ಭೂ ಒಡೆತನ ಯೋಜನೆ 2025: ಭೂಮಿ ಖರೀದಿಗೆ 50 ಸಬ್ಸಿಡಿ 25 ಲಕ್ಷ ರೂ. ಸಾಲ | ಅರ್ಜಿ ಪ್ರಕ್ರಿಯೆ ವಿವರ

Bhoo Odetana Yojana: ಭೂಮಿ ಖರೀದಿಸಲು ಸರ್ಕಾರದಿಂದ ಸಿಗಲಿದೆ 50 ಸಬ್ಸಿಡಿ, 25 ಲಕ್ಷ ರೂ. ಸಾಲ ಅರ್ಜಿ ಹೀಗೆ ಸಲ್ಲಿಸಿ

ಭೂ ಒಡೆತನ ಯೋಜನೆ 2025: ಭೂಮಿ ಖರೀದಿಗೆ 50 ಸಬ್ಸಿಡಿ  25 ಲಕ್ಷ ರೂ. ಸಾಲ | ಅರ್ಜಿ ಪ್ರಕ್ರಿಯೆ ವಿವರ

ಜಾತಿಯ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಭೂಮಿ ಖರೀದಿಸಲು ಸರ್ಕಾರ ನೀಡುತ್ತಿರುವ 'ಭೂ-ಒಡೆತನ ಯೋಜನೆ'ಯಡಿ ರಾಜ್ಯದ 31 ಜಿಲ್ಲೆಗಳಲ್ಲಿ ಭೂಮಿ ನೀಡುವ ಪ್ರಕ್ರಿಯೆ ಮುಂದುವರೆದಿದೆ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಅಭಿವೃದ್ಧಿ ನಿಗಮಗಳ ಮೂಲಕ ಈ ಯೋಜನೆ ಜಾರಿಯಲ್ಲಿದೆ.

ಯೋಜನೆಯಡಿ SC ಸಮುದಾಯದ ಭೂರಹಿತ ಮಹಿಳೆಯರಿಗೆ ಖುಷ್ಕಿ, ತರಿ ಅಥವಾ ಬಾಗಾಯ್ತು ಜಮೀನನ್ನು ಖರೀದಿಸಲು ₹20 ಲಕ್ಷದಿಂದ ₹25 ಲಕ್ಷವರೆಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ. ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಘಟಕ ವೆಚ್ಚ ₹25 ಲಕ್ಷವಾಗಿದ್ದು, ಉಳಿದ ಜಿಲ್ಲೆಗಳಲ್ಲಿ ₹20 ಲಕ್ಷ ನಿಗದಿಪಡಿಸಲಾಗಿದೆ.

ಈ ಘಟಕ ವೆಚ್ಚದಲ್ಲಿ 50% ಸಹಾಯಧನ ಹಾಗೂ 50% ಸಾಲ ಇದ್ದು, ನೀಡಲಾದ ಸಾಲವನ್ನು 10 ವರ್ಷಗಳಲ್ಲಿ 6% ಬಡ್ಡಿದರಕ್ಕೆ ಮರುಪಾವತಿ ಮಾಡಬೇಕು. ಖರೀದಿಸುವ ಜಮೀನು ಫಲಾನುಭವಿಯ ಮನೆಯಿಂದ 10 ಕಿಮೀ ವ್ಯಾಪ್ತಿಯೊಳಗೆ ಇರಬೇಕು.

ಯೋಜನೆಯ ಪ್ರಮುಖ ಅಂಶಗಳು

ಯೋಜನೆ ಕೇವಲ SC ಸಮುದಾಯದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾತ್ರ ಅನ್ವಯ.

SC/ST ಗೆ ಸೇರಿದವರಿಂದ ಭೂಮಿ ಖರೀದಿಸಲು ಅವಕಾಶವಿಲ್ಲ.

ಕನಿಷ್ಠ 2 ಎಕರೆ ಒಣಭೂಮಿ / 1 ಎಕರೆ ನೀರಾವರಿ / 0.5 ಎಕರೆ ಬಾಗಾಯ್ತು ಖರೀದಿ ಮಾನ್ಯ.

