎಂದು ಇದ್ದರೆ ನೀವು ಸಾಲಮನ್ನಾಗೆ ಅರ್ಹ ಎಂದು ಅರ್ಥ,"No" ಎಂದು ಇದ್ದರೆ ನೀವು ಸಾಲಮನ್ನಾಗೆ ಅರ್ಹರಲ್ಲ ಎಂದು ಅರ್ಥ