ಜಮೀನು ದರವನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಸಮಿತಿ ಅಂತಿಮಗೊಳಿಸುತ್ತದೆ.

ಅಂತಿಮ ಮಂಜೂರಾತಿ ಅಧಿಕಾರ ಜಿಲ್ಲಾಧಿಕಾರಿಗೆ.

ಅರ್ಜಿದಾರರಿಗೆ ಅಗತ್ಯ ಅರ್ಹತೆ

ಪರಿಶಿಷ್ಟ ಜಾತಿಗೆ ಸೇರಿದಿರಬೇಕು.

ಭೂರಹಿತ ಕೃಷಿ ಕಾರ್ಮಿಕರಾಗಿರಬೇಕು (ತಹಶೀಲ್ದಾರರಿಂದ ಪ್ರಮಾಣ ಪತ್ರ).

ಕುಟುಂಬದಲ್ಲಿ ಯಾರೂ ಸರ್ಕಾರಿ/ಅರೆ ಸರ್ಕಾರಿ ನೌಕರರಾಗಿರಬಾರದು.

ಕರ್ನಾಟಕದ ನಿವಾಸಿಯಾಗಿರಬೇಕು.

ಜಾತಿ, ಆದಾಯ, ರೇಷನ್, ಆಧಾರ್ ಸೇರಿದಂತೆ ಎಲ್ಲಾ ದಾಖಲೆಗಳು ಕಡ್ಡಾಯ.

ಬೇಕಾಗುವ ದಾಖಲೆಗಳು

ಆಧಾರ್ ಕಾರ್ಡ್

ಜಾತಿ ಮತ್ತು ಆದಾಯ ಪ್ರಮಾಣ ಪತ್ರ (RD Number ಸಹಿತ)

ಭೂರಹಿತ ಕೃಷಿ ಕಾರ್ಮಿಕರ ಪ್ರಮಾಣ ಪತ್ರ

ರೇಷನ್ ಕಾರ್ಡ್

ಭೂ ಮಾಲೀಕರ ಮುಚ್ಚಳಿಕೆ ಪತ್ರ

ಭೂ ಮಾಲೀಕರ ವಂಶಾವಳಿ, EC, ಪಹಣಿ, ಮ್ಯೂಟೇಶನ್

ಫಲಾನುಭವಿಯ ಫೋಟೋ

ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಅರ್ಜಿ ಸಲ್ಲಿಸಲು https://sevasindhu.karnataka.gov.in

ಹೊಸ ಬಳಕೆದಾರರಿಗೆ ಮೊದಲು ನೋಂದಣಿ ಕಡ್ಡಾಯ

ಲಾಗಿನ್‌ ಆದ ಬಳಿಕ "ಇಲಾಖೆಗಳು ಮತ್ತು ಸೇವೆಗಳು" ವಿಭಾಗದಲ್ಲಿ 'ಭೂ ಒಡೆತನ ಯೋಜನೆ' ಹುಡುಕಬೇಕು

ಆನ್‌ಲೈನ್ ಅರ್ಜಿ ಭರ್ತಿ ಮಾಡಿ

ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ

ಅರ್ಜಿ ಸಲ್ಲಿಸಿದ ಬಳಿಕ ಸ್ವೀಕೃತಿ / ಟೋಕನ್ ಸಂಖ್ಯೆ ದೊರಕುತ್ತದೆ

ಅರ್ಜಿ ಸ್ಥಿತಿಯನ್ನು ಪೋರ್ಟಲ್‌ನಲ್ಲಿ ಟ್ರ್ಯಾಕ್ ಮಾಡಬಹುದು

ಯೋಜನೆಯ ಮೂಲಕ ರಾಜ್ಯದ ಪರಿಶಿಷ್ಟ ಜಾತಿ ಸಮುದಾಯದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರು ಭೂಮಾಲೀಕರಾಗುವ ಅವಕಾಶ ಪಡೆದು, ಸಾಮಾಜಿಕ ಮತ್ತು ಆರ್ಥಿಕ ಬಲವರ್ಧನೆಗೆ ಇದು ಮಹತ್ವದ ಹೆಜ್ಜೆಯಾಗಲಿದೆ.